ಹಿಂದೆ ಮಾಡಿದ ತಪ್ಪು ಮತ್ತೊಮ್ಮೆ ಮಾಡದಿರೋಣ.
ಭಾರತ ಮತ್ತು ಚೀನಾ ನಡುವೆ ಯುಧ್ಧದ ಕಾರ್ಮೋಡ ನಿರ್ಮಾಣವಾಗುತ್ತಿರುವ ಸಮಯದಲ್ಲಿ ಮತ್ತು ಚೀನಾದ ಕುಚೇಷ್ಠೆ ವಿಪರೀತ ಮಟ್ಟಕ್ಕೆ ಏರಿರುವ ಈ ಸಂದಿಗ್ಧ ಸಮಯದಲ್ಲಿ ಪ್ರತಿಯೊಬ್ಬ ದೇಶಭಕ್ತರ ಬಾಯಲ್ಲಿ ಚೀನಾ ವಸ್ತುಗಳೆಲ್ಲವನ್ನು ಬ್ಯಾನ್ ಮಾಡಬೇಕು ಎಂಬ ಕೂಗು ಕೇಳಿಬರುತ್ತಿದೆ. ಕೇಂದ್ರ ಸರಕಾರವೇ ಚೀನಾ ವಸ್ತುಗಳನ್ನು ಆಮದು ಮಾಡಿಕೊಳ್ಳಬಾರದು ಎಂದು ಕೆಲವರು ಹೇಳಿದರೆ ಇನ್ನು ಕೆಲವರು ಬ್ಯಾನ್ ಮಾಡಲು ಸಾಧ್ಯವೇ ಇಲ್ಲ ಎಂದು ಹೇಳುತ್ತಾರೆ. ಜಾಗತಿಕ ಒಪ್ಪಂದಗಳ ಕೆಲವು ನಿಯಮದಂತೆ ಒಪ್ಪಂದ ಮಾಡಿಕೊಂಡ ರಾಷ್ಟ್ರಗಳು ಪರಸ್ಪರ ತಮ್ಮ ದೇಶದ ವಸ್ತುಗಳನ್ನು ಇತರ ದೇಶದಲ್ಲಿ ಮಾರಾಟ ಮಾಡಬಾರದು ಎಂದು ಹೇಳುವಂತಿಲ್ಲ. ಆದ್ದರಿಂದ ಸದ್ಯದ ಪರಿಸ್ಥಿತಿಯಲ್ಲಿ ಕೇಂದ್ರ ಸರಕಾರವನ್ನು ದೂಷಿಸಿ ಪ್ರಯೋಜನವಿಲ್ಲ. ಇನ್ನು ಬಹುತೇಕ ಮಂದಿ ಚೀನಾ ವಸ್ತುಗಳನ್ನು ಗೊತ್ತಿದ್ದೋ ಗೊತ್ತಿಲ್ಲದೆಯೋ ಬಳಸುತ್ತಿದ್ದಾರೆ ಆದ್ದರಿಂದ ಸಂಪೂರ್ಣವಾಗಿ ಬ್ಯಾನ್ ಮಾಡಲು ಸಾಧ್ಯವಿದೆಯಾ ಎಂಬ ಪ್ರಶ್ನೆ ಮೂಡುತ್ತದೆ.
