ಈ ರಸ್ತೆ ಯಾವುದೆಂದು ತಟ್ಟನೆ ಹೇಳಿ….
Posted On August 28, 2021
ನಿನ್ನೆ ಮಂಗಳೂರಿನ ವಾಣಿಜ್ಯ ವ್ಯವಹಾರದ ಹೆಬ್ಬಾಗಿಲಾಗಿರುವ ಬಂದರಿನ ಮುಖ್ಯ ರಸ್ತೆ ಬೀಬಿ ಅಲಾಬಿ ರಸ್ತೆ. ಮಂಗಳೂರು ಸ್ವಚ್ಚತೆಯ ದೃಷ್ಟಿಯಿಂದ ನಂಬರ್ 1 ಆಗಬೇಕಾದರೆ ಇರುವಂತಹ ದೊಡ್ಡ ಅಡ್ಡಿ ಈ ರಸ್ತೆ. ಇಂತಹ ಯಾವುದಾದರೂ ಒಂದು ಪ್ರದೇಶವನ್ನು ಕಡೆಗಣಿಸಿದರೂ ಆಗುವ ಅಪಾಯದ ಬಗ್ಗೆ ಹೇಳುವ ಉದ್ದೇಶವಿದೆಯೇ ವಿನ: ನಾನು ಕಾಂಗ್ರೆಸ್ಸಿನ ಜಾತ್ಯಾತೀತ ವ್ಯಾಪಾರಸ್ಥರಿಗೆ ವಿರೋಧವಲ್ಲ. ಅಷ್ಟಕ್ಕೂ ಬಂದರಿನಲ್ಲಿ ಎಲ್ಲಾ ಧರ್ಮದ ಜನರು ಕೂಡ ವ್ಯಾಪಾರ ಮಾಡುತ್ತಿರುತ್ತಾರೆ.
ನೀವು ಬಟ್ಟೆ ಖರೀದಿಸಲು ಅಂಗಡಿಗೆ ಹೋಗುತ್ತೀರಿ. ಅಲ್ಲಿ ಬಟ್ಟೆಯ ಬೇರೆ ಬೇರೆ ಪ್ರಾಕಾರಗಳನ್ನು ತೋರಿಸುತ್ತಾರೆ. ನಿಮಗೆ ಶರ್ಟ ಹೊಲೆಯಲು ಬಟ್ಟೆ ಬೇಕಾಗಿರುತ್ತದೆ. ಅಂಗಡಿಯವನು ತೋರಿಸುವಾಗ ಇದು ಬಟ್ಟೆ ತುಂಬಾ ಒಳ್ಳೆಯದಿದೆ. ಆದರೆ ಮಧ್ಯದಲ್ಲಿ ಒಂದು ಕಡೆ ಸ್ವಲ್ಪ ಹರಿದು, ಕಲರ್ ಪೆಡ್ ಆಗಿದೆ, ಬೇರೆ ಎಲ್ಲಾ ಸರಿ ಇದೆ. ತೆಗೆದುಕೊಳ್ಳಿ ಎಂದು ಹೇಳಿದರೆ ನೀವು ಖರೀದಿಸುತ್ತೀರಾ. ಹೋಗ್ರಿ ನಿಮಗೆ ತಲೆ ಸರಿ ಇದೆಯಾ, ನಾನು ಸಂಬಂಧಿಕರ ಮದುವೆಗೆ ಹೊಲಿಸಲು ಒಳ್ಳೆಯ ಕ್ವಾಲಿಟಿ ಬಟ್ಟೆ ಖರೀದಿಸಲು ಬಂದರೆ ನೀವು ಸ್ವಲ್ಪ ಬಣ್ಣ ಮಾಸಿದ, ಒಂದು ಚೂರು ಹರಿದ ಬಟ್ಟೆ ತೋರಿಸುತ್ತೀರಾ ಎಂದು ಅಂಗಡಿಯವನಿಗೆ ಜೋರು ಮಾಡಲ್ವಾ? ಇದು ಕೂಡ ಹಾಗೆಯೇ. ಹಾಗಂತ ಮಂಗಳೂರು ಬೀಬಿ ಅಲಾಬಿ ರಸ್ತೆ ಬಿಟ್ಟು ಬೇರೆ ಎಲ್ಲಾ ಕಡೆ ಸೂಪರ್ ಆಗಿದೆ ಎಂದಲ್ಲಾ. ಹುಡುಕಿದರೆ ಒಂದೊಂದು wardನಲ್ಲಿ ಒಂದೆರಡಾದರೂ ದೃಷ್ಟಿ ಬೀಳದ ಹಾಗೆ ವ್ಯವಸ್ಥೆ ನಮ್ಮ ಪಾಲಿಕೆ ಮಾಡಿ ಇಟ್ಟಿದೆ. ಎಲ್ಲಾ ಚೆನ್ನಾಗಿದ್ದರೆ ನೋಡಿದವರ ದೃಷ್ಟಿ ಬಿದ್ದು ಹಾಳಾಗಿ ಹೋದರೆ, ಆ ಕಾಳಜಿ ಪಾಲಿಕೆಗೆ ಇದೆ. ಆದರೂ ಇಡೀ ರಾಷ್ಟ್ರದಲ್ಲಿ ಮಂಗಳೂರಿಗೆ ಸ್ವಚ್ಚತೆಯಲ್ಲಿ ನಮಗೆ 65 ನೇ ಸ್ಥಾನ ಸಿಕ್ಕಿರುವಾಗ ನೋಡಲು ಬಂದಿರುವವರ ದೃಷ್ಟಿಯಲ್ಲಿ ನಾವು ಪರವಾಗಿಲ್ಲ ಎಂದು ತಾನೇ? ಮೊದಲ ಸಲ ಮೂರನೇ ಸ್ಥಾನ ಸಿಕ್ಕಿದ್ದರೆ ನಂತರ 65 ನೇ ಸ್ಥಾನ ಸಿಕ್ಕಿದೆ ಎಂದು ಮೈಮರೆತರೆ ಮುಂದಿನ ಬಾರಿ ನೂರರ ಮೇಲರ ಸ್ಥಾನಕ್ಕೆ ಜಾರಿದರೆ ಎನ್ನುವ ಹೆದರಿಕೆ ಇರುವುದು ಒಳ್ಳೆಯದು. ಆ ನಿಟ್ಟಿನಲ್ಲಿನಲ್ಲಾದರೂ ಬೀಬಿ ಅಲಾಬಿ ರಸ್ತೆಯನ್ನು ಅಭಿವೃದ್ಧಿ ಮಾಡುವ ಪ್ರಕ್ರಿಯೆ ಪ್ರಾರಂಭಿಸಲೇಬೇಕು.
ಹೋಗಲಿ, ಆ ರಸ್ತೆಯನ್ನು ಕ್ಲೀನ್ ಮಾಡುವ ಮನಸ್ಸು ಇವರಿಗಿಲ್ಲ ಎಂದೇ ಇಟ್ಕೊಳ್ಳಿ. ಕನಿಷ್ಟ ಊರಿನ ಜನರ ಆರೋಗ್ಯದ ಕಾಳಜಿಯನ್ನಾದರೂ ಇವರು ನೋಡಬೇಕಲ್ಲ. ಬೀಬಿ ಅಲಾಬಿ ರಸ್ತೆಗೂ, ಆರೋಗ್ಯಕ್ಕೂ ಏನು ಸಂಬಂಧ ಎಂದು ನೀವು ಕೇಳಬಹುದು. ಇದೆ, ಸರಿಯಾಗಿ ಬೇಕಾದರೆ ಇವತ್ತಿನ ಫೋಟೊಗಳನ್ನು ನೋಡಿ. ತಮ್ಮ ತಮ್ಮ ಅಂಗಡಿಗಳ ಮೇಲೆ ಅಲ್ಲಿನ ವ್ಯಾಪಾರಿಗಳು ಅನೇಕ ಟಯರುಗಳನ್ನು ಒಟ್ಟು ಹಾಕುತ್ತಾರೆ. ಜೋರಾಗಿ ಒಂದು ಮಳೆ ಬಂದರೆ ಆ ಟಯರುಗಳಲ್ಲಿ ನೀರು ಹಾಗೆ ನಿಂತಿರುತ್ತದೆ. ಆ ನೀರಿನಲ್ಲಿ ಸೊಳ್ಳೆ ಉತ್ಪಾದನೆಯಾಗುತ್ತದೆ. ಡೆಂಗ್ಯೂ ಕ್ರಿಮಿಗಳು ಗೂಡುಕಟ್ಟಿಕೊಳ್ಳುತ್ತದೆ. ನಿಧಾನವಾಗಿ ಆ ಟಯರುಗಳು ರೋಗಗಳನ್ನು ಉತ್ಪಾದಿಸುವ ಕೇಂದ್ರಗಳಾಗಿ ಬೆಳೆಯುತ್ತವೆ. ಅದೇ ಟಯರುಗಳನ್ನು ಶೇಖರಿಸಿಟ್ಟ ಸ್ಥಳದ ಕೆಳಗೆ ಇವರು ಹಳೆ ವಾಹನಗಳನ್ನು ಒಡೆಯುತ್ತಾರೆ. ಅದರ ನೈಜ ಫೋಟೋಗಳನ್ನು ನೀವು