• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಹಿಂದೂ ದೇವರ ಅವಹೇಳನ, ವೃಂದಾ ಟೀಚರಿಗೆ ಶಿಕ್ಷೆ ಇಲ್ಲವೇ?

Tulunadu News Posted On July 24, 2021
0


0
Shares
  • Share On Facebook
  • Tweet It

ಕೇರಳದ ರಾಜಧಾನಿ ತಿರುವನಂತಪುರದ ಕೊಟ್ಟಾಂಗಳ ಎನ್ನುವ ಶಾಲೆಯ ಟೀಚರ್ ಆನ್ ಲೈನ್ ಕ್ಲಾಸಿನಲ್ಲಿ ಮಾತನಾಡಿದ ವಿಷಯವೊಂದು ಈಗ ಅಲ್ಲಿನ ಮಾಧ್ಯಮಗಳಲ್ಲಿ ಸುದ್ದಿಯಾಗುತ್ತಿದೆ. ಆಕೆ ಹೇಳಿದ ವಿಷಯ ಬಹುಸಂಖ್ಯಾತ ಹಿಂದೂಗಳ ಭಾವನೆಗೆ ನೇರವಾಗಿ ಕೊಡಲಿ ಪೆಟ್ಟನ್ನು ನೀಡಿದೆ. ನಾಲ್ಕು ತಲೆಯ ಬ್ರಹ್ಮ ಎನ್ನುವ ವ್ಯಕ್ತಿ ಇರಲು ಸಾಧ್ಯಾನಾ? ಯಾರಾದರೂ ಕಾಳಿಂಗ ಸರ್ಪದ ಮೇಲೆ ಮಲಗಲು ಸಾಧ್ಯಾನಾ? ಯಾರಿಗಾದರೂ ಹಣೆಯ ಮೇಲೆ ಕಣ್ಣು ಇರಲು ಆಗುತ್ತಾ? ಹೀಗೆ ವೃಂದಾ ಎನ್ನುವ ಟೀಚರ್ ಮಕ್ಕಳೊಂದಿಗೆ ಲೋಕಾಭಿರಾಮವಾಗಿ ಮಾತನಾಡಿದ ವಿಷಯವೇ ಒಂದು ರೀತಿಯಲ್ಲಿ ಶಿಕ್ಷಕ ವೃಂದ ತಲೆತಗ್ಗಿಸುವಂತಹ ರೀತಿಯದ್ದು.

ಶಿಕ್ಷಕರು ಎಂದ ಮೇಲೆ ಅವರು ಯಾವುದೇ ಒಂದು ಧರ್ಮ ಅಥವಾ ಜಾತಿಗೆ ಸೇರಿರಲು ಸಾಧ್ಯವಿಲ್ಲ. ಹಿಂದೂ, ಮುಸ್ಲಿಂ, ಕ್ರೈಸ್ತ ಸಹಿತ ಜೈನ್, ಪಾರ್ಸಿ, ಸಿಖ್ ಧರ್ಮದ ಶಿಕ್ಷಕರು ನಮ್ಮ ದೇಶದಲ್ಲಿ ಇದ್ದಾರೆ. ಅವರು ತಮ್ಮ ಧರ್ಮ, ದೇವರನ್ನು ಮನೆಯಲ್ಲಿ ಪ್ರಾರ್ಥಿಸಲು ಯಾರ ಅಭ್ಯಂತರವೂ ಇಲ್ಲ. ಅವರು ಮನೆಯಿಂದ ಹೊರಗೆ ಬಂದ ಬಳಿಕ ಶಾಲೆಯಲ್ಲಿ ಕಲಿಸುವ ಸಂದರ್ಭದಲ್ಲಿ ತಮ್ಮ ಧರ್ಮವನ್ನು ಮಕ್ಕಳ ಮೇಲೆ ಹೇರಲು ಹೋಗಲೇಬಾರದು. ಎಷ್ಟೋ ಕ್ರೈಸ್ತ ಶಾಲೆಗಳಲ್ಲಿ ಕುಂಕುಮ ಇಡುವುದು, ಬಳೆ ಹಾಕುವುದು ಸಹಿತ ಹಿಂದೂ ಧರ್ಮದ ಆಚರಣೆಗಳನ್ನು ವಿರೋಧಿಸಿದ ಪ್ರಕ್ರಿಯೆಗಳು ನಡೆದಿವೆ ಎನ್ನುವುದು ನಮಗೆ ಗೊತ್ತಿರುವ ವಿಚಾರ. ಆದರೆ ತೀರಾ ಹಿಂದೂ ದೇವರನ್ನು ಅವಹೇಳನ ಮಾಡಲು ಹೋಗುವುದು ಸಭ್ಯತೆಯ ಲಕ್ಷಣವಲ್ಲ. ಒಂದು ವೇಳೆ ಈ ವೃಂದಾ ಎನ್ನುವ ಟೀಚರ್ ಕ್ಲಾಸ್ ರೂಂ ಒಳಗೆ ನಾಲ್ಕು ಗೋಡೆಯ ನಡುವೆ ಇಂತಹ ಹೇಳಿಕೆಗಳನ್ನು ಕೊಡುತ್ತಾ ಇದ್ದರೆ ಅದು ಹೊರಗೆ ಬರುತ್ತಿರಲಿಲ್ಲ. ಯಾಕೆಂದರೆ ಮಕ್ಕಳು ತಮ್ಮ ತರಗತಿಯಲ್ಲಿ ಆದದ್ದನ್ನು ಅದರಲ್ಲಿಯೂ ಈ 9ನೇ ಕ್ಲಾಸಿನ ಮಕ್ಕಳು ತಮ್ಮ ಪೋಷಕರೊಂದಿಗೆ ಕ್ಲಾಸಿನ ಪಠ್ಯಗಳನ್ನು ಮನೆಯಲ್ಲಿ ಚರ್ಚೆ ಮಾಡುವುದು ತುಂಬಾ ಕಡಿಮೆ. ಅದು ವೃಂದಾ ಟೀಚರಿಗೆ ಸುಲಭವಾಗುತ್ತಿತ್ತು ಎಂದು ಅನಿಸುತ್ತದೆ.

