• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಶರಣ್-ಉದಯ್ ನಡುವೆ ಮಧ್ಯಸ್ಥಿಕೆ ಎಷ್ಟು ಬೇಗ ಆಗುತ್ತೋ ಅಷ್ಟು ಒಳ್ಳೆಯದು!

Hanumantha Kamath Posted On November 18, 2021


  • Share On Facebook
  • Tweet It

ಶರಣ್ ಪಂಪ್ವೆಲ್ ಒಂದು ಕಾಲದಲ್ಲಿ ಸಂಘ ಪರಿವಾರದ ಸಾಮಾನ್ಯ ಕಾರ್ಯಕರ್ತ. ಅವರಲ್ಲಿದ್ದ ಹಿಂದೂತ್ವದ ಕಿಚ್ಚು, ಧೈರ್ಯದಿಂದ ಬಜರಂಗದಳದ ಮುಖಂಡರಾಗಿ, ಅಲ್ಲಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿ, ನಂತರ ಈಗ ವಿಶ್ವ ಹಿಂದೂ ಪರಿಷತ್ ನ ವಿಭಾಗ ಪ್ರಮುಖರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಹುಶ: ಇನ್ನು ಇದೇ ಸಂಘಟನೆಯಲ್ಲಿ ಅವರು ಉನ್ನತ ಜವಾಬ್ದಾರಿಗಳನ್ನು ಹೊತ್ತುಕೊಳ್ಳುವ ಅವಕಾಶ ಸಿಗಬಹುದು. ಇನ್ನೊಬ್ಬರು ಉದಯ್ ಪೂಜಾರಿ ಬಳ್ಳಾಲ್ ಭಾಗ್. ಕೆಲವು ವರ್ಷಗಳ ಹಿಂದೆ ಬಿರುವೆರ್ ಕುಡ್ಲ ಎನ್ನುವ ಸಂಘಟನೆಯನ್ನು ಹುಟ್ಟು ಹಾಕಿ ಅದರ ವಿವಿಧ ಘಟಕಗಳನ್ನು ಕರಾವಳಿಯಾದ್ಯಂತ ಆರಂಭಿಸಲು ಯುವಕರಿಗೆ ಪ್ರೋತ್ಸಾಹ ನೀಡುತ್ತಾ ಬರುತ್ತಿದ್ದಾರೆ. ಪ್ರತಿ ತಿಂಗಳು ಸಾವಿರಾರು ರೂಪಾಯಿಗಳನ್ನು ಸ್ವತ: ಕೈಯಿಂದ ಮತ್ತು ಯುವಕರಿಂದ ಸಂಗ್ರಹಿಸಿ ಗಣ್ಯರ ಉಪಸ್ಥಿತಿಯಲ್ಲಿ ಅನಾರೋಗ್ಯ ಪೀಡಿತರಾಗಿರುವ ಅರ್ಹ ಫಲಾನುಭವಿಗಳಿಗೆ ನೀಡುತ್ತಾ ಬರುತ್ತಿದ್ದಾರೆ. ಬಡವರಿಗೆ ಮನೆ ಕಟ್ಟಿಕೊಟ್ಟು ಅವರ ಬಾಳಿಗೆ ಆಧಾರವಾಗಿರುವುದರಿಂದ ಹಿಡಿದು ದಸರಾ ಸಮಯದಲ್ಲಿ ಹುಲಿ ವೇಷಗಳಿಗೆ ಪ್ರೋತ್ಸಾಹ ಕೊಡುವ ಕಾರ್ಯದಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಶರಣ್ ಅವರು ಸಂಘ ಪರಿವಾರದ ಒಂದು ಅಂಗ ಸಂಘಟನೆಯಲ್ಲಿ ಬರುವುದರಿಂದ ಅವರು ತಾವು ಏನು ಕಾರ್ಯಕ್ರಮಗಳನ್ನು ಸಂಘಟನೆಯ ಬ್ಯಾನರ್ ಅಡಿ ಮಾಡಿದರೂ ಅದಕ್ಕೆ ಹಿರಿಯರ ಅನುಮತಿ ತೆಗೆದುಕೊಳ್ಳಬೇಕಾಗುತ್ತದೆ. ಅವರು ಯಾವುದೇ ಹೇಳಿಕೆ ಕೊಟ್ಟರೂ ಅದನ್ನು ವಿಶ್ವ ಹಿಂದೂ ಪರಿಷತ್ ಕೊಟ್ಟಂತೆ ಎಂದೇ ಕಾರ್ಯಕರ್ತರು ಅಂದುಕೊಳ್ಳುತ್ತಾರೆ. ಇತ್ತೀಚೆಗೆ ಬಳ್ಳಾಲ್ ಭಾಗ್ ನಲ್ಲಿ ಒಂದು ಘಟನೆಯ ವಿಚಾರ ಮುಂದಿಟ್ಟು ಅಲ್ಲಿ ನಡೆದ ಪ್ರತಿಭಟನೆಯಲ್ಲಿ ಶರಣ್ ಪಂಪ್ವೆಲ್ ಅವರು ಭಾಗವಹಿಸಿ ಬಿರುವೆರ್ ಕುಡ್ಲ ಸಂಘಟನೆಯ ವಿಷಯದಲ್ಲಿ ವಿರುದ್ಧವಾಗಿ ಮಾತನಾಡಿದ್ದಾರೆ. ಅದಕ್ಕೆ ಪ್ರತಿಯಾಗಿ ಬಿರುವೆರ್ ಕುಡ್ಲ ಸಂಘಟನೆಯವರು ಸುದ್ದಿಗೋಷ್ಟಿ ಮಾಡಿ ಶರಣ್ ತಮ್ಮ ಬಳಿ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದ್ದಾರೆ.

