• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಕೊರೊನಾದಿಂದ ನಿಜವಾಗಿ ಸತ್ತವರ ಸಂಖ್ಯೆ ಸಿಗಲಿ, ಅಲ್ಲಿ ತನಕ ರಾಜಕೀಯ ಯಾಕೆ??

Hanumantha Kamath Posted On July 24, 2021
0


0
Shares
  • Share On Facebook
  • Tweet It

ಈಗ ಹೊಸ ರಾಜಕೀಯ ಆಟ ಶುರುವಾಗಿದೆ. ಅದು ಕೊರೊನಾದಿಂದ ಸತ್ತವರ ಸಂಖ್ಯೆಯ ವಿಷಯದಲ್ಲಿ. ಅದೇನೆಂದರೆ ಕೇಂದ್ರ ಸರಕಾರ ಬಿಡುಗಡೆ ಮಾಡಿರುವ ವರದಿಯ ಪ್ರಕಾರ ಭಾರತದಲ್ಲಿ ಅಂದಾಜು ನಾಲ್ಕು ಲಕ್ಷದಷ್ಟು ಜನರು ಕೊರೊನಾದಿಂದ ಸತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ವಿಪಕ್ಷಗಳು ಅದರಲ್ಲಿಯೂ ಮುಖ್ಯವಾಗಿ ಕಾಂಗ್ರೆಸ್ ಪ್ರಕಾರ 30 ರಿಂದ 40 ಲಕ್ಷಕ್ಕೂ ಹೆಚ್ಚು ಜನರು ಕೊರೊನಾದಿಂದ ಸತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈಗ ಇರುವ ವಿಷಯ ಏನೆಂದರೆ ಈ ಸತ್ತವರ ಸಂಖ್ಯೆಯನ್ನು ಇಟ್ಟುಕೊಂಡು ರಾಜಕೀಯ ಮಾಡುವುದು ಎಷ್ಟು ಸರಿ ಎನ್ನುವ ಪ್ರಶ್ನೆ. ಸಂಖ್ಯೆ ದೊಡ್ಡದಾದಷ್ಟು ತಾವು ಕೇಂದ್ರ ಸರಕಾರವನ್ನು ಟೀಕಿಸಬಹುದು, ಹಣಿಯಬಹುದು ಎನ್ನುವುದು ವಿಪಕ್ಷಗಳ ಮುಖ್ಯ ಅಸ್ತ್ರ.

ಆದರೆ ನಿಜವಾಗಿಯೂ ಅಷ್ಟು ಜನ ಸತ್ತಿದ್ದಾರೆ ಎನ್ನುವುದರ ಬಗ್ಗೆ ನಿಮ್ಮ ಬಳಿ ಸಾಕ್ಷ್ಯ ಇದೆಯಾ ಎನ್ನುವ ಪತ್ರಕರ್ತರ ಪ್ರಶ್ನೆಗೆ ಕಾಂಗ್ರೆಸ್ ಮುಖಂಡರು ಹೇಳುವ ಉತ್ತರ ಏನು ಗೊತ್ತಾ? ಪ್ರತಿ ಗ್ರಾಮದಲ್ಲಿ ತಲಾ ಐದು ಜನರಂತೆ ಸತ್ತು ಹೋದರೆ ಆ ಸಂಖ್ಯೆ 50 ಲಕ್ಷ ದಾಟುತ್ತದೆ ಎನ್ನುತ್ತಿದ್ದಾರೆ. ಎಂತಹ ಕಳಪೆ ಲಾಜಿಕ್ ಅನಿಸುವುದಿಲ್ಲವೇ? ಇದನ್ನು ಇಟ್ಟುಕೊಂಡು ಕೇಂದ್ರ ಸರಕಾರವನ್ನು ಕಟಕಟೆಗೆ ನಿಲ್ಲಿಸುವ ಕಾಂಗ್ರೆಸ್ ಪ್ರಯತ್ನ ಯಶಸ್ವಿಯಾಗುವುದಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿದೆ. ಇನ್ನು ರಾಜ್ಯಗಳು ತಮ್ಮ ವ್ಯಾಪ್ತಿಯಲ್ಲಿ ಕೊರೊನಾದಿಂದ ಸತ್ತಿರುವ ಜನರ ಒಟ್ಟು ಸಂಖ್ಯೆಯನ್ನು ಕಾಲಕಾಲಕ್ಕೆ ಕೇಂದ್ರ ಆರೋಗ್ಯ ಇಲಾಖೆಗೆ ವರದಿ ನೀಡಬೇಕು. ಎಷ್ಟೋ ರಾಜ್ಯಗಳು ಈ ಬಗ್ಗೆ ಅಪ್ ಡೇಟೆಡ್ ವರದಿಗಳನ್ನೇ ನೀಡಿಲ್ಲ. ಕೆಲವು ರಾಜ್ಯಗಳಲ್ಲಿ ಕಾಂಗ್ರೆಸ್ ಸರಕಾರ ಇದೆ. ಕೆಲವು ರಾಜ್ಯಗಳಲ್ಲಿ ಭಾರತೀಯ ಜನತಾ ಪಾರ್ಟಿ ಅಲ್ಲದ ಬೇರೆ ಪಕ್ಷಗಳ ಸರಕಾರಗಳಿವೆ. ಆ ರಾಜ್ಯಗಳು ತಮ್ಮ ರಾಜ್ಯದಲ್ಲಿ ಸತ್ತವರ ಸಂಖ್ಯೆ ಹೆಚ್ಚಾಗಿದ್ದರೆ ಅದರ ನೈಜ ಸಂಖ್ಯೆಯನ್ನು ಕೊಡುವ ಸಾಧ್ಯತೆಗಳಿಲ್ಲ. ಯಾಕೆಂದರೆ ಹೆಚ್ಚು ಜನ ತಮ್ಮ ರಾಜ್ಯದಲ್ಲಿ ಕೊರೊನಾದಿಂದ ಸತ್ತಿದ್ದಾರೆ ಎಂದು ಹೆಮ್ಮೆಯಿಂದ ಹೇಳುವ ವಿಷಯ ಇದಲ್ಲ.

ಇದು ಒಲಿಪಿಂಕ್ಸ್ ನಲ್ಲಿ ಹೆಚ್ಚು ಪದಕ ಗೆದ್ದ ವಿಷಯದ ತರಹ ಅಲ್ಲ. ಕೊರೊನಾದಿಂದ ನಮ್ಮ ರಾಜ್ಯದಲ್ಲಿ ದಾಖಲೆಯ ಸಂಖ್ಯೆಯಲ್ಲಿ ಜನ ಸತ್ತಿದ್ದಾರೆ ಎಂದು ಯಾವುದೇ ರಾಜ್ಯದ ಮುಖ್ಯಮಂತ್ರಿ ಹೆಮ್ಮೆಯಿಂದ ಎದೆತಟ್ಟಿ ಹೇಳಲಾರ. ಯಾಕೆಂದರೆ ಒಂದು ವೇಳೆ ಹಾಗೆ ಹೆಚ್ಚು ಜನ ಇದೇ ರೋಗದಿಂದ ಸತ್ತಿದ್ದು ಅದೇ ಸಂಖ್ಯೆಯನ್ನು ಆ ರಾಜ್ಯ ಹೇಳಿಕೊಂಡರೆ ಅದು ಆ ರಾಜ್ಯದ ಆಡಳಿತ ಪಕ್ಷಕ್ಕೆ ದೊಡ್ಡ ಮೈನಸ್ ಆಗುತ್ತದೆ. ಜನ ಅದನ್ನೇ ಅಳತೆಗೋಲಾಗಿ ಮಾಡಿ ಸರಕಾರದ ಆಡಳಿತದ ಬಗ್ಗೆ ನಿರಾಶೆಗೊಳ್ಳುತ್ತಾರೆ. ಜನರ ಜೀವವನ್ನು ಉಳಿಸಲಾಗದ ಸರಕಾರ ಎಂದು ಬೇಸರಪಟ್ಟುಕೊಳ್ಳುತ್ತಾರೆ. ಅದರಿಂದ ಆ ರಾಜ್ಯದ ವಿಪಕ್ಷಗಳಿಗೆ ಆಡಳಿತ ಪಕ್ಷವನ್ನು ಟೀಕಿಸಲು ಇನ್ನಷ್ಟು ಪ್ರಬಲ ಕಾರಣಗಳು ಸಿಕ್ಕಂತೆ ಆಗುತ್ತವೆ. ಅದ್ದರಿಂದ ಕೆಲವು ರಾಜ್ಯಗಳು ವಾಸ್ತವ ಸ್ಥಿತಿಯನ್ನು ಮುಚ್ಚಿಡುವ ಪ್ರಯತ್ನ ಮಾಡಿರಬಹುದು. ಆದರೆ ಕೇಂದ್ರ ತನ್ನ ಬಳಿಯಿರುವ ದಾಖಲೆಯನ್ನು ಇಟ್ಟುಕೊಂಡು ಮಾತ್ರ ಮಾತನಾಡಬೇಕಾಗುತ್ತದೆ. ಅದು ಅಂದಾಜಿನ ಮೇಲೆ ಇಂತಹ ರಾಜ್ಯದಲ್ಲಿ ಇಷ್ಟು ಜನ ಸತ್ತಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ.