ಆದರೆ ಈಗ ಶಾಲೆಗಳು ತೆರೆದಿಲ್ಲ. ಎಲ್ಲವೂ ಆನ್ ಲೈನ್ ನಲ್ಲಿಯೇ ಪಾಠ ನಡೆಯುವುದು. ಆದ್ದರಿಂದ ವೃಂದಾನಂತವರಿಗೆ ಮಕ್ಕಳ ತಲೆ ಹಾಳು ಮಾಡಲು ಅವಕಾಶ ಸಿಗುವುದಿಲ್ಲ. ಹಾಗಂತ ಅವರಿಗೆ ನಾಲಿಗೆ ತುರಿಸುವುದು ನಿಲ್ಲಬೇಕಲ್ಲ. ಎಲ್ಲಿಯಾದರೂ ತಮ್ಮ ಮನಸ್ಸಿನ ಅಸಹ್ಯವನ್ನು ಹೊರಗೆ ಹಾಕದಿದ್ದರೆ ಅಂತವರಿಗೆ ನಿದ್ರೆಯೇ ಬರುವುದಿಲ್ಲ. ಹಾಗಿರುವಾಗ ಯಾರಿಗೂ ಗೊತ್ತಾಗುವುದಿಲ್ಲ ಎಂದೋ ಅಥವಾ ಗೊತ್ತಾದರೂ ಏನಾದರೂ ಹೇಳಿ ವಿಷಯಾಂತರ ಮಾಡೋಣ ಎಂದೋ ವೃಂದಾ ಹಿಂದೂ ದೇವರುಗಳ ವಿಷಯಕ್ಕೆ ಕೈ ಹಾಕಿದ್ದಾಳೆ. ರಾಮ ಮತ್ತು ಕೃಷ್ಣ ಇದ್ದದ್ದಕ್ಕೆ ಯಾವುದೇ ಸಾಕ್ಷ್ಯ ಇಲ್ಲ ಎಂದು ಹೇಳಿದ್ದಾಳೆ. ಅಷ್ಟೇ ಅಲ್ಲ, ಯೇಸು ಹುಟ್ಟಿದ್ದಕ್ಕೆ ಮತ್ತು ಸತ್ತದ್ದಕ್ಕೆ ಸಾಕ್ಷ್ಯ ಇದೆ ಎಂದು ಕೂಡ ಹೇಳಿದ್ದಾಳೆ. ಆದ್ದರಿಂದ ಬ್ರಹ್ಮ, ವಿಷ್ಣು, ಮಹೇಶ್ವರ, ರಾಮ, ಕೃಷ್ಣ ಎಲ್ಲ ದೇವರಲ್ಲ, ಯೇಸು ಮಾತ್ರ ದೇವರು ಎಂದು ಬಿಂಬಿಸಲು ಹೊರಟಿದ್ದಾಳೆ. ಇದು ಆನ್ ಲೈನ್ ಕ್ಲಾಸ್ ಆದ ಕಾರಣ ಇವಳ ಈ ಷಡ್ಯಂತ್ರ ಮಕ್ಕಳ ಪೋಷಕರಿಗೂ ತಲುಪಿದೆ. ಅವರು ವೃಂದಾಳಿಗೆ ಫೋನ್ ಮಾಡಿ ಜೋರು ಮಾಡಿದ್ದಾರೆ. ಆಗ ವೃಂದಾ ತಾನು ತಮಾಷೆಗೆ ಹೇಳಿದ್ದು ಎಂದು ತಿಪ್ಪೆ ಸಾರಿಸಲು ಪ್ರಯತ್ನಿಸಿದ್ದಾರೆ.

