ಅನುಶ್ರೀ ರಕ್ತ,ಮೂತ್ರ,ಉಗುರು,ಕೂದಲು ಕೊಡಮ್ಮ ಎಂದಿದ್ದರೆ ಆವತ್ತು ಬೇಡಾ ಎನ್ನುತ್ತಿರಲಿಲ್ಲವೇನೋ?
ಹೀರೋಯಿನ್ ಗಳಾದ ರಾಗಿಣಿ ಹಾಗೂ ಸಂಜನಾಗಿಂತ ನಿರೂಪಕಿ ಕಂ ನಟಿ ಅನುಶ್ರೀ ಹೆಚ್ಚು ಪವರ್ ಫುಲ್ಲಾ ಎನ್ನುವ ಪ್ರಶ್ನೆ ಉದ್ಭವಿಸಿರುವುದು ಸಿನೆಮಾ ಮತ್ತು ಕಿರುತೆರೆ ಇಂಡಸ್ಟ್ರಿಯಲ್ಲಿ. ರಾಗಿಣಿ ಮತ್ತು ಸಂಜನಾ ಏನೂ ಸಣ್ಣ ಕುಳಗಳಲ್ಲ. ಬೆಂಗಳೂರು ಸಹಿತ ನೆರೆಯ ಆಂಧ್ರ, ತಮಿಳುನಾಡಿನ ಕೆರೆಗಳಲ್ಲಿ ಮಿಂದು ಬಂದವರು. ಯಾವುದೇ ಪ್ರಭಾವಿ ರಾಜಕಾರಣಿಗಳ ಪ್ರಭಾವ ಬಳಸಿ ಏನಾದರೂ ಮಾಡಿ ಜೈಲಿನಲ್ಲಿ ಮಲಗುವುದನ್ನು ತಪ್ಪಿಸಬಹುದಿತ್ತು. ಆದರೂ ರಕ್ತ, ಮೂತ್ರ, ಕೂದಲು, ಉಗುರು ಇನ್ನು ಏನೇನೊ ಸ್ಯಾಂಪಲ್ ಕೊಡಬೇಕಾಯಿತು. ಅದು ಸಾಬೀತು ಕೂಡ ಆಯಿತು. ಒಮ್ಮೆ ಜೈಲಿಗೆ ಹೋಗಿ ಬಂದವರಿಗೆ ಮತ್ತೆ ಯಾವಾಗಲಾದರೂ ಅದೇ ಜೈಲಿನ ನೆಲಗಳು ಕಾಯುತ್ತಿರುವಂತಿದೆ.
ಹಾಗಾದರೆ ಅನುಶ್ರೀ ಇವರಿಬ್ಬರಿಗಿಂತ ಹೆಚ್ಚು ಪವರ್ ಫುಲ್ ಹೇಗೆ ಆದರು ಎನ್ನುವುದೇ ಈಗ ಲೈಟ್ ಬಾಯ್ ಗಳಿಂದ ಹಿಡಿದು ಚಾನಲ್ ಮುಖ್ಯಸ್ಥರ ತನಕ ಕಾಡುತ್ತಿರುವ ಪ್ರಶ್ನೆ. ಅದರ ಹಿಂದೆ ಇರುವ ಲಾಜಿಕ್ ಕೂಡ ಕುತೂಹಲಕಾರಿಯಾಗಿದೆ. ಅದು ಹೇಗೆ ಎನ್ನುವುದನ್ನು ಸ್ಟೆಪ್ ಬೈ ಸ್ಟೆಪ್ ನೋಡೋಣ. ಮೊದಲನೇಯದಾಗಿ ತರುಣ್ ಮತ್ತು ಕಿಶೋರ್ ಅಮನ್ ಶೆಟ್ಟಿ ಪೊಲೀಸರ ಬಲೆಗೆ ಬೀಳುತ್ತಾರೆ. ಅದರಲ್ಲಿ ಕಿಶೋರ್ ತಾನು ಅನುಶ್ರೀ ಜೊತೆ ಡ್ರಗ್ಸ್ ಸೇವಿಸಿದ್ದನ್ನು, ಎಲ್ಲಿ, ಯಾರೊಂದಿಗೆ ಸೇವಿಸಿದ್ದೆ, ಸೇವಿಸಿದ ಸಂದರ್ಭ ಎಲ್ಲವನ್ನು ಹೇಳಿದ್ದಾನೆ ಎಂದು ಪೊಲೀಸರು ತಮ್ಮ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಿದ್ದಾರೆ. ಅವರ ವಿಚಾರಣೆಯ ಸಂದರ್ಭದಲ್ಲಿ ಅನುಶ್ರೀ ಹೆಸರು ಬಂದ ಕಾರಣ ಆಕೆಯನ್ನು ಮಂಗಳೂರಿಗೆ ಕರೆಸಿ ಇಲ್ಲಿ ಕೂಡ ವಿಚಾರಣೆ ಮಾಡಲಾಗಿದೆ. ಆ ಬಳಿಕ ಆ ಕೇಸು ತಣ್ಣಗೆ ಫೈಲಿನಲ್ಲಿ ಮಲಗಿತ್ತು. ಈಗ ಅಚಾನಕ್ ಆಗಿ ಅದು ಹೊರಗೆ ಬಂದು ಅನುಶ್ರೀ ಪ್ರಭಾವಿಗಳ ಶಿಫಾರಸ್ಸು ಬಳಸಿ ಈ ಕೇಸಿನಿಂದ ತಪ್ಪಿಸಿಕೊಂಡಿದ್ದಾರೆ ಎನ್ನುವ ಹೆಡ್ಡಿಂಗ್ ನೊಂದಿಗೆ ದಿಗ್ಗನೆ ಹೊರಗೆ ಬಂದಿದೆ. ಅದಕ್ಕೆ ಸರಿಯಾಗಿ ಈ ಪ್ರಕರಣ ಮಾಧ್ಯಮಗಳಲ್ಲಿ ಬ್ರೇಕಿಂಗ್ ಆಗುವುದಕ್ಕೂ ಅನುಶ್ರೀ ಮುಂಬೈ ವಿಮಾನ ಹತ್ತುವುದಕ್ಕೂ ಸರಿಯಾಗಿ ಹೋಗಿದೆ. ಅನುಶ್ರೀ ಈ ಕೇಸಿನಿಂದ ತಪ್ಪಿಸಿಕೊಳ್ಳಲು ಮುಂಬೈ ಹಾರಿದ್ದಾರೆ ಎನ್ನುವ ಹೆಡ್ಡಿಂಗ್ ಕೂಡ ಬಂದುಬಿಟ್ಟಿತ್ತು. ನಂತರ ಮುಂಬೈನಿಂದ ಹಿಂತಿರುಗಿದ ಅನುಶ್ರೀ ತಾವು ಹೆದರಿ ಓಡಿಹೋದದ್ದಲ್ಲ. ಅದು ಪೂರ್ವ ನಿರ್ಧರಿತ ಪ್ರಯಾಣದ ಬಗ್ಗೆ ದಾಖಲೆ ಎಲ್ಲ ಕೊಟ್ಟಿದ್ದಾರೆ. ಇದು ನಡೆದಿರುವ ಅಷ್ಟೂ ಘಟನೆ.
ಈಗ ಇಲ್ಲಿ ಉಳಿದಿರುವ ಪ್ರಶ್ನೆ ಏನೆಂದರೆ ಯಾವಾಗ ಅನುಶ್ರೀ ಹೆಸರು ಕಿಶೋರ್ ಬಾಯಲ್ಲಿ ಕೇಳಿಬಂತೋ ಆಗ ಅನುಶ್ರೀಯನ್ನು ಕರೆಸಿಕೊಂಡ ಪೊಲೀಸರು ಛೇಂಬರ್ ನೊಳಗೆ ಅವಳಿಂದ ಆಂಕರಿಂಗ್ ಮಾಡಿಸಿದ್ರಾ ಅಥವಾ ನಿಜವಾಗಲೂ ವಿಚಾರಣೆ ಮಾಡಿದ್ರಾ ಎನ್ನುವುದು ಮಾತ್ರ. ಒಂದು ವೇಳೆ ವಿಚಾರಣೆ ಮಾಡಿದ್ದರೆ ಅವಳಿಂದ ಸ್ಯಾಂಪಲ್ಲಾಗಿ ಒಂದಿಷ್ಟು ರಕ್ತ, ಮೂತ್ರ, ನಾಲ್ಕು ಕೂದಲು, ಎರಡು ಉಗುರು ತೆಗೆದು ಇಟ್ಟುಕೊಳ್ಳಬಹುದಿತ್ತು. ಅದನ್ನು ಲ್ಯಾಬ್ ಗೆ ಕಳುಹಿಸಿಕೊಟ್ಟಿದ್ದರೆ ಅವಳದ್ದೂ ಏನೂ ಹೋಗುತ್ತಿರಲಿಲ್ಲ. ಪೊಲೀಸರದ್ದು ಗಂಟು ಕರಗುತ್ತಿರಲಿಲ್ಲ. ಆದರೆ ಪೊಲೀಸರು ಹಾಗೆ ಮಾಡಲಿಲ್ಲ, ಯಾಕೆ ಎನ್ನುವುದೇ ಈಗ ಉಳಿದಿರುವ ಪ್ರಶ್ನೆ. ಅನುಶ್ರೀ ರಕ್ತದ ಹನಿಯೋ, ಚಿಕ್ಕ ಬಾಟಲಿಯಲ್ಲಿ ಮೂತ್ರವೋ ಅಥವಾ ಕೂದಲು, ಉಗುರು ಏನು ಬೇಕು ಕೇಳಿದ್ರೆ ಏನೂ ಕೊಡುವುದಿಲ್ಲ ಎನ್ನುತ್ತಿರಲಿಲ್ಲ. ಆವತ್ತು ಸಂಜನಾ, ರಾಗಿಣಿ ಪೊಲೀಸ್ ಕಸ್ಟಡಿಯಲ್ಲಿರುವಾಗ ಆಸ್ಪತ್ರೆಯಲ್ಲಿ ಕೂದಲು ಮುಟ್ಟಿದರೆ ಜಾಗ್ರತೆ ಎಂದು ರಂಪಾಟ ಮಾಡಿದರಲ್ಲ ಹಾಗೆ ಮಾಡುತ್ತಿರಲಿಲ್ಲ. ಅನುಶ್ರೀ ಸುಸಂಸ್ಕೃತ ಹುಡುಗಿ. ಪೊಲೀಸರೊಂದಿಗೆ ಖಂಡಿತ ಸಹಕರಿಸುತ್ತಿದ್ದರು. ಅದು ಬಿಟ್ಟು ಆಗ ಪೊಲೀಸರೇ ಏನೂ ಕೇಳದಿದ್ದರೆ ಅನುಶ್ರೀ ತಾನೇ ನನ್ನ ರಕ್ತ ತೆಗೆದುಕೊಳ್ಳಿ, ಮೂತ್ರ ತೆಗೆದುಕೊಳ್ಳಿ, ಕೂದಲು ಕಿತ್ಕೊಳ್ಳಿ ಎಂದು ಹೇಳಲು ಆಗುತ್ತಾ? ಈಗ ಮಾಧ್ಯಮಗಳು ಅನುಶ್ರೀ ಪ್ರಭಾವಿಗಳ ಶಿಫಾರಸ್ಸು ಬಳಸಿ ತಪ್ಪಿಸಿಕೊಂಡಳು ಎನ್ನುವುದಕ್ಕಿಂತ ಒಂದು ವೇಳೆ ತಪ್ಪಿಸಿಕೊಳ್ಳಲೇಬೇಕು ಅಂತಿದ್ದರೆ ರಕ್ತ, ಮೂತ್ರ ಕೊಟ್ಟ ಬಳಿಕವೂ ತಪ್ಪಿಸಿಕೊಳ್ಳಲು ಅವಕಾಶ ಇರುತ್ತಿತ್ತು.
