• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ರಾಮಚಂದ್ರ ಗುಹಾ ಬ್ರಹ್ಮಶ್ರೀ ನಾರಾಯಣ ಗುರುಗಳ ಪಾದದ ಧೂಳಿನ ಕಣಕ್ಕೂ ಸಮನಲ್ಲ!!

Hanumantha Kamath Posted On August 26, 2021


  • Share On Facebook
  • Tweet It

ಕೆಲವು ಇತಿಹಾಸ ತಜ್ಞರು ತಾವು ಕೇಳಿದ, ಎಲ್ಲೋ ಓದಿದ, ಒಂದಿಷ್ಟು ನೋಡಿದ ವಿಷಯವನ್ನೇ ತಮ್ಮ ಲಾಜಿಕ್ ಆಧರಿಸಿ ಕೃತಿಗೆ ಇಳಿಸುತ್ತಾರೆ. ತಮ್ಮ ಮೂಗಿನ ನೇರಕ್ಕೆ ಬರೆದುಬಿಡುತ್ತಾರೆ. ಅದರಿಂದ ವಿವಾದವನ್ನು ತಾವೇ ಕ್ರಿಯೆಟ್ ಮಾಡಿಕೊಳ್ಳುತ್ತಾರೆ. ಅವರಿಗೆ ಅದರಿಂದ ಪುಕ್ಕಟೆ ಪ್ರಚಾರ ಸಿಗುತ್ತದೆ. ಅದರಲ್ಲಿಯೂ ಆ ವ್ಯಕ್ತಿ ಪುಸ್ತಕವನ್ನು ಬರೆದು ಅದಕ್ಕೆ ಮಾರ್ಕೆಟಿಂಗ್ ಮಾಡಬೇಕಿದ್ದರೆ ಅದರಲ್ಲಿ ಇರುವ ವಿವಾದಾತ್ಮಕ ವಿಷಯವನ್ನು ಹೊರಗೆ ಹಾಕಿದ್ದರೆ ಆ ಪುಸ್ತಕ ಬಿಡುಗಡೆಯಾಗಿದೆ ಎಂದು ನಾಲ್ಕು ಜನರಿಗೆ ಗೊತ್ತಾಗುತ್ತದೆ. ಅದರಿಂದ ಪುಸ್ತಕವನ್ನು ಖರೀದಿಸುವವರ ಸಂಖ್ಯೆ ಹೆಚ್ಚಾಗಲೂಬಹುದು. ಒಂದಿಷ್ಟು ಕೇಸುಗಳು ಬಿದ್ದರೆ ಆ ಲೇಖಕ ಇನ್ನು ಕೂಡ ಪ್ರಖ್ಯಾತನಾಗುತ್ತಾನೆ. ಅಂತಹ ಪ್ರಯತ್ನವನ್ನು ಕೆಲವರು ಮಾಡಿಬಿಡುತ್ತಾರೆ. ಅಂತವರ ಸಾಲಿಗೆ ಹಳೆ ಸೇರ್ಪಡೆ ರಾಮಚಂದ್ರ ಗುಹಾ.

