• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಉರ್ವ ಠಾಣೆಯಲ್ಲಿ ದುರ್ನಡತೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಇಬ್ಬರ ಬಂಧನ!

Tulunadu News Posted On July 14, 2021


  • Share On Facebook
  • Tweet It

ಮಂಗಳೂರು: ಉರ್ವ ಠಾಣೆಗೆ ಬಂದಿದ್ದ ವ್ಯಕ್ತಿಗಳಿಬ್ಬರು ಪೊಲೀಸರ ಜತೆ ದುರ್ನಡತೆ ತೋರಿದ ಘಟನೆ ನಡೆದಿದ್ದು ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ .ನೋಯೆಲ್ ಸಿಕ್ವೇರಾ ಮತ್ತು ಜಾನ್ ಸಿಕ್ವೇರ ಬಂಧಿತರು ನೋಯೆಲ್ ಸಿಕ್ವೇರಾ ಉರ್ವ ಸ್ಟೋರ್ ಬಳಿಯ ಚಿಲಿಂಬಿ ನಿವಾಸಿಯಾಗಿದ್ದು ಕಳೆದ ಮೇ ತಿಂಗಳಲ್ಲಿ ತನ್ನ ಅಪಾರ್ಟ್ಮೆಂಟ್ ವಿಚಾರದಲ್ಲಿ ಪೊಲೀಸ್ ದೂರು ನೀಡಿದ್ದರೂ . ಅಪಾರ್ಟ್ ಮೆಂಟ್ ಅಸೋಸಿಯೇಷನ್ ಕಡೆಯಿಂದ ನೀರು ಕಡಿತ ಮಾಡಿದ ವಿಚಾರದಲ್ಲಿ ಜಟಾಪಟಿ ನಡೆದು ಬಳಿಕ ಎರಡೂ ಕಡೆಯಿಂದ ದೂರು ಪ್ರತಿ ದೂರು ಸಲ್ಲಿಕೆಯಾಗಿತ್ತು .ಇದೀಗ 2ತಿಂಗಳ ನಂತರ ಅಪಾರ್ಟ್ ಮೆಂಟ್ ಜಟಾಪಟಿ ವಿಚಾರ ಇತ್ಯರ್ಥ ಆಗಿವೆ ಎನ್ನಲಾಗುತ್ತಿದ್ದು ಇಂದು ನೋಯೆಲ್ ಸಿಕ್ವೇರಾ ಉರ್ವಾಠಾಣೆಯ ದೂರು ಹಿಂಪಡೆಯುವುದಕ್ಕಾಗಿ ತೆರಳಿದ್ದರು ಈ ವೇಳೆ ಸಾಮಾಜಿಕ ಕಾರ್ಯಕರ್ತರೆಂದು ಗುರುತಿಸಿಕೊಂಡಿರುವ ಜಾನ್ ಸೆಕ್ವೇರಾ ಕೂಡ ಠಾಣೆಗೆ ತೆರಳಿದ್ದರು ಎನ್ನಲಾಗಿದೆ . ಠಾಣೆಯಲ್ಲಿ ಇದೇ ವಿಚಾರದಲ್ಲಿ ಮಾತುಕತೆ ನಡೆದಿದ್ದು ಪೋಲಿಸರ ಜೊತೆ ಮಾತನಾಡುತ್ತಿದ್ದ ವೇಳೆ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿದ್ದಾನೆ , ಇದನ್ನು ಗಮನಿಸಿದ ಪೊಲೀಸರು ಮೊಬೈಲ್ ಕಿತ್ತುಕೊಂಡಿದ್ದಾರೆ .ಈ ವೇಳೆ ಜಾನ್ ಸಿಕ್ವೇರ ಮತ್ತು ಪೊಲೀಸರ ನಡುವೆ ತಳ್ಳಾಟ ನಡೆದಿದೆ ಪೊಲೀಸರು ಹೇಳುವ ಪ್ರಕಾರ ಜಾನ್ ಮತ್ತು ನೋಯಲ್ ಇಬ್ಬರು ಅಲ್ಲಿನ ಸಿಬ್ಬಂದಿ ಜೊತೆ ದುರ್ನಡತೆ ತೋರಿದ್ದಾರೆ ಈ ವೇಳೆ ಇಬ್ಬರು ಮಹಿಳಾ ಸಿಬ್ಬಂದಿ ಪೂಜಾ ಹಿರೇಮಠ ಮತ್ತು ಇನ್ನೊಬ್ಬ ಹೆಡ್ಕಾನ್ಸ್ಟೇಬಲ್ ನಾರಾಯಣ ಎಂಬುವರಿಗೆ ಗಾಯಗಳಾಗಿದ್ದು ಅವರನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಘಟನೆಗೆ ಸಂಬಂಧಿಸಿ ಪೊಲೀಸರು ತಮ್ಮ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಲ್ಲಿ ಪ್ರಕರಣ ದಾಖಲಿಸಿದ್ದು ನೋಯೆಲ್ ಮತ್ತು ಜಾನ್ ಸೆಕ್ವೇರಾರನ್ನು ಬಂಧಿಸಿದ್ದಾರೆ ಹೀಗಾಗಿ ಕೇಸ್ ಹಿಂಪಡೆಯಲು ಹೋದವರು ಜೈಲು ಸೇರುವಂತಾಗಿದೆ

