• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ದೇಶದ ಎಲ್ಲಾ ಕಡೆ ರಸ್ತೆ ಅಗಲ, ಮಂಗಳೂರಿನಲ್ಲಿ ಮಾತ್ರ ಸಪೂರ!!

Hanumantha Kamath Posted On July 8, 2021
0


0
Shares
  • Share On Facebook
  • Tweet It

ನಮ್ಮ ದೇಶಾದ್ಯಂತ ರಸ್ತೆಗಳನ್ನು ಅಗಲ ಮಾಡುವ ಪ್ರಕ್ರಿಯೆ ನಡೆಯುತ್ತಿದೆ. ಅನೇಕ ನಗರಗಳಲ್ಲಿ ಲೆಕ್ಕಕ್ಕಿಂತ ಜನಸಂಖ್ಯೆ 2-3 ಪಟ್ಟು ಜಾಸ್ತಿ ಆಗುತ್ತಿರುವುದರಿಂದ ರಸ್ತೆ ಅಗಲೀಕರಣ ಅನಿವಾರ್ಯ. ಅನೇಕ ರಾಜ್ಯಗಳಲ್ಲಿ ನಾಲ್ಕು ಲೇನ್ ಇದ್ದ ರಸ್ತೆಗಳನ್ನು ಈಗ ಆರು ಲೇನ್ ಮಾಡಲಾಗುತ್ತಿದೆ. ಪ್ರತಿ ಮನೆಯಲ್ಲಿ ಒಂದಲ್ಲ ಒಂದು ವಾಹನ ಇರುವುದರಿಂದ ದಶಕಗಳ ಮೊದಲು ಇದ್ದ ರಾಜ್ಯ, ರಾಷ್ಟ್ರೀಯ ಹೆದ್ದಾರಿಗಳ ಅಗಲ ಈಗ ಸಾಲುತ್ತಿಲ್ಲ. ಆದರೆ ನೀವು ಸರಿಯಾಗಿ ಗಮನಿಸಿ. ಹೆದ್ದಾರಿಗಳಲ್ಲಿ ಲಾರಿ, ಟ್ಯಾಂಕರ್ಸ್, ಜೀಪು, ಕಾರುಗಳ ಓಡಾಟ ಹೆಚ್ಚಾಗಿ ಇರುತ್ತದೆ. ಅದೇ ನೀವು ನಗರಗಳ ಒಳಗೆ ಗಮನಿಸಿ. ಕಾರುಗಳು, ಬೈಕು, ಸ್ಕೂಟರ್ಸ್, ರಿಕ್ಷಾ, ಟೆಂಪೋ, ಕ್ಯಾಬ್, ಸಣ್ಣಗಾತ್ರದ ಲಾರಿಗಳ ಸಂಖ್ಯೆ ಹೆಚ್ಚಾಗಿರುತ್ತದೆ. ಸರಿಯಾಗಿ ನೋಡಿದ್ರೆ ಹೆದ್ದಾರಿಗಳಿಗಿಂತ ವಾಹನಗಳ ದಟ್ಟಣೆ ಜಾಸ್ತಿಯಾಗುತ್ತಿರುವುದು ನಗರಗಳ ಒಳಗೆ. ಆದ್ದರಿಂದ ಇಲ್ಲಿ ಕೂಡ ರಸ್ತೆಗಳ ಅಗಲೀಕರಣ ನಡೆಯಬೇಕಿದೆ.

