ಸಾಮಾನ್ಯ ಭೇದಿಯೆಂದು ನಿರ್ಲಕ್ಷ್ಯ ಮಾಡದಿರಿ , ವ್ಯಾಧಿಗೆ ಈಡಾಗದಿರಿ
ಭೇದಿ ಇದು ಸಾಮಾನ್ಯವಾಗಿ ಜೀವನದಲ್ಲಿ ಕೆಲವು ಬಾರಿಯಾದರೂ ಹಲವಾರು ಎದುರಿಸುವ ಒಂದು ಆರೋಗ್ಯದ ಸಮಸ್ಯೆ .ಹೆಚ್ಚಿನ ಸಮಯದಲ್ಲಿ ಇದು ಒಂದೆರಡು ದಿನಗಳಿಗೆ ಮುಗಿದು ಹೋಗುತ್ತದೆ ಆದರೆ ಕೆಲವು ಬಾರಿ ಇದು ಹೆಚ್ಚಾಗಿ ಸುಸ್ತನ್ನು ಈಡು ಮಾಡಿ ಅನಾರೋಗ್ಯಕ್ಕೂ ಕಾರಣವಾಗಬಹುದು .ಈ ಸಂದರ್ಭದಲ್ಲಿ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವುದು ಒಳ್ಳೆಯದು .ಭೇದಿಗೆ ಹಲವು ಕಾರಣಗಳಿವೆ .
ಆಹಾರದಿಂದ ಉಂಟಾಗುವ ಅಲರ್ಜಿ :ದೇಹಕ್ಕೆ ಹೊಂದಿಕೊಳ್ಳದ ಆಹಾರವನ್ನು ಸೇವಿಸಿದಾಗ ಹೊಟ್ಟೆ ಕೆಟ್ಟು ಹೋಗುತ್ತದೆ .
ಕೊಳಚೆ ನೀರಿನ ಸೇವನೆಯಿಂದ ಕೂಡ ಭೇದಿ ಉಂಟಾಗುತ್ತದೆ .
ಕರುಳಿನಲ್ಲಿ ತೊಂದರೆಯುಂಟಾದಾಗ ಸಹ ಭೇದಿಯುಂಟಾಗುತ್ತದೆ .ಈ ಸಂದರ್ಭದಲ್ಲಿ ಅವಶ್ಯವಾಗಿ ವೈದ್ಯರನ್ನು ಕಾಣಲೇಬೇಕು
ಮಕ್ಕಳಲ್ಲಿ ಅದೂ ಪುಟ್ಟ ಶಿಶುಗಳಲ್ಲಿ ಭೇದಿ ಉಂಟಾದಾಗ ತೀವ್ರ ನಿಗಾ ವಹಿಸಲೇಬೇಕು .
ಈಗ ಮನೆಯಲ್ಲೇ ಭೇದಿಗೆ ಸರಳ ಪರಿಹಾರದ ಬಗ್ಗೆ ಯೋಚಿಸೋಣ .
೧ ಪೇರಳೆಯ ಚಿಗುರು
ಈ ಹಣ್ಣು ಹಳ್ಳಿಗಳಲ್ಲಿ ಮನೆಗಳಲ್ಲಿ ಸರ್ವೇ ಸಾಮಾನ್ಯ .ಈ ಮರದ ಚಿಗುರು ಎಲೆಗಳನ್ನು ಒಂದು ಲೋಟ ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಬೇಕು ,ಇದು ಮುಕ್ಕಾಲು ಲೋಟಕ್ಕೆ ಇಂಗಿದ ನಂತರ ಈ ಕಷಾಯವನ್ನು ಭೇದಿಗೆ ಒಳಗಾದ ರೋಗಿಗೆ ನೀಡಬೇಕು .ದಿನಕ್ಕೆರಡು ಬಾರಿ ಇದನ್ನು ಕುಡಿಸುವುದರಿಂದ ಭೇದಿಯು ನಿಯಂತ್ರಣಕ್ಕೆ ಬರುವುದು .
೨.ಚಹಾದ ಡಿಕಾಕ್ಷನ್
ಇದು ಅತ್ಯಂತ ಸರಳ ಮತ್ತು ಪರಿಣಾಮಕಾರಿಯಾದ ಔಷಧವಾಗಿದೆ .ಅರ್ಧ ಚಮಚ ಚಹಾ ಪುಡಿಯನ್ನು ಒಂದು ಲೋಟ ನೀರಿಗೆ ಹಾಕಿ ಕುಡಿಸಿ ಇದನ್ನು ರೋಗಿಗೆ ಕುಡಿಸಿ ,ದಿನದಲ್ಲಿ ಮೂರು ಬಾರಿ ಪುನರಾವರ್ತಿಸಿ ,ಇದರಿಂದ ಭೇದಿಯು ನಿಲ್ಲುವ ಹಂತಕ್ಕೆ ಬರುತ್ತದೆ .
