• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಫ್ರೀ ಮೆಡಿಕಲ್ ಬೇಕು, ಕಾರು ಬೇಕು, ಬಿಪಿಎಲ್ ಕಾರ್ಡ್ ಕೂಡ ಬೇಕು!!

Hanumantha Kamath Posted On July 15, 2021
0


0
Shares
  • Share On Facebook
  • Tweet It

ಸರಕಾರವೇ ಬಹಳ ಸ್ಪಷ್ಟವಾಗಿ ಹೇಳಿದೆ. ಅದೇನೆಂದರೆ ಯಾರು ಅರ್ಹವಾಗಿ ಬಡತನ ರೇಖೆಗಿಂತ ಕೆಳಗೆ ಇಲ್ಲವೋ ಅವರು ಬಿಪಿಎಲ್ ಕಾರ್ಡ್ ಹೊಂದಿದ್ದರೆ ಅದನ್ನು ವಾಪಾಸು ಪಡೆಯಬೇಕು ಎಂದು ಹೇಳಿದೆ. ಸರಿಯಾಗಿ ನೋಡಿದರೆ ಇದು ಈ ದೇಶದ ಸಭ್ಯ ನಾಗರಿಕ ತಾನೇ ಮಾಡಬೇಕಾದ ಕಾರ್ಯ. ಯಾರೇ ಆಗಲಿ, ಅವರು ಒಂದು ವೇಳೆ ಬಿಪಿಎಲ್ ಕಾರ್ಡ್ ಹೊಂದಿದ್ದರೆ ತಾನು ಅದಕ್ಕೆ ಹಕ್ಕುಪಾತ್ರನೋ ಅಲ್ಲವೋ ಎನ್ನುವುದು ಅವರ ಆತ್ಮಸಾಕ್ಷಿಗೆ ಗೊತ್ತಿರುತ್ತದೆ. ಆದರೂ ಹೇಗಾದರೂ ಮಾಡಿ ಕೆಲವರು ಬಿಪಿಎಲ್ ಕಾರ್ಡ್ ದಕ್ಕಿಸಿಕೊಂಡಿರುತ್ತಾರೆ. ಸರಿಯಾಗಿ ನೋಡಿದರೆ ಅಂತಹ ಮನೆಗಳಿಗೆ ನೀವು ಹೋದರೆ ಅಲ್ಲಿ ಬಡತನದ ಯಾವುದೇ ಕುರುಹುಗಳು ಇರುವುದಿಲ್ಲ. ಆದರೂ ತಾವು ಬಡತನ ರೇಖೆಗಿಂತ ಕೆಳಗೆ ಇದ್ದೇವೆ ಎಂದು ಹೇಳಿ ರಾಜಕೀಯ ಶಿಫಾರಸ್ಸನ್ನು ಮಾಡಿಸಿ ಅಥವಾ ಹಣ ಕೊಟ್ಟು ಮಾಡಿಸಿಕೊಂಡು ಬಂದಿರುತ್ತಾರೆ. ಬಿಪಿಎಲ್ ಕಾರ್ಡ್ ಮಾಡಿಸಲು ಅನೇಕ ಮಾನದಂಡಗಳಿವೆ. ಎಲ್ಲಿಯ ತನಕ ಅಂದರೆ ಗಂಡುಮಕ್ಕಳು ಇದ್ರೆ ಅಂತವರಿಗೆ ಬಿಪಿಎಲ್ ಕಾರ್ಡ್ ಕೊಡಲು ಆಗುವುದಿಲ್ಲ. ಆದರೂ ಮಗ ಸಾಕುವುದಿಲ್ಲ, ವೃದ್ಧಾಪ್ಯ ಪಿಂಚಣಿ ಬೇಕು ಎಂದು ಹೇಳಿ ಕೆಲವರು ಮಾಡಿಸಿಕೊಂಡು ಬಿಟ್ಟಿರುತ್ತಾರೆ. ಆದರೆ ಈಗ ಎಲ್ಲವೂ ಆನ್ ಲೈನ್ ನಲ್ಲಿ ಆಗುವುದರಿಂದ ಯಾರಾದರೂ ಕಳ್ಳದಾರಿಯಿಂದ ಬಿಪಿಎಲ್ ಕಾರ್ಡ್ ಮಾಡಿಸಿದರೆ ಅವರು ಆಟೋಮೇಟಿಕ್ ಆಗಿ ಸಿಕ್ಕಿಬೀಳುತ್ತಾರೆ. ಉದಾಹರಣೆಗೆ ಒಂದು ವಿಷಯ ಹೇಳುತ್ತೇನೆ. ಕೇಂದ್ರ ಮತ್ತು ರಾಜ್ಯ ಸರಕಾರ ವೈದ್ಯಕೀಯವಾಗಿ ಜನಸಾಮಾನ್ಯರಿಗೆ ಸಹಾಯವಾಗಲಿ ಎಂದು ಆಯುಷ್ಮಾನ್ ಯೋಜನೆಯನ್ನು ತಂದಿದೆ. ಇದರಲ್ಲಿ ಬಿಪಿಎಲ್ ಕಾರ್ಡಿನವರಿಗೆ ಸಂಪೂರ್ಣ ಉಚಿತವಾಗಿ ಮತ್ತು ಎಪಿಎಲ್ ಕಾರ್ಡಿನವರಿಗೆ 30 ಶೇಕಡಾ ಉಚಿತವಾಗಿ ಸೌಲಭ್ಯಗಳನ್ನು ಖಾಸಗಿ ಆಸ್ಪತ್ರೆಯಲ್ಲಿಯೂ ಪಡೆಯಲು ಸಾಧ್ಯವಾಗುತ್ತಿದೆ. ಕೆಲವರು ಆಸ್ಪತ್ರೆಗಳಲ್ಲಿ ಎಲ್ಲವೂ ಫ್ರೀಯಾಗಿ ಸಿಗಲಿ ಎನ್ನುವ ಕಾರಣಕ್ಕೆ ರಾಜಕೀಯ ನಾಯಕರ ಶಿಫಾರಸ್ಸನ್ನು ಮಾಡಿ ಬಿಪಿಎಲ್ ಕಾರ್ಡ್ ಮಾಡಿಸಿಕೊಂಡುಬಿಡುತ್ತಾರೆ. ಈ ಮೂಲಕ ಎಲ್ಲವೂ ಖಾಸಗಿ ಆಸ್ಪತ್ರೆಯಲ್ಲಿಯೂ ಫ್ರೀಯಾಗಿ ಸಿಗುವ ಹಾಗೆ ಮಾಡಿಕೊಂಡಿರುತ್ತಾರೆ. ಆದರೆ ಇಂತಹುದೇ ಮಹಾನುಭಾವರು ಕಾರು ಖರೀದಿಸಬೇಕು ಎಂದು ಹೊರಡುತ್ತಾರೆ. ಇವರಿಗೆ ತಾವು ದಾಖಲೆಗಳಲ್ಲಿ “”ಬಡವರು” ಎಂದು ಮರೆತುಹೋಗಿರುತ್ತದೆ. ಇವರು ಕಾರು ಖರೀದಿಸುತ್ತಾರೆ. ಆರ್ ಟಿಒದಲ್ಲಿ ನೋಂದಾವಣಿ ಕೂಡ ಮಾಡುತ್ತಾರೆ. ನಮ್ಮ ಸರಕಾರಗಳು ಎಷ್ಟು ಬುದ್ಧಿವಂತವಾಗಿವೆ ಎನ್ನುವುದು ಇವರ ಅರಿವಿಗೆ ಬಂದಿರುವುದಿಲ್ಲ. ಈಗ ಆರ್ ಟಿಒದಲ್ಲಿಯೂ ಕೂಡ ನಿಮ್ಮ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಬೇಕಿರುವುದರಿಂದ ನೀವು ಅತ್ತ ಕಾರು ನೊಂದಣಿ ಮಾಡಿ ಹೊರಗೆ ಬರುತ್ತಿದ್ದಂತೆ ನೀವು ದಾಖಲೆಗಳಲ್ಲಿಯೂ ಕೂಡ ಬಡವರಾಗಿ ಉಳಿಯುವುದಿಲ್ಲ. ಇದು ಗೊತ್ತಿಲ್ಲದೆ ಕೆಲವರು ಸರಕಾರ ತಮ್ಮ ಬಿಪಿಎಲ್ ಕಾರ್ಡ್ ಅನ್ನು ಕಿತ್ತುಕೊಂಡಿದೆ ಎಂದು ವಾದಿಸುತ್ತಾರೆ. ಈ ಬಗ್ಗೆ ಜನಪ್ರತಿನಿಧಿಗಳ ಮೇಲೆ ಒತ್ತಡ ಹಾಕಲು ಅವರ ಮನೆ, ಕಚೇರಿಗೆ ಧಾವಿಸುತ್ತಾರೆ. ಅದು ಕೂಡ ಹೊಸದಾಗಿ ಖರೀದಿಸಿರುವ ಕಾರಿನಲ್ಲಿ.
