• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಪಾಲಿಕೆ ಹೋಂವರ್ಕ್ ಮಾಡದ ಮಗುವಿನ ಪರಿಸ್ಥಿತಿಯಲ್ಲಿದೆ!!

Hanumantha Kamath Posted On October 12, 2021


  • Share On Facebook
  • Tweet It

ಇವತ್ತು ನಾನು ಪೋಸ್ಟ್ ಮಾಡಿದ ಎರಡು ಫೋಟೋಗಳೇ ನಿಮಗೆ ಮಂಗಳೂರಿನ ಸ್ವಚ್ಚತೆಯ ಕಥೆ ಹೇಳುತ್ತವೆ. ಈ ಕರ್ಮ ನೋಡಲು ನಾವು ತಿಂಗಳಿಗೆ ಎರಡು ಕಾಲು ಕೋಟಿ ರೂಪಾಯಿಗಳನ್ನು ಕೊಡಬೇಕಾಗಿದೆಯಲ್ಲ ಎನ್ನುವುದೇ ಪಾಲಿಕೆಯ ಹಣೆಬರಹವನ್ನು ತಿಳಿಸುತ್ತದೆ. ಇದೇನು ಪಾಲಿಕೆ ವ್ಯಾಪ್ತಿಯ 60 ವಾರ್ಡುಗಳ ಯಾವುದೋ ಮೂಲೆಯ ವಾರ್ಡಿನ ದೃಶ್ಯ ಅಲ್ಲ. ಇದು ಮಂಗಳೂರಿನ ಹೃದಯಭಾಗವಾದ ಅತ್ಯಂತ ಪ್ರಮುಖ ಬೀದಿಯೂ ಆಗಿರುವ ರಥಬೀದಿಯ ಹೂವಿನ ಮಾರುಕಟ್ಟೆಯ ವಸ್ತುಸ್ಥಿತಿ. ಇಲ್ಲಿ ಈ ಫೋಟೋವನ್ನು ನಾವು ತೆಗೆದಾಗ ಅಲ್ಲಿ ಮೂರು ದಿನಗಳಿಂದ ತ್ಯಾಜ್ಯ ಹೀಗೆ ಬಿದ್ದಿದೆ ಎನ್ನುವ ವಿಷಯವನ್ನು ಅಲ್ಲಿನವರು ತಿಳಿಸಿದ್ದರು. ಮೂರು ದಿನಗಳಿಂದ ಆಂಟೋನಿ ವೇಸ್ಟ್ ನವರು ಇತ್ತ ಬರಲಿಲ್ಲ ಎಂದರೆ ಏನು ಕಥೆ? ಅಥವಾ ಬಂದರೂ ನಾವು ತೆಗೆದುಕೊಂಡು ಹೋಗುವುದಿಲ್ಲ ಎನ್ನುವ ಉಢಾಪೆಯಾ? ಈಗ ಕಸದ ತೊಟ್ಟಿ ತುಂಬಿ ತ್ಯಾಜ್ಯದ ರಾಶಿ ರಸ್ತೆಯ ಮೇಲೆ ಬಿದ್ದಿದೆ. ಆದರೂ ಹೇಳುವವರು, ಕೇಳುವವರು ಯಾರೂ ಇಲ್ಲ. ಹೀಗೆ ಆದರೆ ಮಂಗಳೂರು ಚೆಂದ ಮಾಡಬೇಕು, ಸುಂದರ ಮಾಡಬೇಕು ಎಂದು ಪಾಲಿಕೆಯಲ್ಲಿ ಕುಳಿತು ಯಾರು ಎಷ್ಟು ಸಭೆ ಮಾಡಿದರೂ, ಚರ್ಚೆ ಮಾಡಿದರೂ ಏನು ಪ್ರಯೋಜನ. ಏನೂ ಆಗುವುದಿಲ್ಲ. ಎಲ್ಲೆಲ್ಲೋ ನಾವು ಸೆಲ್ಫಿ ಬೂತ್ ಎಂದು ಮಾಡಿ ಫೋಟೋ ತೆಗೆಯುವುದೇ ಆದರೆ ಇಲ್ಲಿ ಕೂಡ ಈ ಆಂಟೋನಿ ವೇಸ್ಟ್ ನವರ ಪ್ರಮುಖರನ್ನು ನಿಲ್ಲಿಸಿ ಅವರಿಂದ ಸೆಲ್ಫಿ ತೆಗೆಸಿ ಅವರ ಫೇಸ್ ಬುಕ್, ಟ್ವಿಟರ್ ನಲ್ಲಿ ಹಾಕಿ ಅವರು ತಾವು ಮಂಗಳೂರಿನಲ್ಲಿ ಮಾಡುತ್ತಿರುವ ಘನಂಧಾರಿ ಕೆಲಸವನ್ನು ಪ್ರಚಾರ ಪಡಿಸಲಿ. ತಿಂಗಳಿಗೆ ಐವತ್ತು, ಆರವತ್ತು ಸಾವಿರದ ಬಿಲ್ ಆದರೆ ಪಾಪ, ಅಷ್ಟು ಕಡಿಮೆ ಹಣದಲ್ಲಿ ಇಡೀ ಪಾಲಿಕೆಯ ಅರವತ್ತು ವಾರ್ಡುಗಳ ಕಸ ತೆಗೆಯುವುದು ಹೇಗೆ ಎನ್ನುವ ಅಭಿಪ್ರಾಯ ಬರಬಹುದಿತ್ತು. ಆದರೆ ಎರಡು ಕಾಲು ಕೋಟಿ ಚಿಕ್ಕ ಮೊತ್ತವಲ್ಲ. ಅಷ್ಟಾದರೂ ನೋಡಿ ಈ ಚೆಂದವನ್ನು.

