ಗಾಂಜಾ ಮಾರಾಟ ಪ್ರಕರಣ, ಮೆಡಿಕಲ್ ಕಾಲೇಜು ವಿದ್ಯಾರ್ಥಿ ಸೇರಿದಂತೆ 8 ಮಂದಿ ಅರೆಸ್ಟ್.
ಮಂಗಳೂರಿನ ಸಿಸಿಬಿ ಪೊಲೀಸರು 2 ಪ್ರತ್ಯೇಕ ಗಾಂಜಾ ಮಾರಾಟದ ಪ್ರಕರಣದಲ್ಲಿ ನಗರದ ಮಿಷನ್ ಸ್ಟ್ರೀಟ್ ಮತ್ತು ಅತ್ತಾವರದ ಮಾರ್ನಮಿಕಟ್ಟೆ ಬಳಿ ಕಾರ್ಯಾಚರಣೆ ನಡೆಸಿ ಒಬ್ಬ ಮೆಡಿಕಲ್ ಕಾಲೇಜು ವಿದ್ಯಾರ್ಥಿ ಸೇರಿದಂತೆ 8ಮಂದಿ ಯನ್ನು ಬಂಧಿಸಿದ್ದಾರೆ . ಬಂದರು ಮಿಷನ್ ಸೀಟ್ ನಲ್ಲಿ ಹೋಂಡಾ ಆಕ್ಟಿವಾ ಮೋಟಾರ್ ಸೈಕಲ್ ನಲ್ಲಿ ಗಾಂಜಾ ಸಾಗಿಸುತ್ತಿದ್ದ ತೋಟ ಬೆಂಗ್ರೆ ನಿವಾಸಿ ಅಬ್ದುಲ್ ರಹಿಮಾನ್ ಮತ್ತು ಬಂದರ್ ನಿವಾಸಿ ಸಾದಿಕ್ ಎಂಬುವರನ್ನು ಪೊಲೀಸರು ಬಂಧಿಸಿ ಅವರಿಂದ 2ಕೆಜಿ ಇನ್ನೂರ ಎಪ್ಪತ್ತ್ 5 ಗ್ರಾಂ ಗಾಂಜಾ ವಶಕ್ಕೆ ಪಡೆದಿದ್ದಾರೆ .
ಮಾರ್ನೆಮಿಕಟ್ಟೆ ಎಂಬಲ್ಲಿ ಇನೋವ ಕಾರಿನಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಬಿಜೈ ನಿವಾಸಿ ಮಹಮ್ಮದ್ ಅಮಿನ್ ಫಲನೀರ್ ನಿವಾಸಿ ರೋಷನ್ ಯೂಸುಫ್ ಬಂದರ್ ನಿವಾಸಿ ಮೊಹಮ್ಮದ್ ಅಫ್ಜಲ್ ಖಾನ್ ಎಂಬುವವರನ್ನು ಬಂಧಿಸಿದ್ದು ಅವರಿಂದ 2ಕೆಜಿ ನೂರ ಅರುವತ್ತು ಗ್ರಾಂ ಗಾಂಜಾ ಹಾಗೂ 9ಎಂಡಿಎಂಎ ಪಿಲ್ಸ್ ಗ್ರಾಂ ಬ್ರೌನ್ ಶುಗರ್ ಹಾಗೂ ನಲ್ಲಿ ಇನೋವಾ ಕಾರನ್ನು ವಶಪಡಿಸಲಾಗಿದೆ.
ಇದೇ ವೇಳೆ ಅತ್ತಾವರದ ಫ್ಲ್ಯಾಟ್ ಒಂದಕ್ಕೆ ದಾಳಿ ನಡೆಸಿದ ಪೊಲೀಸರು ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಯಾಗಿರುವ ಬೀದರ್ ಮೂಲದ ಪ್ರಜ್ವಲ್ ಬೋಳಾರದ ತಮೀಮ್ ಬಂದರಿನ ಅಬ್ದುಲ್ ಅರ್ಮಾನ್ ಜೆಪ್ಪು ನಿವಾಸಿ ಅಫ್ವಾನ್ ಹಾಗೂ ಮುಹಮ್ಮದ್ ರಾಯಿಫ್ ಎಂಬವರನ್ನು ಬಂಧಿಸಿದ್ದಾರೆ ಇವರಲ್ಲಿದ್ದ 1ಕೆಜಿ ಗಾಂಜಾ ಮತ್ತು 3ಮೋಟಾರ್ ಸೈಕಲ್ ಗಳನ್ನು ವಶಕ್ಕೆ ಪಡೆಯಲಾಗಿದೆ 2ಪ್ರಕರಣಗಳಲ್ಲಿ ಓಡಿಸ್ಸಾ ರಾಜ್ಯದಿಂದ ಬೆಂಗಲೂರಿನ ಮೂಲಕ ಮಂಗಳೂರಿಗೆ ಗಾಂಜಾ ಮತ್ತಿತರ ಡ್ರಗ್ಸ್ ಪೂರೈಕೆ ಆಗುತ್ತಿರುವುದು ತಿಳಿದುಬಂದಿದ್ದು ಪೊಲೀಸರು ಕಾರ್ಯಾಚರಣೆ ಮುಂದುವರೆಸಿದ್ದಾರೆ ಮಂಗಳೂರಿನಲ್ಲಿ ಮೆಡಿಕಲ್ ಕಾಲೇಜುಗಳ ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಿಕೊಂಡು ಗಾಂಜಾ ಪೂರೈಕೆ ಮಾಡಲಾಗುತ್ತಿದ್ದು ಪೊಲೀಸರು ಪತ್ತೆ ಮಾಡಿದ್ದಾರೆ ಈ ಬಗ್ಗೆ ಪಾಂಡೇಶ್ವರ ದ ಇಕನಾಮಿಕ್ ಮತ್ತು ನಾರ್ಕೋಟಿಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
Leave A Reply