ಇಲ್ಲಿ ನೋಡಬಹುದು. ಇದು ನೇರವಾಗಿ ಅಲ್ಲಿಯೇ ನಿಂತು ತೆಗೆದ ಫೋಟೊಗಳು. ಯಾವುದೇ ಕಾಳಜಿ ಇಲ್ಲದೆ ಅಲ್ಲಿ ಆರಾಮವಾಗಿ ಕೆಲಸದವರು ವಾಹನಗಳನ್ನು ಒಡೆಯುತ್ತಿರುವ ದೃಶ್ಯಗಳು. ಅಲ್ಲಿ ಗಾಡಿ ಒಡೆದು ಇವರು ಸೇರಿಸಿಟ್ಟ ಬಾನೆಟ್, ರೆಕ್ಸಿನ್ ಸೀಟ್, ಸ್ಪೊಂಜ್ ನಲ್ಲಿ ನೀರು ನಿಂತಿರುತ್ತದೆ. Slabನಲ್ಲಿ ಗುಡ್ಡೆ ಹಾಕಿರುವ ಟಯರುಗಳು ಮಲೇರಿಯಾ, ಡೆಂಗ್ಯೂ ತಂದು ಊರಿನಲ್ಲೆಲ್ಲಾ ಹಂಚಿದ ನಂತರ ಪಾಲಿಕೆ ಪ್ರೆಸ್ ಮೀಟ್ ಮಾಡಿ ನಾವು ಮಲೇರಿಯಾ, ಡೆಂಗ್ಯೂ ತಡೆಗೆ ಪೂರ್ಣ ಪ್ರಯತ್ನ ಮಾಡಿದ್ದೇವೆ ಎನ್ನುತ್ತಾರೆ. ನಗರದಲ್ಲಿ ಡಂಗ್ಯೂ ಹಾವಳಿ ಕಡಿಮೆ ಯಾಗಿದೆ ಎಂದು ಹೇಳಿಕೆ ನೀಡುತ್ತಾರೆ ಈ ರಸ್ತೆಯ ನೆಲವನ್ನು ಸರಿಯಾಗಿ ನೋಡಿ. ಅಲ್ಲಿ ನಿಂತಿರುವ ಗಲೀಜು ನೋಡಿ, ಇದನ್ನು ನೋಡಿದರೆ ಯಾರಾದರೂ ಇದು ಮಂಗಳೂರಿನ ಹೃದಯಭಾಗ ಎಂದು ಹೇಳಲು ಸಾಧ್ಯವೇ? ಯಾವುದೋ ಸ್ಲಂ ಏರಿಯಾವನ್ನು ನೋಡಿದ ಹಾಗೆ ಅನಿಸುವುದಿಲ್ಲವೇ? ಬಿಹಾರ ಅಥವಾ ಉತ್ತರ ಪ್ರದೇಶದ ಯಾವುದಾದರೂ ಅತ್ಯಂತ ಹಿಂದುಳಿದ ಪ್ರದೇಶದ ಅತ್ಯಂತ ಪುರಾತನ ರಸ್ತೆಯೆಂದು ಅನಿಸುವುದಿಲ್ಲವಾ? ಬರೀ ಫೋಟೊ ತೋರಿಸಿ ಈ ಪ್ರದೇಶ ಯಾವುದು ಎಂದು ಮಂಗಳೂರಿನವರಿಗೆನೆ ತೋರಿಸಿದರೆ ಅವರು ಭಾರತದ ಒಳಗಿನ ಯಾವುದಾದರೂ ಊರಿನ ಹೆಸರು ಹೇಳುವುದು ಕೂಡ ಡೌಟು. ಬಹುಶ: ಸ್ವಲ್ಪ ಬುದ್ಧಿವಂತರಾಗಿದ್ದರೆ ಅಲ್ಲಿನ ವಾಹನಗಳ ನಂಬರ್ ಪ್ಲೇಟ್ ನೋಡಿ ಕೇರಳದ ಒಂದು ಊರಿನ ಹೆಸರನ್ನು ಹೇಳಿದರೂ ಹೇಳಬಹುದು. ಅಷ್ಟೇ ಯಾಕೆ, ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರಿಗೆ ಅಥವಾ ಮೇಯರ್ ಅವರಿಗೂ ಸಡನ್ ತೋರಿಸಿ ಯಾವ ಊರು ಎಂದು