ಇನ್ನು ಆಂಟೋನಿ ವೇಸ್ಟ್ ನವರು ಇಷ್ಟು ವರ್ಷ ಮಂಗಳೂರಿನಲ್ಲಿ ಮಾಡಿದ ಕರ್ಮಕಾಂಡವನ್ನು ಸಹಿಸುವ ಜೊತೆಗೆ ಪಾಲಿಕೆ ಇನ್ನೊಂದು ವರ್ಷಕ್ಕೆ ಅವರ ಗುತ್ತಿಗೆಯನ್ನು ನವೀಕರಿಸಿದೆ. ಅಲ್ಲಿಗೆ ಇನ್ನೊಂದು ವರ್ಷ ಆರಾಮವಾಗಿ ಅವರು ಕಳುಹಿಸಿಕೊಡುವ ತ್ಯಾಜ್ಯದ ಕವರನ್ನು ಮೂಸಲು ಏನೂ ಅಡ್ಡಿಯಿಲ್ಲ. ಅಷ್ಟರಲ್ಲಿ ಐದು ಬಾರಿ ಅನುಭವಿ ಮೇಯರ್ ಎನ್ನುವ ವಿಶೇಷಣವನ್ನು ಹೊತ್ತುಕೊಂಡಿರುವ ಈಗಿ ಮೇಯರ್ ತಮ್ಮ ಅವಧಿಯನ್ನು ಮುಗಿಸಿ ಇಳಿಯಲಿದ್ದಾರೆ. ನಂತರ ಯಾರಾದರೂ ಹೊಸಬರು ಬಂದು ಮೇಯರ್ ಗಿರಿ ಅಲಂಕರಿಸಲಿದ್ದಾರೆ. ಅವರ ಮೇಲೆ ಮಂಗಳೂರಿನ ಸ್ವಚ್ಚತೆಯ ಜವಾಬ್ದಾರಿ ಬೀಳಲಿದೆ. ಅಲ್ಲಿಗೆ ಈಗಿನವರು ಸೇಫ್. ನಿಮಗೆ ಈ ಜನವರಿಗೆ ಆಂಟೋನಿಯವರ ಅವಧಿ ಮುಗಿಯುತ್ತೆ ಎಂದು ಯಾವಾಗಲೋ ಗೊತ್ತಿತ್ತು. ಹಾಗಾದರೆ ಅದಕ್ಕೆ ಮೊದಲೇ ಮುಂದಿನ ರೂಪುರೇಶೆ ಸ್ಕೆಚ್ ಹಾಕಿ ಕುಳಿತುಕೊಳ್ಳಬಹುದಿತ್ತಲ್ಲ. ಆವಾಗಲೇ ಯಾರನ್ನು ಬೇಕೋ ಅವರನ್ನು ಕರೆದು ಸಲಹೆ, ಸಮಾಲೋಚನೆ ಮಾಡಬಹುದಿತ್ತಲ್ಲ. ಅನೇಕ ಎನ್ ಜಿಒಗಳ ಸಭೆ ಕರೆದು ವಿಸ್ತೃತವಾಗಿ ಚರ್ಚಿಸಬಹುದಿತ್ತಲ್ಲ. ಇಲ್ಲ, ಇವರು ಮಾಡಲಿಲ್ಲ. ಇವರು ಹೇಗೆಂದರೆ ಮಕ್ಕಳು ಹಿಂದೆ ಬೇಸಿಗೆ ರಜೆ ಬಂದಾಗ ಇಡೀ ಎರಡು ತಿಂಗಳು ಆಡಿ ಕೊನೆಯ ಮೂರ್ನಾಕು ದಿನ ಇಡೀ ತಿಂಗಳ ಹೋಂವರ್ಕ್ ಮಾಡಲು ಧಾವಂತ ಪಡುತ್ತಾರಲ್ಲ. ಕೆಲವು ಮಕ್ಕಳು ಕೊನೆಗೆ ಸಮಯ ಸಾಲದೇ ಹೋಂವರ್ಕ್ ಸಂಪೂರ್ಣ ಮಾಡಲಾಗದೇ ಟೀಚರ್ ಕೈಯಿಂದ ಪೆಟ್ಟು ತಿನ್ನುವುದು ಹಿಂದೆ ಸಾಮಾನ್ಯವಾಗಿತ್ತು. ಈಗ ಪಾಲಿಕೆ ಅಕ್ಷರಶ: ಹೋಂವರ್ಕ್ ಮಾಡದ ಮಗುವಿನ ಪರಿಸ್ಥಿತಿಯಲ್ಲಿ ಬಂದು ನಿಂತಿದೆ. ಟೀಚರ್ ಸ್ಥಾನದಲ್ಲಿ ನಾವು ನಾಗರಿಕರು ಇದ್ದೇವೆ. ಎರಡು ಬಾರಿಸೋಣ ಎಂದು ಅಂದುಕೊಂಡರೆ ಇವರು ಅದಕ್ಕೂ ಯೋಗ್ಯರಲ್ಲ. ಚಿಕ್ಕದಿರುವಾಗ ಮಕ್ಕಳು ಟೀಚರ್ ಹೊಡೆಯುವ ಏಟಿನ ರುಚಿಗೆ ಹೆದರಿಯಾದರೂ ಹೋವರ್ಕ್ ಮಾಡುತ್ತಿದ್ದರು. ಆದರೆ ಈಗಿನ ಪಾಲಿಕೆಗೆ ಯಾವುದೇ ನಾಚಿಕೆ ಇಲ್ಲ. ಇವರು ತಮ್ಮ ಆಡಳಿತವನ್ನು ಜನ ಬಯಸಿ ಅಧಿಕಾರ ಕೊಟ್ಟಿದ್ದಾರೆ ಎಂದು ಅಂದುಕೊಂಡಿದ್ದಾರೆ. ಕಾಂಗ್ರೆಸ್ ಪಾಲಿಕೆಯಲ್ಲಿ ಅಧಿಕಾರದಲ್ಲಿದ್ದಾಗ ಮಾಡಿದ ವಿಪರೀತ ಭ್ರಷ್ಟಾಚಾರ, ಸ್ವಜನ ಪಕ್ಷಪಾತ, ದುರಂಹಕಾರ ಮತ್ತು ಕೊಟ್ಟ ಭರವಸೆಯನ್ನು ಈಡೇರಿಸದೇ ಹೋದದ್ದಕ್ಕೆ ಬೇಸತ್ತು ಜನ ಭಾರತೀಯ ಜನತಾ ಪಾರ್ಟಿಯನ್ನು ಲೆಕ್ಕಕ್ಕಿಂತ ಹೆಚ್ಚು ಸೀಟು ಕೊಟ್ಟು ಗೆಲ್ಲಿಸಿದ್ದಾರೆ ಬಿಟ್ಟರೆ ನಾವೇ ಶಾಶ್ವತ ಎಂದು ಬಿಜೆಪಿಯವರು ಅಂದುಕೊಳ್ಳಬೇಕಾಗಿಲ್ಲ.