೩.ಓ ಆರ್ ಎಸ್ ದ್ರಾವಣ
ಓರಲ್ ರಿ ಹೈಡ್ರಷನ್ ಸೊಲ್ಯೂಷನ್ ಇದು ಭೇದಿಯ ಸಮಯದಲ್ಲಿ ದೇಹವು ಒಣಗುವುದನ್ನು ತಪ್ಪಿಸುತ್ತದೆ .ಇದು medical ಅಂಗಡಿಗಳಲ್ಲಿ ದೊರಕುತ್ತದೆ ,ಇಲ್ಲವೇ ಮನೆಯಲ್ಲೇ ಇದನ್ನು ತಯಾರಿಸಿಕೊಳ್ಳಬಹುದು .ಒಂದು ಚಮಚ ಸಕ್ಕರೆಗೆ ,ಕಾಲು ಚಮಚ ಉಪ್ಪು ಬೆರೆಸಿ ಒಂದು ಲೋಟ ನೀರಿಗೆ ಹಾಕಿ ಕುಡಿಯಬಹುದು .ಇದು ದೇಹದ ಆರ್ದ್ರತೆಯನ್ನು ಕಾಪಿಡುತ್ತದೆ.
೪.ಎಳನೀರು ಮತ್ತು ಹಾಲು
ಇದು ಹಲವರಿಗೆ ತಿಳಿದಿಲ್ಲ ಆದರೆ ಇದು ಭೇದಿಯ ಸಮಯದಲ್ಲಿ ಅಮೃತ ಸಮಾನವಾದ ಪೇಯವಾಗಿದೆ .ಒಂದು ಎಳನೀರಿಗೆ ಅರ್ಧ ಲೋಟ ಕುದಿಸಿದ ಹಾಲನ್ನು ಬೆರೆಸಿ ಕುಡಿಯುವುದು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ .ದಿನದಲ್ಲಿ ಒಂದು ಬಾರಿ ಇದನ್ನು ಸೇವಿಸಿದರೆ ದೇಹವು ಒಣಗುವ ಪ್ರಮೇಯ ಬರುವುದಿಲ್ಲ .ಇದು ಪುಷ್ಟಿಕರ ಮತ್ತು ಶಕ್ತಿಯುತವಾದ ಪೇಯವಾಗಿದೆ .
೬.ಬಾಳೆಹಣ್ಣು
ಬಾಳೆಹಣ್ಣಿನಲ್ಲಿ ಪೆಕ್ಟಿನ್ ನ ಅಂಶ ಧಾರಾಳವಾಗಿರುವುದರಿಂದ ಭೇದಿಯ ಸಂದರ್ಭದಲ್ಲಿ ಇದನ್ನು ಸೇವಿಸುವುದು ಒಳ್ಳೆಯದಾಗಿದೆ .ಪೆಕ್ಟಿನ್ ನೀರಿನಲ್ಲಿ ಕರಗುವ ನಾರಿನಂಶವನ್ನು ಹೊಂದಿರುವುದರಿಂದ ಭೇದಿಯನ್ನು ಕಡಿಮೆ ಮಾಡುವುದರಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ .ಇದರಲ್ಲಿ ಪೊಟ್ಯಾಸಿಯಂ ಸಹ ಜಾಸ್ತಿ ಇರುವುದರಿಂದ ದೇಹದ ಮಹತ್ವದ ಕಾರ್ಯಗಳನ್ನು ನಿರ್ವಹಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ .ಚೆನ್ನಾಗಿ ಹಣ್ಣಾದ ಬಾಳೆಹಣ್ಣುಗಳನ್ನು ಭೇದಿಯ ಸಂದರ್ಭದಲ್ಲಿ ಸೇವಿಸಿ .ಅರೆ ಹಣ್ಣಾದ ಬಾಳೆಹಣ್ಣುಗಳನ್ನು ಸೇವಿಸದಿರಿ .
ಭೇದಿಯು ತುಂಬಾ ಹೆದರಿಕೊಳ್ಳಬೇಕಾದ ರೋಗವೇನಲ್ಲ ಆದ್ರೆ ನಿರ್ಲಕ್ಷ್ಯ ಮಾಡಿದಲ್ಲಿ ಜೀವಕ್ಕೆ ಕುತ್ತು ಖಂಡಿತ ಇದೆ .ಪರಿಸ್ಥಿತಿ ಕೈ ಮೀರಿ ಹೋದಲ್ಲಿ ವೈದ್ಯರ ಸಲಹೆ ಪಡೆಯುವುದನ್ನು ಖಂಡಿತ ಮರೆಯದಿರಿ
Leave A Reply