ಮಂಗಳೂರು ನಗರದ ಒಳಗೆ ರಸ್ತೆಗಳ ಅಗಲೀಕರಣ ಮಾಡುವ ಪ್ರಕ್ರಿಯೆ ಶುರುವಾಗಿ ಹದಿನೈದು ವರ್ಷಗಳು ಕಳೆದಿವೆ. ಮೊದಲ ಚತುಷ್ಪಥ ರಸ್ತೆ ಮಾಡಿದ್ದೇ ಲೇಡಿಹೀಲ್ ನಿಂದ ಪಿವಿಎಸ್ ತನಕ. ಆ ಬಳಿಕ ಜ್ಯೋತಿ ಥಿಯೇಟರ್ ನಿಂದ ಹಂಪನಕಟ್ಟೆಯ ತನಕ, ಹಂಪನಕಟ್ಟೆಯಿಂದ ಆರ್ ಟಿಒ ತನಕ ಹೀಗೆ ರಸ್ತೆಗಳ ಅಗಲೀಕರಣದ ಪ್ರಕ್ರಿಯೆಗಳು ನಡೆದವು. ಇಪ್ಪತ್ತೈದು ವರ್ಷಗಳ ಹಿಂದೆನೆ ನಮ್ಮ ನಗರದಲ್ಲಿ ವಾಹನಗಳ ದಟ್ಟಣೆ ಎಷ್ಟಿತ್ತು ಎಂದರೆ 1996 ರಿಂದಲೇ ಸ್ಟೇಟ್ ಬ್ಯಾಂಕಿನಿಂದ ಸಿಟಿ ಬಸ್ಸುಗಳ ಪರ್ಮಿಟ್ ಹೊಸದಾಗಿ ಕೊಡುವುದನ್ನು ಸಂಪೂರ್ಣವಾಗಿ ನಿಲ್ಲಿಸಲಾಗಿದೆ. ಆದರೆ ದೇಶದಲ್ಲಿ ರಸ್ತೆಗಳು ಅಗಲವಾಗುವ ಪ್ರಕ್ರಿಯೆಗಳು ನಡೆಯುತ್ತಿದ್ದರೆ ಇತ್ತ ಮಂಗಳೂರಿನಲ್ಲಿ ಮಾತ್ರ ರಸ್ತೆಗಳು ಕಿರಿದಾಗುವ ಅಥವಾಸಪೂರವಾಗುವ ಪ್ರಕ್ರಿಯೆ ನಡೆಯುತ್ತಿದೆ. ನಾವು ಉಲ್ಟಾ ಆಂಗಲ್ ನಲ್ಲಿ ನಡೆಯುತ್ತಿದ್ದೇವೆ ಎನ್ನುವುದೇ ಇದರ ಅರ್ಥ. ಇದು ಮಂಗಳೂರಿನ ಜನರಿಗೆ ಆಶ್ಚರ್ಯವನ್ನು ಉಂಟು ಮಾಡಿದೆ. ಅದಲ್ಲದೆ ನಮ್ಮ ರಸ್ತೆಗಳು ಮಾತ್ರ ಯಾಕೆ ಸಪೂರ ಆಗುತ್ತಿದೆ ಎನ್ನುವುದರ ಕಾರಣ ತಿಳಿಯುತ್ತಿಲ್ಲ. ಬೇಕಾದರೆ ಇದಕ್ಕೆ ಉದಾಹರಣೆಗಳನ್ನು ಕೊಡುತ್ತೇನೆ. ನೀವು ಪರೀಕ್ಷಿಸಬಹುದು.