ಇಬ್ಬರು ಕೂಡ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಪ್ರಭಾವಿಗಳಾಗಿದ್ದಾರೆ. ಶರಣ್ ಹಿಂದೂ ಸಂಘಟನೆಯ ಮೂಲಕ ಹಿಂದೂತ್ವದ ರಕ್ಷಣೆಗಾಗಿ ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ. ಇಂತಹ ಸಂಘಟನೆಗಳು ಇರುವುದರಿಂದಲೇ ಮತಾಂಧರಿಗೆ ಹಿಂದೂಗಳ ಮೇಲೆ ದಾಳಿ, ಹಲ್ಲೆ ಮಾಡಲು ಅಷ್ಟು ಸುಲಭವಾಗಿ ಧೈರ್ಯ ಬರುವುದಿಲ್ಲ ಎನ್ನುವುದನ್ನು ಎಲ್ಲರೂ ಒಪ್ಪಿಕೊಂಡಿರುವ ವಿಷಯ. ಇನ್ನು ಉದಯ್ ಅವರು ತಮ್ಮ ಸಂಘಟನೆಯ ಹೆಸರು ಬಿರುವೆರ್ ಕುಡ್ಲ ಎಂದು ಇಟ್ಟರೂ ಎಲ್ಲ ಜಾತಿ, ಧರ್ಮದವರಿಗೆ ಆರ್ಥಿಕ ನೆರವನ್ನು ನೀಡುತ್ತಾ ಬಂದಿದ್ದಾರೆ. ಅವರ ಸಂಘಟನೆಯಲ್ಲಿ ಬ್ರಾಹ್ಮಣರಿಂದ ಹಿಡಿದು ಬಿಲ್ಲವರು, ಬಂಟರು, ಮೊಗವೀರರ ಸಹಿತ ಎಲ್ಲರೂ ಇದ್ದಾರೆ. ಇವರ ಸಂಘಟನೆಗೂ ರಾಜ್ಯೋತ್ಸವ ಪ್ರಶಸ್ತಿ ಬಂದಿದೆ. ಹೀಗಿರುವಾಗ ಈ ಕ್ಷಮೆಯಾಚನೆಯ ಹಟ ನಡುವೆ ಬಂದ ಕೂಡಲೇ ಅಲ್ಲಿ ಇಗೋ ಶುರುವಾಗುತ್ತದೆ. ಪರಸ್ಪರರಲ್ಲಿ ಯಾರು ಹೆಚ್ಚು ಪ್ರಖ್ಯಾತರು ಎನ್ನುವ ಟ್ರೋಲ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದರೆ ಎರಡೂ ಕಡೆಯಲ್ಲಿ ಹಟ ಜಿಡ್ಡುಗಟ್ಟುತ್ತದೆ. ಇದನ್ನೇ ಕಾಯುತ್ತಿರುವ ವಿಘ್ನ ಸಂತೋಷಿಗಳು ಎರಡೂ ಕಡೆಗೆ ತುಪ್ಪ ಹಾಕಿ ಬೆಂಕಿ ಕೊಟ್ಟು ಅಲ್ಲಿಯೇ ಕುಳಿತು ಚಳಿ ಕಾಯಿಸುವ ಕೆಲಸಕ್ಕೆ ಕೈ ಹಾಕುತ್ತಾರೆ. ಮನಸ್ಥಿತಿ ಎರಡೂ ಕಡೆಯವರದ್ದು ಹಾಳಾಗುತ್ತದೆ. ಇಬ್ಬರೂ ಸಮಾಜಕ್ಕೆ ಬೇಕಾದವರು. ಜೀವನಕ್ಕಾಗಿ ಇಬ್ಬರೂ ತಮ್ಮದೇ ಆದಾಯದ ಮೂಲವನ್ನು ಕಂಡುಕೊಂಡಿರಬಹುದು. ತಮ್ಮ ತನು, ಮನ, ಧನವನ್ನು ಸಂಘಟನೆಗಾಗಿ ಸುರಿಯುತ್ತಿರಬಹುದು. ಇಬ್ಬರೂ ಹಿಂದೂ ಸಮಾಜಕ್ಕೆ ಬೇಕಾದವರು. ಇವರ ನಡುವಿನ ಸಂಘರ್ಷ ಮೂರನೇಯವರಿಗೆ ಲಾಭವಾಗಬಾರದು. ಕೋವಿಡ್ ಸಮಯದಲ್ಲಿ ವಿಶ್ವ ಹಿಂದೂ ಪರಿಷತ್ ಮತ್ತು ಬಿರುವೆರ್ ಕುಡ್ಲ ಎರಡೂ ಜನಮುಖಿ ಕಾರ್ಯಗಳನ್ನು ಮಾಡಿದೆ. ಈಗ ಯಾರೋ ಕೆಲವರು ಹೊಡೆದಾಡಿಕೊಂಡದ್ದಕ್ಕೆ ಈ ಮುಖಂಡರು ಬೀದಿ ಜಗಳಕ್ಕೆ ನಿಂತರೆ ಅದರಿಂದ ಹಿಂದೂ ಸಮಾಜಕ್ಕೆ ಹಾನಿಯಾಗುತ್ತದೆ. ಈಗ ವಿವಾದ ಚಿಕ್ಕದಿದೆ. ಇದನ್ನು ಹೀಗೆ ಬಿಟ್ಟರೆ ಅದು ದೊಡ್ಡದಾಗುತ್ತದೆ. ನಂತರ ಅದನ್ನು ಸರಿಪಡಿಸಲು ಆಗುವುದಿಲ್ಲ. ಆದ್ದರಿಂದ ಇಬ್ಬರೂ ಗೌರವಿಸುವ ವ್ಯಕ್ತಿಯೊಬ್ಬರು ತಕ್ಷಣ ಮಧ್ಯಸ್ಥಿಕೆಯನ್ನು ವಹಿಸಬೇಕು. ಇಬ್ಬರನ್ನು ಕೂರಿಸಿ ವಿವಾದವನ್ನು ಬಗೆಹರಿಸಬೇಕು. ಈ ಇಬ್ಬರಿಂದಲೂ ಹಿಂದೂ ಸಮಾಜಕ್ಕೆ ಆಗಬೇಕಾದ ಕೆಲಸ ತುಂಬಾ ಇದೆ. ಈಗಾಗಲೇ ಕೆಲವು ಹಿಂದೂ ಮುಖಂಡರು ಸಂಘಟನೆಗಳಿಂದ ಅಂತರ ಕಾಯ್ದುಕೊಂಡು ತಮ್ಮ ಪಾಡಿಗೆ ತಾವಿದ್ದಾರೆ. ಇದು ಬೇರೆ ಧರ್ಮದ ಸಂಘಟನೆಗಳು ಬೆಳೆಯಲು ಅವಕಾಶ ಮಾಡಿಕೊಟ್ಟಂತೆ ಆಗುತ್ತದೆ. ಬೇರೆಯವರು ನಮ್ಮತ್ತ ಬೆರಳು ತೋರಿಸಲು ಅವಕಾಶ ಮಾಡಿಕೊಟ್ಟಂತೆ ಆಗುತ್ತದೆ. ಹಾಗೆ ಆಗದಿರಲಿ ಎನ್ನುವುದು ಎಲ್ಲರ ಆಶಯ.

