• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ವಕ್ಫ್ ಬೋರ್ಡಿಗೆ ಮಾಣಿಪ್ಪಾಡಿ ಅಧ್ಯಕ್ಷರನ್ನಾಗಿ ಮಾಡಿದ್ದರೆ ಕಾಂಗ್ರೆಸ್ಸಿಗರು ನಿದ್ದೆಯಲ್ಲೂ ಬೆಚ್ಚಿಬೀಳುತ್ತಿದ್ದರು, ಆದರೆ ಬಿಜೆಪಿ ಮಾಡಿದ್ದೇನು!!

Hanumantha Kamath Posted On November 19, 2021


  • Share On Facebook
  • Tweet It

ಭಾರತೀಯ ಜನತಾ ಪಾರ್ಟಿಗೆ ತಾವು ಏನು ಮಾಡಿದರೂ ಮೋದಿ ಇರುವ ತನಕ ಸೋಲುವುದಿಲ್ಲ ಎನ್ನುವ ಭ್ರಮೆ ಇರಬಾರದು. ತಲೆಯನ್ನು ಹೆಗಲ ಮೇಲೆ ಇಟ್ಟುಕೊಂಡರೆ ಒಳ್ಳೆಯದು. ಇಲ್ಲದೇ ಹೋದರೆ ಕೊನೆಗೆ ಕಾರ್ಯಕರ್ತರು ಕೂಡ ದೂರ ಹೋಗಿಬಿಡಬಹುದು. ನಂತರ ಪಶ್ಚಾತ್ತಾಪ ಪಟ್ಟರೆ ಪ್ರಯೋಜನವಿರುವುದಿಲ್ಲ. ಇದು ಹೇಳಬೇಕಾದ ಪ್ರಸಂಗ ಬಂದಿರುವುದು ರಾಜ್ಯ ವಕ್ಫ್ ಬೋರ್ಡ್ ಅಧ್ಯಕ್ಷರ ಆಯ್ಕೆಯ ಸಂದರ್ಭದಲ್ಲಿ. ಬಿಜೆಪಿ ಸರಕಾರ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ವಕ್ಫ್ ಬೋರ್ಡಿಗೆ ಅವರದ್ದೇ ಪಕ್ಷದ ಒಬ್ಬ ನಿಷ್ಟಾವಂತ ಮುಖಂಡರನ್ನೋ, ಕಾರ್ಯಕರ್ತರನ್ನೋ ಮಾಡಿದ್ದಿದ್ದರೆ ಬಿಜೆಪಿಗೆ ಒಂದಕ್ಕಿಂತ ಹೆಚ್ಚು ಲಾಭ ಇತ್ತು. ಅದರಲ್ಲಿಯೂ ಅನ್ವರ್ ಮಾಣಿಪ್ಪಾಡಿಯಂತವರನ್ನು ವಕ್ಫ್ ಬೋರ್ಡಿಗೆ ಅಧ್ಯಕ್ಷರನ್ನಾಗಿ ಮಾಡಿದಿದ್ದರೆ ಬಿಜೆಪಿಗೆ ತುಂಬಾ ಲಾಭವಾಗುತ್ತಿತ್ತು. ಈಗ ಯಾವುದೋ ಎಸ್ ಎಸ್ ಎಫ್ ಎನ್ನುವ ಸಂಘಟನೆಯ ಶಫಿ ಸಾದಿ ಎಂಬುವವರನ್ನು ಅಧ್ಯಕ್ಷರನ್ನಾಗಿ ಮಾಡಿರುವುದರಿಂದ ಬಿಜೆಪಿ ಟ್ರಾಕ್ ತಪ್ಪಿರಬಹುದು ಎನ್ನುವುದು ರಾಜಕೀಯ ಪಂಡಿತರಿಗೆ ತುಂಬಾ ಸ್ಪಷ್ಟವಾಗಿ ಕಾಣುತ್ತಿದೆ. ಬಿಡಿ, ಇದಕ್ಕೆ ರಾಜಕೀಯ ಪಂಡಿತರೇ ಆಗಬೇಕಿಲ್ಲ.

