• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » ಆರೋಗ್ಯ

ನಿಮ್ಮ ದೇಹದಲ್ಲಿ ಬೊಜ್ಜು ಇದೆಯೇ?ಹಾಗಿದ್ದಲ್ಲಿ ಮನೆ ಮದ್ದಿನಿಂದಲೇ ಪರಿಹಾರ ಕಂಡುಕೊಳ್ಳಿ .

TNN Correspondent Posted On August 18, 2017
0


0
Shares
  • Share On Facebook
  • Tweet It

ಬೊಜ್ಜು ,ಇದು ಇತ್ತೀಚಿಗೆ ಹಲವರ ಮುಜುಗರಕ್ಕೆ ಕಾರಣವಾಗುವ ಒಂದು ಕಾಯಿಲೆ .ಆಘಾತಕಾರಿ ವಿಷಯವೆಂದರೆ ಹಿಂದೆ ಇದು ವಯಸ್ಕರಲ್ಲಿ ಕಾಣಿಸುತ್ತಿತ್ತು ಈವಾಗ ಪುಟ್ಟ ಮಕ್ಕಳಲ್ಲೂ ಸಹ ತೋರಿ ಬರುತ್ತಿದೆ .ಹೊರಗಿನ ಕರಿದ ಆಹಾರ ,ಸರಿಯಾದ ಸಮಯದಲ್ಲಿ ಆಹಾರ ಸೇವಿಸದಿರುವುದು ,ವ್ಯಾಯಾಮ ಮಾಡದೇ ಆಲಸಿಗಳಾಗುವುದು ಹೀಗೆ ಇದಕ್ಕೆ ಹಲವಾರು ಕಾರಣಗಳಿವೆ.ಮೊದಲು ಸುಮ್ಮನೆ ಇದನ್ನು ನಿರ್ಲಕ್ಷಿಸಿದರೆ ಸಮಯ ಕಳೆದಂತೆ ಇದು ಮಾರಕವಾಗುವ ಸಾಧ್ಯತೆಗಳಿವೆ.ಇದನ್ನು ಯೌವನದಲ್ಲೇ ತಡೆಯಲೇಬೇಕು .ಅಮೆರಿಕನ್ ಅಕಾಡೆಮಿ ಆಫ್ ನ್ಯೂರಾಲಜಿ ಪ್ರಕಟಿಸುವ ಪತ್ರಿಕೆಯ ಪ್ರಕಾರ ಯೌವನದಲ್ಲಿ ಬೊಜ್ಜು ಜಾಸ್ತಿಯಿದ್ದರೆ ಮಧ್ಯ ವಯಸ್ಕರಾದಾಗ ಹೃದಯಾಘಾತ ಆಗುವ ಸಾಧ್ಯತೆಗಳು ಹೆಚ್ಚುತ್ತವೆ .ಸ್ವೀಡನ್ ನ ಗೊಥೆನ್ ಬುರ್ಗ್ ವಿಶ್ವ ವಿದ್ಯಾಲಯದ ಪ್ರಕಾರ ಹೃದಯಾಘಾತವು ವಯಸ್ಕರಿಂತ ಹೆಚ್ಚಾಗಿ ತರುಣರಲ್ಲೇ ಕಂಡು ಬರುತ್ತಿದೆ .ಇದು ಮಿತಿ ಮೀರಿದ ಬೊಜ್ಜಿನಿಂದಾಗಿ ಆಗುತ್ತದೆ .ಇದನ್ನು ಕಡಿಮೆ ಮಾಡಲು ಮನೆಯಲ್ಲೇ ಮಾಡಲಾಗುವ  ಸರಳ ವೈಖರಿಗಳನ್ನು ಕಲಿಯೋಣ .