ಹಂಪನಕಟ್ಟೆಯಿಂದ ಬಲ್ಮಠ ರಸ್ತೆಯನ್ನೇ ತೆಗೆದುಕೊಳ್ಳಿ ಅಥವಾ ಹಂಪನಕಟ್ಟೆಯಿಂದ ಆರ್ ಟಿಒ ಆಗಿ ಸ್ಟೇಟ್ ಬ್ಯಾಂಕ್ ರಸ್ತೆಯನ್ನೇ ತೆಗೆದುಕೊಳ್ಳಿ. ಹಿಂದೆ ದ್ವಿಪಥ ಇದ್ದದ್ದು ಈಗ ಒಂದೂವರೆ ಪಥ ಆಗಿದೆ. ರಸ್ತೆಗಳು ಕಿರಿದಾಗಿದೆ ಮತ್ತು ಫುಟ್ ಪಾತ್ ಗಳು ಅಗತ್ಯಗಿಂತ ಮತ್ತು ನಿರೀಕ್ಷೆಗಿಂತ ಹೆಚ್ಚು ಅಗಲವಾಗುತ್ತಾ ಹೋಗಿವೆ. ಫುಟ್ ಪಾತ್ ಅಗಲವಾಗಿ ರಸ್ತೆಗಳು ಕಿರಿದಾಗಿರುವುದರಿಂದ ವಾಹನ ಸಂಚಾರಕ್ಕೆ ಈಗ ತೊಡಕಾಗುತ್ತಿದೆ. ಇಷ್ಟು ದೊಡ್ಡ ಫುಟ್ ಪಾತ್ ಅಗತ್ಯ ಯಾಕಿಲ್ಲ ಎಂದರೆ ಆ ಪ್ರದೇಶದಲ್ಲಿ ಪಾದಚಾರಿಗಳ ಓಡಾಟ ಅಷ್ಟಿರುವುದಿಲ್ಲ. ಹಾಗಾದರೆ ಇವರು ಫುಟ್ ಪಾತ್ ಮಾಡಿರುವುದು ಮುಂದಿನ ದಿನಗಳಲ್ಲಿ ಗೂಡಂಗಡಿ ತೆರೆಯುವವರಿಗೆ ಅನುಕೂಲವಾಗಲಿ ಎನ್ನುವ ಕಾರಣಕ್ಕಾ ಎನ್ನುವ ಪ್ರಶ್ನೆ ಮೂಡುತ್ತದೆ. ಇದರಿಂದ ಮಂಗಳೂರು ಮಹಾನಗರ ಪಾಲಿಕೆ ಅನಧಿಕೃತವಾಗಿ ಬೀದಿಬದಿ ವ್ಯಾಪಾರಿಗಳಿಗೆ ಮಂಗಳೂರು ನಗರವನ್ನು ಕಿಷ್ಕಿಂದೆಯನ್ನಾಗಿ ಮಾಡಲು ಅವಕಾಶ ನೀಡಿದೆ ಎನ್ನುವುದು ಸ್ಪಷ್ಟವಾಗುತ್ತಿದೆ. ಇದಕ್ಕೆಲ್ಲ ಯಾರು ಮತ್ತು ಏನು ಕಾರಣ ಎನ್ನುವುದನ್ನು ಈಗ ಬೇರೆ ಬೇರೆಯಾಗಿ ವಿಭಾಗಿಸಿ ನೋಡೋಣ. ಮೊದಲನೇಯದಾಗಿ ಯಾರು ಕಾರಣ ಎನ್ನುವ ಪ್ರಶ್ನೆಗೆ ಉತ್ತರ ಇಂಜಿನಿಯರ್ಸ್ ಕಾರಣ ಎಂದು ಹೇಳಬಹುದು. ಇನ್ನು ಏನು ಕಾರಣ ಎಂದರೆ ಆ ಇಂಜಿನಿಯರ್ಸ್ ಗಳಿಗಿರುವ ಸಾಮಾನ್ಯ ಜ್ಞಾನದ ಕೊರತೆ. ಹಾಗಾದರೆ ಕೇವಲ ಇಂಜಿನಿಯರ್ಸ್ ಗಳು ಮಾತ್ರ ಕಾರಣವೇ ಎಂದರೆ ಅಲ್ಲ ಎಂದು ಕೂಡ ಹೇಳಬಹುದು. ಯಾಕೆಂದರೆ ಇಂಜಿನಿಯರ್ಸ್ ಹೆಚ್ಚಾಗಿ ಸ್ಥಳೀಯರಾಗಿರುವುದಿಲ್ಲ. ಅವರಿಗೆ ಇಲ್ಲಿನ ಮೂಲಭೂತ ವ್ಯವಸ್ಥೆ ಮತ್ತು ಪರಿಸ್ಥಿತಿಯ ಅರಿವು ಅಷ್ಟು ಇರುವುದಿಲ್ಲ. ಅವರು ಸ್ಕೇಚ್ ಹಾಕಬಹುದು. ಆದರೆ ಅದನ್ನು ಪರಿಶೀಲಿಸಬೇಕಾದ ನಮ್ಮ ಜನಪ್ರತಿನಿಧಿಗಳು ಏನು ಮಣ್ಣು ತಿನ್ನಲು ಹೋಗಿದ್ರಾ? ನಮ್ಮ ಜನಪ್ರತಿನಿಧಿಗಳು ಇಲ್ಲಿಯೇ ಹುಟ್ಟಿ, ಇಲ್ಲಿಯೇ ಬೆಳೆದು, ಇಲ್ಲಿಯೇ ಚುನಾವಣೆಗೆ ನಿಂತು, ನಿತ್ಯ ಇದೇ ರಸ್ತೆಯಲ್ಲಿಯೇ ಬೈಕಿನಲ್ಲಿಯೋ, ಕಾರಿನಲ್ಲಿಯೋ ಓಡಾಡುವವರಲ್ಲವೇ? ಅವರಿಗಾದರೂ ಒಂದಿಷ್ಟು ಬುದ್ಧಿ ಬೇಡವೇ? ಇಂಜಿನಿಯರ್ಸ್ ರಸ್ತೆ ಚಿಕ್ಕದು ಮಾಡಲು ಪ್ಲಾನ್ ಮಾಡುತ್ತಿದ್ದರೆ ಇವರಾದರೂ ಹೇಗೆ ಅನುಮತಿ ನೀಡಿದರು? ಇವರ ತಲೆಯನ್ನು ಯಾರಿಗಾದರೂ ಬಾಡಿಗೆಗೆ ಕೊಟ್ಟು ಬಿಟ್ಟಿದ್ದಾರಾ?

