• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ರಾಜೇಂದ್ರ ಕುಮಾರ್ ಸ್ಪರ್ಧಿಸಿದರೆ ಕಾಂಗ್ರೆಸ್ ಗೆಲ್ಲಲು ಏದುಸಿರು ಬಿಡಬೇಕಾಗುತ್ತದೆ!!

Hanumantha Kamath Posted On November 13, 2021


  • Share On Facebook
  • Tweet It

ನೀರಸವಾಗಿ ನಡೆಯಲಿದ್ದ ವಿಧಾನಪರಿಷತ್ ಚುನಾವಣೆಯನ್ನು ಕುತೂಹಲದ ಕಾಲಘಟ್ಟಕ್ಕೆ ತೆಗೆದುಕೊಂಡು ಹೋದ ಶ್ರೇಯಸ್ಸು ರಾಜೇಂದ್ರ ಕುಮಾರ್ ಅವರಿಗೆ ಸಲ್ಲಬೇಕು. ಬಹುತೇಕ
ಅವಿರೋಧವಾಗಿ ನಡೆಯುತ್ತಿದ್ದ ಅಥವಾ ಕಾಂಗ್ರೆಸ್ ಮತ್ತು ಭಾರತೀಯ ಜನತಾ ಪಾರ್ಟಿಯಿಂದ ಒಂದೊಂದು ಸ್ಥಾನ ಗೆಲ್ಲುವುದು ನಿಶ್ಚಿತವಾಗಿದ್ದ ಕಾಲದಲ್ಲಿ ಅಂತಹ ಥ್ರಿಲ್ ಇರಲಿಲ್ಲ. ಆದರೆ ಯಾವಾಗ ರಾಜೇಂದ್ರ ಕುಮಾರ್ ಪಕ್ಷೇತರರಾಗಿ ನಿಲ್ಲುವ ಘೋಷಣೆ ಮಾಡಿದರೋ ಅಲ್ಲಿಂದ ಈ ಚುನಾವಣೆಗೆ ಹೊಸ ತಿರುವು ಸಿಕ್ಕಿದೆ. ಅಷ್ಟಕ್ಕೂ ಲಕ್ಷಾಂತರ ಮತಗಳು ಇರುವ ಚುನಾವಣೆ ಇದು ಅಲ್ಲ. ಈ ಬಾರಿ ಎರಡು ಜಿಲ್ಲೆಯ ಮತದಾರರನ್ನು ಸೇರಿಸಿದರೆ ಒಟ್ಟು ಮತದಾರರು 5914. ಆದರೆ ವಿಧಾನಸಭಾ ಚುನಾವಣೆಗಿಂತ ಇಲ್ಲಿ ಖರ್ಚು ಜಾಸ್ತಿ ಎನ್ನುವುದು ಸ್ಪರ್ಧಿಗಳ ಅಂಬೋಣ. ಕೋಟಾ ಶ್ರೀನಿವಾಸ ಪೂಜಾರಿಯವರು ಪಕ್ಷದ ಹೆಸರಿನಿಂದ ಮತ್ತು ತಮ್ಮ ಪ್ರಾಮಾಣಿಕತೆಯಿಂದ ಖರ್ಚು ಮಾಡದೇ ಗೆಲ್ಲುತ್ತಾರೆ ಬಿಟ್ಟರೆ ಬೇರೆಯವರಿಗೆ ಎಷ್ಟು ಖರ್ಚು ಮಾಡಿದರೂ ಸಾಕಾಗುವುದಿಲ್ಲ ಎನ್ನುವ ಪರಿಸ್ಥಿತಿ ಇದೆ. ಬಹುಶ: ರಾಜೇಂದ್ರ ಕುಮಾರ್ ಸ್ಪರ್ಧಿಸುವ ಮೂಲಕ ಈ ಬಾರಿ ಕಾಂಚಣ ಗ್ರಾಮ ಪಂಚಾಯತ್ ಮಟ್ಟದಲ್ಲಿ ಹೊಳೆಯಾಗಿ ಹರಿಯಲಿದೆಯಾ ಎನ್ನುವ ಕುತೂಹಲ ಇದೆ. ಇನ್ನೊಂದು ವಿಶೇಷ ಎಂದರೆ ರಾಜೇಂದ್ರ ಕುಮಾರ್ ಅವರ ಚುನಾವಣಾ ಉಸ್ತುವಾರಿಯಾಗಿ ಬೆಳಪು