ಇನ್ನು ಇಬ್ಬರಿಗೂ ಮನಸ್ಸಿನ ಆಳದಲ್ಲಿ ಪರಸ್ಪರರ ಬಗ್ಗೆ ಗೌರವ ಇದೆ. ಇಬ್ಬರೂ ಒಬ್ಬರನ್ನೊಬ್ಬರ ಸಮಾಜಸೇವೆಯ ಬಗ್ಗೆ ಹೊಗಳುತ್ತಾರೆ. ಪರಸ್ಪರರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ತಮ್ಮ ಕೈಲಾದ ವಿವಿಧ ನೆರವನ್ನು ಇಬ್ಬರೂ ನೀಡಿದ್ದಾರೆ. ಇಬ್ಬರೂ ಈಗ ಒಂದು ದೃಢ ನಿರ್ಧಾರ ಮಾಡಿ ಆದದ್ದನ್ನು ಮರೆತು ಸ್ನೇಹದಿಂದ ಇರಲು ಮನಸ್ಸು ಮಾಡಬೇಕು. ಯಾರೂ ಕಿವಿಯೂದಿದರೂ ಅದನ್ನು ಕೇಳಲ್ಲ ಎಂದು ದೃಢ ಮನಸ್ಸು ಮಾಡಬೇಕು. ತಮ್ಮ ಕಾರ್ಯಕರ್ತರಿಗೂ ಸಂದೇಶ ನೀಡಬೇಕು. ಸಾಧ್ಯವಾದರೆ ಒಂದು ಜಂಟಿ ಸುದ್ದಿಗೋಷ್ಟಿ ಮಾಡಿ ಸಮಾಜಕ್ಕೆ ಉತ್ತರ ನೀಡಬೇಕು. ಇದೇನೂ ಕಷ್ಟವಲ್ಲ. ಇಬ್ಬರನ್ನೂ ಒಂದೇ ಫೋನ್ ಕರೆ ಮೂಲಕ ಕರೆದು ಎದುರಿಗೆ ಕೂರಿಸಿ “ನನ ಉಂತಾಲೇ” ಎಂದು ಜೋರು ಮಾಡಬಲ್ಲ ಸಾಮರ್ತ್ಯ ಇರುವ ಬೆರಳೆಣಿಕೆಯ ನಾಯಕರು ಮಂಗಳೂರಿನಲ್ಲಿ ಇದ್ದಾರೆ. ಅವರು ಇನ್ನು ತಡ ಮಾಡಬಾರದು ಎನ್ನುವುದು ನಮ್ಮ ಅಪೇಕ್ಷೆ!!

