ಮಂಗಳೂರು: ಕಿರಿಯ ವಿದ್ಯಾರ್ಥಿಗೆ ರಾಗಿಂಗ್, ಕೇರಳ ಮೂಲದ ಆರು ಮಂದಿ ಅರೆಸ್ಟ್!
ಮಂಗಳೂರು: ಕಿರಿಯ ವಿದ್ಯಾರ್ಥಿಯೊಬ್ಬನಿಗೆ ರಾಗಿಂಗ್ ಮಾಡಿ ಕಿರುಕುಳ ನೀಡಿದ ಆರೋಪದಲ್ಲಿ 6 ಮಂದಿ ವಿದ್ಯಾರ್ಥಿಗಳನ್ನು ಪಾಂಡೇಶ್ವರ ಪೊಲೀಸರು ಬಂಧಿಸಿದ್ದಾರೆ . ಇಂದಿರಾ ನರ್ಸಿಂಗ್ ಕಾಲೇಜಿನ ಎರಡನೇ ವರ್ಷದ ಬಿಎಸ್ಸಿ ವಿದ್ಯಾರ್ಥಿ ಆಗಿರುವ ಕೇರಳ ಮೂಲದ ಮ್ಯಾನುವೆಲ್ ಬಾಬು ಎಂಬಾತ ದೂರುದಾರನಾಗಿದ್ದೂ ಪೋಲಿಸರು ಶ್ರೀಲಾಲ್ , ಶಾಹಿದ್ ,ಅಮ್ಜದ್ , ಹುಸೇನ್ , ಜುರೈಜ್ , ಲೀವ್ಸ್ ಎಂಬ 8ಮಂದಿಯನ್ನು ಬಂಧಿಸಿದ್ದಾರೆ .
ಮ್ಯಾನುವಲ್ ಬಾಬು ಅತ್ತಾವರದ ಫ್ಲಾಟೊಂದರಲ್ಲಿ ಇತರ ಸ್ನೇಹಿತರೊಂದಿಗೆ ವಾಸವಿದ್ದು ಜುಲೈ 14 ರಂದು ರಾತ್ರಿ 8ಗಂಟೆಗೆ ಫಳ್ನೀರ್ ನ ಹೋಟೆಲ್ ಒಂದಕ್ಕೆ ತೆರಳಿದ್ದ ಅವಿನಾಶ್ ಅಶ್ವಿನ್ ಜೋಬಿನ್ ಹಾಗೂ ಶಾಕೀರ್ ಎಂಬವರ ಜೊತೆ ಹೋಟೆಲ್ ನಲ್ಲಿದ್ದಾಗ ಸೀನಿಯರ್ ವಿದ್ಯಾರ್ಥಿಗಳಾಗಿರುವ ಶ್ರೀಲಾಲ್ ಮತ್ತು ಆತನ ಸ್ನೇಹಿತರು ಬಂದು ರ್ಯಾಗಿಂಗ್ ಮಾಡಿದ್ದಾರೆ ನಾನು ಕಾಲೇಜಿನಲ್ಲಿ ಸೀನಿಯರ್ ಇದ್ದೀನಿ ನಾವು ಬರುವಾಗ ನೀನು ಎದ್ದು ನಿಂತು ರೆಸ್ಟ್ ಕೊಡಬೇಕು ಏನು ಮುಖ ನೋಡ್ತೀವಿ ಎಂದು ದಬಾಯಿಸಿದ್ದಾರೆ .ಆ ಬಳಿಕ ರಾತ್ರಿ ಹತ್ತು ಗಂಟೆಗೆ ಮ್ಯಾನುವಲ್ ಬಾಬು ನೆಲೆಸಿದ್ದ ಫ್ಲಾಟ್ ಗೆ ನುಗ್ಗಿ ಅಲ್ಲಿ ಅದೇ ರೀತಿ ರಾಗಿಂಗ್ ಮಾಡಿ ಕಿರುಕುಳ ನೀಡಿದ್ದಾರೆ , ನಾವು ಸೀನಿಯರ್ ನಾ ಬರುವಾಗ ನೀನು ತಲೆ ತಗ್ಗಿಸಿ ಕುಳಿತುಕೊಳ್ಳಬೇಕು ನಾವು ಹೇಳಿದಂತೆ ಕೇಳಬೇಕು ಎಂದು ಹೇಳಿದ್ದಲ್ಲದೆ ಷರ್ಟ್ ಬಿಚ್ಚಿಸಿ ಚೆಡ್ಡಿಯಲ್ಲಿ ನಿಲ್ಲಿಸಿದ್ದಾರೆ ಬಳಿಕ ಪದೇಪದೆ ಕುಳಿತುಕೊಳ್ಳಲು ಮತ್ತು ನಿಂತುಕೊಳ್ಳಲು ಹೇಳಿದ್ದು ಕೇಳದೆ ಇದ್ದುದಕ್ಕೆ ಶ್ರೀಲಾಲ್ ಮತ್ತು ಲಿಂಬ್ಸ್ ಎಂಬವರು ಸೇರಿ ಅವ್ಯಾಚ್ಯ ಪದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ ಅಲ್ಲದೇ ನೀನು ಕಾಲೇಜಿಗೆ ಬರುವ ಗಳು ನಮ್ಮನ್ನು ನೋಡುತ್ತಲೇ ತಲೆ ಕೆಳಗೆ ಮಾಡಬೇಕು ಇಲ್ಲದೇ ಇದ್ದಲ್ಲಿ ಕೊಲೆ ಮಾಡುತ್ತೇನೆ ಎಂದು ಜೀವ ಬೆದರಿಕೆ ಒಡ್ಡಿದ್ದರು ಎಂದು ಮ್ಯಾನ್ವಲ್ ಪೊಲೀಸರಿಗೆ ದೂರು ನೀಡಿದ್ದ . ರಾಗಿಂಗ್ ಮಾಡಿರುವ ವಿದ್ಯಾರ್ಥಿಗಳು ಕೂಡ ಕೇರಳದವರಾಗಿದ್ದು ಪೊಲೀಸರು ಅವರನ್ನು ಬಂಧಿಸಿ ಎಜುಕೇಶನ್ ಆಕ್ಟ್ ಪ್ರಕಾರ ಕ್ರಮ ಜರುಗಿಸಿದ್ದಾರೆ.
Leave A Reply