ಈದ್ ಓಕೆ, ಓಣಂ ಇಲ್ಲ ಯಾಕೆ, ಪಿಣರಾಯಿ?
ನಮ್ಮ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿದ್ದರೆ ಪಕ್ಕದ ಕೇರಳದಲ್ಲಿ ಜ್ವರ ಇದ್ದಾಗ ತಾಪ ಏರುವಂತೆ ಕೊರೊನಾ ಆಕಾಶಕ್ಕೆ ಮುಖ ಮಾಡಿ ನಿಂತಂತೆ ಕಾಣುತ್ತಿದೆ. ಅಲ್ಲಿ ಕಳೆದೊಂದು ವಾರದಲ್ಲಿ ನಿತ್ಯ ಸರಾಸರಿ 20 ಸಾವಿರದ ಆಸುಪಾಸಿಗೆ ಸೊಂಕಿತರ ಸಂಖ್ಯೆ ಬಂದು ತಲುಪಿದೆ. ಇಡೀ ದೇಶದಲ್ಲಿ ನಿತ್ಯ ಒಟ್ಟು ಸೊಂಕಿತರ ಸಂಖ್ಯೆಯ ಶೇಕಡಾ 40 ರಷ್ಟು ಜನರು ಕೇರಳದವರೇ ಆಗಿರುವುದು ಆ ರಾಜ್ಯದ ಆರೋಗ್ಯ ಹೇಗಿದೆ ಎನ್ನುವುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಒಂದು ಸಮಯದಲ್ಲಿ ಇಲ್ಲಿನ ಕಮ್ಯೂನಿಸ್ಟರು ಕೇರಳ ಮಾಡೆಲ್ ಎಂದು ಎದೆತಟ್ಟಿ ಹೇಳುತ್ತಿದ್ದರು. ಕೇರಳವನ್ನು ನೋಡಿ ಕಲಿಯಿರಿ ಎಂದು ನಮ್ಮನ್ನು ವ್ಯಂಗ್ಯ ಮಾಡುತ್ತಿದ್ದರು. ಒಂದಷ್ಟರ ಮಟ್ಟಿಗೆ ಅವರ ಹಿಂದಿನ ಸರಕಾರದಲ್ಲಿ ಆರೋಗ್ಯ ಸಚಿವೆಯಾಗಿದ್ದವರು ಉತ್ತಮ ಕೆಲಸ ಮಾಡಿ ಕೋವಿಡ್ ನಿಯಂತ್ರಣಕ್ಕೆ ತಂದಿದ್ದರು. ಆದರೆ ಕೇರಳದ ಸರಕಾರಕ್ಕೆ ವೈದ್ಯಕೀಯ ಕಾಳಜಿಗಿಂತ ತಮ್ಮ ಧರ್ಮ ತಲೆ ಮೇಲೆ ಕುಳಿತು ನರ್ತಿಸುತ್ತಿರುವುದರಿಂದ ಅವರಿಗೆ ರಾಜ್ಯದಲ್ಲಿ ಕೊರೊನಾ ಹೇಗೆ ಬೇಕಾದರೆ ಇರಲಿ, ಎಷ್ಟು ಬೇಕಾದರೂ ಇರಲಿ ನಮಗೆ ನಮ್ಮ ಧರ್ಮದ ಹಬ್ಬ ಮುಖ್ಯ ಎಂದು ಅನಿಸಿತು.