ಒಂದು ಪ್ರಜ್ಞಾವಂತ ಟೀಚರ್ ಯಾವುದೇ ಕಾರಣಕ್ಕೂ ಯಾವುದೇ ಧರ್ಮದ ದೇವರ ವಿಷಯದಲ್ಲಿ ತಮಾಷೆ ಮಾಡಲು ಹೋಗುವುದೇ ತಪ್ಪು. ಇಲ್ಲಿ ಭಗವಾನ್ ಎನ್ನುವ ಅರೆಹುಚ್ಚನೊಬ್ಬನಿದ್ದಾನೆ. ಆತ ಆಗಾಗ ಹಿಂದೂ ದೇವರ ಅಸ್ತಿತ್ವದ ಬಗ್ಗೆ ಮಾತನಾಡುತ್ತಾನೆ. ಅವನು ಕೂಡ ಪ್ರೋಫೆಸರ್ ಆಗಿದ್ದನಂತೆ. ಇಂತವರೆಲ್ಲ ಹೇಗೆ ಶಿಕ್ಷಣದಂತಹ ಪವಿತ್ರ ಕ್ಷೇತ್ರಕ್ಕೆ ಬರುತ್ತಾರೋ, ದೇವರಿಗೆ ಗೊತ್ತು. ಈ ಶಿಕ್ಷಕಿ ಕ್ರೈಸ್ತಧರ್ಮಕ್ಕೆ ಸೇರಿದವಳೇ ಇರಬಹುದು. ಹಾಗಂತ ಶಾಲೆಗಳು ಮತಾಂತರ ಕೇಂದ್ರಗಳಲ್ಲ. ಅಲ್ಲಿ ಮಕ್ಕಳು ವಿದ್ಯಾಭ್ಯಾಸ ಮಾಡಲು ಬರುತ್ತಾರೆ. ಅವರು ಮನೆಯಲ್ಲಿ ಬೆಳಿಗ್ಗೆ ಹಿರಿಯರು ದೇವರ ಪೂಜೆ ಮಾಡುವಾಗ ಭಾಗಿಯಾಗಿರಲೂಬಹುದು. ಅವರಿಗೆ ತಮ್ಮ ಅಜ್ಜ, ತಂದೆ ದೇವರ ಬಗ್ಗೆ, ಪೌರಾಣಿಕ ವಿಷಯಗಳ ಬಗ್ಗೆ ಒಳ್ಳೊಳ್ಳೆ ಸಂದೇಶ ಇರುವ ಕಥೆಗಳನ್ನು ಹೇಳಿರಬಹುದು. ಅವರಿಗೆ ಮನೆಯಲ್ಲಿ ಸಂಜೆ ಭಜನೆ, ಪ್ರಾರ್ಥನೆ ಹೇಳಿಕೊಡುತ್ತಿರಬಹುದು. ಈಗ ಶಿಕ್ಷಕಿ ವೃಂದಾ ಅಂತವರು ದೇವರ ವಿಷಯದಲ್ಲಿ ಹುಚ್ಚುಹುಚ್ಚಾಗಿ ಮಾತನಾಡಿದರೆ ಮಕ್ಕಳಿಗೆ ಮನೆಯಲ್ಲಿ ಪೂಜೆ, ಪುನಸ್ಕಾರದ ಸಮಯದಲ್ಲಿ ಏಕಾಗ್ರತೆ ಮೂಡಲು ಸಾಧ್ಯವೇ? ಇನ್ನು ಶಿಕ್ಷಕರು ಈ ವರ್ಷದ ಸೆಲೆಬಸ್ ಮುಗಿಸಲು ಒದ್ದಾಡುತ್ತಿರುವ ಈ ದಿನಗಳಲ್ಲಿ ಪಠ್ಯದಲ್ಲಿ ಇಲ್ಲದ ವಿಷಯಗಳನ್ನು ಮಕ್ಕಳ ಮನಸ್ಸಿನಲ್ಲಿ ತುಂಬುವ ಅಗತ್ಯ ವೃಂದಾಳಿಗೆ ಏಕಿತ್ತು? ಅದೊಂದು ಸರಕಾರಿ ಶಾಲೆ ಎಂದು ತಿಳಿದು ಬರುತ್ತಿರುವುದರಿಂದ ಸರಕಾರದ ಶಿಕ್ಷಣ ಇಲಾಖೆ ಆಕೆಯ ಬಗ್ಗೆ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಒಂದು ವೇಳೆ ಸರಕಾರ ಈ ಬಗ್ಗೆ ಏನೂ ಕ್ರಮ ತೆಗೆದುಕೊಳ್ಳದಿದ್ದರೆ ಕೇರಳದ ಪಿಣರಾಯಿ ಸರಕಾರದ ಪರೋಕ್ಷ ಬೆಂಬಲ ಇದಕ್ಕೆ ಇದೆ ಎಂದು ಅರ್ಥವಾಗುತ್ತದೆ. ಈಗಾಗಲೇ ಶಬರಿಮಲೆ ವಿಷಯದಲ್ಲಿ ಕೇರಳ ರಾಜ್ಯ ಸರಕಾರದ ನಿಲುವುಗಳು ವ್ಯಾಪಕ ಖಂಡನೆಗೆ ಒಳಗಾಗಿದೆ. ಹೀಗಿರುವಾಗ ಇಂತಹುದನ್ನು ಮಾಡಲು ಶಿಕ್ಷಕರಿಗೆ ಬಿಡುವುದೇ ಘೋರ ಅಪರಾಧ. ಮಕ್ಕಳ ಮನಸ್ಸು ಆಮೆಮಣ್ಣಿನಂತೆ ಇರುತ್ತದೆ. ಅಲ್ಲಿ ಏನು ಹಾಕುತ್ತೇವೆಯೋ ಅದನ್ನು ಗಟ್ಟಿಯಾಗಿ ನಿಲ್ಲುತ್ತದೆ. ಹಾಗಿರುವಾಗ ವೃಂದಾಳ ಪ್ರಯತ್ನ ಇಲ್ಲಿಯೇ ಮೊಟಕಿದರೆ ಉತ್ತಮ. ಇಲ್ಲದಿದ್ದರೆ ಆ ಶಾಲೆಯ ಬೋರ್ಡನ್ನು ಬದಲಾಯಿಸಿ ಮತಾಂತರ ಕೇಂದ್ರ ಎಂದು ಹಾಕಲಿ!

