ಗ್ಯಾಂಗ್ ಹೆಸರಲ್ಲಿ ದೋಚುವ ಹಣಕ್ಕೆ ಈ ಬಾರಿ ದೊಣ್ಣೆ ನಾಯಕರೇ ಇಲ್ಲ!
Posted On July 18, 2021
ಈ ಸ್ಪೆಷಲ್ ಗ್ಯಾಂಗ್ ಎಂದು ಜನರ ತೆರಿಗೆ ಹಣ ನುಂಗುವ ಕಾನ್ಸೆಪ್ಟ್ ಪಾಲಿಕೆಯಲ್ಲಿ ಜಾರಿಗೆ ತಂದದೆ ಕಾಂಗ್ರೆಸ್. ಮದುವೆಯ ಮುಹೂರ್ತ ಆದ ನಂತರ ಆಟೋಮೆಟಿಕ್ ಆಗಿ ಮದುವೆಗೆ ಬಂದವರು ಊಟದ ಹಾಲ್ ಕಡೆ ಹೋಗುತ್ತಾರೆ. ಕೆಲವರು ಆರಾಮವಾಗಿ ಟೇಬಲ್ ಮೇಲೆ ಕುಳಿತು ಊಟ ಮಾಡುತ್ತಾರೆ. ಕೆಲವರು urgent ಬಫೆಯಲ್ಲಿ ಊಟ ಮಾಡಿ ಹೋಗಿದ್ದಾರೆ. ಕೆಲವರು ತಮ್ಮ ಸಾಮಥ್ರ್ಯಕ್ಕೆ ಅನುಗುಣವಾಗಿ ಬೇಕಾದಷ್ಟು ಎಲೆಗೆ ಹಾಕಿ ಭರ್ಜರಿಯಾಗಿ ಊಟ ಮಾಡಿರುತ್ತಾರೆ. ಇನ್ನೂ ಕೆಲವರು ಕೆಲವು ಆಯ್ದ ಪದಾರ್ಥಗಳ ರುಚಿ ನೋಡಿ ಊಟ ಮುಗಿಸಿರುತ್ತಾರೆ. ಮಂಗಳೂರು ಮಹಾನಗರ ಪಾಲಿಕೆಯ ಕೆಲವು ಸದಸ್ಯರಿಗೆ ಈಗ ಪುನ: ಅದೇ ಸಂಭ್ರಮ ಆರಾಮವಾಗಿ ಎಲೆ ಮೇಲೆ ಭರ್ಜರಿಯಾಗಿ ಊಟ ಮಾಡಲಿದ್ದಾರೆ. ವಿಪಕ್ಷ ಕಾಂಗ್ರೆಸ್ ಮತ್ತು ಭಾರತೀಯ ಜನತಾ ಪಕ್ಷದವರು ಕ್ಯೂನಲ್ಲಿ ನಿಂತು ಬಫೆಯಲ್ಲಿ ಮಾಡಲಿದ್ದಾರೆ ಎಂದರೂ ತಪ್ಪಾಗಲಾರದು ಒಟ್ಟಿನಲ್ಲಿ “ಗ್ಯಾಂಗ್” ಹೆಸರಿನಲ್ಲಿ ಬಿಡುಗಡೆಯಾಗಲಿರುವ ಪ್ರತಿ ವಾರ್ಡನ ಮೂರು ತಿಂಗಳ ಬಿಲ್ ಮೂರು ಲಕ್ಷ ಇಪ್ಪತ್ತಾರು ಸಾವಿರ ಯಾರ ಹೊಟ್ಟೆ ಸೇರಿ ಜೀರ್ಣವಾಗಲಿದೆ ಎನ್ನುವುದು ದೇವರಿಗೆ ಮಾತ್ರ ಗೊತ್ತು. ಮಳೆಗಾಲದ ಸಮಯದಲ್ಲಿ ತೋಡು, ಚರಂಡಿಯಲ್ಲಿ ಮಡುಗಟ್ಟಿರುವ ಹೂಳು ತೆಗೆದು ಕೃತಕ ನೆರೆ ಉಂಟಾಗದಂತೆ ತಡೆಯಲು wardಗೊಂದು ಸ್ಪೆಶಲ್ ಗ್ಯಾಂಗ್ ಎಂದು ನೇಮಿಸಲಾಗುತ್ತದೆ. ಇವರು ನಿಮ್ಮ ವಾರ್ಡಗಳಲ್ಲಿ ಆಂಟೋನಿ ವೇಸ್ಟ್ ಮ್ಯಾನೇಜ್ ಮೆಂಟ್ ನವರು ತೆಗೆಯಲೇಬೇಕು ಎನ್ನುವ ಒಪ್ಪಂದ ಇದ್ದರೂ ಕ್ಯಾರ್ ಮಾಡದೇ ತೆಗೆಯದಿದ್ದ ಒಂದು ಮೀಟರ್ ಗಿಂತ ಕಡಿಮೆಯ ತೋಡಿಗೆ ಇಳಿಯಬೇಕಾಗುತ್ತದೆ. ತೋಡನ್ನು ಕ್ಲೀನ್ ಮಾಡಬೇಕಾಗುತ್ತದೆ. ಅದಕ್ಕಾಗಿ ಇವರಿಗೆ ಪಾಲಿಕೆಯಿಂದ ಹಣ ಸಂದಾಯವಾಗುತ್ತದೆ. ಒಂದೊಂದು ಸ್ಪೆಶಲ್ ಗ್ಯಾಂಗಿನಲ್ಲಿ ಕನಿಷ್ಟ ಈ ಬಾರಿ ಆರು ಜನ ಇರಬೇಕಾಗುತ್ತದೆ.ಒಂದು 407 ವಾಹನ ಇರಬೇಕಾಗುತ್ತದೆ. ಆ 407ಗೆ ತಿಂಗಳಿಗೆ ಹದಿನೈದು ದಿನ ಕೆಲಸ ಇರುತ್ತದೆ. ಹದಿನೈದು ದಿನ ಎಂದರೆ ಒಂದು ದಿನ ಹೂಳನ್ನು ತೆಗೆದು ತೋಡಿನಿಂದ ಮೇಲೆ ಹಾಕುವುದು, ಮರುದಿನ ಅದನ್ನು ಟ್ರಿಪರ್ ಗೆ ತುಂಬಿಸಿ ತೆಗೆದುಕೊಂಡು ಹೋಗುವುದು. ಅದಕ್ಕಾಗಿ ಒಂದು wardಗೆ ಮೂರು ತಿಂಗಳಿಗೆ ಮೂರು ಲಕ್ಷ ಇಪ್ಪತ್ತಾರು ಸಾವಿರ ಬಿಲ್ ಆಗುತ್ತದೆ. ಬಿಲ್ ಏನೊ ಪಾಲಿಕೆ ಪಾಸ್ ಮಾಡುತ್ತದೆ, ಆದರೆ ಇವರು ತೋಡಿನಿಂದ ತಗೆದರೆ ತೆಗೆದ ಹೂಳು ಟ್ರಿಪರ್ ಸೇರದೆ ಮತ್ತೆ ಅದೇ ತೋಡು ಸೇರುತ್ತಿದೆ.
ಹೇಗೆಂದರೆ ಕೆಲವು ವಾರ್ಡಿನಲ್ಲಿ ಇವರು ಮಳೆ ಹತ್ತಿರ ಬರುವಾಗ ಐದಾರು ದಿನ ಕೆಲವು wardಗೆ ಹೋಗಿ ತೋಡಿಗೆ ಇಳಿದು ಹೂಳು ತೆಗೆದಿದ್ದಾರೆ. ಮೇಲೆ ಹಾಕಿದ್ದಾರೆ. ಅದನ್ನು ಅಲ್ಲಿಯೇ ಬಿಟ್ಟಿದ್ದಾರೆ. ಜೋರು ಮಳೆ ಬಂದಿದೆ. ಮಳೆ ನೀರಿಗೆ ಗೊತ್ತಾಗುತ್ತಾ? ಇದು ಪಾಲಿಕೆಯ ವ್ಯಾಪ್ತಿಯಲ್ಲಿ ವಾಸಿಸುವ ನಾಗರಿಕರು ಕಷ್ಟಪಟ್ಟು ಕಟ್ಟಿದ ತೆರಿಗೆಯ ಹಣವನ್ನು ಪೇ ಮಾಡಿ ಸ್ಪೆಶಲ್ ಗ್ಯಾಂಗ್ ಎಂದು ನೇಮಿಸಿ ಅವರು ತೆಗೆದ ಹೂಳು ಎನ್ನುವುದು. ಇಲ್ಲ, ಮಳೆಯ ನೀರಿಗೆ ಸ್ಪೆಶಲ್ ಗ್ಯಾಂಗಿನವರು ತೆಗೆದು ಹಾಕಿದ ಹೂಳು ಒಂದೇ ಅಥವಾ ತೋಡಿನಲ್ಲಿ ಮಾಡಿರುವ ಸುಸು ಕೂಡ ಒಂದೇ. ಅದು ಎಲ್ಲವನ್ನು ತೆಗೆದು ಹೊರಟು ಹೋಗುತ್ತದೆ. ಅದರೊಂದಿಗೆ ನಿಮ್ಮ ತೆರಿಗೆಯ ಹಣ ಕೂಡ ಲಕ್ಷಗಟ್ಟಲೆ ಲೆಕ್ಕದಲ್ಲಿ ನೀರಿನಲ್ಲಿ ಹರಿದು ದೊಡ್ಡ ತೋಡು ಸೇರಿರುತ್ತದೆ. ಪಾಲಿಕೆಯ ಸದಸ್ಯರು ಮನಪಾ ಕಚೇರಿಯಲ್ಲಿ ತಮಗಾಗಿಯೇ ಇರುವ ಹರಟೆ ಕೋಣೆಯಲ್ಲಿ ಕುಳಿತು ತಮ್ಮ wardನಲ್ಲಿ ತಾವು ದೋಚಿದ ಸ್ಪೆಶಲ್ ಗ್ಯಾಂಗ್ ಹಣವನ್ನು ಲೆಕ್ಕ ಹಾಕುತ್ತಾ ಇರುತ್ತಾರೆ.
