ಮಂಗಳೂರಿನಲ್ಲಿ “ವಿಕೇಂಡ್ ಕರ್ಫ್ಯೂ” ಹೆಸರಿನ ನಾಟಕ ಭರ್ಜರಿ ಪ್ರದರ್ಶನ!!
Posted On September 4, 2021
ಮಂಗಳೂರು ನಗರ ದಕ್ಷಿಣ ಶಾಸಕರಾದ ವೇದವ್ಯಾಸ ಕಾಮತ್ ಅವರು ಶುಕ್ರವಾರ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರೊಂದಿಗೆ ಮಾತನಾಡಿ ಮಂಗಳೂರು ನಗರದಲ್ಲಿ ವಾರಾಂತ್ಯದ ಕರ್ಫ್ಯೂ ತೆರವುಗೊಳಿಸುವಂತೆ ವಿಶೇಷವಾಗಿ ಮನವಿ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಪರಿಶೀಲಿಸುವುದಾಗಿ ಬಸ್ಸು ಬೊಮ್ಮಾಯಿಯವರು ಭರವಸೆ ನೀಡಿದ್ದಾರೆ. ಇನ್ನೊಂದು ಕಡೆ ದಕ್ಷಿಣ ಕನ್ನಡ ಜಿಲ್ಲೆಯ ಜವಳಿ, ಫ್ಯಾನ್ಸಿ, ಚಪ್ಪಲ್, ಬಂಗಾರದ ಅಂಗಡಿಯವರು ವಿಕೇಂಡ್ ಕರ್ಫ್ಯೂವನ್ನು ಒಪ್ಪಲು ಆಗುವುದಿಲ್ಲ. ಅನಿವಾರ್ಯವಾಗಿ ಅಂಗಡಿಯನ್ನು ತೆರೆಯಲೇಬೇಕಾಗಿದೆ ಎಂದು ಮೀಟಿಂಗ್ ಮಾಡಿದ್ದಾರೆ. ಈಗ ಜಿಲ್ಲಾಡಳಿತ ಯಾವ ರೀತಿಯ ನಿರ್ಧಾರ ತೆಗೆದುಕೊಳ್ಳುತ್ತದೆ ಎನ್ನುವುದನ್ನು ಕಾದು ನೋಡಬೇಕಾಗಿದೆ.
ಯಾಕೆಂದರೆ ಈ ವೀಕೆಂಡ್ ಕರ್ಫ್ಯೂ ಬಹಳ ವಿಚಿತ್ರವಾಗಿದೆ. ಶುಕ್ರವಾರ ರಾತ್ರಿ 9 ಗಂಟೆಯಿಂದ ಕರ್ಫ್ಯೂ ಜಾರಿ ಎನ್ನಲಾಗುತ್ತದೆ. ಮರುದಿನ ಶನಿವಾರ ಬೆಳಿಗ್ಗೆ ಮಂಗಳೂರು ಯಥಾಪ್ರಕಾರವಾಗಿ ಇರುತ್ತದೆ. ವಾಹನಗಳು ಓಡಾಡುತ್ತಿರುತ್ತದೆ. ಅಗತ್ಯ ವಸ್ತುಗಳ ಖರೀದಿಗೆ ಜನ ಹೊರಗೆ ಬಂದಿರುತ್ತಾರೆ. ಬಟ್ಟೆ, ಫ್ಯಾನ್ಸಿ, ಚಪ್ಪಲ್, ಬಂಗಾರ, ಪೆಂಟ್ ಹೀಗೆ ಕೆಲವು ಉದ್ಯಮಗಳು ಬಿಟ್ಟು ಎಲ್ಲವೂ ಒಪನ್ ಆಗಿರುತ್ತದೆ. ಅದಕ್ಕೆಲ್ಲ ಅಗತ್ಯ ವಸ್ತುಗಳ ಖರೀದಿ ಎಂದು ಹೆಸರು ನೀಡಲಾಗಿದೆ. ಮಧ್ಯಾಹ್ನ 2 ಗಂಟೆಗೆ ಅಗತ್ಯ ವಸ್ತುಗಳ ಖರೀದಿ ಮಾಡಿ ಮನೆಯೊಳಗೆ ಸೇರಬೇಕೆಂದು ಫಮರ್ಾನು ಇದ್ದರೂ ಯಾರೂ ಕೇಳುವುದಿಲ್ಲ. ಎಲ್ಲರೂ ಹೊರಗೆ ಇರುತ್ತಾರೆ. ಬಸ್ಸುಗಳು ಓಡಾಡುತ್ತಿರುತ್ತವೆ. ರಿಕ್ಷಾಗಳು, ಟ್ಯಾಕ್ಸಿ ಕಾರುಗಳು ಓಡಾಡುತ್ತಿರುತ್ತವೆ. ಸಂಜೆ ಜನ ವಾಕಿಂಗ್ ಹೋಗುತ್ತಾ ಇರುತ್ತಾರೆ. ಎಲ್ಲವೂ ಸಾಮಾನ್ಯ ದಿನದಂತೆ ಇರುತ್ತದೆ. ನಂತರ ಬರುವುದು ಆದಿತ್ಯವಾರ. ಮತ್ತೆ ಅದೇ ಮುಂದುವರೆಯುತ್ತದೆ. ಶನಿವಾರ ಜಿಲ್ಲಾಡಳಿತದ ಮಾತು ಕೇಳಿ ಬಂದ್ ಮಾಡಿದವರು ಅಂಗಡಿ ಬಂದ್ ಮಾಡಿಯೇ ಇರುತ್ತಾರೆ. ಯಾರು ಬಂದ್ ಮಾಡಿಲ್ಲವೋ ಅವರು ಆದಿತ್ಯವಾರವೂ ತೆರೆದೇ ಇರುತ್ತಾರೆ.