0
Shares
  • Share On Facebook
  • Tweet It




Trending Now
ಜಾಂಡಿಸ್ ಬಂದ ಮಗುವಿಗೆ ಆಧುನಿಕ ಚಿಕಿತ್ಸೆ ನೀಡಲು ಹೆತ್ತವರ ನಕಾರ: ಪ್ರಾಣ ಬಿಟ್ಟ ಒಂದು ವರ್ಷದ ಹಸುಳೆ!
Tulunadu News July 1, 2025
ಜನರು ರಸ್ತೆಬದಿ ಕಸ ಹಾಕುವುದನ್ನು ತಡೆಯಲು ಭಾರತ ಮಾತೆ, ದೇವರ ಫೋಟೋ! ಪುನೀತ್ ಕೆರೆಹಳ್ಳಿ ಆಕ್ರೋಶ!
Tulunadu News July 1, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಜಾಂಡಿಸ್ ಬಂದ ಮಗುವಿಗೆ ಆಧುನಿಕ ಚಿಕಿತ್ಸೆ ನೀಡಲು ಹೆತ್ತವರ ನಕಾರ: ಪ್ರಾಣ ಬಿಟ್ಟ ಒಂದು ವರ್ಷದ ಹಸುಳೆ!
    • ಜನರು ರಸ್ತೆಬದಿ ಕಸ ಹಾಕುವುದನ್ನು ತಡೆಯಲು ಭಾರತ ಮಾತೆ, ದೇವರ ಫೋಟೋ! ಪುನೀತ್ ಕೆರೆಹಳ್ಳಿ ಆಕ್ರೋಶ!
    • ಉಡುಪಿ: ದನದ ಕಳೇಬರ ಪತ್ತೆ ಪ್ರಕರಣ: ಆರು ಮಂದಿಯನ್ನು ಬಂಧಿಸಿದ ಉಡುಪಿ ಪೊಲೀಸರು
    • ಫೈರ್ ಬ್ರಾಂಡ್ ನಾಯಕ, ಶಾಸಕ ಬಿಜೆಪಿಗೆ ರಾಜೀನಾಮೆ!
    • ಹೃದಯಾಘಾತ ಫೈನ್ ಅಂಡ್ ಫಿಟ್ ಇದ್ದ ತರುಣ, ತರುಣಿಯರಿಗೂ ಬರುತ್ತಿದೆ, ಹೇಗೆ?
    • ಸಂವಿಧಾನದಿಂದ "ಜಾತ್ಯಾತೀತತೆ" ಮತ್ತು "ಸಮಾಜವಾದ" ಶಬ್ದಗಳನ್ನು ತೆಗೆಯುವ ಬಗ್ಗೆ ಚರ್ಚೆ ನಡೆಯಲಿ - ಆರ್ ಎಸ್ ಎಸ್
    • PFI ಟಾರ್ಗೆಟ್- 950 ಜನರ ಹಿಟ್ ಲಿಸ್ಟ್ ರೆಡಿ! NIA ಕೋರ್ಟ್ ನಲ್ಲಿ ವಕೀಲರಿಂದ ಮಾಹಿತಿ...
    • ಎಮರ್ಜೆನ್ಸಿ ದಿನಗಳಲ್ಲಿ ಮೋದಿಯವರ ಅನುಭವ ಕಥನ "ದಿ ಎಮರ್ಜೆನ್ಸಿ ಡೈರಿಸ್"!
    • ಬಾಹ್ಯಕಾಶಕ್ಕೆ ಜಿಗಿಯುವ ಮೊದಲು ಪತ್ನಿಗೆ ಭಾವನಾತ್ಮಕ ಸಂದೇಶ: "ನೀನಿಲ್ಲದೆ..... " ಶುಭಾಂಶು ಹೇಳಿದ್ದೇನು?
    • ಪಹಲ್ಗಾಮ್ ಉಗ್ರರಿಗೆ ಆಹಾರ, ಆಶ್ರಯ: ಸ್ಥಳೀಯರಿಬ್ಬರ ಬಂಧನ!
  • Popular Posts

    • 1
      ಜಾಂಡಿಸ್ ಬಂದ ಮಗುವಿಗೆ ಆಧುನಿಕ ಚಿಕಿತ್ಸೆ ನೀಡಲು ಹೆತ್ತವರ ನಕಾರ: ಪ್ರಾಣ ಬಿಟ್ಟ ಒಂದು ವರ್ಷದ ಹಸುಳೆ!
    • 2
      ಜನರು ರಸ್ತೆಬದಿ ಕಸ ಹಾಕುವುದನ್ನು ತಡೆಯಲು ಭಾರತ ಮಾತೆ, ದೇವರ ಫೋಟೋ! ಪುನೀತ್ ಕೆರೆಹಳ್ಳಿ ಆಕ್ರೋಶ!
    • 3
      ಉಡುಪಿ: ದನದ ಕಳೇಬರ ಪತ್ತೆ ಪ್ರಕರಣ: ಆರು ಮಂದಿಯನ್ನು ಬಂಧಿಸಿದ ಉಡುಪಿ ಪೊಲೀಸರು
    • 4
      ಫೈರ್ ಬ್ರಾಂಡ್ ನಾಯಕ, ಶಾಸಕ ಬಿಜೆಪಿಗೆ ರಾಜೀನಾಮೆ!
    • 5
      ಹೃದಯಾಘಾತ ಫೈನ್ ಅಂಡ್ ಫಿಟ್ ಇದ್ದ ತರುಣ, ತರುಣಿಯರಿಗೂ ಬರುತ್ತಿದೆ, ಹೇಗೆ?

  • Privacy Policy
  • Contact
© Tulunadu Infomedia.

Press enter/return to begin your search