ಜೊಲ್ಲೆಗೆ ಶುರುವಾಯಿತು ಮುಸ್ಲಿಂ ಪ್ರೀತಿ; ಸಿದ್ದುಗೆ ಕಿಂಡಲ್ ಮಾಡುತ್ತಿದ್ದವರು ಇದೇ ಬಿಜೆಪಿಯವರು!!
ಶುರುವಾಯಿತು ಭಾರತೀಯ ಜನತಾ ಪಾರ್ಟಿಯ ರಾಜ್ಯ ಸರಕಾರದ ಓಲೈಕೆ ನೀತಿ. ಹಿಂದೂಗಳನ್ನು ಏನಾದರೂ ಒಲಿಸಿದ್ದರೆ ಅದು ಅವರ ಕರ್ತವ್ಯ ಎನ್ನಬಹುದಿತ್ತು. ಆದರೆ ಇವರು ಮುಸ್ಲಿಮರನ್ನು ಒಲೈಸಲು ಆರಂಭಿಸಿರುವುದರಿಂದ ಅದು ಇವರ ಕರ್ಮ ಎಂದೇ ಹೇಳಬಹುದು. ಅಷ್ಟಕ್ಕೂ ಬಿಜೆಪಿಗೆ ಕರ್ನಾಟಕದಲ್ಲಿ ಮುಸ್ಲಿಮರು ಮತ ಹಾಕುತ್ತಾರಾ? ಬೇಕಾದರೆ ಪಕ್ಷದ ಮುಖಂಡರನ್ನೇ ಗುಟ್ಟಾಗಿ ಕೇಳಿ ನೋಡಿ. ಪಕ್ಷದ ಮುಸ್ಲಿಂ ಪದಾಧಿಕಾರಿಗಳೇ ಹಾಕುವುದು ಡೌಟು ಎನ್ನುವ ಕುಚೋದ್ಯದ ಮಾತಿದೆ. ಹೀಗಿರುವಾಗ ಮೊಟ್ಟೆ ತಿಂದು ಸಿಪ್ಪೆಯನ್ನು ಯಾವುದೋ ಡಸ್ಟ್ ಬಿನ್ ಗೆ ಬಿಸಾಡಿದ್ದಾರೆ ಎನ್ನುವ ಬ್ರಾಂಡಿನ ಮಂತ್ರಿ ಶಶಿಕಲಾ ಜೊಲ್ಲೆ ಅಚಾನಕ್ ಮುಸ್ಲಿಂ ಮಹಿಳೆಯರನ್ನು ಓಲೈಸಲು ಹೊರಟಿದ್ದಾರೆ. ಒಂದು ವೇಳೆ ಅವರ ಹೊಸ ಯೋಜನೆ ಜಾರಿಗೆ ಬಂದರೆ ಭವಿಷ್ಯದಲ್ಲಿ ಬಿಜೆಪಿಯವರು ಸಿದ್ದುಗೆ ಶಾದಿ ಭಾಗ್ಯ, ಮಕ್ಕಳ ಪ್ರವಾಸದಲ್ಲಿ ಧರ್ಮ ರಾಜಕೀಯ ಮಾಡಿದ್ದನ್ನು ಸೇರಿ ಯಾವುದೇ ಮುಸ್ಲಿಂ ತುಷ್ಟೀಕರಣದ ಬಗ್ಗೆ ಕಿಂಡಲ್ ಮಾಡುವಂತಿಲ್ಲ. ಅಷ್ಟಕ್ಕೊ ಜೊಲ್ಲೆ ಮಾಡಲು ಹೊರಟಿರುವ ಸಾಧನೆ ಏನು?