ಪಿಣರಾಯಿ ಸರಕಾರ ಈದ್ ಹಬ್ಬದ ಸಮಯದಲ್ಲಿ ಜನರಿಗೆ ಮುಕ್ತ ಅವಕಾಶವನ್ನು ಕೊಟ್ಟಿತ್ತು. ಮೊದಲೇ ಮುಸಲ್ಮಾನರು ಬಹುಸಂಖ್ಯಾತರಿರುವ ಅನೇಕ ಜಿಲ್ಲೆಗಳು ಕೇರಳದಲ್ಲಿವೆ. ಹಾಗಿರುವಾಗ ಅಲ್ಲಿನ ಹೆಚ್ಚಿನ ಶಾಸಕರು, ಸಚಿವರು ಅದೇ ಧರ್ಮದವರು. ಈದ್ ಹಬ್ಬ ಅವರಿಗೆ ಜೈಲಿನಿಂದ ಬಿಟ್ಟ ಕೈದಿಗಳ ತರಹ ಆಗಿತ್ತು. ಹಸಿವೆಯಿಂದ ಚಡಪಡಿಸುತ್ತಿರುವವರಿಗೆ ಎದುರಿಗೆ ಕೋಳಿ ಮಾಂಸ ಇಟ್ಟಂತೆ ಆಗಿತ್ತು. ಜಾತ್ರೆಯಲ್ಲಿ ಮಗುವಿಗೆ ತಾಯಿ ಲಾಲಿಪಾಪ್ ಕೊಟ್ಟಂತೆ ಆಗಿತ್ತು. ಕೇಳಬೇಕಾ? ಕೇರಳ ಎನ್ನುವ ದೇವರ ಸ್ವಂತ ನಾಡು ಅಕ್ಷರಶ: ಈದ್ ನಲ್ಲಿ ಮಿಂದೆಂದು ಪುಳಕಿತವಾಗುತ್ತಿದ್ದಂತೆ ಏನೂ ಕೆಲಸವಿಲ್ಲದೆ ಸಮುದ್ರ ತೀರದಲ್ಲಿ ಮಲಗಿದ್ದ ಕೊರೊನಾಗೆ ತನ್ನ ಎದುರಿಗೆ ಮೃಷ್ಟಾನ್ನ ಭೋಜನ ಬಡಿಸಿಟ್ಟಂತೆ ಆಗಿತ್ತು. ನಂತರ ಕೊರೊನಾ ತಡ ಮಾಡಲೇ ಇಲ್ಲ. ನಾನು ಇಲ್ಲಿಯೇ ಇದ್ದರೂ ನನ್ನನ್ನು ಕ್ಯಾರೇ ಮಾಡದೇ ಇಷ್ಟು ದೊಡ್ಡದಾಗಿ ಹಬ್ಬ ಮಾಡುತ್ತಿರಾ, ಈಗ ನೋಡಿ ಎಂದು ಕೊರೊನಾ ರಣಕಹಳೆ ಊದಿಯೇ ಬಿಟ್ಟಿತ್ತು. ಆ ಬಳಿಕ ಕೇರಳ ಅಕ್ಷರಶ: ರಣರಂಗದಲ್ಲಿ ಶತ್ರುವಿನ ಸುನಾಮಿಗೆ ಒದ್ದಾಡುತ್ತಿರುವ ದುರ್ಬಲ ಸೈನ್ಯದಂತೆ ಕಾಣುತ್ತಿದೆ. ಇಲ್ಲಿ ಕೇರಳ ಸರಕಾರದ ದ್ವಿಮುಖ ನೀತಿಯನ್ನು ಅಲ್ಲಿನ ಜನರು ಗಮನಿಸಬೇಕು. ಈದ್ ಹಬ್ಬದ ದಿನ ಆ ಧರ್ಮದವರು ಸ್ವೇಚಾಚಾರದಿಂದ ಹಬ್ಬ ಆಚರಿಸಲು, ತಿರುಗಾಡಲು, ಎಂಜಾಯ್ ಮಾಡಲು ಧಾರಾಳ ಅವಕಾಶ ಕೊಟ್ಟಿದ್ದ ಕೇರಳ ಸರಕಾರ ಈಗ ಓಣಂ ಬರುತ್ತಿದ್ದಂತೆ ಉಲ್ಟಾ ಹೊಡೆದಿದೆ. ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್ ಒಂದು ಫರ್ಮಾನ್ ಹೊರಡಿಸಿ ಓಣಂ ಹಬ್ಬವನ್ನು ಆಚರಿಸಲು ಸಾಕಷ್ಟು ನಿರ್ಭಂದನೆಗಳನ್ನು ಒಡ್ಡಿದ್ದಾರೆ. ಹಾಗಾದರೆ ಈದ್, ಭಕ್ರೀದ್ ಅಥವಾ ರಮ್ಜಾನ್ ಆಚರಿಸಲು ಸ್ವಚ್ಛಂದ ಅವಕಾಶ ಮತ್ತು ಒಣಂ ಆಚರಿಸಲು ಸಂಕೋಲೆಯ ಬಿಗಿತ. ಇದು ಎಂತಹ ಜಾತ್ಯಾತೀತ ಆಡಳಿತ ಪಿಣರಾಯಿ. ನಿಮಗೆ ಒಂದು ಧರ್ಮದವರಿಗೆ ಬೆಣ್ಣೆ ಮತ್ತೊಂದು ಧರ್ಮದವರಿಗೆ ಸುಣ್ಣ ಹಚ್ಚಲು ಅಷ್ಟು ಸಲೀಸಾಗಿ ಹೇಗೆ ಮನಸ್ಸು ಬರುತ್ತದೆ?