  • Share On Facebook
  • Tweet It


- Advertisement -


Trending Now
ನನ್ನ ಹೆಸರಿನಲ್ಲಿ ಮನೆಯಿಲ್ಲ, ದೇಶದ ಲಕ್ಷಾಂತರ ಹೆಣ್ಣುಮಕ್ಕಳಿಗೆ ಮನೆ ನೀಡಿದ ತೃಪ್ತಿ ಇದೆ - ಮೋದಿ
Hanumantha Kamath September 29, 2023
ಎಂಪಿ: ಅತ್ಯಾಚಾರ ಆರೋಪಿ ಎನ್ಕೌಂಟರ್
Hanumantha Kamath September 29, 2023
Leave A Reply

  • Recent Posts

    • ನನ್ನ ಹೆಸರಿನಲ್ಲಿ ಮನೆಯಿಲ್ಲ, ದೇಶದ ಲಕ್ಷಾಂತರ ಹೆಣ್ಣುಮಕ್ಕಳಿಗೆ ಮನೆ ನೀಡಿದ ತೃಪ್ತಿ ಇದೆ - ಮೋದಿ
    • ಎಂಪಿ: ಅತ್ಯಾಚಾರ ಆರೋಪಿ ಎನ್ಕೌಂಟರ್
    • ಶಿಕ್ಷಕರು ಇಲ್ಲ, ಬಸ್ಸು ಇಲ್ಲ, ಬಾರ್ ಇದೆ!
    • ಆತ್ಮಹತ್ಯೆ ಸೈಟ್ ಗೂಗಲ್ ಸರ್ಚ್ ಮಾಡಿದ್ರೆ ಪೊಲೀಸರಿಗೆ ಗೊತ್ತಾಗುತ್ತೆ!
    • ತನ್ನ ದೇಶದ ಭಿಕ್ಷುಕರನ್ನು ಅರಬ್ ರಾಷ್ಟ್ರಗಳಿಗೆ ಕಳುಹಿಸುತ್ತಿರುವ ಪಾಕ್!
    • ಇಲ್ಲಿ ಭಾವನೆ, ಅನಿವಾರ್ಯತೆ ಮತ್ತು ವಾಸ್ತವಕ್ಕೆ ಜಾಗ ಇಲ್ಲ!
    • ಅಯೋಧ್ಯೆ ರಾಮಮಂದಿರ ಪ್ರಾಣ ಪ್ರತಿಷ್ಟೆ ಡೇಟ್ ಫಿಕ್ಸ್!
    • ಮಾಂಸಾಹಾರಕ್ಕೆ ಹಲಾಲ್, ಸಸ್ಯಾಹಾರಕ್ಕೆ ಸಾತ್ವಿಕ್!
    • ಮದ್ಯ: ಗೋವಾ ಕನಿಷ್ಟ, ಕರ್ನಾಟಕ ಗರಿಷ್ಟ!
    • ರೈಲು ಬೋಗಿಗಳು ಆವತ್ತು ಮತ್ತು ಇವತ್ತು!
  • Popular Posts

    • 1
      ನನ್ನ ಹೆಸರಿನಲ್ಲಿ ಮನೆಯಿಲ್ಲ, ದೇಶದ ಲಕ್ಷಾಂತರ ಹೆಣ್ಣುಮಕ್ಕಳಿಗೆ ಮನೆ ನೀಡಿದ ತೃಪ್ತಿ ಇದೆ - ಮೋದಿ
    • 2
      ಎಂಪಿ: ಅತ್ಯಾಚಾರ ಆರೋಪಿ ಎನ್ಕೌಂಟರ್
    • 3
      ಶಿಕ್ಷಕರು ಇಲ್ಲ, ಬಸ್ಸು ಇಲ್ಲ, ಬಾರ್ ಇದೆ!
    • 4
      ಆತ್ಮಹತ್ಯೆ ಸೈಟ್ ಗೂಗಲ್ ಸರ್ಚ್ ಮಾಡಿದ್ರೆ ಪೊಲೀಸರಿಗೆ ಗೊತ್ತಾಗುತ್ತೆ!
    • 5
      ತನ್ನ ದೇಶದ ಭಿಕ್ಷುಕರನ್ನು ಅರಬ್ ರಾಷ್ಟ್ರಗಳಿಗೆ ಕಳುಹಿಸುತ್ತಿರುವ ಪಾಕ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search