ದೇವಿಪ್ರಸಾದ್ ಶೆಟ್ಟಿಯವರು ನೇಮಕಗೊಂಡಂತೆ ಕಾಣುತ್ತದೆ. ಅವರು ಈಗ ಕಾಂಗ್ರೆಸ್ಸಿಗರು. ಇನ್ನು ರಾಜೇಂದ್ರ ಕುಮಾರ್ ಅವರು ನೇಮಿಸಿರುವ ತಾಲೂಕು ಮಟ್ಟದ ಚುನಾವಣಾ ಸಮಿತಿಯಲ್ಲಿ ಇರುವವರು ಬಹುತೇಕ ಜನ ಕಾಂಗ್ರೆಸ್ಸಿಗರು. ಹಾಗಾದರೆ ಇದು ಕಾಂಗ್ರೆಸ್ಸಿಗೆ ಕೊಡುತ್ತಿರುವ ಸಂದೇಶ ಏನು? ಈಗಲೇ ತಮ್ಮ ಒಂದು ಅಭ್ಯರ್ಥಿಯನ್ನು ಪ್ರಯಾಸದಿಂದ ಗೆಲ್ಲಿಸಬೇಕಾದ ಸವಾಲಿನ ನಡುವೆ ಕಾಂಗ್ರೆಸ್ಸಿನ ಮುಖಂಡರು ಹೀಗೆ ಹಿಂಡು ಹಿಂಡಾಗಿ ಪಕ್ಷೇತರ ಅಭ್ಯರ್ತಿಯ ಗೆಲುವಿಗೆ ನಿಂತರೆ ಪರಿಸ್ಥಿತಿ ಏನಾಗಬೇಡಾ. ಕಾರ್ಕಳದಲ್ಲಿ ಮುನಿಯಾಲು ಉದಯಕುಮಾರ್ ಶೆಟ್ಟಿಯವರು ಒಂದು ಕಾಲದಲ್ಲಿ ಕಾಂಗ್ರೆಸ್ಸಿನ ಟಿಕೆಟಿನಿಂದ ಸ್ಪರ್ಧಿಸುತ್ತಾರೆ ಎನ್ನುವ ಮಾತಿತ್ತು. ಅಂತವರು ರಾಜೇಂದ್ರ ಕುಮಾರ್ ಬೆಂಬಲಕ್ಕೆ ನಿಂತಿರುವಂತೆ ಕಾಣುತ್ತಿದೆ. ಒಂದು ವೇಳೆ ಕಾಂಗ್ರೆಸ್ಸಿಗರು ಹೀಗೆ ಬಹಿರಂಗವಾಗಿ ಚುನಾವಣಾ ಸಮಿತಿಗಳಲ್ಲಿ ಕಾಣಿಸಿಕೊಂಡು ಪಕ್ಷೇತರ ಅಭ್ಯರ್ಥಿಯನ್ನು ಗೆಲ್ಲಿಸಲು ಕೆಲಸ ಮಾಡಿದರೆ ಅವರು ಕಾಂಗ್ರೆಸ್ಸಿನಿಂದ ಮುಂದೆ ಉಚ್ಚಾಟನೆಗೊಳ್ಳುತ್ತಾರಾ? ಅವರನ್ನು ಹೀಗೆ ಪಕ್ಷೇತರ ಅಭ್ಯರ್ಥಿ ಪರ ಕೆಲಸ ಮಾಡಿ ಎಂದು ಹಾಗೆ ಬಿಟ್ಟರೆ ಜಿಲ್ಲೆಗಳಿಗೆ ಕಾಂಗ್ರೆಸ್ ಅಧ್ಯಕ್ಷರು ಎಂದು ಯಾಕೆ ಇರುವುದು? ಇನ್ನು ಕಾಂಗ್ರೆಸ್ಸಿನಿಂದಲೂ ಚುನಾವಣೆಗೆ ಸ್ಪರ್ಧಿಸುವವರ ಪಟ್ಟಿ ದೊಡ್ಡದಿದೆ. ಅವರಲ್ಲಿ ಟೆಕೆಟ್ ಸಿಗದವರು ತಾವು ಗೆಲ್ಲದಿದ್ದರೂ ಪರವಾಗಿಲ್ಲ, ಬೇರೆಯವರು ಗೆಲ್ಲಬಾರದು ಎಂದು ಹೀಗೆ ಹಿಂದಿನಿಂದ ಆಟ ಆಡುತ್ತಿದ್ದಾರಾ? ಈ ಎಲ್ಲದರ ನಡುವೆ ಕಾಂಗ್ರೆಸ್ ಸೋತರೆ ಅದು ರಾಜ್ಯಮಟ್ಟದಲ್ಲಿ ಸಂಚಲನ ಮತ್ತು ಅಸಹ್ಯವನ್ನು ಏಕಕಾಲದಲ್ಲಿ ಕಾಂಗ್ರೆಸ್ಸಿಗೆ ನೀಡಲಿದೆ.

ಇನ್ನು ರಾಜೇಂದ್ರ ಕುಮಾರ್ ಗೆಲ್ಲುತ್ತಾರೋ ಇಲ್ವೋ ಅವರು ಒಂದು ರೀತಿಯಲ್ಲಿ ಅನೇಕರ ಪಾಲಿಗೆ ಹಾಲು ತುಂಬಿದ ಕಾಮಧೇನು. ಅವರಿಗೆ ವಿಧಾನಪರಿಷತ್ ಸ್ಥಾನದ ಆಸೆ ತೋರಿಸಿ ಎಷ್ಟು ಸಾಧ್ಯವೋ ಅಷ್ಟು ಲೂಟುವುದು ಅನೇಕರ ಗೇಮ್ ಪ್ಲ್ಯಾನ್ ಇದ್ದಂತೆ ಕಾಣುತ್ತದೆ. ಈ ಹಿಂದೆಯೂ ಅವರ ವಿರುದ್ಧ ಆರೋಪಗಳು ಕೇಳಿಬಂದಾಗ ಅದು ಪತ್ರಿಕೆ, ಟಿವಿಗಳಲ್ಲಿ ಬರುವುದಿಲ್ಲ. ಕೆಲವು ವೆಬ್ ಸೈಟ್ ಗಳಲ್ಲಿ ಕಾಣಿಸಿಕೊಂಡು ಹೋಗತ್ತದೆ ಬಿಟ್ಟರೆ ಮುಖ್ಯವಾಹಿನಿಯ ಮಾಧ್ಯಮಗಳಲ್ಲಿ ಯಾರೂ ಒಂದು ಅಕ್ಷರ ಹೇಳಲು ತಯಾರಿಲ್ಲ. ಯಾಕೆಂದರೆ ಅಷ್ಟು ಜಾಹೀರಾತು ಪ್ರತಿ ವರ್ಷ ಎಸ್ ಡಿಸಿಸಿ ಬ್ಯಾಂಕಿನಿಂದ ಎಲ್ಲ ಮಾಧ್ಯಮಗಳಿಗೆ ಹೋಗುತ್ತದೆ. ಇನ್ನು ಯಾರಿಗೂ ಜಾಹೀರಾತಿನ ವಿಷಯದಲ್ಲಿ ಇಲ್ಲ ಎನ್ನದ ರಾಜೇಂದ್ರ ಕುಮಾರ್ ವಿರುದ್ಧವೂ ಈ ಬಾರಿ ಹೊಗಳಿಕೊಂಡೇ ಲೇಖನಗಳು, ಸುದ್ದಿಗಳು ಬರಲಿವೆ. ಇದೆಲ್ಲವೂ ಕಾಂಗ್ರೆಸ್ಸಿಗೆ ಬಿಸಿತುಪ್ಪದಂತೆ ಆಗಲಿದೆ. ಆದ್ದರಿಂದ ಕಾಂಗ್ರೆಸ್ ಕೂಡ ಅಷ್ಟೇ ಧನಬಲ ಇರುವ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಬೇಕಿದೆ. ಇದರಿಂದ ಹಣ ಇದ್ದವರು ಮಾತ್ರ ಇಲ್ಲಿ ಸ್ಪರ್ಧಿಸುವಂತಹ ವಾತಾವರಣ ನಿರ್ಮಾಣವಾಗಿದೆ.