  • Share On Facebook
  • Tweet It


- Advertisement -


Trending Now
ಯಡ್ಡಿ ಭೇಟಿ ಮಾಡಿದ ಶಾ ಕೊಟ್ಟ ಸಂದೇಶ ಕುತೂಹಲಕಾರಿ!
Tulunadu News August 6, 2022
ಸಿದ್ದು,ಡಿಕೆಶಿ ಆಲಿಂಗಿಸಿದ್ದು ಖುಷಿ ಎಂದ ರಾಹುಲ್!
Tulunadu News August 5, 2022
Leave A Reply

  • Recent Posts

    • ಯಡ್ಡಿ ಭೇಟಿ ಮಾಡಿದ ಶಾ ಕೊಟ್ಟ ಸಂದೇಶ ಕುತೂಹಲಕಾರಿ!
    • ಸಿದ್ದು,ಡಿಕೆಶಿ ಆಲಿಂಗಿಸಿದ್ದು ಖುಷಿ ಎಂದ ರಾಹುಲ್!
    • ಬೈಕ್ ನಲ್ಲಿ ಹಿಂದೆ ಕೂತುಕೊಂಡರೆ ಹುಶಾರ್!
    • ಸಂಜೆಯಿಂದ ಬಂದ್ ಮಾಡಿ ರೋಡ್ ಬ್ಲಾಕ್ ಮಾಡಿದರೆ ಆಗುತ್ತಾ?
    • ಪರಿಹಾರ ಕೊಡುವಾಗ ಒಂದು ರಾಜಧರ್ಮ, ಇನ್ನೊಂದು ಸಿದ್ಧಾಂತ ಧರ್ಮ!
    • ಬಿಜೆಪಿ ಕೆಡರ್ ಆಧಾರಿತ ಪಕ್ಷ, ಕಾರ್ಯಕರ್ತರು ನಾಯಕರನ್ನು ಪ್ರಶ್ನಿಸಬಲ್ಲರು!
    • ರಾಜೀನಾಮೆ ಕೊಡುತ್ತಿರುವವರು ಪಲಾಯನವಾದ ಮಾಡುತ್ತಿದ್ದಾರಾ?
    • ಪ್ರವೀಣ್ ಹತ್ಯೆ ಬಿಜೆಪಿ ನಾಯಕರಿಗೂ, ಕಾರ್ಯಕರ್ತರಿಗೂ ಮುಂದಿನ ದಾರಿ ತೋರಿಸಿದೆ!!
    • ರಮೇಶ್ ಮಾತಿನಿಂದಲಾದರೂ ಹಿರಿಯ ಕಾಂಗ್ರೆಸ್ಸಿಗರು ಮೈಚಳಿ ಬಿಡುತ್ತಾರಾ?
    • ಸೋನಿಯಾಗೆ ನೋ'ಬೆಲ್' ಕೊಡಿಸಲು ಖಾದರ್ ತಯಾರ್!
  • Popular Posts

    • 1
      ಯಡ್ಡಿ ಭೇಟಿ ಮಾಡಿದ ಶಾ ಕೊಟ್ಟ ಸಂದೇಶ ಕುತೂಹಲಕಾರಿ!
    • 2
      ಸಿದ್ದು,ಡಿಕೆಶಿ ಆಲಿಂಗಿಸಿದ್ದು ಖುಷಿ ಎಂದ ರಾಹುಲ್!
    • 3
      ಬೈಕ್ ನಲ್ಲಿ ಹಿಂದೆ ಕೂತುಕೊಂಡರೆ ಹುಶಾರ್!
    • 4
      ಸಂಜೆಯಿಂದ ಬಂದ್ ಮಾಡಿ ರೋಡ್ ಬ್ಲಾಕ್ ಮಾಡಿದರೆ ಆಗುತ್ತಾ?
    • 5
      ಪರಿಹಾರ ಕೊಡುವಾಗ ಒಂದು ರಾಜಧರ್ಮ, ಇನ್ನೊಂದು ಸಿದ್ಧಾಂತ ಧರ್ಮ!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search