ಮಂಗಳೂರು ಅಪರಾಧ ವಿಭಾಗದ ಡಿಸಿಪಿಯಾಗಿ ಬಿ ಪಿ ದಿನೇಶ್ ಕುಮಾರ್ ಅಧಿಕಾರ ಸ್ವೀಕಾರ
Posted On July 12, 2021

ಮಂಗಳೂರು ನಗರ ಪೊಲೀಸ್ ಉಪ ಆಯುಕ್ತರಾಗಿ ಹಿರಿಯ ಪೋಲಿಸ್ ಅಧಿಕಾರಿಯಾಗಿ ಬಿ ಪಿ ದಿನೇಶ್ ಕುಮಾರ್ ಅವರು ಇಂದು ಅಧಿಕಾರ ಸ್ವೀಕರಿಸಿದರು .ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿಯಾಗಿ ಕರ್ತವ್ಯ ನಿರ್ವಹಿಸಿ ಸೇವೆಯಿಂದ ನಿವೃತ್ತಿಯಾಗಿದ್ದ ವಿನಯ್ ಗಾಂವ್ಕರ್ ಅವರ ಸ್ಥಾನಕ್ಕೆ ದಿನೇಶ್ ಅವರು ನಿಯುಕ್ತಿಗೊಂಡಿದ್ದಾರೆ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಹರಿ ರಾಮ್ ಶಂಕರ್ ಅವರಿಂದ ಅಧಿಕಾರ ಸ್ವೀಕಾರ ಮಾಡಿದರು ಮೂಲತಃ ಕೊಡಗಿನವರಾಗಿದ್ದು ಬಿ ಪಿ ದಿನೇಶ್ ಕುಮಾರ್ ಅವರು ಮಂಗಳೂರು ವಿಶ್ವವಿದ್ಯಾಲಯದ ಪದವಿಧರರಾಗಿದ್ದಾರೆ ಪೊಲೀಸ್ ಇಲಾಖೆ ಸೇರಿದ ಬಳಿಕ ಉಡುಪಿ ಬೈಂದೂರು ಚಿಕ್ಕಮಗಳೂರಿನ ಮೂಡಿಗೆರೆ ಮಂಗಳೂರು ಮಣಿಪಾಲ ಲೋಕಾಯುಕ್ತ ಹಾಗೂ ಆಂಟಿ ನಕ್ಸಲ್ ಪಡೆ ಕರಾವಳಿ ಕಾವಲು ಪಡೆ ಕೊಡಗಿನ ಮಡಿಕೇರಿಯಲ್ಲಿ ಪೋಲಿಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿ ಅಪಾರ ಜನಮನ್ನಣೆ ಗಳಿಸಿದ್ದಾರೆ
- Advertisement -
Trending Now
ಮಂಗಳೂರಿನ ಕಥೆ ಏನಾಗಿತ್ತು?
November 29, 2023
42 ಕೋಟಿ ಮನೆಯಲ್ಲಿ ಸಿಕ್ಕಿದ್ದ ಅಂಬಿಕಾಪತಿ ಸಾವಿನ ಬಗ್ಗೆ ಕೆಂಪಣ್ಣ ಹೇಳಿದ್ದೇನು?
November 28, 2023
Leave A Reply