ಗನ್ ನಿಂದ ಶೂಟ್ ಮಾಡಿ ಹಿಂಸೆ ನೀಡಿ ನಾಯಿಯ ಹತ್ಯೆ
Posted On July 2, 2021
0
ಮಂಗಳೂರು : ನಗರದ ಶಿವಭಾಗ್ ನಲ್ಲಿ ಬೀದಿ ನಾಯಿಯನ್ನು ವ್ಯಕ್ತಿಯೋರ್ವ ಅಮಾನುಷವಾಗಿ ಗುಂಡು ಹಾರಿಸಿ ಹತ್ಯೆ ಮಾಡಿರುವ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಯು ನಾಯಿಗೆ ಏರ್ ಗನ್ ನಿಂದ ಶೂಟ್ ಮಾಡಿ ಹಿಂಸೆ ಮಾಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಗುಂಡಿನ ರಭಸಕ್ಕೆ ನಾಯಿ ಯ ದೇಹವು ಛೀದ್ರವಾಗಿದೆ , ನಾಯಿಯನ್ನು ಹಿಂಸೆ ನೀಡಿ ಸಾಗಿಸಲಾಗಿದೆ. ಘಟನೆಯು ಜು.1 ರಂದು ಸಂಜೆ ಹೊತ್ತಲ್ಲಿ ನಡೆದಿದೆ ಎಂದು ಹೇಳಲಾಗಿದೆ.
ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ನಂತರ ಏರ್ ಗನ್ ನಿಂದ ಗುಂಡು ಹಾರಿಸಾಲಾಗಿರುವ ಮಾಹಿತಿ ತಿಳಿದಿದೆ. ಸದ್ಯ ಪ್ರಕರಣದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು, ಆರೋಪಿಯ ಹುಡುಕಾಟದಲ್ಲಿ ತೊಡಗಿದ್ದಾರೆ.
Trending Now
ಜಿಎಸ್ಟಿ ಇಳಿಕೆ ಪರಿಣಾಮ- ದೀಪಾವಳಿಗೆ 6.05 ಲಕ್ಷ ಕೋಟಿ ವಸ್ತು ಮಾರಾಟ!
October 22, 2025
ಪುತ್ತೂರು: ಅಕ್ರಮ ಗೋಸಾಗಾಟ, ಪೊಲೀಸರಿಂದ ಫೈರಿಂಗ್!
October 22, 2025