ಇನ್ನೊಂದು ವರ್ಗವಿದೆ. ಅವರು ಬಿಪಿಎಲ್ ಕಾರ್ಡಿನಿಂದ ಬೇರೆ ಬೇರೆ ಸರಕಾರಿ ಸೌಲಭ್ಯಗಳು ಸಿಗುತ್ತವೆ ಎನ್ನುವ ಕಾರಣಕ್ಕೆ ಮಾಡಿಸಿಕೊಂಡಿರುತ್ತಾರೆ. ಕೆಲ ಸಮಯದ ಬಳಿಕ ಒಂದು ಹೊಸ ಮನೆ ಕಟ್ಟಿಸುವ ಆಸೆ ಮತ್ತು ಮುಹೂರ್ತ ಇವರಿಗೆ ಸಿಕ್ಕಿಬಿಟ್ಟಿರುತ್ತದೆ. ಬ್ಯಾಂಕಿಗೆ ಹೋಗಿ ಸಾಲ ಕೇಳಿದರೆ “ತಮ್ಮದು ಬಿಪಿಎಲ್ ಕಾರ್ಡ್ ಅಲ್ವೇ, ಸಾಲ ಸಿಗೋದು ಕಷ್ಟ” ಎಂದು ಹೇಳಿ ಬ್ಯಾಂಕಿನಿಂದ ಸಾಗ ಹಾಕಿರುತ್ತಾರೆ. ತಕ್ಷಣ ಈ ಮಹಾನುಭಾವರು ಏನು ಮಾಡುತ್ತಾರೆ ಎಂದರೆ ಬ್ಯಾಂಕಿಗೆ ತೋರಿಸಲು ಗ್ರಾಮ ಕರಣಿಕರ ಬಳಿ ತೆರಳಿ ತಮಗೆ ಬೇಕಾದ ಮೊತ್ತಕ್ಕೆ ಆದಾಯಪ್ರಮಾಣ ಪತ್ರವನ್ನು ಮಾಡಿಸುತ್ತಾರೆ. ಅದನ್ನು ತಂದು ಬ್ಯಾಂಕಿನಲ್ಲಿ ಮ್ಯಾನೇಜರ್ ಮುಖಕ್ಕೆ ಹಿಡಿಯುತ್ತಾರೆ. ಸಾಲ ಸಿಕ್ಕಿತೋ ಬಿಟ್ಟಿತ್ತೋ ಬೇರೆ ವಿಷಯ. ಆದರೆ ಸರಕಾರಿ ದಾಖಲೆಗಳಲ್ಲಿಯೂ ಇವರು ಬಡವರು ಎನ್ನುವುದು ಹೊರಟುಹೋಗಿರುತ್ತದೆ. ಈಗ ಎಲ್ಲವೂ ಆನ್ ಲೈನಿನಲ್ಲಿ ನಡೆಯುವುದರಿಂದ ಸರಕಾರಗಳನ್ನು ಮಂಗ ಮಾಡಲು ಈಗ ಸಾಧ್ಯವಿಲ್ಲ. ಈಗ ಅಂತಹ ಸುಳ್ಳು ಫಲಾನುಭವಿಗಳು ಏನೇನೋ ಕೈಕಾಲು ಹೊಡೆದು ಬಿಪಿಎಲ್ ಕಾರ್ಡ್ ಉಳಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ ಈಗ ಎದ್ದಿರುವ ಪ್ರಶ್ನೆ ಎಂದರೆ ಇಷ್ಟು ವರ್ಷ ಸುಳ್ಳು ಹೇಳಿ ಬಿಪಿಎಲ್ ಕಾರ್ಡ್ ಮಾಡಿಸಿದವರಿಗಿಂತ ಮಾಡಿಕೊಟ್ಟಂತಹ ಅಧಿಕಾರಿಗಳಿದ್ದಾರಲ್ಲ, ಉದಾಹರಣೆಗೆ ಆಹಾರ ಮತ್ತು ಪಡಿತರ ಇಲಾಖೆಯ ಜಂಟಿ ನಿರ್ದೇಶಕರು, ಗ್ರಾಮ ಕರಣಿಕರು ಅಥವಾ ವಿಎ, ಆಹಾರ ನಿರೀಕ್ಷಕರು ಇವರೆಲ್ಲರ ಮೇಲೆ ಯಾಕೆ ಕಾನೂನು ಕ್ರಮ ಇಲ್ಲ. ನೀವು ಯಾವುದೇ ಶಿಫಾರಸ್ಸು ಇಲ್ಲದೆ, ಏನೂ ಲಂಚ ಕೊಡದೆ ವಿಎ ಬಳಿ ಹೋಗಿ ಆದಾಯ ಪ್ರಮಾಣ ಪತ್ರ ಮಾಡಿಕೊಡಿ, ಬಿಪಿಎಲ್ ಕಾರ್ಡ್ ಮಾಡಿಸಲು ಇದೆ ಎಂದು ಹೇಳಿದರೆ ಅವರು ನಿಮಗೆ ಅಲ್ಲಿ ಫ್ಲಾಟ್ ಇದೆಯಲ್ಲ, ಇಲ್ಲಿ ಜಾಗ ಇದೆಯಲ್ಲ ಎಂದು ಕಾರಣ ಹೇಳಿ ಹಿಂದೆ ಕಳುಹಿಸಿರುತ್ತಾರೆ. ನೀವಿರುವ ಚಿಕ್ಕ ಫ್ಲಾಟ್ ನಿಮ್ಮ ತಂದೆಯಿಂದ ನಿಮಗೆ ಬಂದಿರಬಹುದು. ನೀವು ಅದರಲ್ಲಿ ವಾಸಿಸುತ್ತಿರಬಹುದು. ಎಲ್ಲಿಯೋ ಇರುವ ಎರಡ್ಮೂರು ಸೆಂಟ್ಸ್ ಜಾಗ ನಿಮ್ಮ ತಾಯಿಯ ಕಡೆಯಿಂದ ಬಂದಿರಬಹುದು. ಅದರಲ್ಲಿ ನಿಮ್ಮ ಸಹೋದರಿಯರಿಗೆ ಪಾಲಿರಬಹುದು. ಆದರೂ ನಿಮಗೆ ಬಿಪಿಎಲ್ ಕಾರ್ಡ್ ಮಾಡಿಸಲು ಆಗುವುದಿಲ್ಲ. ಯಾಕೆಂದರೆ ಹಣ ಮತ್ತು ಶಿಫಾರಸ್ಸು ಮಾತ್ರ ಇಲ್ಲಿ ಕೆಲಸ ಮಾಡುತ್ತದೆ. ಅಷ್ಟಿದ್ದರೆ ಮಾತ್ರ ನಿಮ್ಮ ಮನೆಗೆ ಬಂದು ಪರಿಶೀಲಿಸದೆ ನಿಮಗೆ ಕಾರ್ಡ್ ಸಿಗುತ್ತದೆ. ಆತ್ಮಸಾಕ್ಷಿ ಬದಿಗಿಟ್ಟು ಅದನ್ನು ಅನುಕೂಲಸ್ಥರು ಬಳಸುತ್ತಾ ಜೀವಮಾನವೀಡಿ ಸರಕಾರದ ಸೌಲಭ್ಯಗಳನ್ನು ಪಡೆದು ಸರಕಾರಕ್ಕೆ ಬೈಯುತ್ತಾ ದಿನದೂಡುತ್ತಿರುತ್ತಾರೆ!