ಆದ್ದರಿಂದ ಆಂಟೋನಿಯವರ ಗುತ್ತಿಗೆ ಅವಧಿಯನ್ನು ವಿಸ್ತರಿಸಲು ನೀವು ತೆಗೆದುಕೊಂಡ ಆಸಕ್ತಿಯನ್ನು ಅವರಿಂದ ಕೆಲಸ ಮಾಡಿಸಲು ಕೂಡ ನೀವು ತೆಗೆದುಕೊಳ್ಳಬೇಕು. ಇಲ್ಲದಿದ್ರೆ ಜನ ನಿಮ್ಮ ಮೇಲೆ ಆಸಕ್ತಿಯನ್ನು ಕಳೆದುಕೊಳ್ಳುತ್ತಾರೆ. ಈಗ ನವರಾತ್ರಿಯ ದಿನಗಳು. ನಾಗರಿಕರು ಹೂವಿನ ಮಾರುಕಟ್ಟೆಗೆ ಬರುವುದು ಸಾಮಾನ್ಯ. ಹಾಗಿರುವಾಗ ಒಂದು ಪ್ರಮುಖ ಮಾರುಕಟ್ಟೆಯೇ ಹೀಗೆ ಇರುವುದು ಪಾಲಿಕೆಗೆ ಶೋಭೆ ತರುವುದಿಲ್ಲ. ಹಾಗಂತ ಯಾವ ಮನಪಾ ಸದಸ್ಯ ಕೂಡ ಬಾಯಿಬಿಟ್ಟು ಹೀಗೆ ಆಂಟೋನಿ ವೇಸ್ಟ್ ನವರು ಸ್ವಚ್ಚತೆಯಲ್ಲಿ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಹೇಳಲು ತಯಾರಿಲ್ಲ. ಮೇಯರ್ ಈ ಬಗ್ಗೆ ಏನೂ ಕ್ರಮ ತೆಗೆದುಕೊಂಡಿಲ್ಲ. ಐಎಎಸ್ ಕಮೀಷನರ್ ಇದ್ದೂ ಏನು ಪ್ರಯೋಜನ ಆದಂತೆ ಕಾಣುವುದಿಲ್ಲ. ಉಳಿದವರು ಪಾಪ ಬ್ಯುಸಿ ಇದ್ದಾರೆ. ಅವರಿಗೆ ಏನು ಹೇಳುವುದು. ಅವರಿಗೆ ಕೇಳುವ ಪುರುಸೋತ್ತು ಆದರೂ ಎಲ್ಲಿದೆ!