ಗುಹಾ ಬೇಸಿಕಲಿ ಹಿಂದೂ ವಿರೋಧಿ ನಿಲುವುಗಳ ಲೇಖಕ. ಅವರು ತಮ್ಮ ಬದುಕಿನ ಉದ್ದಕ್ಕೂ ಎಡಪಂಥಿಯ ನಿಲುವನ್ನು ಅನುಸರಿಸಿ ಬದುಕಿದವರು. ನಕ್ಸಲ್ ಪರ ಧೋರಣೆಗಳನ್ನು ಬೆಂಬಲಿಸುತ್ತಾ ಬಂದವರು. ಭಾರತೀಯ ಜನತಾ ಪಾರ್ಟಿಯ ಸಿದ್ಧಾಂತವನ್ನು ವಿರೋಧಿಸುತ್ತಾ ಬಂದವರು. ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರದಲ್ಲಿ ಇದ್ದಷ್ಟು ಸಮಯ ಇವರಿಗೆ ರಾಜಾಶ್ರಯ ಸಿಕ್ಕಿದೆ. ಈಗ ಗಾಂಧಿ-ನೆಹರೂ ಕುಟುಂಬದ ಪಕ್ಷವೇ ಪೈಸೆ ಪೈಸೆಗೂ ಲೆಕ್ಕ ಹಾಕುವ ಪರಿಸ್ಥಿತಿ ಇರುವಾಗ ಗುಹಾನಂತವರಿಗೆ ಚಿಕನ್ ನಿಂದ ಗಂಜಿಗೆ ಬಂದಂತಹ ಪರಿಸ್ಥಿತಿ ಆಗಿದೆ. ಯುಪಿಎ ಅಧಿಕಾರಕ್ಕೆ ಬಂದ ಮೊದಲ ಅವಧಿಯಲ್ಲಿ ನಕಲಿ ಗಾಂಧಿಗಳನ್ನು ಖುಷಿ ಮಾಡಲು 2007 ರಲ್ಲಿ ಅವರೊಂದು ಪುಸ್ತಕ ಬರೆಯುತ್ತಾರೆ. ಅದರ ಹೆಸರೇ ಇಂಡಿಯಾ ಆಫ್ಟರ್ ಗಾಂಧಿ.

