ಗೊತ್ತಿದೆಯಾ ಸೈನಿಕರ ಗೋಳು, ಇನ್ನೂ ಬೇಕಾ ಚೈನಾ ಮಾಲು?
ಚೈನಾ ತನ್ನ ಹೀನ ಕ್ರತ್ಯಗಳನ್ನು ಮುಂದುವರೆಸುತ್ತಾ ಕಳೆದ ಮಂಗಳವಾರ ಸ್ವಾತಂತ್ರ್ಯ ದಿನದಂದು ಬೆಳಿಗ್ಗೆ ಅತಿಕ್ರಮಣಕ್ಕೆ ಯತ್ನಿಸಿ ಭಾರತೀಯ ಸೈನಿಕರತ್ತ ಕಲ್ಲು ತೂರಾಟ ನಡೆಸುವ ವೀಡಿಯೋ ಒಂದು ಈಗ ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದೆ. ಜಮ್ಮು ಕಾಶ್ಮೀರ ಲಡಾಖ್ ವಲಯದಲ್ಲಿ ಪ್ಯಾಂಗೋಗ್ ಸರೋವರದ ಭಾರತದ ಕಡೆ ಇರುವ ತೀರದ ಫಿಂಗರ್ ಫೋರ್,ಫಿಂಗರ್ ಫೈವ್ ಪ್ರದೇಶಗಳಲ್ಲಿ ಚೀನಾ ಪಡೆಗಳು ಮಾನವ ಸರಪಳಿ ರಚಿಸಿ ಭಾರತೀಯ ಯೋಧರ ಮೇಲೆ ಕಲ್ಲಿನ ದಾಳಿಗೆ ಮುಂದಾದಾಗ ಭಾರತೀಯ ಸೇನೆ ಕೂಡ ಅದಕ್ಕೆ ದಿಟ್ಟ ಉತ್ತರ ನೀಡಿತು.ಕೆಲವು ಸಮಯಗಳ ಕಾಲ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿಯೂ ನಿರ್ಮಾಣವಾಯಿತು.ವೈರಲ್ ಆಗಿರುವ ವೀಡಿಯೋದಲ್ಲಿ ಉಭಯ ದೇಶದ ಕೆಲ ಸೈನಿಕರು ಗಾಯಗೊಂಡಿರುವಂತೆ ಕಾಣುತ್ತಿದೆ.
ಒಂದು ಕಡೆ ಕಲ್ಲೆಸೆತದಿಂದ ಹಾಗೂ ಪದೇ ಪದೇ ಚೀನಾ ಸೈನಿಕರು ಮಾಡುತ್ತಿರುವ ಕೀಟಲೆಯಿಂದ ನಮ್ಮ ಯೋಧರು ಶತಾಯ ಗತಾಯ ಚೀನಿ ಸೈನಿಕರ ಹೆಡೆಮುರಿ ಕಟ್ಟಲು ಸಜ್ಜಾಗಿ ನಿಂತಿದ್ದಾರೆ.ಇತ್ತ ನಮ್ಮ ಪ್ರಜೆಗಳು ಇನ್ನೂ ಚೀನಾ ಮಾಲು ಖರೀದಿಸುತ್ತಿದ್ದಾರೆ.ದೇಶಕ್ಕೋಸ್ಕರ ಪ್ರಾಣವನ್ನೂ ಲೆಕ್ಕಿಸದೆ ಹೋರಾಡುತ್ತಿರುವ ಸೈನಿಕರಿಗೆ ನಾವು ಕೊಡುತ್ತಿರುವ ಉಡುಗೊರೆ ಇದೆನಾ ಎಂದು ವಿಮರ್ಶಿಸಬೇಕಾಗಿದೆ.ಎಲ್ಲಾ ಅಂಕಿ ಅಂಶಗಳು ಮತ್ತು ಸಮೀಕ್ಷೆ ಪ್ರಕಾರ ಚೀನಾದ ಬಹುಪಾಲು ಆರ್ಥಿಕ ಹೂಡಿಕೆ ಭಾರತವನ್ನೇ ಅವಲಂಬಿಸಿದೆ.ಭಾರತೀಯರೆಲ್ಲರೂ ಚೀನಾ ವಸ್ತುಗಳನ್ನು ಖರೀದಿಸಲು ನಿಲ್ಲಿಸಿದರೆ ಚೀನಾದ ಎರಡು ಕಾಲುಗಳನ್ನೇ ಕತ್ತರಿಸಿದಂತಾಗುವುದು.ಪ್ರತಿಯೊಬ್ಬ ಭಾರತೀಯ ಇದನ್ನು ಅನುಸರಿಸಿದರೆ ಸಾಮಾನ್ಯ ಪ್ರಜೆಗಳಾದ ನಾವು ಕೂಡ ಚೀನಾ ವಿರುದ್ಧ ಹೋರಾಡುವ ಯೋಧರಾಗಬಹುದು.