ಇನ್ನು ಆಮ್ಲಜನಕದ ಕೊರತೆಯಿಂದ ಯಾರೂ ಎರಡನೇ ಅಲೆಯ ಅವಧಿಯಲ್ಲಿ ಸತ್ತಿಲ್ಲ ಎನ್ನುವ ಮಾಹಿತಿಯನ್ನು ಕೇಂದ್ರ ಸರಕಾರ ಹೇಳಿದೆ. ಇದರಲ್ಲಿಯೂ ಕಾಂಗ್ರೆಸ್ಸಿನ ರಾಹುಲ್ ಹಾಗೂ ಪ್ರಿಯಾಂಕಾರಿಗೆ ವಿರೋಧ ಮಾಡಬೇಕು ಎಂದು ಅನಿಸುತ್ತದೆ. ದೆಹಲಿಯಂತಹ ರಾಜ್ಯಗಳು ಈ ಆಮ್ಲಜನಕದ ಪೂರೈಕೆಯನ್ನು ಕೇಂದ್ರ ಮಾಡುವಲ್ಲಿ ವಿಫಲವಾಗಿದೆ ಎಂದು ತೋರಿಸುವುದಕ್ಕಾಗಿ ಹರಸಾಹಸ ಪಟ್ಟಿರುವುದನ್ನು ನಾವು ನೋಡಿದ್ದೇವೆ. ದೆಹಲಿಗೆ ಬೇಕಾಗಿರುವಷ್ಟು ಆಮ್ಲಜನಕದ ಕಂಟೇನರ್ ಗಳನ್ನು ಕೇಂದ್ರ ಪೂರೈಸಿದರೂ ಅದಕ್ಕಿಂತ ಮೂರು ಪಟ್ಟು ಹೆಚ್ಚು ಕೇಳಿದ ದೆಹಲಿ ಸರಕಾರ ನಂತರ ಕೇಂದ್ರ ಕೊಡಲಿಲ್ಲ ಎಂದು ಸಬೂಬು ಹೇಳಿ ಹೈಕೋರ್ಟಿಗೆ ಕೂಡ ಹೋಗಿ ನ್ಯಾಯಾಲಯದಿಂದಲೂ ತಕ್ಷಣ ಕೊಡಿಸಿ ಎಂದು ಕೇಂದ್ರಕ್ಕೆ ಸೂಚನೆ ಕೊಡಿಸುವಲ್ಲಿ ಜಯ ಸಾಧಿಸಿತ್ತು. ಆದರೆ ದೆಹಲಿಗೆ ದಿನಕ್ಕೆ ಅಷ್ಟು ಆಮ್ಲಜನಕದ ಕಂಟೇನರ್ ಅವಶ್ಯಕತೆ ಇಲ್ಲ ಎಂದು ನಂತರ ಸಾಬೀತಾಗಿದೆ. ಇದೆಲ್ಲವನ್ನು ದೇಶದ ಜನರು ನೋಡಿದ್ದಾರೆ. ಒಟ್ಟಿನಲ್ಲಿ ಸತ್ತವರ ಸಂಖ್ಯೆಯಲ್ಲಿ ರಾಜಕೀಯ, ಆಮ್ಲಜನಕದ ಪೂರೈಕೆ ಮಾಡುವಲ್ಲಿ ವಿಫಲರಾಗಿದ್ದಾರೆ ಎಂದು ತೋರಿಸುವ ವಿಪಕ್ಷಗಳ ರಾಜಕೀಯವನ್ನು ನೋಡುತ್ತಾ ಬಂದಿರುವ ಜನರಿಗೆ ಮೋದಿಯವರ ಮೇಲೆ ಸಹಜವಾಗಿ ವಿಶ್ವಾಸ ಬೆಳೆಯಲು ಮತ್ತೊಂದು ಕಾರಣ ಲಸಿಕೆಗಳ ಪೂರೈಕೆ.