ಅದರಲ್ಲಿರುವ ವಿಷಯವೊಂದು ಈಗ ವಿವಾದಕ್ಕೆ ಸಿಲುಕಿದೆ. ಅದರಲ್ಲಿ ಅವರು ನಾರಾಯಣ ಗುರುಗಳ ಬಗ್ಗೆ ಬರೆದದ್ದು ವಿವಾದವಾಗಿದೆ. ನಾರಾಯಣ ಗುರುಗಳು ಈ ಯುಗದ ಸಂತರು. ಅಂತವರು ಶತಮಾನಕ್ಕೆ ಒಬ್ಬರಂತೆ ಈ ಭೂಮಿಗೆ ಬರುತ್ತಾರೆ. ಅವರಲ್ಲಿ ಭಗವಂತನ ಅಂಶವೇ ಮೈದಳೆದಿರುವುದರಿಂದ ಅವರನ್ನು ಬ್ರಹ್ಮಶ್ರೀ ಎಂದು ಕರೆಯಲಾಗುತ್ತದೆ. ಈ ಸಮಾಜದಲ್ಲಿ ಅಸ್ಪಶ್ಯತೆಯನ್ನು ಹೊಡೆದು ಹಾಕಿ ಮಾನವೀಯತೆಯನ್ನು ಪಸರಿಸಲು ಈ ಭುವಿಗೆ ಇಳಿದ ಮಹಾಸಂತ ಬ್ರಹ್ಮಶ್ರೀ ನಾರಾಯಣ ಗುರುಗಳು. ಕೇರಳದಲ್ಲಿ ಹಿಂದುಳಿದ ವರ್ಗದ ಸಮುದಾಯದ ಜನರಿಗೆ ದೇವಸ್ಥಾನದ ಒಳಗೆ ಪ್ರವೇಶ ನಿಷೇಧ ಇದ್ದಾಗ ಆ ಬಗ್ಗೆ ಸಾಮಾಜಿಕ ಬದಲಾವಣೆಯನ್ನು ತಂದ ಹರಿಕಾರ ನಾರಾಯಣ ಗುರುಗಳು. ಕೇರಳ, ಕರ್ನಾಟಕದಲ್ಲಿ ದೇವಸ್ಥಾನಗಳನ್ನು ನಿರ್ಮಾಣ ಮಾಡಿ ಜನರಲ್ಲಿ ಸಾಮಾಜಿಕ ಕ್ರಾಂತಿ ತಂದವರು. ಮಂಗಳೂರಿನ ಪ್ರಖ್ಯಾತ ಗೋಕರ್ಣನಾಥ ದೇವಸ್ಥಾನವನ್ನು ನಿರ್ಮಿಸಿದವರು ಇದೇ ಬ್ರಹ್ಮಶ್ರೀ ನಾರಾಯಣ ಗುರುಗಳು. ಮಹಾರಾಷ್ಟ್ರ, ಕರ್ನಾಟಕ ಮತ್ತು ಕೇರಳದಲ್ಲಿ ನಾರಾಯಣ ಗುರುಗಳ ಬಗ್ಗೆ ಅಪಾರ ವಿಶ್ವಾಸ ಇರುವ ಲಕ್ಷಾಂತರ ಜನರಿದ್ದಾರೆ. ಬಿಲ್ಲವರಲ್ಲಿ 99% ಜನರು ನಾರಾಯಣ ಗುರುಗಳನ್ನು ದೇವರೆಂದೇ ಭಕ್ತಿಯಿಂದ ಆರಾಧಿಸುತ್ತಾರೆ. ಉಳಿದ ಒಂದು ಶೇಕಡಾ ಜನ ಮಾತ್ರ ರಾಜಕೀಯ ಲಾಭಕ್ಕಾಗಿ ಅವರ ಹೆಸರನ್ನು ಬಳಸುತ್ತಾರೆ. ಹೀಗಿರುವಾಗ ಪ್ರಪಂಚದ ಯಾವುದೋ ಮೂಲೆಯಲ್ಲಿ ಕುಳಿತಿರುವ ಗುಹಾನಂತಹ ಜನರು ಕೇರಳದ ಯಾವುದೋ ಕಮ್ಯೂನಿಸ್ಟನ ಮಾತು ಕೇಳಿ ಏನೇನೋ ಬರೆದರೆ ಆಗುತ್ತಾ? ಆತ ಏನು ಬರೆದಿದ್ದಾನೆ ಎಂದು ಹೇಳುವುದೇ ಅಸಹ್ಯಕರ. ನಾರಾಯಣ ಗುರುಗಳನ್ನು ನಂಬಿದವರು ಆ ಬಗ್ಗೆ ಯೋಚನೆ ಕೂಡ ಮಾಡಲು ಹೋಗುವುದಿಲ್ಲ. ಏನೇನೋ ಬರೆದಿರುವ ಗುಹಾ ವಿರುದ್ಧ ಬಿಲ್ಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗುಹಾನಂತಹವರು ನಾರಾಯಣ ಗುರುಗಳ ಬಗ್ಗೆ ಎಷ್ಟು ಹಗುರವಾಗಿ ಬರೆದರೂ ಬ್ರಹ್ಮಶ್ರೀಗಳ ಪಾದ ಧೂಳಿನ ಒಂದು ಕಣಕ್ಕೂ ಅಂತವರು ಸಮನಲ್ಲ. ನಾರಾಯಣ ಗುರುಗಳನ್ನು ಎದುರಿಗೆ ಇಟ್ಟು ಏನಾದರೂ ಮೈಲೇಜ್ ತೆಗೆದುಕೊಳ್ಳಬಹುದೆಂದು ಯಾರಾದರೂ ಪ್ರಯತ್ನಪಟ್ಟರೆ ಅವರು ನಾಶವಾಗಿ ಹೋಗುತ್ತಾರೆ.