ಮತ್ತೆ ಸೋಮವಾರ ಆರಂಭವಾಗುತ್ತದೆ. ಶನಿವಾರ, ಆದಿತ್ಯವಾರ ಬಂದ್ ಮಾಡಿದವರು ತೆರೆಯುತ್ತಾರೆ. 2 ದಿನ ತೆರೆದೇ ಇದ್ದವರಿಗೆ ಸೋಮವಾರದ ದಿನ ಏನೂ ವಿಶೇಷ ಕಾಣಿಸುವುದಿಲ್ಲ. ಈಗ ಈ ವರ್ತಕರು ನಾವು ಶನಿವಾರ, ಭಾನುವಾರ ಅಂಗಡಿ ತೆರೆದೇ ಇಡುತ್ತೇವೆ ಎಂದು ನಿರ್ಧರಿಸಿರುವುದರಿಂದ ಮತ್ತೆ ಪೊಲೀಸರಿಗೂ, ಇವರಿಗೂ ವಾಗ್ವಾದ ಶುರುವಾಗಬಹುದು ಎನ್ನುವ ಆತಂಕ ಇದೆ. ಇನ್ನು ನೀವು ಸರಿಯಾಗಿ ಗಮನಿಸಿದರೆ ಪೊಲೀಸರು ಕೂಡ ಹಿಂದಿನಂತೆ ಅಲ್ಲಲ್ಲಿ ಚೆಕ್ ಪೋಸ್ಟ್ ಹಾಕಿ ನಿಲ್ಲಿಸುವುದು ಕಂಡುಬರುತ್ತಿಲ್ಲ. ಹಿಂದೆ ಸುರತ್ಕಲ್ ಕಡೆಯಿಂದ ಮಂಗಳೂರು ನಗರದೊಳಗೆ ಬರುವ ವಾಹನಗಳನ್ನು ರಾತ್ರಿಯಾಗುತ್ತಿದ್ದಂತೆ ಕೊಟ್ಟಾರಚೌಕಿ, ಲೇಡಿಹೀಲ್, ಮಣ್ಣಗುಡ್ಡೆ ಬಸ್ ಸ್ಟಾಪ್ ನಲ್ಲಿ ನಿಲ್ಲಿಸಿ ಪರೀಕ್ಷಿಸುವ ವ್ಯವಸ್ಥೆ ಮತ್ತು ಅದಕ್ಕೆ ಪೊಲೀಸರ ಹದ್ದುಬಸ್ತಿನ ನೋಟ ಇತ್ತು. ಈಗ ಏನೂ ಇಲ್ಲ. ಯಾಕೆಂದರೆ ಪೊಲೀಸರಿಗೂ ಈ ಜನಸಾಮಾನ್ಯರ, ವರ್ತಕರ, ಶ್ರಮಿಕರ ಕಷ್ಟ ಗೊತ್ತಾಗುತ್ತಿದೆ. ಶ್ರೀಮಂತರು ಎಲ್ಲಿಂದಲಾದರೂ ಶಿಫಾರಸ್ಸು ಅಥವಾ ಸುಳ್ಳು ಹೇಳಿ ತಪ್ಪಿಸಿಕೊಂಡು ಬಿಡುತ್ತಾರೆ. ಮಧ್ಯಮ ವರ್ಗದವರು ಕಷ್ಟ ಅನುಭವಿಸುತ್ತಾರೆ. ಆದ್ದರಿಂದ ಕೊರೊನಾವನ್ನು ಜನರ ಮರ್ಜಿಗೆ ಬಿಟ್ಟು ಪೊಲೀಸ್ ಇಲಾಖೆ ಕೂಡ ಹಾಯಾಗಿದೆ.
ಇನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸಂಖ್ಯೆ ತ್ರಿಬಲ್ ಡಿಜಿಟ್ ನಿಂದ ಕೆಳಗೆ ಇಳಿಯುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ಯಾಕೆಂದರೆ ಬಸ್ಸುಗಳಲ್ಲಿ ಜನರು ಯಥಾಪ್ರಕಾರ ಒಟ್ಟೊಟ್ಟಿಗೆ ಕುಳಿತುಕೊಂಡು ಪ್ರಯಾಣಿಸುತ್ತಾರೆ. ಮಾಸ್ಕ್ ಎಲ್ಲರ ಗದ್ದದ ಮೇಲಿದೆ. ಸ್ಯಾನಿಟೈಜ್ ಮಾಡಬೇಕು ಎಂದು ಹೇಳಿದ ಜಿಲ್ಲಾಡಳಿತದ ಆದೇಶವನ್ನು ಯಾವ ಬಸ್ಸಿನವರು ಪಾಲಿಸುತ್ತಿದ್ದಾರೆ ಎನ್ನುವುದು ದೇವರಿಗೆ ಮಾತ್ರ ಗೊತ್ತು. ಇಷ್ಟೆಲ್ಲ ಇದ್ದ ಮೇಲೆ ಕೆಲವು ಅಂಗಡಿಗಳಿಗೆ ಮಾತ್ರ ಲಾಕ್ ಡೌನ್. ಈಗ ನಿತ್ಯ ಯಾವುದೇ ಜವಳಿ, ಫ್ಯಾನ್ಸಿ, ಚಪ್ಪಲ್ ಅಂಗಡಿಗಳಲ್ಲಿ ನೂಕುನುಗ್ಗಲು ಇಲ್ಲ. ಯಾಕೆಂದರೆ ಅದು ಡೈಲಿ ಹೋಗಬೇಕಾದ ಅಂಗಡಿಗಳು ಅಲ್ಲ. ಇನ್ನು ಜನರ ಬಳಿ ಆದಾಯದ ಕೊರತೆ ಇರುವುದರಿಂದ ಜನರು ಅಷ್ಟಾಗಿ ಅಂಗಡಿಗಳಿಗೆ ಹೋಗಿ ಖರೀದಿಸುತ್ತಿಲ್ಲ. ಆದ್ದರಿಂದ ಅಂತಹ ಅಂಗಡಿಗಳಿಂದ ಕೊರೊನಾ ಬರುತ್ತದೆ ಎಂದು ಹೆದರಿಸಿ ಅಂಗಡಿ ಬಂದ್ ಮಾಡಿಸುವುದು ತಪ್ಪು. ಬಂದ್ ಮಾಡುವುದಾದರೆ ಒಂದು ನರಪಿಳ್ಳೆಯೂ ಹೊರಗೆ ಬರಬಾರದು ಎಂದು ಆದೇಶ ಹೊರಡಿಸಿ ಬಂದ್ ಮಾಡಿ. ಅಗತ್ಯ ವಸ್ತುಗಳನ್ನು ಶುಕ್ರವಾರವೇ ಖರೀದಿಸಲಿ. ಹಾಲಿನವರು ಮನೆಮನೆಗೆ ತಂದು ಹಾಲು ಹಾಕಲಿ. ಮೆಡಿಕಲ್ ಸ್ಟೋರ್ ಬಿಟ್ಟು ಇಡೀ ಊರೇ ಬಂದಾಗಲಿ. ಅದಾದರೆ ನಿಜವಾದ ವೀಕೆಂಡ್ ಕಫ್ಯರ್ೂ. ಇಲ್ಲದಿದ್ದರೆ ಇದು ನಾಟಕ ಎನ್ನಲು ಯಾವುದೇ ಹಿಂಜರಿಕೆ ಇಲ್ಲ. ಯಾಕೆಂದರೆ ದೇಶದ ಗೃಹಸಚಿವರೇ ಗುಂಪಾಗಿ ನಿಂತು ಯಾರದ್ದೋ ಮದುವೆಯಲ್ಲಿ ಭಾಗವಹಿಸುತ್ತಾರೆ. ಮುಖ್ಯಮಂತ್ರಿಗಳೇ ಎಷ್ಟೋ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ. ಇನ್ನು ಲಸಿಕೆ ತೆಗೆದುಕೊಳ್ಳುವ ನೆಪದಲ್ಲಿ ಜನರು ಶನಿವಾರ, ಭಾನುವಾರ ಹೊರಗೆ ಇರುತ್ತಾರೆ. ಇಷ್ಟೆಲ್ಲದರ ನಡುವೆ ಕೇರಳದಲ್ಲಿ ಕೊರೊನಾ ಜಾಸ್ತಿಯಾಗುತ್ತಿದೆ. ಕೇರಳ ಮಾಡೆಲ್ ಎಂದು ಪಿಣರಾಯಿ ಎದೆತಟ್ಟಿಕೊಂಡು ಹೇಳುತ್ತಿದ್ದರು. ಆ ಮಾಡೆಲ್ ಈಗ ಕಾಣಿಸುತ್ತಿದೆ!
- Advertisement -
Trending Now
ಲಕ್ಷ್ಮಿ ಹೆಬ್ಬಾಳ್ಕರ್ ಗೆ ಸಿಟಿ ರವಿ ಆ "ಶಬ್ದ" ಹೇಳಿದ್ದು ಹೌದಾ!?
December 19, 2024
ವಿಜಯ ಮಲ್ಯ, ನೀರವ್ ಮೋದಿ ಸೇರಿ 22,280 ಕೋಟಿ ರೂ ಬಾಕಿ ವಸೂಲಿ - ನಿರ್ಮಲಾ
December 18, 2024
Leave A Reply