0
Shares
  • Share On Facebook
  • Tweet It




Trending Now
ವಿದ್ಯುತ್ ಕ್ಷೇತ್ರದ ಖಾಸಗೀಕರಣ ವಿರೋಧಿಸಿ ವೇದವ್ಯಾಸ ಕಾಮತರಿಗೆ ಮನವಿ ಸಲ್ಲಿಸಿದ ಒಕ್ಕೂಟ
Hanumantha Kamath June 29, 2026
ಉಡುಪಿ ಕಾಂಗ್ರೆಸ್ ಮುಖಂಡ ಅಮೃತ್ ಶೆಣೈಗೆ 3 ವರ್ಷ ಜೈಲು ಶಿಕ್ಷೆ!
Hanumantha Kamath June 26, 2026
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ವಿದ್ಯುತ್ ಕ್ಷೇತ್ರದ ಖಾಸಗೀಕರಣ ವಿರೋಧಿಸಿ ವೇದವ್ಯಾಸ ಕಾಮತರಿಗೆ ಮನವಿ ಸಲ್ಲಿಸಿದ ಒಕ್ಕೂಟ
    • ಉಡುಪಿ ಕಾಂಗ್ರೆಸ್ ಮುಖಂಡ ಅಮೃತ್ ಶೆಣೈಗೆ 3 ವರ್ಷ ಜೈಲು ಶಿಕ್ಷೆ!
    • ಕರ್ನಾಟಕದ ಪ್ರತಿಭೆ ದೀಕ್ಷಿತ್ ಅಮೀನ್‌ಗೆ ವಿಶ್ವ ಶಾಲಾ ಬಾಸ್ಕೆಟ್‌ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಗೌರವ
    • Najlepsze bonusy i sloty w polskim kasynie online
    • ರಾಜ್ಯದಲ್ಲಿ ಕಳೆದ 3 ತಿಂಗಳಿಂದ ಪಿಂಚಣಿ ಸಿಗದೇ ಜನಸಾಮಾನ್ಯರ ಪರದಾಟ :- ಶಾಸಕ ವೇದವ್ಯಾಸ ಕಾಮತ್
    • ಆಟೋದಲ್ಲಿ ಮರೆತಿದ್ದ ₹25 ಲಕ್ಷ ಮೌಲ್ಯದ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ!
    • ತಾನು ಮಾಡದ ತಪ್ಪಿಗೆ ಮೋಹನ್ ಚಂದರ್ ಬಲಿ!
    • ಫಾಸ್ಟ್‌ಟ್ಯಾಗ್ ಅಥವಾ ಯುಪಿಐ ಮೂಲಕ ಹಣ ಪಾವತಿಸಲು ನಿರಾಕರಿಸುವ ವಾಹನಗಳಿಗೆ ಇ-ನೋಟಿಸ್ ಜಾರಿ!
    • ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ವಿಚಾರಣೆ
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳತನ ಪ್ರಕರಣ: ಶಂಕಿತ ವ್ಯಕ್ತಿಯ ಪತ್ತೆಗೆ ಸುಳ್ಯ ಪೊಲೀಸರಿಂದ ಸಾರ್ವಜನಿಕರಿಗೆ ಮನವಿ
  • Popular Posts

    • 1
      ವಿದ್ಯುತ್ ಕ್ಷೇತ್ರದ ಖಾಸಗೀಕರಣ ವಿರೋಧಿಸಿ ವೇದವ್ಯಾಸ ಕಾಮತರಿಗೆ ಮನವಿ ಸಲ್ಲಿಸಿದ ಒಕ್ಕೂಟ
    • 2
      ಉಡುಪಿ ಕಾಂಗ್ರೆಸ್ ಮುಖಂಡ ಅಮೃತ್ ಶೆಣೈಗೆ 3 ವರ್ಷ ಜೈಲು ಶಿಕ್ಷೆ!

  • Privacy Policy
  • Contact
© Tulunadu Infomedia.

Press enter/return to begin your search