ಇದರೊಂದಿಗೆ ಬಿಜೆಪಿಗೆ ಇಲ್ಲಿ ಕಾಂಗ್ರೆಸ್ಸಿಗಿಂತ ಪಕ್ಷೇತರ ಅಭ್ಯರ್ಥಿಯೇ ಎದುರಾಳಿಯಾಗುವಂತಾಗಿದೆ. ಬಿಜೆಪಿಯ ಒಬ್ಬ ಅಭ್ಯರ್ಥಿ ಗೆಲ್ಲಲು ಯಾವುದೇ ಸಮಸ್ಯೆ ಇಲ್ಲ. ಎರಡನೇ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಬೇಕು ಎನ್ನುವ ಅಭಿಪ್ರಾಯ ಕಾರ್ಯಕರ್ತರಲ್ಲಿ ಇದ್ದರೂ ಈಗಿನ ತ್ರಿಕೋನ ಹೋರಾಟದಲ್ಲಿ ಅದು ಸುಲಭವೂ ಅಲ್ಲ. ಇದರ ಬದಲಿಗೆ ಕಾಂಗ್ರೆಸ್ಸಿನವರು ರಾಜೇಂದ್ರ ಕುಮಾರ್ ಅವರಿಗೆ ತಮ್ಮ ಪಕ್ಷದಿಂದ ಟಿಕೆಟ್ ಕೊಟ್ಟಿದ್ದರೆ ಸುಲಭವಾಗಿ ಒಂದು ಸೀಟ್ ಖರ್ಚಿಲ್ಲದೆ ಪಾಸಾಗುತ್ತಿತ್ತು. ಆದರೆ ರಾಜೇಂದ್ರ ಕುಮಾರ್ ಬಿಜೆಪಿಯವರೊಂದಿಗೆ ಚೆನ್ನಾಗಿ ಇದ್ದಾರೆ ಎನ್ನುವ ಕಾರಣದಿಂದ ಕಾಂಗ್ರೆಸ್ ರಾಜೇಂದ್ರ ಕುಮಾರ್ ಅವರನ್ನು ದೂರ ಇಟ್ಟಿದೆ. ಈಗ ಅದಕ್ಕೆ ಪಶ್ಚಾತ್ತಾಪ ಪಡುವಂತಹ ಪರಿಸ್ಥಿತಿ ಬರಲಿದೆ. ಇನ್ನು ಕೂಡ ರಾಜೇಂದ್ರ ಕುಮಾರ್ ಅವರ ಮನವೊಲಿಸಿ ಅವರಿಗೆ ಬೇರೆ ಏನಾದರೂ ಸ್ಥಾನಮಾನ ಕೊಡುವ ಬಗ್ಗೆ ಕಾಂಗ್ರೆಸ್ ರಾಜ್ಯ ನಾಯಕರು ಚಿಂತಿಸಿ ಮಂಗಳೂರಿಗೆ ಆಗಮಿಸಿ ಸಮಾಲೋಚನಾ ಸಭೆ ಮಾಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಆದರೆ ಪ್ರತಿ ಬಾರಿ ಆಸೆ ತೋರಿಸಿ ತಮ್ಮ ಹಣಬಲ, ಜನಬಲ ಉಪಯೋಗಿಸಿ ನಂತರ ಮೂಲೆಗುಂಪು ಮಾಡುವ ಕಾಂಗ್ರೆಸ್ ಪಕ್ಷವನ್ನು ರಾಜೇಂದ್ರ ಕುಮಾರ್ ನಂಬುತ್ತಾರಾ ಎನ್ನುವುದು ಈಗಿನ ಪ್ರಶ್ನೆ. ಒಂದು ವೇಳೆ ಇಷ್ಟೆಲ್ಲ ಆಗಿ ರಾಜೇಂದ್ರ ಕುಮಾರ್ ಸೋತರೆ ಅವರ ವರ್ಚಸ್ಸು ಕೂಡ ಹಾನಿಗೊಳಗಾಗಲಿದೆ. ಗೆದ್ದರೆ ಕಾಂಗ್ರೆಸ್ಸಿಗೆ ಬುದ್ಧಿ ಬರಲಿದೆ. ಕುತೂಹಲ ಇರುವುದೇ ನಾಮಪತ್ರ ಹಿಂತೆಗೆದುಕೊಳ್ಳುವ ದಿನ. ಕಾದು ನೋಡಿ!

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search