  • Share On Facebook
  • Tweet It


- Advertisement -


Trending Now
ಮಂಗಳೂರಿನಲ್ಲಿ ಪೈಪುಗಳ ಮೇಲಿನ ಮಣ್ಣು ತೆಗೆಸಬಲ್ಲ ಗಂಡಸರು ಯಾರಿದ್ದಾರೆ!!
Hanumantha Kamath January 28, 2023
ಮೋದಿ ವಿರುದ್ಧ ಬಿಬಿಸಿ, ಪರ ಆಂಟೋನಿ!!
Hanumantha Kamath January 27, 2023
Leave A Reply

  • Recent Posts

    • ಮಂಗಳೂರಿನಲ್ಲಿ ಪೈಪುಗಳ ಮೇಲಿನ ಮಣ್ಣು ತೆಗೆಸಬಲ್ಲ ಗಂಡಸರು ಯಾರಿದ್ದಾರೆ!!
    • ಮೋದಿ ವಿರುದ್ಧ ಬಿಬಿಸಿ, ಪರ ಆಂಟೋನಿ!!
    • ಮುತಾಲಿಕ್ ಖಡ್ಗಕ್ಕೆ ಸಾಣೆ ಹಾಕಿಸಿಕೊಟ್ಟ ಚಾಣಾಕ್ಷ ಯಾರು?
    • ವೆನಲಾಕ್ ನಲ್ಲಿ ಕ್ಯಾನ್ಸರ್ ಚಿಕಿತ್ಸಾ ಘಟಕ ಯಾಕಿಲ್ಲ!!
    • ನಕಲಿ ಕಾಂತಾರಗಳು ನಮ್ಮ ನಂಬಿಕೆಗೆ ಪೆಟ್ಟು ಕೊಡಬಾರದು!!
    • ಶರದ್ ಪವಾರ್ ಕೂಡ ಗಡಿಯಲ್ಲಿ ಕಡ್ಡಿ ಅಲ್ಲಾಡಿಸಲು ಹೊರಟಿದ್ದಾರೆ!
    • ಮಂಗಳಾ ಕ್ರೀಡಾಂಗಣದ ಹೊರಗೆ ಸಿಂಗಾರ, ಒಳಗೆ ಗೋಳಿಸೊಪ್ಪು!!
    • ಹಿಂದೂಗಳ ಫಲವತ್ತತೆಯ ತಾಕತ್ತು ಪರೀಕ್ಷಿಸುತ್ತೀಯಾ ಬದ್ರುದ್ದೀನ್?
    • ಮಕ್ಕಳ ಬ್ಯಾಗಿನಲ್ಲಿ ಕಾಂಡೋಮ್ ಉತ್ತಮ ಲಕ್ಷಣವಲ್ಲ!!
    • ಬೊಮ್ಮಾಯಿ ಕಣ್ಣು ಮುಚ್ಚಿ ಕೊಟ್ಟ ಮುಸ್ಲಿಂ ಕಾಲೇಜು ಪ್ರಪಂಚ ನೋಡಿತು!!
  • Popular Posts

    • 1
      ಮಂಗಳೂರಿನಲ್ಲಿ ಪೈಪುಗಳ ಮೇಲಿನ ಮಣ್ಣು ತೆಗೆಸಬಲ್ಲ ಗಂಡಸರು ಯಾರಿದ್ದಾರೆ!!
    • 2
      ಮೋದಿ ವಿರುದ್ಧ ಬಿಬಿಸಿ, ಪರ ಆಂಟೋನಿ!!
    • 3
      ಮುತಾಲಿಕ್ ಖಡ್ಗಕ್ಕೆ ಸಾಣೆ ಹಾಕಿಸಿಕೊಟ್ಟ ಚಾಣಾಕ್ಷ ಯಾರು?


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search