ಮಂಗಳೂರಿನಲ್ಲಿ ನಾರಾಯಣ ಗುರುಗಳ ಹೆಸರಿನಲ್ಲಿ ರಾಜಕೀಯ ನಡೆದು ವರ್ಷಗಳೇ ಕಳೆದುಹೋಗಿವೆ. ಲೇಡಿಹಿಲ್ ಎನ್ನುವ ಏರಿಯಾದಲ್ಲಿ ಇರುವ ಒಂದು ವೃತ್ತಕ್ಕೆ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಿಡಲು ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಭಾರತೀಯ ಜನತಾ ಪಾರ್ಟಿ ನೇತೃತ್ವದ ಆಡಳಿತ ಪ್ರಯತ್ನ ಮಾಡುವಾಗ ಕಾಂಗ್ರೆಸ್ ಹೊಸ ರಾಜಕೀಯವನ್ನು ಶುರು ಮಾಡಿತ್ತು. ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣಕ್ಕೆ ನಾರಾಯಣ ಗುರುಗಳ ಹೆಸರಿಡಬೇಕು ಎಂದು ಹೊಸ ವರಸೆ ಶುರು ಮಾಡಿತು. ವೃತ್ತಕ್ಕೆ ನಾರಾಯಣ ಗುರುಗಳ ಹೆಸರಿಡುವುದಕ್ಕೆ ಕಾಂಗ್ರೆಸ್ ನಾಯಕರು ಪಾಲಿಕೆಯಲ್ಲಿ ಆಕ್ಷೇಪ ಎತ್ತಿರುವ ಘಟನೆ ಕೂಡ ನಡೆಯಿತು. ಒಟ್ಟಿನಲ್ಲಿ ವೃತ್ತಕ್ಕೆ ನಾರಾಯಣ ಗುರುಗಳ ಹೆಸರು ಇಡಲು ಬಿಟ್ಟರೆ ಆ ಕ್ರೆಡಿಟ್ ಬಿಜೆಪಿಗೆ ಹೋಗುತ್ತದೆ ಎಂದು ಹೆದರಿದ ಕಾಂಗ್ರೆಸ್ಸಿನ ಮುಖಂಡರು ತಮ್ಮ ದಾಳವನ್ನು ಉರುಳಿಸಿದರು. ಯಾವುದಾದರೂ ಸರಕಾರಿ ಕಟ್ಟಡ ಅಥವಾ ನಿರ್ಮಾಣಕ್ಕೆ ನಾಮಕರಣ ಮಾಡುವುದಾದರೆ ರಾಜ್ಯ ಸರಕಾರದ ಅನುಮತಿ ಬೇಕಾಗುತ್ತದೆ. ಇನ್ನು ವಿಮಾನ ನಿಲ್ದಾಣ, ರೈಲು ನಿಲ್ದಾಣಗಳು ಕೇಂದ್ರ ಸರಕಾರದ ಅಡಿಯಲ್ಲಿ ಬರುವುದರಿಂದ ಕೇಂದ್ರದ ಅನುಮತಿ ಅಗತ್ಯ. ಇನ್ನು ಹೆಸರಿಡುವ ವಿಷಯ ಅಷ್ಟು ಸುಲಭ ಪ್ರಕ್ರಿಯೆ ಇಲ್ಲ. ಇನ್ನು ಯಾವುದೇ ಹೆಸರಿಡುವ ಮೊದಲು ಅಲ್ಲಿ ಆಕ್ಷೇಪ ಇದೆಯಾ ಎಂದು ಸರಕಾರ ನೋಡುತ್ತದೆ. ಇಲ್ಲಿ ಆಕ್ಷೇಪ ಇತ್ತು. ವೃತ್ತಕ್ಕೆ ಹೆಸರು ಬೇಡಾ ಎನ್ನುವುದೇ ಆಕ್ಷೇಪ. ಕಾಂಗ್ರೆಸ್ಸಿಗೆ ಏನಾದರೂ ಮಾಡಿ ಕ್ರೆಡಿಟ್ ಪಡೆಯುವ, ರಾಜಕೀಯ ಮಾಡಿ ಲಾಭ ಗಳಿಸುವುದೇ ಗುರಿ ಇದ್ದ ಕಾರಣ ಈ ಪಕ್ಷಗಳ ಕ್ರೆಡಿಟ್ ವಾರ್ ಮೂಲಕ ನಾರಾಯಣ ಗುರುಗಳ ಹೆಸರು ಪ್ಯಾನಲ್ ಚರ್ಚೆಗಳಿಗೆ ಕಾರಣವಾಗಿತ್ತು. ಗುಹಾನಂತವರು ಬರೆದದ್ದನ್ನು ಓದುವುದೇ ತಪ್ಪು. ಅವರ ಪುಸ್ತಕಕ್ಕೆ ಪುಕ್ಕಟೆ ಪ್ರಚಾರ ಸಿಕ್ಕಿದಂತೆ ಆಗಿದೆ.

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search