ಆದರೆ ಈಗ ಸುಮ್ಮನೆ ಆಕೆಯನ್ನು ಕಟಕಟೆಯಲ್ಲಿ ನಿಲ್ಲಿಸಿದಂತೆ ಆಗುತ್ತಿಲ್ಲವೇ? ಇಲ್ಲಿ ಇನ್ನೊಂದು ವಿಷಯ ಏನು ಬರುತ್ತಿದೆ ಎಂದರೆ ಯಾರಾದರೂ ಒಬ್ಬ ಆರೋಪಿ ಯಾವುದೋ ವ್ಯಕ್ತಿಯ ಹೆಸರನ್ನು ವಿಚಾರಣೆಯ ಸಂದರ್ಭದಲ್ಲಿ ಹೇಳಿದ ಮಾತ್ರಕ್ಕೆ ಆ ಗಣ್ಯ ವ್ಯಕ್ತಿಗಳನ್ನು ಸುಮ್ಮನೆ ಆರೋಪಿಗಳಂತೆ ನೋಡುವ ಅವಶ್ಯಕತೆ ಇಲ್ಲ ಎನ್ನಲಾಗುತ್ತದೆ. ಅದು ಕೂಡ ಸರಿ. ಕಿಶೋರ್ ಶೆಟ್ಟಿ ನಾಳೆ ಸಮಾಜದ ದೊಡ್ಡ ವ್ಯಕ್ತಿ ತನ್ನೊಂದಿಗೆ ಯಾವುದೋ ಒಂದು ದಿನ ಡ್ರಗ್ಸ್ ತೆಗೆದುಕೊಂಡ ಎಂದ ಕೂಡಲೇ ಅಂತಹ ಗಣ್ಯ ವ್ಯಕ್ತಿಗಳನ್ನು ಕರೆದು ರಕ್ತ ಕೊಡಿ, ಮೂತ್ರ ಕೊಡಿ, ಉಗುರು ಕೊಡಿ, ಕೂದಲು ಕೊಡಿ ಎನ್ನಲು ಆಗುತ್ತಾ? ಒಂದು ವೇಳೆ ಆವತ್ತು ಪ್ರಭಾವಿಗಳ ಕಾಲ್ ಬಂದು ಅವಳಿಂದ ಅದ್ಯಾವುದೋ ಸಂಗ್ರಹಿಸಬೇಡಿ ಎಂದು ಹೇಳಿದ್ದರೆ ಪೊಲೀಸರು ಹಾಗೆ ನಡೆದುಕೊಂಡು ಕೂಡ ಬಿಟ್ಟಿದ್ದರೆ ಈಗ ಗೃಹ ಸಚಿವರು ಯಾರನ್ನು ಕೂಡ ಬಿಡುವ ಪ್ರಶ್ನೆ ಇಲ್ಲ ಎಂದಿದ್ದಾರಲ್ಲ. ಹಾಗಾದರೆ ಈಗ ಕೇಸ್ ಸ್ಟ್ರಾಂಗ್ ಮಾಡಬಹುದಲ್ಲ. ಇಲ್ಲಿ ಒಂದಂತೂ ನಿಜ. ಈಗ ಕಾಲ ಮಿಂಚಿ ಹೋಗಿದೆ. ಡ್ರಗ್ಸ್ ತೆಗೆದುಕೊಂಡ ಇಂತಿಷ್ಟೇ ಸಮಯದ ಒಳಗೆ ತೆಗೆದುಕೊಂಡ ವ್ಯಕ್ತಿಯ ದೇಹದಿಂದ ಏನು ಸಂಗ್ರಹಿಸಬೇಕೊ ಅದನ್ನು ಸಂಗ್ರಹಿಸಿ ಬಿಡಬೇಕು. ಅದು ಬಿಟ್ಟು ಯಾವತ್ತೋ ಡ್ರಗ್ಸ್ ಸೇವಿಸಿದವನ/ಳ ದೇಹದಿಂದ ಇನ್ಯಾವತ್ತೋ ಏನೇನೋ ಸಂಗ್ರಹಿಸಿದರೆ ಅದನ್ನು ವಿಚಾರಣೆ ಎಂದು ಹೇಳುವುದಿಲ್ಲ, ಮೂರ್ಖರು ಎನ್ನುತ್ತಾರೆ. ಯಾರು ಯಾರನ್ನು ಉಳಿಸಲು ಏನು ಮಾಡಿದರು ಎನ್ನುವ ಈ ಅನುಶ್ರೀ ಕೇಸಿನಲ್ಲಿ ಏನೂಂತ ಗೊತ್ತಾಗುವುದಿಲ್ಲ. ಪಾಪ, ಆ ಹುಡುಗಿ ಮಾತ್ರ ಮುಕ್ತ ಮನಸ್ಸಿನಿಂದ ಹಿಂದಿನಂತೆ ನಿರೂಪಣೆ ಮಾಡಲು ಒಂದಿಷ್ಟು ಕಾಲ ಬೇಕಾಗುತ್ತದೆ. ಅಲ್ಲಿಯವರೆಗೆ ಟಿವಿಗಳಿಗೆ ಪ್ರಶ್ನಾರ್ಥಕ ಚಿಹ್ನೆ ಹಾಕುವುದು ಸ್ಟೋರಿ ಮಾಡುವುದು ಇಷ್ಟೇ ಹಬ್ಬ!
Leave A Reply