ಈಗ ನಿಮ್ಮಲ್ಲಿ ಚೀನಾ ವಸ್ತುಗಳು ಭಾರತದೊಳಗೆ ಪ್ರವೇಶಿಸದಂತೆ ಕೇಂದ್ರ ಸರಕಾರ ಕ್ರಮ ಕೈಗೊಳ್ಳಬಹುದಲ್ಲ ಎಂಬ ಪ್ರಶ್ನೆ ಮೂಡಬಹುದು.ಆದರೆ ಹಿಂದೆ ಬಹುರಾಷ್ಟ್ರಗಳು ಮಾಡಿರುವ ಜಾಗತಿಕ ಒಪ್ಪಂದದ ಪ್ರಕಾರ ಒಂದು ರಾಷ್ಟ್ರ ಮತ್ತೊಂದು ರಾಷ್ಟ್ರದ ಉಪಕರಣಗಳನ್ನು ತಡೆ ಹಿಡಿಯಲು ಸಾಧ್ಯವಿಲ್ಲ.ಈಗ ಇರುವ ಒಂದೇ ದಾರಿ ಎಂದರೆ ಜಾಗ್ರತಿ ಮೂಡಿಸುವ ಮೂಲಕ ಚೀನಾ ವಸ್ತುಗಳನ್ನು ಬಹಿಷ್ಕರಿಸುವುದು.ನಮ್ಮ ಸಂಪರ್ಕದಲ್ಲಿರುವ ವ್ಯಕ್ತಿಗಳ ನಡುವೆ ಸಮಯ ಸಿಕ್ಕಾಗ ಯಾವುದೋ ಅನಗತ್ಯ ವಿಷಯಗಳ ಬಗ್ಗೆ ಚರ್ಚೆ ಮಾಡುವ ಬದಲು ದೇಶದ ಹಿತದ್ರಷ್ಟಿಯಿಂದ ಈ ಬಗ್ಗೆ ಚಿಂತನೆ ಮಾಡಿ ಇದೊಂದು ಅಭಿಯಾನದ ರೀತಿಯಲ್ಲಿ ಕೈಗೊಂಡಲ್ಲಿ ಕನಿಷ್ಟ 50% ಫಲಿತಾಂಶ ಸಿಕ್ಕಿದರೂ ಚೀನಾಕ್ಕೆ ಬಲವಾದ ಸಂದೇಶ ಭಾರತೀಯ ಪ್ರಜೆಗಳಿಂದ ನೀಡಿದಂತಾಗುತ್ತದೆ.
ಜಾತಿ ಮತ ಪಕ್ಷ ಭೇಧ ಮರೆತು ನಾವೆಲ್ಲ ಭಾರತೀಯರು ಒಟ್ಟಾಗಿ ನಮ್ಮ ರಾಷ್ಟ್ರಪ್ರೇಮ ಸಾರುವ ಸಮಯ ಬಂದಿದೆ.ಸಾಮಾಜಿಕ ತಾಣಗಳ ಮೂಲಕ, ಮಾತಿನ ಮೂಲಕ, ಕಾರ್ಯದ ಮೂಲಕ ಜನಜಾಗ್ರತಿ ಮೂಡಿಸೋಣ.ಚೀನಾ ವಸ್ತುಗಳನ್ನು ಬಹಿಷ್ಕರಿಸೋಣ, ನಮ್ಮ ವೀರ ಯೋಧರಿಗೆ, ಮಾತ್ರಭೂಮಿಗೆ ನ್ಯಾಯ ಒದಗಿಸೋಣ.
Leave A Reply