ಗ್ಯಾಂಗ್ ಎನ್ನುವುದು ಮಳೆಗಾಲದಲ್ಲಿ ಕೃತಕ ನೆರೆಯಂತಹ ಸಂದರ್ಭ ಬಂದಾಗ ಈ ಗ್ಯಾಂಗ್ಗಳನ್ನು ಅಲ್ಲಿ ಕಳುಹಿಸಿಕೊಡಲಾಗುತ್ತದೆ. ನಿಮಗಿರುವ ಸಾಮಾನ್ಯ ಜ್ಞಾನವನ್ನು ಅಳವಡಿಸಿ ನೋಡಿದರೆ ಕೃತಕ ನೆರೆ ಬರುವುದೇ ತೋಡಿನಲ್ಲಿ ತುಂಬುವ ಹೂಳಿನಿಂದ. ಅದನ್ನು ಮಳೆ ಬರುವ ಮೊದಲೇ ತೆಗೆದರೆ ಆ ಹೂಳು ಇರುವುದಿಲ್ಲ. ನೀರು ಹೋಗಲು ಸರಾಗ ವ್ಯವಸ್ಥೆ ಆಗಿರುತ್ತದೆ. ಹೆಚ್ಚಾಗಿ ನಗರ ಪ್ರದೇಶದಲ್ಲಿ ಒಂದು ಮೀಟರ್ ಗಿಂತ ಕಡಿಮೆ ಅಗಲದ ತೋಡುಗಳೇ ಇರುವುದರಿಂದ ಅದನ್ನು ಕ್ಲೀನ್ ಮಾಡಿಸುವ ಜವಾಬ್ದಾರಿ ಕೊಟ್ಟಿದ್ದು ಇದೇ ಆಂಟೋನಿ ವೇಸ್ಟ್ ಮ್ಯಾನೇಜ್ ಮೆಂಟಿನವರಿಗೆ. ಆದರೆ ಅವರು ಮಾಡುವುದಿಲ್ಲ ಎಂದು ಬೇರೆಯದೇ ವ್ಯವಸ್ಥೆ ಮಾಡಿ ಆ ತಂಡಕ್ಕೆ ಸ್ಪೆಶಲ್ ಗ್ಯಾಂಗ್ ಎಂದು ಹೆಸರಿಟ್ಟು ಕೆಲಸ ಮಾಡಿಸಲಾಗುತ್ತಿದೆ. ಆದರೆ ಅವರು ಸರಿಯಾಗಿ ಹೂಳು ತೆಗೆಯುತ್ತಿಲ್ಲ. ಈ ಬಾರಿ ಸಿಟಿ ಒಳಗೆ ಮಳೆ ನಿಂತು ನಿಂತು ಬರುವುದರಿಂದ ಮತ್ತುಅಷ್ಟು ದೊಡ್ಡದಾಗಿ ಬರದೇ ಇರುವುದರಿಂದ ಪಾಲಿಕೆ ಸದಸ್ಯರು ಬಚಾವ್. ಆದರೆ ಬಿಲ್ ಮಾತ್ರ ಯಥಾಪ್ರಕಾರ ಲಕ್ಷಗಳನ್ನು ದಾಟುತ್ತಿದೆ. ಎಲ್ಲಿಯಾದರೂ ಸರಿಯಾಗಿ ಈ ಗ್ಯಾಂಗಿನವರು ಮತ್ತು ಟಿಪ್ಪರ್ ಸಾಗರೋಪಾದಿಯಲ್ಲಿ ಕರ್ತವ್ಯ ನಿರ್ವಹಿಸಿದ್ದನ್ನು ಯಾವುದೇ wardನ ಯಾವನೇ ನಾಗರಿಕ ಆದರೂ ನೋಡಿದ್ದಾರಾ? ಇಲ್ಲ? ಚಾನ್ಸೇ ಇಲ್ಲ. ನಮ್ಮ ಪಾಲಿಕೆ ಸದಸ್ಯರು ಬಿಲ್ ಸರಿಯಾಗಿ ಪಾವತಿ ಆಗುತ್ತದಾ ಎಂದು ಮುರ್ತುವರ್ಜಿ ಯಿಂದ ನೋಡುತ್ತಾರೆ ವಿನ: ತಮ್ಮwardನ ಸ್ಪೆಶಲ್ ಗ್ಯಾಂಗಿನವರು ಸರಿಯಾಗಿ ಕೆಲಸ ಮಾಡಿದ್ದಾರಾ ಎಂದು ಕೆಲವು ಸದಸ್ಯರು