ಕೊರೊನಾ ಎದುರಿಸಲು ಲಸಿಕೆ ಒಂದೇ ಪರಿಹಾರ ಎಂದು ಯಾವಾಗ ಮೋದಿಯವರಿಗೆ ಅನಿಸಿತೋ ಅವರು ನಂತರ ವಿರಮಿಸಲಿಲ್ಲ. ಆ ಲಸಿಕೆ ಎಲ್ಲರಿಗೂ ಶೀಘ್ರದಲ್ಲಿ ಸಿಗುತ್ತೆ, ಸರಕಾರದ ವರ್ಚಸ್ಸು ಹೆಚ್ಚುತ್ತೆ ಎಂದು ವಿಪಕ್ಷಗಳಿಗೆ ಅನಿಸಿದಾಗ ಅವು ಮೊದಲು ಆರಂಭಿಸಿದ್ದೇ “ಅದು ಮೋದಿ ಲಸಿಕೆ, ಮಕ್ಕಳಾಗಲ್ಲ” ಎನ್ನುವ ಸುಳ್ಳು ವದಂತಿ. ಅದರಿಂದ ಆರಂಭದಲ್ಲಿ ಜನರು ಲಸಿಕೆಯನ್ನು ತೆಗೆದುಕೊಳ್ಳಲು ಮುಂದೆ ಬರಲೇ ಇಲ್ಲ. ಇದರಿಂದ ಲಸಿಕೆ ವ್ಯರ್ಥವಾದದ್ದು ಇದೆ. ಆ ಬಳಿಕ ನಿರಂತರವಾಗಿ ಜನರಲ್ಲಿ ಸರಕಾರ ಜಾಗೃತಿ ಮೂಡಿಸಿದ ಪರಿಣಾಮ ಲಸಿಕೆ ತೆಗೆದುಕೊಳ್ಳಲು ಬರುವವರ ಸಂಖ್ಯೆ ಹೆಚ್ಚಾಯಿತು. ಆಗ ವಿಪಕ್ಷಗಳು ಮತ್ತೊಮ್ಮೆ ತಯಾರಾದವು. ಲಸಿಕೆ ಕೊರತೆ ಇದೆ ಎಂದು ಸುಳ್ಳು ಸುದ್ದಿಯನ್ನು ಹರಡಲು ಶುರುಮಾಡಿದವು. ಒಟ್ಟಿನಲ್ಲಿ ಲಸಿಕೆ ಕೊಟ್ಟರೂ ಕಷ್ಟ, ಕೊಡದಿದ್ದರೂ ಕಷ್ಟ, ಆಮ್ಲಜನಕ ಕೊಟ್ಟರೂ ಕಷ್ಟ, ಕೊಡದಿದ್ದರೂ ಕಷ್ಟ, ಈಗ ಸತ್ತರೂ ಕಷ್ಟ, ಸಾಯದಿದ್ದರೂ ಈ ವಿಪಕ್ಷಗಳ ಬಾಯಲ್ಲಿ ಕಷ್ಟ!