ಇನ್ನು ಯಾವುದೇ ಕಾಮಗಾರಿಗಳನ್ನು ಮುಗಿಸಲು ಇಂತಿಷ್ಟೇ ದಿನಗಳು ಎಂದು ಮೊದಲೇ ನಿಗದಿಪಡಿಸಲಾಗಿರುತ್ತದೆ. ಗುತ್ತಿಗೆದಾರರಿಗೆ ಕೆಲಸದ ವರ್ಕ್ ಆರ್ಡರ್ ಕೊಡುವಾಗಲೇ ಅದರಲ್ಲಿ ಇಂತಿಷ್ಟು ದಿನ ಎಂದು ನಮೂದಿಸಲಾಗಿರುತ್ತದೆ. 90 ದಿನಗಳ ಕಾಮಗಾರಿಯನ್ನು ಆರು ತಿಂಗಳು ಮಾಡಲು ಅವಕಾಶವೇ ಇಲ್ಲ. ಆದರೆ ಇಂತಹ ನಿಯಮಗಳು ನಮ್ಮಲ್ಲಿ ಕಾಣುವುದು ಕಾಗದದಲ್ಲಿ ಮಾತ್ರ. ಇದು ಕಾರ್ಯಗತವಾಗುವುದಿಲ್ಲ. ಒಂದು ವೇಳೆ ಯಾವುದೇ ಕಾಮಗಾರಿಯನ್ನು ನಿರ್ದಿಷ್ಟ ಅವಧಿಯ ಒಳಗೆ ಮುಗಿಸದಿದ್ದರೆ ಆ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರಿಸಲು ಅವಕಾಶವಿದೆ. ಆದರೆ ಕಮೀಷನ್ ತಿಂದು ಜೀತಗಾರಿಕೆ ಮಾಡುವ ಇಂಜಿನಿಯರ್ಸ್ ಸುಮ್ಮನಿರುವುದರಿಂದ ಮಂಗಳೂರಿನ ಪರಿಸ್ಥಿತಿ ಯಾರಿಗೂ ಬೇಡವಾಗಿದೆ!