ನೋಡಲು ಹೋಗುವುದೇ ಇಲ್ಲ. 60 ವಾರ್ಡ ಗಳಿಗೆ 60 ಸ್ಪಷಲ್ಲ ಗ್ಯಾಂಗ್ ಇದೆ ಯಾರಾದರೂ ಪ್ರತಿದಿನ ಯಾವುದೇ ರಸ್ತೆ ಯಲ್ಲಿ ಗ್ಯಾಂಗ್ ಕೆಲಸ ಮಾಡಿದ್ದು ನೋಡಿದ್ದಿರಾ ಪರಿಣಾಮವಾಗಿ ಪಾಲಿಕೆಯ ಅಯುಕ್ತ ರಿಗೆ ಯಾವುದೇ ದೂರು ಹೋಗುವುದಿಲ್ಲ. ಆದರೆ ಮಂಗಳೂರಿನ ಅನೇಕ wardಗಳಲ್ಲಿ ಒಂದು ಜೋರು ಮಳೆ ಬಂದರೆ ರಸ್ತೆ ಕೆರೆಯಾಗುತ್ತದೆ. ತೋಡು ನದಿಯಾಗುತ್ತದೆ. ಈಗ ಸ್ಪೆಶಲ್ ಗ್ಯಾಂಗಿನ ಹೆಸರಲ್ಲಿ ಮತ್ತೆ ಭರ್ಜರಿ ತೇಗು ಹಾಕಲು ಪಾಲಿಕೆಯ ಅಧಿಕಾರಿಗಳು, ಸದಸ್ಯರು ರೆಡಿಯಾಗಿದ್ದಾರೆ.ಹಾಗಾದರೆ ನಮ್ಮ ತೆರಿಗೆಯ ಹಣ ಪೋಲಾಗದಂತೆ ಕಾಪಾಡಲು ನಾವು ಏನು ಮಾಡಬಹುದು? ಅದಕ್ಕೂ ಪರಿಹಾರವಿದೆ. ಆಯಾ wardನ ಗ್ಯಾಂಗ್ ಲೀಡರ್ ನ ಹೆಸರು ಮತ್ತು ಫೋನ್ ನಂಬರ್, ಗಾಡಿ ನಂಬರ್ ಇರುವ ಒಂದು ಜಾಹೀರಾತಿ ಪತ್ರದಂತೆ ದಿನಪತ್ರಿಕೆಯ ನಡುವಿನಲ್ಲಿ ಇಟ್ಟು ಅಪರೂಪಕ್ಕೆ ನಿಮ್ಮ ಮನೆಗೆ ಬರುತ್ತದೆಯಲ್ಲಾ, ಅಂತಹ ವ್ಯವಸ್ಥೆ ಒಮ್ಮೆ ಮಾಡಿಬಿಡಬೇಕು. ಒಂದು ವೇಳೆ ನಿಮಗೆ ಮಳೆಗಾಲದಲ್ಲಿ ಫೋನ್ ಮಾಡಿದರೆ ಆ ಗ್ಯಾಂಗಿನವರು ತಕ್ಷಣ ಬರಬೇಕು. ಈಗ ಏನಾಗಿದೆ ಎಂದರೆ ಗ್ಯಾಂಗ್ ಎನ್ನುವುದು ಇದೆಯಾ, ಇಲ್ಲವಾ ಎನ್ನುವುದು ಯಾರಿಗೂ ಗೊತ್ತಿಲ್ಲ. ನಮ್ಮ wardನ ಗ್ಯಾಂಗ್ ಕಾಣೆಯಾಗಿದೆ ಎಂದು ಹೇಳೋಣ ಎಂದು ಕೊಂಡರೂ ನಿಮಗೆ ಯಾರಿಗೆ ಹೇಳಬೇಕೆನ್ನುವುದು ಗೊತ್ತಿಲ್ಲ. ಗ್ಯಾಂಗ್ ನೊಂದಿಗೆ je,Aee, Ee ಗಳು ಕಾಣೆಯಾಗಿದ್ದಾರಾ?
- Advertisement -
Trending Now
ರಾಜ್ಯ ಸರಕಾರ 350 ಕೋಟಿ ಬಾಕಿ ಹಿನ್ನಲೆ; ದಯಾಮರಣ ನೀಡಲು ಮನವಿ!
January 14, 2025
Leave A Reply