ಮಂಗಳೂರಲ್ಲಿ ಹೈಡ್ರೋವೀಡ್ ಗಾಂಜಾ ಮಾರಾಟಕ್ಕೆ ಯತ್ನ; ತಮಿಳ್ನಾಡಿನ ವೈದ್ಯೆ ಸಹಿತ ಇಬ್ಬರ ಬಂಧನ
ದಕ್ಷಿಣ ಕನ್ನಡ: ಮಂಗಳೂರಲ್ಲಿ ಹೈಡ್ರೋವೀಡ್ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ತಮಿಳ್ನಾಡಿನ ವೈದ್ಯೆ ಸಹಿತ ಇಬ್ಬರ ನ್ನು ಸಿಸಿಬಿ ಪೊಲೀಸರ ಬಂಧಿಸಿದ್ದಾರೆ. ದೇರಳಕಟ್ಟೆಯಲ್ಲಿ ಸಿಸಿಬಿ ಪೋಲಿಸರು ನಡೆಸಿದ ಕಾರ್ಯಚರಣೆಯಲ್ಲಿ, ಕಾಸರಗೋಡಿನ ಮಂಗಲ್ಪಾಡಿಯ ಅಜ್ಮಲ್ ಟಿ, ತಮಿಳ್ನಾಡು ಮೂಲದ ಮಿನು ರಶ್ಮಿ ಬಂಧಿಸಲಾಗಿದೆ.
ಬಂಧಿತರಿಂದ 30 ಲಕ್ಷ ರೂ.ನಿಂದ 1 ಕೋ.ರೂ.ವರೆಗಿನ ಮೌಲ್ಯದ ಹೈಡ್ರೋವೀಡ್ ಗಾಂಜಾ, 1 ಸ್ಯಾಂಟ್ರೋ ಕಾರು, 2 ಮೊಬೈಲ್ ವಶ ಪಡಿಸಿಕೊಳ್ಳಲಾಗಿದೆ. ಕಾಸರಗೋಡು ಮೂಲದ ಡಾ. ನದೀರ್ ಈ ದಂಧೆಯ ಪ್ರಮುಖ ಆರೋಪಿಯಾಗಿದ್ದಾನೆ. ವೈದ್ಯನಾಗಿರುವ ಈತ ವಿದೇಶದಲ್ಲಿದ್ದುಈಗಾಗಲೇ ಈತಲೆಮರೆಸಿಕೊಂಡಿದ್ದಾನೆ.
ಕಾಂಞಂಗಾಡ್‌ನ ಹರಿಮಲ ಆಸ್ಪತ್ರೆಯಲ್ಲಿ ವೃತ್ತಿಯಲ್ಲಿ ವೈದ್ಯೆಯಾಗಿರುವ ಮಿನು ರಶ್ಮಿ ಮತ್ತು ಅಜ್ಮಲ್ ಎಂಬುವವರಿಂದ ಗಾಂಜಾ ಪೂರೈಕೆ ಜಾಲ ಬಯಲಾಗಿದೆ. ಮಂಗಳೂರು, ಉಳ್ಳಾಲ, ಕೊಣಾಜೆ, ಉಪ್ಪಳ ಪರಿಸರದ ಮಾದಕ ವ್ಯಸನಿಗಳಿಗೆ ಹೈಡ್ರೋವೀಡ್ ಗಾಂಜಾವನ್ನು ಪೂರೈಕೆ ಮಾಡುವುದು ತನಿಖೆಯಲ್ಲಿ ತಿಳಿದು ಬಂದಿದೆ, ಕಾಂಞಗಾಡ್‌ನಿಂದ ರೈಲು ಮೂಲಕ ಮಂಗಳೂರಿಗೆ ಆಗಮಿಸಿದ್ದು ಕಾರಲ್ಲಿ ದೇರಳಕಟ್ಟೆಗೆ ತೆರಳಿ ಮಾರಾಟಕ್ಕೆ ಸಜ್ಜಾಗಿದ್ದರು 1.236 ಕೆಜಿ ತೂಕದ ಗಾಂಜಾದೊಂದಿಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರಿಂದ ದಾಳಿ ನಡೆಸಿದ್ದರು. ಇಕೊನಾಮಿಕ್ ಮತ್ತು ನಾರ್ಕೊಟಿಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
Leave A Reply