ಮುಸ್ಲಿಂ ಮಹಿಳೆಯರು ಕ್ಯಾನ್ಸರ್ ಅಥವಾ ಹೃದ್ರೋಗ ಚಿಕಿತ್ಸೆಗೆ ಒಳಪಟ್ಟರೆ ಅವರಿಗೆ ಒಂದು ಲಕ್ಷ ರೂಪಾಯಿ ಸಹಾಯಧನ ನೀಡಲಾಗುವುದು ಎನ್ನುವುದು ಜೊಲ್ಲೆ ಹೊಸ ಯೋಜನೆ. ಆದಷ್ಟು ಶೀಘ್ರದಲ್ಲಿ ಪಕ್ಷದ ಹಿರಿಯರು, ಸಂಘದ ಪ್ರಮುಖರು ಜೊಲ್ಲೆಯನ್ನು ಕರೆದು ಬುದ್ಧಿವಾದ ಹೇಳದಿದ್ದರೆ ಜೊಲ್ಲೆ ಬಿಜೆಪಿಯ ಮಾನವನ್ನು ಬೀದಿಯಲ್ಲಿ ಹರಾಜು ಹಾಕಲಿದ್ದಾರೆ. ಮುಸ್ಲಿಂ ಮಹಿಳೆಯರಿಗೆ ಬಿಜೆಪಿ ಸರಕಾರ ಸಹಾಯ ಮಾಡಬಾರದು ಎಂದಲ್ಲ. ಆದರೆ ಹೃದ್ರೋಗ ಅಥವಾ ಕ್ಯಾನ್ಸರ್ ಮುಸ್ಲಿಂ ಮಹಿಳೆ, ಹಿಂದೂ ಮಹಿಳೆ ಎಂದು ನೋಡಿ, ಜೊಲ್ಲೆಗೆ ಹೇಳಿ ಬರುವುದಿಲ್ಲ. ಕಾಯಿಲೆಗಳ ವಿಷಯದಲ್ಲಿ ಜಾತಿ, ಧರ್ಮವನ್ನು ನೋಡಲೇಬಾರದು. ಆದರೆ ಜೊಲ್ಲೆ ನೋಡಿದ್ದಾರೆ. ಹಾಗಿದ್ದರೆ ಆಯುಷ್ಮಾನ್ ಯೋಜನೆ ಇದೆಯಲ್ಲ, ಕೇಂದ್ರ ಸರಕಾರದ್ದು. ಅದು ಯಾಕೆ ಇರುವುದು. ಅದನ್ನು ಮುಸ್ಲಿಂ ಮಹಿಳೆಯರಿಗೆ ಕೊಡುವುದು ನಿಲ್ಲಿಸಬಹುದಲ್ಲ. ಯಾಕೆಂದರೆ ಕೇಂದ್ರ ಸರಕಾರ ಕೋಟಿಗಟ್ಟಲೆ ರೂಪಾಯಿಯನ್ನು ವ್ಯಯಿಸುತ್ತಾ ಆಯುಷ್ಮಾನ್ ಯೋಜನೆಯನ್ನು ಜಾರಿಗೆ ತಂದಿದೆ. ನೀವು ಬಿಪಿಎಲ್ ಕಾರ್ಡ್ ಹೊಂದಿದರೆ 100% ಉಚಿತವಾಗಿ ಚಿಕಿತ್ಸೆ ದೊರಕುತ್ತದೆ. ಎಪಿಎಲ್ ಕಾರ್ಡ್ ಆದರೆ 30% ಫ್ರೀ. ಇದರಲ್ಲಿ ಮೋದಿ ಜಾತಿ, ಧರ್ಮ ನೋಡಿಲ್ಲ. ಅವರು ನೋಡಿದ್ದು ಮಾನವೀಯತೆ. ಆದರೆ ಅವರ ಪಕ್ಷದ ಜೊಲ್ಲೆಗೆ ಇದು ಗೊತ್ತೇ ಇಲ್ಲ. ಅವರು ಮುಸ್ಲಿಮ್ ಮಹಿಳೆಯರಿಂದ ಮುಂದಿನ ದಿನಗಳಲ್ಲಿ ತಮಗೆ ಲಾಭ ಆಗಬಹುದು ಎನ್ನುವ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಅವರು ಒಂದು ವಿಷಯವನ್ನು ಸ್ಪಷ್ಟವಾಗಿ ತಿಳಿದುಕೊಳ್ಳಬೇಕು. ಅದೇನೆಂದರೆ ಇತ್ತೀಚಿನ ವರ್ಷಗಳಲ್ಲಿ ಮೋದಿಜಿಯವರ ಮುಖ ನೋಡಿ, ಅವರ ಯೋಜನೆಗಳಿಂದ ಲಾಭ, ಪ್ರಯೋಜನಗಳನ್ನು ಪಡೆದುಕೊಂಡು, ಮೋದಿಯವರ ಚರಿಷ್ಮಾದಿಂದ ಹೆಚ್ಚೆಚ್ಚು ಹಿಂದೂ ಮಹಿಳೆಯರು ಬಿಜೆಪಿಗೆ ಮತ ಹಾಕಿದ್ದಾರೆ. ಅದು ಲೋಕಸಭಾ ಚುನಾವಣೆ ಇರಬಹುದು, ವಿಧಾನಸಭಾ ಚುನಾವಣೆ ಇರಬಹುದು ಅಥವಾ ಕೊನೆಗೆ ಪಾಲಿಕೆ ಚುನಾವಣೆಯೇ ಇರಬಹುದು. ಹಿಂದೆ ಮತ ಚಲಾವಣೆ ಎಂದರೆ ನಿರುತ್ಸಾಹ ತೋರಿಸುತ್ತಿದ್ದ ಹಿಂದೂ ಮಹಿಳೆಯರು ಅದರಲ್ಲಿಯೂ ಗೃಹಿಣಿಯರು ಮತದಾನದ ದಿನ ರಾಜಕೀಯ ಪಕ್ಷಗಳು ಮನೆಗೆ ಗಾಡಿ ಕಳುಹಿಸಿದರೂ ಬರಲು ಮನಸ್ಸು ಮಾಡುತ್ತಿರಲಿಲ್ಲ. ಆದರೆ ಮುಸ್ಲಿಂ ಮಹಿಳೆಯರು ಹಾಗಲ್ಲ. ತಮ್ಮ ಇಷ್ಟದ ಪಕ್ಷಕ್ಕಾಗಿ ಎಷ್ಟು ಹೊತ್ತು ಬೇಕಾದರೂ ಕ್ಯೂನಲ್ಲಿ ನಿಂತು ಮತ ಚಲಾಯಿಸಿ ಹೋಗುತ್ತಿದ್ದರು. ಹಿಂದೂಗಳಿಗೆ ಇರುವ ಏಕೈಕ ರಾಜಕೀಯ ಪಕ್ಷ ಎಂದರೆ ಅದು ಬಿಜೆಪಿ. ಆದರೆ ಹಿಂದೂ ಮಹಿಳೆಯರ ನೀರಸ ಪ್ರತಿಕ್ರಿಯೆ ಹಾಗೂ ಮುಸ್ಲಿಂ ಮಹಿಳೆಯರ ಅತ್ಯುತ್ಸಾಹದಿಂದ ಬಿಜೆಪಿ ಅಭ್ಯರ್ಥಿ ಕನಿಷ್ಟ ಮತಗಳ ಅಂತರದಿಂದ ಸೋತಿರುವ ಅನೇಕ ಉದಾಹರಣೆಗಳು ನಮ್ಮ ಮುಂದೆ ಇದೆ. ನೀವು ಯಾವುದೇ ವಿಧಾನಸಭಾ ಕ್ಷೇತ್ರ ತೆಗೆದುಕೊಳ್ಳಿ. ಅಲ್ಲಿ ಮಹಿಳಾ ಮತದಾರರೇ ಸಂಖ್ಯೆಯಲ್ಲಿ ಮುಂದಿರುತ್ತಾರೆ. ಮುಸ್ಲಿಂ ಸೇರಿ ಅಲ್ಪಸಂಖ್ಯಾತರ ಮತಗಳು ಹೆಚ್ಚೆಂದರೆ 18% ಎಂದುಕೊಂಡರೂ ಬಹುಸಂಖ್ಯೆಯಲ್ಲಿ ಇರುವವರು ನಿಸ್ಸಂಶಯವಾಗಿ ಹಿಂದೂ ಮಹಿಳೆಯರೇ ಅಲ್ವಾ? ಈಗೀಗ ಅವರು ಮತ ಹಾಕಿದ ಕಾರಣದಿಂದ ಬಿಜೆಪಿಗೆ ಎಲ್ಲಾ ಕಡೆ ಉತ್ತಮ ಮೈಲೇಜ್ ಸಿಕ್ಕಿದೆ. ಹಿಂದೆ ಏನಾಗುತ್ತಿತ್ತು ಎಂದರೆ ಹೀಗೆ ಕ್ಯಾನ್ಸರ್ ಅಥವಾ ಹೃದ್ರೋಗ ಇದ್ದವರು ಚಿಕಿತ್ಸೆಗಾಗಿ ಆರ್ಥಿಕ ಸಹಾಯ ಬೇಕಾದ್ದಲ್ಲಿ ತಮ್ಮ ಕ್ಷೇತ್ರದ ಸಂಸದರ ಮೂಲಕ ವೈದ್ಯರು ಕೊಟ್ಟ ದಾಖಲೆಗಳನ್ನು ಇಟ್ಟುಕೊಂಡು ಪ್ರಧಾನ ಮಂತ್ರಿ ಪರಿಹಾರ ನಿಧಿಗೆ ಅರ್ಜಿ ಸಲ್ಲಿಸಬಹುದಿತ್ತು. ಅಲ್ಲಿಂದ ಪರಿಹಾರದ ಚೆಕ್ ಬರುತ್ತಿತ್ತು. ಅದನ್ನು ಫಲಾನುಭವಿಗಳಿಗೆ ಕೊಡಲಾಗುತ್ತಿತ್ತು. ಆದರೆ ಯಾವಾಗ ಆಯುಷ್ಮಾನ್ ಯೋಜನೆ ಶುರುವಾಯಿತೋ ಆ ಪಿಎಂ ನಿಧಿಯಿಂದ ಕಾಯಿಲೆಗಳಿಗೆ ಹಣ ಕೊಡುವುದು ನಿಲ್ಲಿಸಲಾಗಿತ್ತು. ಎರಡೆರಡು ಕೊಡುವ ಅಗತ್ಯ ಇರಲಿಲ್ಲ. ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಹಜ್ ಯಾತ್ರೆಗೆ ಆರ್ಥಿಕ ಸಹಾಯ, ಶಾದಿ ಭಾಗ್ಯ ಹೀಗೆ ಸಿದ್ದು ಮಾಡುತ್ತಿದ್ದ ಓಲೈಕೆ ಯೋಜನೆಗಳನ್ನೇ ಅಲ್ಪಸಂಖ್ಯಾತರ ತುಷ್ಠೀಕರಣ ಎಂದು ಹೇಳುತ್ತಾ ಅವರನ್ನು ಎರಡನೇಯ ಬಾರಿ ಸಿಎಂ ಆಗುವುದನ್ನು ತಪ್ಪಿಸುವಲ್ಲಿ ಬಿಜೆಪಿ ಯಶಸ್ವಿಯಾಗಿತ್ತು. ಆದರೆ ಈಗ ಜೊಲ್ಲೆ ಮತ್ತೆ ಎದ್ದಿದ್ದಾರೆ. ಅವರಿಗೆ ಹೊಸ ಸಿಎಂ ಅಧಿಕಾರ ಸ್ವೀಕಾರ ಮಾಡುವ ಕೊನೆಯ ಕ್ಷಣದ ತನಕ ಮಂತ್ರಿಗಿರಿ ಸಿಗುತ್ತೆ ಎನ್ನುವ ಯಾವುದೇ ಲಕ್ಷಣಗಳು ಇರಲಿಲ್ಲ. ಮಂತ್ರಿಗಿರಿಗಾಗಿ ದೆಹಲಿಯಲ್ಲಿ ವಾರಗಟ್ಟಲೆ ಬೀಡುಬಿಟ್ಟಿದ್ದ ಜೊಲ್ಲೆ ದಂಪತಿಗಳು ಸಿಎಂ ಸಚಿವ ಸಂಪುಟದ ಶಪಥ ಸ್ವೀಕಾರಕ್ಕೆ ಇನ್ನೇನೂ ಕೆಲವೇ ಗಂಟೆಗಳು ಇರುವಾಗ ದೆಹಲಿಯಿಂದ ಹಾರಿ ಬಂದು ಝೀರೋ ಟ್ರಾಫಿಕ್ ನಲ್ಲಿ ವಿಮಾನ ನಿಲ್ದಾಣದಿಂದ ರಾಜಭವನಕ್ಕೆ ಬಂದು ಚಾನ್ಸ್ ಗಿಟ್ಟಿಸಿಕೊಂಡವರು. ಯಡ್ಡಿ ಹಾಗೂ ಬಸ್ ಬೊಮ್ಮಾಯಿ ಸಚಿವ ಸಂಪುಟದಲ್ಲಿ ಹಗರಣಗಳ ಮೂಲಕ ಸರಕಾರಕ್ಕೆ ಏನಾದರೂ ಕಪ್ಪು ಚುಕ್ಕೆ ತರಬೇಕಾದರೆ ಅದಕ್ಕೆ ಜೊಲ್ಲೆ ಫಿಟ್ ಎನ್ನುವುದು ಮತ್ತೆ ಮತ್ತೆ ಸಾಬೀತಾಗುತ್ತಿದೆ.!
Leave A Reply