ಲಿಂಬೆ ಹಣ್ಣುತುಂಬಿದ ವಾಹನದಲ್ಲಿ ಆಂಧ್ರಪ್ರದೇಶದಿಂದ ಕೇರಳಕ್ಕೆ ಡ್ರಗ್ ಸಾಗಾಟ!
Posted On July 3, 2021
ಮಂಗಳೂರು : ಆಂಧ್ರಪ್ರದೇಶದಿಂದ ಕೇರಳಕ್ಕೆ ಡ್ರಗ್ ಸಾಗಿಸುತ್ತಿದ್ದ ಇಬ್ಬರನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ. ನಗರದ ಕೊಟ್ಟಾರ ಚೌಕಿ ಚೆಕ್ ಪೋಸ್ಟ್ ಬಳಿ ಉರ್ವಾ ಪೊಲೀಸರು ವಾಹನ ತಪಾಸಣೆ ಮಾಡುತ್ತಿದ್ದಾಗ ಬೊಲೆರೋ ಮ್ಯಾಕ್ಸಿ ಟ್ರಕ್ ಒಂದರಲ್ಲಿ ಲಿಂಬೆ ಹಣ್ಣು ತುಂಬಿದ ಟ್ರೇ ನ ತುಂಬಿದ್ದ ವಾಹನವನ್ನ ತಪಾಸಣೆ ನಡೆಸಿದಾಗ ಗಾಂಜಾ ಪತ್ತೆಯಾಗಿದೆ.
ವಾಹನ ಜಪ್ತಿ ವೇಳೆ ಸುಮಾರು 20 ಪ್ಯಾಕೇಟ್ ಗಳಲ್ಲಿ 40 ಕೆ.ಜಿ ಗಾಂಜಾ ಸಿಕ್ಕಿರುತ್ತದೆ. ಬಂಧಿತರು ಕೇರಳ ಮೂಲದ ಶಿಹಾಬುದ್ದೀನ್, ಲತೀಫ್ ಎಂದು ತಿಳಿದು ಬಂದಿದೆ. ಆರೋಪಿಗಳಿಂದ ಗಾಂಜಾ, ವಾಹನ ಸಹಿತ 11 ಲಕ್ಷದ 17ಸಾವಿರ ಮೌಲ್ಯದ ಸೊತ್ತುಗಳ ವಶ ಪಡಿಸಿಕೊಳ್ಳಲಾಗಿದೆ.
ಗಾಂಜಾ ಮಾರಾಟದ ಹಣ ದೇಶ ವಿರೋಧಿ ಚಟುವಟಿಕೆಗಳಿಗೆ ಬಳಕೆ ಮತ್ತು ಆಂಧ್ರಪ್ರದೇಶ, ಒರಿಸ್ಸಾ ನಕ್ಸಲ್ ಪ್ರದೇಶಗಳಿಂದ ಗಾಂಜಾ ಖರೀದಿಯ ಮಾಹಿತಿ ತನಿಖೆ ವೇಳೆ ಬಹಿರಂಗಗೊಂಡಿದೆ.
- Advertisement -
Trending Now
ಕೃಷಿ ಮಾಡ್ಬೇಕು, ಪೆರೋಲ್ ಕೊಡಿ ವಿನಂತಿಗೆ ಹೈಕೋರ್ಟ್ ಅಸ್ತು!
December 2, 2024
Leave A Reply