ಅಮಾನ್ಯಗೊಂಡ ಹಳೆ ನೋಟು ಸಾಗಾಟ ಮೂವರು ಬಂದನ
ಹಳೆ ನೋಟು ಸಾಗಾಟ ಮಾಡುತ್ತಿದ್ದ ಕಣ್ಣೂರು ನಿವಾಸಿ ಜುಬೈರ್ ಹಮ್ಮಬ್ಬ, ಪಡೀಲ್ ನಿವಾಸಿ ದೀಪಕ್ ಕುಮಾರ್, ಬಜ್ಪೆ ನಿವಾಸಿ ಅಬ್ದುಲ್ ನಾಸಿರ್ ನನ್ನು ಸದ್ಯ ಪೊಲೀಸರು ಬಂಧಿಸಿದ್ದಾರೆ. ಸರ್ಕಾರಕ್ಕೆ ಮತ್ತು ಸಾರ್ವಜನಿಕರಿಗೆ ವಂಚನೆ ಮಾಡಿ ಅಕ್ರಮ ಲಾಭಕ್ಕಾಗಿ ಸಾಗಾಟ ಮಾಡುತ್ತಿದ್ದರು ಎನ್ನುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ.ದಕ್ಷಿಣ ಕನ್ನಡ: ಭಾರತ ಸರ್ಕಾರದಿಂದ ಅಮಾನ್ಯಗೊಂಡ 1,92,50,000 ರೂಪಾಯಿ ಮೌಲ್ಯದ ಹಳೆ ನೋಟು ಪತ್ತೆಯಾಗಿದೆ.
ಮಂಗಳೂರಿನ ಲಾಲ್ಬಾಗ್ ಬಳಿ ಬರ್ಕೆ ಪೊಲೀಸರು ಇನೋವಾ ಕಾರು ತಪಾಸಣೆ ನಡೆಸಿದ್ದು, ಹಳೆ ನೋಟು ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಹಳೆ ನೋಟು ಸಾಗಾಟ ಮಾಡುತ್ತಿದ್ದ ಕಣ್ಣೂರು ನಿವಾಸಿ ಜುಬೈರ್ ಹಮ್ಮಬ್ಬ, ಪಡೀಲ್ ನಿವಾಸಿ ದೀಪಕ್ ಕುಮಾರ್, ಬಜ್ಪೆ ನಿವಾಸಿ ಅಬ್ದುಲ್ ನಾಸಿರ್ ನನ್ನು ಸದ್ಯ ಪೊಲೀಸರು ಬಂಧಿಸಿದ್ದಾರೆ. ಸರ್ಕಾರಕ್ಕೆ ಮತ್ತು ಸಾರ್ವಜನಿಕರಿಗೆ ವಂಚನೆ ಮಾಡಿ ಅಕ್ರಮ ಲಾಭಕ್ಕಾಗಿ ಸಾಗಾಟ ಮಾಡುತ್ತಿದ್ದರು ಎನ್ನುವುದು ತನಿಖೆ ವೇಳೆ ಬೆಳಕಿಗೆ ಬಂದಿದೆ. ಸದ್ಯ ಬರ್ಕೆ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
Leave A Reply