ಹತ್ತು ಸೆಕೆಂಡಿನೊಳಗೆ ಹೇಳಿ ಎಂದು ಹೇಳಿದರೆ ಅವರು ಅರ್ಧ ಗಂಟೆಯಾದರೂ ಹೇಳಲಿಕ್ಕಿಲ್ಲ. ಇನ್ನು ಈ ರಸ್ತೆಯಲ್ಲಿ ಸರಿಯಾಗಿ ದ್ವಿಚಕ್ರ ವಾಹನಗಳು ಆರಾಮವಾಗಿ ಹೋಗಲು ಸಾಧ್ಯವಾಗದಷ್ಟು ಪರಿಸ್ಥಿತಿ ಇದೆ. ಇದನ್ನು ನಾವು ಮುಂದಿಟ್ಟು ಮಂಗಳೂರಿಗೆ ನಂಬರ್ 1 ನೇ ಸ್ಥಾನ ಸ್ವಚ್ಚತೆಯಲ್ಲಿ ಕೊಡಿ ಎಂದು ಕೇಳುವುದಾ? ಸ್ಮಾರ್ಟ ಸಿಟಿ ಮಾಡುವುದೇ ಆಗಿದ್ದಲ್ಲಿ ಈ ಬಂದರ್ ಇರುವಂತಹ ಪ್ರದೇಶವನ್ನು ಯಾಕೆ ಆಯ್ದುಕೊಳ್ಳಬಾರದು.ಗುಜರಿ ವ್ಯಾಪರಿಗಳಿಗೆ ನೀವು ರಸ್ತೆಯಲ್ಲಿ ವಾಹನಗಳನ್ನು ಒಡೆಯುವುದು ಬೇಡ ನಿಮಗೆ ಜುಜುಬಿ ಬಾಡಿಗೆಗೆ ನಾವು ಸ್ಥಳನೀಡುತ್ತೇವೆ ಹೇಳಿ ಪಾಲಿಕೆ ಒಂದು ಲಕ್ಷ ಚಿಲ್ಲರೆ ವಾರ್ಷಿಕ ಬಾಡಿಗೆಯನ್ನು ಪಿಕ್ಸ್ ಮಾಡಿ 32 ಸೆಂಟ್ಸ್ ಜಾಗವನ್ನು ಯಾವುದೇ ಕರಾರು ಮಾಡದೆ ಗುಜುರಿ ವ್ಯಾಪಾರಿ ಸಂಸ್ಥೆಗೆ ನೀಡಿತ್ತು. ಅದರಲ್ಲಿದ್ದ ಒಂದು ಅಂಶ ಬಹಳ ಮುಖ್ಯ ವಾದುದು ಈ ಜಾಗ ನೀಡಿದ ನಂತರ ರಸ್ತೆಯಲ್ಲಿ ಹಳೇ ವಾಹನಗಳನ್ನು ಒಡಯಬಾರದು ಎಲ್ಲ ವಾಹನಗಳನ್ನು ನಾವು ನೀಡಿದ ಜಾಗದಲ್ಲೇ ಒಡೆಯ ಬೇಕು,ರಸ್ತೆಯಲ್ಲಿ ಗುಜುರಿ ಹಾಕಬಾರದು. ಈಗೆ ಗುಜುರಿಯವರು ಮಾಡಲೇ ಇಲ್ಲ ಜಮೀನು ನೀಡಿದದಂದಿನಿಂದ ಇಂದಿನ ವರೆಗೆ ಹಳೇ ವಾಹನ ರಸ್ತಯಲೇ ಒಡಿಯುತ್ತಿದ್ದಾರೆ,ಗುಜುರಿ ರಸ್ತೆಯಲ್ಲೇ ಜೋಡಿಸಿಟ್ಟಿದ್ದಾರೆ.ಬೀದಿ ಬದಿ ವ್ಯಾಪಾರ ಮಾಡುವ ಬಡಪಾಯಿಗಳನ್ನು ಎಬ್ಬಿಸುವ ಪಾಲಿಕೆ ರಸ್ತೆಯಲ್ಲಿ ಜೋಡಿಸಿರುವ ಗುಜುರಿ ತೆರವು ಗೊಳಸಲು ಯಾಕೆ ಮುಂದಾಗುವು.ದಿಲ್ಲ
- Advertisement -
Trending Now
ದೇಶದ್ರೋಹಿ ಹೇಳಿಕೆ ವಿರುದ್ಧ ಬಿಜೆಪಿ ಪ್ರತಿಭಟನೆ.
August 30, 2024
Leave A Reply