0
Shares
  • Share On Facebook
  • Tweet It


- Advertisement -


Trending Now
ಸ್ಮೃತಿ ಇರಾನಿ ಸಾಸ್ ಬಿ ಕಬಿ ಭಹೂ ತೀ - 2 ನಿಂದ ಮತ್ತೆ ಕಿರುತೆರೆಗೆ ವಾಪಾಸ್!
Hanumantha Kamath May 31, 2025
ದುಬೈಯಲ್ಲಿ ಕೇರಳ ಸಮಾಜದ ಕಾರ್ಯಕ್ರಮಕ್ಕೆ ಅಫ್ರಿದಿ ಅತಿಥಿ!
Hanumantha Kamath May 31, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಸ್ಮೃತಿ ಇರಾನಿ ಸಾಸ್ ಬಿ ಕಬಿ ಭಹೂ ತೀ - 2 ನಿಂದ ಮತ್ತೆ ಕಿರುತೆರೆಗೆ ವಾಪಾಸ್!
    • ದುಬೈಯಲ್ಲಿ ಕೇರಳ ಸಮಾಜದ ಕಾರ್ಯಕ್ರಮಕ್ಕೆ ಅಫ್ರಿದಿ ಅತಿಥಿ!
    • ದಯವಿಟ್ಟು 500 ರೂಪಾಯಿ ನೋಟ್ ಬ್ಯಾನ್ ಮಾಡಿ - ಮೋದಿಗೆ ಚಂದ್ರಬಾಬು ನಾಯ್ಡು ಮತ್ತೆ ಮನವಿ!
    • ಅಯೋಧ್ಯೆಯಲ್ಲಿ ಇನ್ನು ಮಾಂಸಹಾರ, ಮದ್ಯ ಸಂಪೂರ್ಣ ನಿಷೇಧ!
    • ಪೊಲೀಸ್ ಕಮೀಷನರ್, ಎಸ್ಪಿ ವರ್ಗಾವಣೆ ಮಾಡಿ ಡ್ಯಾಮೇಜ್ ಕಂಟ್ರೋಲ್ ಮಾಡಿದ ಸರಕಾರ!
    • ಜಬ್ಬಾರ್ ನಿಂದ ರಹೀಂ ತನಕ, ದಕ್ಷಿಣ ಕನ್ನಡದ ಅಧ್ಯಾಯದಲ್ಲಿ ರಕ್ತದ ಸಹಿ ಕಂಡ ಪುಟಗಳು!
    • ಹುಬ್ಬಳ್ಳಿ ಕ್ರಿಮಿನಲ್ ಪ್ರಕರಣ ಹಿಂದೆಗೆದುಕೊಳ್ಳುವಂತಿಲ್ಲ - ಹೈಕೋರ್ಟ್ ಆದೇಶ... ರಾಜ್ಯ ಸರಕಾರಕ್ಕೆ ಮುಖಭಂಗ!
    • ಹನಿಮೂನಿಗೆ ಶಿಲ್ಲಾಂಗಿಗೆ ಹೋದ ನವಜೋಡಿ ಕಣ್ಮರೆ! ನಾಪತ್ತೆಯಾದ ಪ್ರದೇಶ ತುಂಬಾ ಡೇಂಜರ್!
    • ತಮಿಳಿನಿಂದಲೇ ಕನ್ನಡ ಹುಟ್ಟಿದ್ದು- ಕಮಲ್ ಹಾಸನ್ ಹೇಳಿಕೆಗೆ ಕರ್ನಾಟಕದಲ್ಲಿ ವಿರೋಧ..
    • ಬೆಂಗಳೂರಿನಲ್ಲಿ ಟ್ರೋಯಿಂಗ್ ಶುರು, ಮಂಗಳೂರಿನಲ್ಲಿಯೂ ಆರಂಭವಾಗಬೇಕಾ?

  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search