ಈಗ ಅವರು ಮಾಡಿರುವ ಕರ್ಮವನ್ನು ನಾವು ದಕ್ಷಿಣ ಕನ್ನಡ ಜಿಲ್ಲೆಯವರು ಅನುಭವಿಸುತ್ತಿದ್ದೇವೆ. ಅದೇನೆಂದರೆ ನಮ್ಮ ಪಕ್ಕದ ಕಾಸರಗೋಡು ಜಿಲ್ಲೆಯಲ್ಲಿ ದಿನಕ್ಕೆ ಸರಾಸರಿ 500 ರಷ್ಟು ಸೊಂಕಿತರು ಪತ್ತೆಯಾಗುತ್ತಿದ್ದಾರೆ. ನಮ್ಮ ಜಿಲ್ಲೆಯಲ್ಲಿ ಸರಾಸರಿ 300 ರಷ್ಟು ಸೊಂಕಿತರು ನಿತ್ಯ ದಾಖಲೆಯಾಗುತ್ತಿದ್ದರೂ ಅದರಲ್ಲಿ ಅರ್ಧದಷ್ಟು ಜನ ಪಕ್ಕದ ಕಾಸರಗೋಡುವಿನಿಂದ ಬಂದು ಇಲ್ಲಿ ಆಸ್ಪತ್ರೆಗಳ ಮಂಚದಲ್ಲಿ ಮಲಗಿದವರು. ಅದರಿಂದಲೇ ನಮ್ಮ ಜಿಲ್ಲೆ ಕಳೆದ ವಾರ ರಾಜ್ಯದಲ್ಲಿಯೇ ಬೆಂಗಳೂರನ್ನು ಮೀರಿಸಿ ಒಂದನೇ ಸ್ಥಾನಕ್ಕೆ ಏರಿತ್ತು.
ಕರ್ನಾಟಕದಲ್ಲಿ ಸರಾಸರಿ ಒಂದು ಸಾವಿರ ಕೋವಿಡ್ ಪ್ರಕರಣಗಳು ನಿತ್ಯ ದಾಖಲಾಗುತ್ತಿದ್ದರೆ ನಮ್ಮ ಜಿಲ್ಲೆಯಲ್ಲಿ ದಾಖಲಾಗುತ್ತಿರುವ ಪ್ರಕರಣಗಳು ಅದರ ಮೂರನೇ ಒಂದರಷ್ಟು ಇದೆ. ಇದೇಕೆ ಹೀಗೆ ಎಂದು ದಕ್ಷಿಣ ಕನ್ನಡ ಜಿಲ್ಲೆಯ ನಾಗರಿಕರು ಹುಬ್ಬೇರಿಸುತ್ತಿದ್ದಾರೆ. ಸಾವಿನ ಸಂಖ್ಯೆಯಲ್ಲಿಯೂ ನಮ್ಮ ಜಿಲ್ಲೆ ಎಲ್ಲರಿಗಿಂತ ಮುಂದಿದೆ. ಅದಕ್ಕೆ ಕಾರಣ ನಮ್ಮ ಜಿಲ್ಲೆಯಲ್ಲಿ ಉತ್ತಮ ಆಸ್ಪತ್ರೆ, ವೈದ್ಯರು ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲಿಯೇ ಉತ್ತಮ ಗುಣಮಟ್ಟದ ಸರಕಾರಿ ಆಸ್ಪತ್ರೆ ನಮ್ಮ ವೆನಲಾಕ್ ಹಾಗೂ ಕೇರಳದಿಂದ ಬರುವ ಸಾಬಿಗಳಿಗೆ ನಮ್ಮ ಗಡಿಯಲ್ಲಿಯೇ ಅತ್ಯುನ್ನತ ಆಸ್ಪತ್ರೆಗಳು ಇರುವುದರಿಂದ ಇಲ್ಲಿ ಬರುವ ರೋಗಿಗಳು ಕೋವಿಡ್ ಸಂಖ್ಯೆ ನಮ್ಮ ಜಿಲ್ಲೆಯಲ್ಲಿ ಹೆಚ್ಚಾಗಲು ತಮ್ಮದೇ ರೀತಿಯ ಕೊಡುಗೆ ನೀಡುತ್ತಿದ್ದಾರೆ.
