ಬಡಗ ಮಿಜಾರು ಕಾಡುಹಂದಿ ಬೇಟೆಗೆ ಇಟ್ಟಿದ್ದ ಸ್ಫೋಟಕ ಪತ್.ತೆ ಸ್ಥಳೀಯರಲ್ಲಿ ಆತಂಕ!
Posted On June 30, 2021
ಮಂಗಳೂರು: ಮೂಡಬಿದ್ರೆ ಪೊಲೀಸ್ ಠಾಣೆ ವ್ಯಾಪ್ತಿಯ ಬಡಗ ಮಿಜಾರು ಬಳಿ ಕಾಡು ಹಂದಿಗಳ ಬೇಟೆಗೆಂದು ಸ್ಫೋಟಕ ಇಟ್ಟಿರೋದು ಪತ್ತೆಯಾಗಿದ್ದು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ . ನಾಡ ಬಾಂಬ್ ರೀತಿಯ ಕಚ್ಚಾ ಬಾಂಬ್ ಗಳನ್ನು ಅಲ್ಲಲ್ಲಿ ಇಡಲಾಗಿತ್ತು . ಒಳದಾರಿಗಳು ರಸ್ತೆಗಳ ಬದಿ ಇಟ್ಟಿರುವುದು ಗಮನಕ್ಕೆ ಬಂದು ಸ್ಥಳೀಯರು ಆತಂಕದಿಂದ ಪೊಲೀಸರಿಗೆ ತಿಳಿಸಿದ್ದಾರೆ . ಯಾರೋ ಈ ರೀತಿ ಕಚ್ಚಾ ಬಾಂಬ್ ಇಟ್ಟಿದ್ದ ಯಾರೆಂದು ತಿಳಿದುಬಂದಿಲ್ಲ , ಈ ಬಗ್ಗೆ ಬಾಂಬ್ ನಿಷ್ಕ್ರಿಯ ದಳದವರು ತೆರಳಿ ಬಾಂಬ್ ಗಳನ್ನು ವಶಕ್ಕೆ ಪಡೆದು ನಿಷ್ಕ್ರಿಯ ಮಾಡಿದ್ದಾರೆ ಕಾಡುಹಂದಿಗಳನ್ನು ಬೇಟೆಯಾಡಲು ಈ ರೀತಿ ಬಾಂಬ್ ಇಟ್ಟಿದ್ದಾಗಿ ಸ್ಥಳೀಯರು ತಿಳಿಸಿದ್ದಾರೆ .ಈ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಾಣಿ ಮತ್ತು ಮನುಷ್ಯರ ಜೀವಕ್ಕೆ ಹಾನಿಯಾಗಬಲ್ಲ ಸ್ಫೋಟಕ ಪತ್ತೆಯಾದ ವಿಚಾರದಲ್ಲಿ ಪ್ರಕರಣ ದಾಖಲಿಸಲಾಗಿದೆ.
- Advertisement -
Trending Now
ಕೃಷಿ ಮಾಡ್ಬೇಕು, ಪೆರೋಲ್ ಕೊಡಿ ವಿನಂತಿಗೆ ಹೈಕೋರ್ಟ್ ಅಸ್ತು!
December 2, 2024
Leave A Reply