ಪ್ರಾಮಾಣಿಕವಾಗಿ ಹೇಳುವುದಿದ್ದರೆ ದೇಶಭಕ್ತರೆನಿಸಿಕೊಳ್ಳುವ ನಾವೇ ಕೆಲವರು ಮೊಬೈಲ್, ಇಲೆಕ್ಟ್ರಾನಿಕ್ ವಸ್ತುಗಳು, ಮಕ್ಕಳ ಆಟ ಸಾಮಾಗ್ರಿಗಳು, ಪಟಾಕಿ,ಎಲ್ ಇ ಡಿ ಬಲ್ಬ್, ಬ್ಯಾಟರಿ,ಪೆನ್ನು ಇತ್ಯಾದಿಗಳನ್ನು ಬಳುಸುತ್ತಾ ಇದ್ದಿರಬಹುದು. ನಾವೇ ಬಳಸುತ್ತಿರುವಾಗ ಮತ್ತೊಬ್ಬರಿಗೆ ಬಳಸಬೇಡಿ ಎಂದು ಹೇಗೆ ಹೇಳುವುದು ಎಂಬ ಆಲೋಚನೆ ಹಲವರಿಗೆ ಕಾಡುತ್ತಿರಲೂ ಬಹುದು. ಅದಕ್ಕೊಸ್ಕರನೇ ಹಿಂದೆ ನಾವು ತಪ್ಪು ಮಾಡಿರಬಹುದು ಮುಂದೆ ಅದೇ ತಪ್ಪನ್ನು ಮಾಡದಿರೋಣ, ಇತರರಿಗೆ ಮಾಡಲು ಬಿಡದಿರೋಣ ಎಂಬ ಸಂದೇಶ ಸಾರಬೇಕಿದೆ. ಚೀನಾ ಹಿಂದಿನಿಂದಲೂ ನಮ್ಮ ಬದ್ದ ಶತ್ರುದೇಶವಾದ ಪಾಕಿಸ್ಥಾನಕ್ಕೆ ಶಸ್ತ್ರಾಸ್ತ್ರ ಪೂರೈಕೆ ಇತ್ಯಾದಿಗಳ ಮೂಲಕ ಬೆಂಬಲ ಕೊಡುತ್ತಾ ಬಂದಿದೆ. ಈಗ ನೇರವಾಗಿ ಭಾರತಕ್ಕೆ ಗಡಿ ವಿಚಾರದಲ್ಲಿ ಹಾಗೂ ನಮ್ಮ ವೀರ ಯೋಧರ ಸ್ವಾಭಿಮಾನಕ್ಕೇ ಸವಾಲು ಹಾಕಿದೆ.ಒಂದು ಕಡೆ ನಮ್ಮ ಸೈನಿಕರು ಯುಧ್ದಕ್ಕೆ ತಯಾರಾದಂತೆ ಮತ್ತೊಂದು ಕಡೆ ನಾವೆಲ್ಲ ಭಾರತೀಯರು ಚೈನಾ ವಸ್ತುಗಳನ್ನು ಬಹಿಷ್ಕರಿಸುವ ಮೂಲಕ ಚೀನಾದೊಂದಿಗೆ ಆರ್ಥಿಕ ಹೋರಾಟಕ್ಕೆ ತಯಾರಾಗಬೇಕಿದೆ.
ಯುದ್ಧವಂತೂ ನಾವು ಯಾರೂ ಬಯಸುವುದಿಲ್ಲ ಆದರೆ ಆರ್ಥಿಕವಾಗಿ ಚೀನಾವನ್ನು ನೆಲಕಚ್ಚುವಂತೆ ಮಾಡಿ ಯುಧ್ಧ ಗೆಲ್ಲುವ ಪರ್ಯಾಯ ಮಾರ್ಗದ ಸಾಮರ್ಥ್ಯವಂತೂ ನಮ್ಮಲ್ಲಿದೆ. ಪ್ರತಿಯೊಬ್ಬರಲ್ಲಿ ಈ ಬಗ್ಗೆ ಜಾಗ್ರತಿ ಮೂಡಿದರೆ ಅಸಾಧ್ಯವಾದದ್ದು ಯಾವುದೂ ಇಲ್ಲ.ನಾನೂ ಒಬ್ಬ ಚೀನಾದೊಂದಿಗೆ ಹೋರಾಡುವ ಯೋಧ ಎಂದು ಪ್ರತಿಯೊಬ್ಬ ಭಾವಿಸಿದರೆ ಸೈನಿಕರ ಪ್ರಾಣವೂ ಉಳಿಯುತ್ತದೆ, ಯುದ್ಧವನ್ನೂ ಗೆಲ್ಲುತ್ತೇವೆ. ನಮ್ಮ ಸುತ್ತಮುತ್ತಲಿನ ಅಂಗಡಿಗಳಲ್ಲಿ ಚೀನಾವಸ್ತುಗಳನ್ನು ಮಾರಾಟಮಾಡದಂತೆ ಜಾಗ್ರತಿ ಮೂಡಿಸೋಣ,ಬಂಧುಗಳಲ್ಲಿ,ಮಿತ್ರರಲ್ಲಿ ಚೀನಾವಸ್ತುಗಳನ್ನು ಖರೀದಿಸದಂತೆ ವಿನಂತಿಸೋಣ.ಈ ಕ್ಷಣದಿಂದಲೇ ಸನ್ನಧ್ಧರಾಗಿ.ಜೈ ಹಿಂದ್.
2 Comments
ಲೇಖನ ಚೆನ್ನಾಗಿದೆ
ಲೇಖನ ಚೆನ್ನಾಗಿದೆ