ಇನ್ನು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಬಹಳ ಉತ್ತಮವಾಗಿರುವ ನಿಯಮವೊಂದನ್ನು ಜಾರಿಗೆ ತಂದು 72 ಗಂಟೆಯ ಒಳಗಿನ ನೆಗೆಟಿವ್ ರಿಪೋರ್ಟ್ ಇಲ್ಲದಿದ್ದರೆ ಗಡಿಯೊಳಗೆ ಪ್ರವೇಶ ಇಲ್ಲ ಎಂದಿದ್ದಾರೆ. ಇದು ಹಲವರಿಗೆ ಆಕ್ರೋಶ ತಂದಿದೆ. ನಾನು ಹೇಳುವುದು ಏನೆಂದರೆ ನಮ್ಮ ಜಿಲ್ಲಾಧಿಕಾರಿಯವರು ಮಾಡಿರುವ ನಿಯಮ ಸರಿಯಾಗಿಯೇ ಇದೆ. ಕೇರಳ ಸರಕಾರ ಮಾಡುತ್ತಿರುವ ನಿರ್ಲಕ್ಷ್ಯಕ್ಕೆ ನಾವು ದಕ್ಷಿಣ ಕನ್ನಡ ಜಿಲ್ಲೆಯವರು ಯಾಕೆ ತಲೆ ಕೊಡಬೇಕು. ಈ ಹಂತದಲ್ಲಿ ಪೊಲೀಸರು ಕೂಡ ಅಲ್ಲಿ ಬಿಗಿ ಕ್ರಮಗಳನ್ನು ಕೈಗೊಳ್ಳಬೇಕು. ಪೊಲೀಸ್ ಇಲಾಖೆಯೊಂದಿಗೆ ನಮ್ಮ ಜನಪ್ರತಿನಿಧಿಗಳು ಕೂಡ ಪೂರ್ಣಪ್ರಮಾಣದಲ್ಲಿ ಸಹಕರಿಸಬೇಕು. ಈಗ ಏನಾಗುತ್ತಿದೆ ಎಂದರೆ ಅಲ್ಲಿ ಕೇರಳದಿಂದ ನಮ್ಮ ರಾಜ್ಯದ ಒಳಗೆ ಬರುತ್ತಿರುವ ಕೆಲವರ ಬಳಿ ನೆಗೆಟಿವ್ ರಿಪೋರ್ಟ್ ಇರುವುದಿಲ್ಲ. ಅವರು ತಮಗೆ ಪರಿಚಯವಿರುವ ನಮ್ಮ ಜಿಲ್ಲೆಯ ಯಾವುದಾದರೂ ಶಾಸಕರುಗಳಿಗೆ ದೂರವಾಣಿ ಮಾಡಿ ವಿನಂತಿಸಿಕೊಳ್ಳುತ್ತಾರೆ. ಇವರು ಪೊಲೀಸರಿಗೆ ಒತ್ತಡ ತಂದು ಕಳುಹಿಸಲು ಹೇಳುತ್ತಾರೆ. ಇದು ಆಗಬಾರದು. ಯಾವುದೇ ಕಾರಣಕ್ಕೂ ನೆಗೆಟಿವ ರಿಪೋರ್ಟ್ ಇಲ್ಲದೆ ನೋ ಚಾನ್ಸ್. ನಮ್ಮ ಜಿಲ್ಲಾಧಿಕಾರಿಯವರು ನಮ್ಮ ಜಿಲ್ಲೆಯ ನಾಗರಿಕರ ಆರೋಗ್ಯ ರಕ್ಷಣೆಗೆ ತೆಗೆದುಕೊಂಡ ನಿರ್ಧಾರವನ್ನು ನಮ್ಮ ಜನಪ್ರತಿನಿಧಿಗಳು ಮುರಿಯುವ ಕೆಲಸ ಮಾಡಲೇಬಾರದು. ಏಕೆಂದರೆ ಕೇರಳದ ಕರ್ಮ ನಮ್ಮ ತಲೆಗೆ ಕಟ್ಟುವ ಕೆಲಸ ಆಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ!
Leave A Reply