೧.ಮೊದಲನೆಯದಾಗಿ ನಿಯಮಿತ ವ್ಯಾಯಾಮ ಮಾಡಲೇಬೇಕು .ಸೂರ್ಯ ನಮಸ್ಕಾರವು  ಸರ್ವಾಂಗ ವ್ಯಾಯಾಮವಾಗಿದೆ .ದಿನಕ್ಕೆ ನಾಲ್ಕು ಬಾರಿ ಇದನ್ನು ಮಾಡುವುದು ಒಳ್ಳೆಯದು .ಕ್ರಂಚ್ ಗಳು ಸಹ ಬೊಜ್ಜನ್ನು ಕರಗಿಸಬಲ್ಲವು .ದೈಹಿಕ ವ್ಯಾಯಾಮದ ತರಬೇತುದಾರರಿಂದ ಮಾರ್ಗದರ್ಶನವನ್ನು ಪಡೆದುಕೊಂಡು ವ್ಯಾಯಾಮ ಮಾಡಲು ಶುರು  ಮಾಡಿ .ಇದರಲ್ಲಿ ಒಂದು ಮಾತನ್ನು ನೆನಪಿಟ್ಟುಕೊಳ್ಳಬೇಕು ,ಬೊಜ್ಜು ಕರಗಿಸಲೇಬೇಕೆಂಬ ಹಠ ಹಿಡಿದು ಎರ್ರಾಬಿರ್ರಿ ವ್ಯಾಯಾಮ ಮಾಡದಿರಿ ,ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ವ್ಯಾಯಾಮ ಮಾಡಿ .ದಿನ ಸ್ವಲ್ಪ ನಡೆಯುವುದು ,ಹಳ್ಳಿಯಲ್ಲಿದ್ದರೆ ಕೃಷಿ ಕೆಲಸಗಳಲ್ಲಿ ಪಾಲ್ಗೊಳ್ಳುವುದು ಬೊಜ್ಜನ್ನು ಕರಗಿಸಲು ಸಹಾಯ ಮಾಡುತ್ತವೆ .

೨.ಕರಿಬೇವಿನ ಸೇವನೆ

ಒಗ್ಗರಣೆಗೆ ಹಾಕಿದಾಕ್ಷಣ ಮೂಗರಳಿಸುವಂತೆ ಪರಿಮಳ ಬರುವುದೇ ಕರಿಬೇವಿನಿಂದ .ಇದು ಬೊಜ್ಜನ್ನು ಕರಗಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ .ಹಲವರಿಗೆ ಊಟದಲ್ಲಿ ಕರಿಬೇವಿನ ಎಲೆ ಸಿಕ್ಕಿದರೆ ಸಾಕು ಬದಿಗಿಡುವಲ್ಲಿ ಮಗ್ನರಾಗುತ್ತಾರೆ .ಇನ್ನು ಮುಂದೆ ಹಾಗೆ ಮಾಡದಿರಿ .ಈ ಎಳೆ ಜೀರ್ಣಶಕ್ತಿಯ ಕಿಣ್ವಗಳನ್ನು ಉದ್ದೀಪಿಸಿ ಆಹಾರವು ಬೇಗ ಜೀರ್ಣವಾಗುವಂತೆ ಮಾಡುತ್ತವೆ .ಪ್ರತಿ ದಿನ ೧೦ ಕರಿಬೇವಿನ ಎಲೆಗಳನ್ನು ಹಸಿಯಾಗಿ ಬೆಳಗ್ಗೆ ಖಾಲಿ ಹೊಟ್ಟೆಗೆ ತಿನ್ನಿ .ಮೂರು ತಿಂಗಳವರೆಗೆ ನಿಯಮಿತವಾಗಿ ಈ ಪ್ರಕ್ರಿಯೆಯನ್ನು ಮಾಡಿದರೆ ಬೊಜ್ಜು ನಿಧಾನವಾಗಿ  ನಿವಾರಣೆಯಾಗುತ್ತದೆ.

೩.ನಿಂಬೆ ಹಣ್ಣಿನ ರಸ ಮತ್ತು ಜೇನು

ಕಟು ರುಚಿಯುಳ್ಳ ಚಿನ್ನದ ಬಣ್ಣದ ನಿಂಬೆ ಹಣ್ಣಿನ ರಸ ಮತ್ತು ಮಧುರವಾದ ಜೇನು ತುಪ್ಪ ಬೊಜ್ಜನ್ನು ಕರಗಿಸುತ್ತವೆ .ಇದು ಪಚನಕ್ರಿಯೆಯನ್ನು ಹೆಚ್ಚಿಸುತ್ತದೆ .ಒಂದು ಲೋಟ ನೀರಿಗೆ ,ಎರಡು ಚಮಚ ನಿಂಬೆರಸ ,ಬೆರೆಸಿ ಒಂದು ಚಮಚ ಜೇನುತುಪ್ಪವನ್ನು ಬೆರೆಸಿ .ಇದನ್ನು ಚೆನ್ನಾಗಿ ಕದಡಿ ಬೆಳಗ್ಗೆ ಖಾಲಿ ಹೊಟ್ಟೆಗೆ ಕುಡಿಯಿರಿ.ನಿಯಮಿತವಾಗಿ ಮಾಡಿದರೆ ಅತ್ಯುತ್ತಮ ಫಲಿತಾಂಶವು ನಿಮ್ಮದಾಗುವುದು .