0
Shares
  • Share On Facebook
  • Tweet It




Trending Now
ಲಗಾನ್ ನಿರ್ದೇಶಕ ಅಶುತೋಷ್ ನಿರ್ದೇಶನದಲ್ಲಿ ರಿಷಬ್ ಆಗಲಿದ್ದಾರೆ ಕೃಷ್ಣದೇವರಾಯ!
Hanumantha Kamath July 14, 2025
ಅಂದು ಕ್ಲರ್ಕ್.. ಇಂದು ಕರ್ಣಾಟಕ ಬ್ಯಾಂಕಿನ ಎಂಡಿ, ಸಿಇಒ!
Hanumantha Kamath July 14, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಲಗಾನ್ ನಿರ್ದೇಶಕ ಅಶುತೋಷ್ ನಿರ್ದೇಶನದಲ್ಲಿ ರಿಷಬ್ ಆಗಲಿದ್ದಾರೆ ಕೃಷ್ಣದೇವರಾಯ!
    • ಅಂದು ಕ್ಲರ್ಕ್.. ಇಂದು ಕರ್ಣಾಟಕ ಬ್ಯಾಂಕಿನ ಎಂಡಿ, ಸಿಇಒ!
    • ಪ್ರಾಜೆಕ್ಟ್ ಎಂದರೆ ಮಹಿಳೆ... ಪ್ರಾಜೆಕ್ಟ್ ಸಿಕ್ಕಿತಾ ಎಂದು ಬಾಬಾ ಯುವಕರಿಗೆ ಕೇಳುತ್ತಿದ್ದ! ಹೀಗೆ ಬೇರೆ ಬೇರೆ ಕೋಡ್ ವರ್ಡ್ ಗಳಿವೆ!
    • ಜಪಾನ್ ಮ್ಯಾರಥಾನ್.. 46 ಗಂಟೆ ನಿದ್ದೆ ಮಾಡದೇ ಓಡಿದ ಕನ್ನಡತಿ ಅಶ್ವಿನಿ!
    • ಆಧ್ಯಾತ್ಮದ ಸೆಳೆತದಿಂದ ಗೋರ್ಕರ್ಣದ ದಟ್ಟಗುಹೆಯಲ್ಲಿ ಪುಟ್ಟ ಮಕ್ಕಳೊಂದಿಗೆ ವಾಸಿಸುತ್ತಿದ್ದ ರಷ್ಯಾ ಮಹಿಳೆ!
    • 7.25 ಕೋಟಿ ವೆಚ್ಚದಲ್ಲಿ ಸೊಳ್ಳೆ ನಿಯಂತ್ರಣಕ್ಕೆ ರಾಜ್ಯ ಸರಕಾರ ಸಜ್ಜು!
    • ತರಗತಿಯಲ್ಲಿ ಲಾಸ್ಟ್ ಬೆಂಚ್ ಎನ್ನುವುದು ಕೇರಳದಲ್ಲಿ ಇನ್ನು ಇಲ್ಲ!
    • ಧರ್ಮಸ್ಥಳದಲ್ಲಿ ಗೌಪ್ಯವಾಗಿ ಹೆಣಗಳನ್ನು ವಿಲೇವಾರಿ ಮಾಡುತ್ತಿದ್ದೆ ಎಂದು ಹೇಳಿಕೊಂಡಿರುವ ಮಾಜಿ ಸ್ವಚ್ಚತಾ ಸಿಬ್ಬಂದಿ ನ್ಯಾಯಾಲಯಕ್ಕೆ ಹಾಜರು!
    • ಗಣೇಶೋತ್ಸವ ಇನ್ನು ಮಹಾರಾಷ್ಟ್ರದ ರಾಜ್ಯ ಹಬ್ಬ ಎಂದು ಸರಕಾರ ಘೋಷಣೆ!
    • ನಾಯಕರು 75 ಆಗುತ್ತಿದ್ದಂತೆ ಅಧಿಕಾರದಿಂದ ಕೆಳಗಿಳಿದು ಬೇರೆಯವರಿಗೆ ದಾರಿ ಮಾಡಿಕೊಡಲಿ - ಮೋಹನ್ ಭಾಗವತ್!
  • Popular Posts

    • 1
      ಲಗಾನ್ ನಿರ್ದೇಶಕ ಅಶುತೋಷ್ ನಿರ್ದೇಶನದಲ್ಲಿ ರಿಷಬ್ ಆಗಲಿದ್ದಾರೆ ಕೃಷ್ಣದೇವರಾಯ!
    • 2
      ಅಂದು ಕ್ಲರ್ಕ್.. ಇಂದು ಕರ್ಣಾಟಕ ಬ್ಯಾಂಕಿನ ಎಂಡಿ, ಸಿಇಒ!
    • 3
      ಪ್ರಾಜೆಕ್ಟ್ ಎಂದರೆ ಮಹಿಳೆ... ಪ್ರಾಜೆಕ್ಟ್ ಸಿಕ್ಕಿತಾ ಎಂದು ಬಾಬಾ ಯುವಕರಿಗೆ ಕೇಳುತ್ತಿದ್ದ! ಹೀಗೆ ಬೇರೆ ಬೇರೆ ಕೋಡ್ ವರ್ಡ್ ಗಳಿವೆ!
    • 4
      ಜಪಾನ್ ಮ್ಯಾರಥಾನ್.. 46 ಗಂಟೆ ನಿದ್ದೆ ಮಾಡದೇ ಓಡಿದ ಕನ್ನಡತಿ ಅಶ್ವಿನಿ!
    • 5
      ಆಧ್ಯಾತ್ಮದ ಸೆಳೆತದಿಂದ ಗೋರ್ಕರ್ಣದ ದಟ್ಟಗುಹೆಯಲ್ಲಿ ಪುಟ್ಟ ಮಕ್ಕಳೊಂದಿಗೆ ವಾಸಿಸುತ್ತಿದ್ದ ರಷ್ಯಾ ಮಹಿಳೆ!

  • Privacy Policy
  • Contact
© Tulunadu Infomedia.

Press enter/return to begin your search