ಇದರೊಂದಿಗೆ ಕುರುಕು ತಿಂಡಿಗಳನ್ನು ,ಜಂಕ್ ಫುಡ್ ಗಳನ್ನೂ ಬಿಡುವುದು ಸಹ ಅವಶ್ಯವಾಗಿದೆ .ಸಿಕ್ಕ ಪಟ್ಟೆ ಬಾಯಿ ಚಪಲಕ್ಕಾಗಿ ಆಗಾಗ  ಬರಗಿಕೊಂಡು ಹೊಟ್ಟೆಗೆ ಹಾಕಿಕೊಳ್ಳುವುದನ್ನು ನಿಲ್ಲಿಸಬೇಕು .ರಾತ್ರಿ ಊಟಕ್ಕೆ ಕಾರ್ಬೋ ಹೈಡ್ರೇಟು ಉಳ್ಳಂತಹ ಆಹಾರವನ್ನು ತಿನ್ನಬಾರದು .ಆದಷ್ಟು ತಾಜಾವಾಗಿರುವ ಹಣ್ಣಿನ ರಸಗಳನ್ನು ಸೇವಿಸಬೇಕು ಇಲ್ಲವೇ ಹಣ್ಣನ್ನು ಕಚ್ಚಿ ತಿನ್ನಬೇಕು .ಐಸ್ಕ್ರೀಮುಗಳು ,ಚಾಕಲೇಟುಗಳ ಬಳಕೆಯನ್ನು ಕಡಿಮೆ ಮಾಡಬೇಕು .ಬೊಜ್ಜು ಬೇಗ  ದೇಹದಲ್ಲಿ ಶೇಖರವಾಗುತ್ತದೆ ಆದರೆ ಹೋಗುವುದು ಅತ್ಯಂತ ನಿಧಾನವಾಗಿ .ಆದ್ದರಿಂದ ಬೊಜ್ಜನ್ನು ದೂರವಿರಿಸಿ ,ಆರೋಗ್ಯದಿಂದ  ನಳನಳಿಸಿ.

 

0
Shares
  • Share On Facebook
  • Tweet It




Trending Now
ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
Tulunadu News November 1, 2025
ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
Tulunadu News October 31, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
    • ಸಿಎಂ ಚರ್ಚೆ- ದಲಿತರನ್ನು ಸಿಎಂ ಮಾಡುವಂತೆ ಒತ್ತಡ ಹಾಕುವ ಕೈ ನಾಯಕರ ಚಿಂತನೆ ಫಲ ಕೊಡುತ್ತಾ?
    • ರಾಜ್ಯ ಸರಕಾರ ತಂದಿದ್ದ "ಅಂಕುಶ"ದ ನಿಯಮ! ಹೈಕೋರ್ಟ್ ತಡೆ.
    • ಭಿಕ್ಷುಕರ ಕಲ್ಯಾಣಕ್ಕೆ ಸೆಸ್ ಆಗಿ ಸಾವಿರಾರು ಕೋಟಿ ಸಂಗ್ರಹ! ಎಲ್ಲಿ ಹೋಯ್ತು ಹಣ!
    • ಮುಸ್ತಫಾಬಾದ್ ಇನ್ನು ಕಬೀರ್ ಧಾಮ್! ಮುಸ್ಲಿಮರೇ ಇಲ್ಲದ ಊರದು!
    • ಕಾಂತಾರಾ ಚಾಪ್ಟರ್ 1 ಒಟಿಟಿಯಲ್ಲಿ ರಿಲೀಸ್! ದಿನ ಫಿಕ್ಸ್!
    • ಜಿಎಸ್ಟಿ ಇಳಿಕೆ ಪರಿಣಾಮ- ದೀಪಾವಳಿಗೆ 6.05 ಲಕ್ಷ ಕೋಟಿ ವಸ್ತು ಮಾರಾಟ!
    • ಪುತ್ತೂರು: ಅಕ್ರಮ ಗೋಸಾಗಾಟ, ಪೊಲೀಸರಿಂದ ಫೈರಿಂಗ್!
    • ದೀಪಾವಳಿ ಬೋನಸ್ ಕಡಿಮೆ ಕೊಟ್ಟಿದ್ದಕ್ಕೆ ಟೋಲ್ ಸಿಬ್ಬಂದಿಗಳು ಮಾಡಿದ್ದೇನು?
  • Popular Posts

    • 1
      ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • 2
      ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!

  • Privacy Policy
  • Contact
© Tulunadu Infomedia.

Press enter/return to begin your search