ಈಗ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿಗರು ಬರೆಯುತ್ತಿರುವ ಕೋಪತಾಪವನ್ನು ಗಮನಿಸಿದರೆ ಸಾಕು, ಕೆಳಮಟ್ಟದ ಕಾರ್ಯಕರ್ತರಿಗೂ ಇದು ಅರ್ಥವಾಗಿದೆ ಎನ್ನುವುದು ದಿಟ. ಮೊದಲನೇಯದಾಗಿ ಬಿಜೆಪಿ ಕಳೆದ ಬಾರಿ ಚುನಾವಣೆಗೆ ಹೋಗುವ ಮೊದಲು ಅಂದರೆ 2018 ರಲ್ಲಿ ಯಾವ ವಿಷಯ ಹಿಡಿದುಕೊಂಡು ಆಕಾಶ, ಭೂಮಿಯನ್ನು ಒಂದು ಮಾಡಿತ್ತು ಎನ್ನುವುದನ್ನು ನೋಡೋಣ. ಯಡ್ಡಿ ಆಗ ವೀರಾವೇಶದಿಂದ ಹೋರಾಡಿದ್ದು ವಕ್ಫ್ ಆಸ್ತಿಯನ್ನು ನುಂಗಿ, ನೀರು ಕುಡಿದವರನ್ನು ಅಧಿಕಾರಕ್ಕೆ ಬಂದ ಕೂಡಲೇ ಜೈಲಿಗೆ ಕಳುಹಿಸುತ್ತೇನೆ ಎನ್ನುವ ವಿಷಯ ಇಟ್ಟುಕೊಂಡು ಹೋರಾಟ ಸಂಘಟಿಸಿದ್ದರು. ಬಿಜೆಪಿ ಮುಖಂಡರು ಸರದಿಯಲ್ಲಿ ಕಾಂಗ್ರೆಸ್ ನಾಯಕರನ್ನು ಹೀಯಾಳಿಸಿದ್ದು, ಟೀಕಿಸಿದ್ದು, ವ್ಯಂಗ್ಯ ಮಾಡಿದ್ದು ಎಲ್ಲವೂ ನಡೆದು ಹೋಗಿತ್ತು. ಅಷ್ಟಕ್ಕೂ ಆ ವಕ್ಫ್ ಆಸ್ತಿಯಲ್ಲಿ ಕಾಂಗ್ರೆಸ್ಸಿಗರು ತಿಂದು ತೇಗಿದ ಮೊತ್ತ ಎಷ್ಟು ಸಾವಿರ, ಲಕ್ಷ. ಕೋಟಿ ಎನ್ನುವುದು ಅಂದಾಜು ಸಿಗದಷ್ಟು ಬ್ರಹ್ಮಾಂಡ ಭ್ರಷ್ಟಾಚಾರವಾಗಿತ್ತು. ಅದು ಕ್ಯಾಲ್ಕುಲೇಟರ್ ಮೀರಿದ್ದು ಎನ್ನುವುದು ಎಲ್ಲರಿಗೂ ಗೊತ್ತಿದೆ. ಇನ್ನು ನಿಖರವಾಗಿ ಬಿಜೆಪಿ ಮುಖಂಡ ಅನ್ವರ್ ಮಾಣಿಪ್ಪಾಡಿ ಪಟ್ಟಾಗಿ ತಿಂಗಳುಗಟ್ಟಲೆ ಕುಳಿತು ರಾಜ್ಯದ ಉದ್ದಗಲಕ್ಕೆ ಯಾರ್ಯಾರು ಅತಿಕ್ರಮಣ ಮಾಡಿದ್ದಾರೆ, ಅದರ ಜಾಗಗಳ ಪಟ್ಟಿ, ಅಂದಾಜು ಮೊತ್ತ ಎಲ್ಲವನ್ನು ಕಲೆ ಹಾಕಿದ್ದರು. ಅಷ್ಟು ಮೊತ್ತವನ್ನು ಕಾಂಗ್ರೆಸ್ ಮುಖಂಡರಿಂದ ವಸೂಲಿ ಮಾಡುತ್ತೇವೆ, ಮುಸ್ಲಿಂ ಸಮುದಾಯಕ್ಕೆ ನ್ಯಾಯ ಕೊಡಿಸುತ್ತೇವೆ ಎಂದು ಆವತ್ತು ಯಡ್ಡಿ ಹೇಳುತ್ತಿದ್ದರೆ ಬಿಜೆಪಿ ಕಾರ್ಯಕರ್ತ ನಂಬಿಬಿಟ್ಟಿದ್ದ.

ಅದರ ನಂತರ ಚುನಾವಣೆ ನಡೆಯಿತು. ಚೌ ಚೌ ಸರಕಾರ ಬಂತು. ಆ ಬಳಿಕ ಯಡ್ಡಿ ಸರಕಾರವೂ ಬಂತು. ಅನ್ವರ ಮಾಣಿಪ್ಪಾಡಿ ಫೈಲ್ ಹಿಡಿದು ಯಡ್ಡಿ ಬಳಿ ಹೋದರೆ ನಂತರ ಏನಾಯಿತು? ಅವರಿಗೆ ಎಷ್ಟು ಕೋಟಿಯ ಆಮಿಷ ಒಡ್ಡಲಾಯಿತು? ಆಮಿಷ ಒಡ್ಡಿದವರು ಯಡ್ಡಿಗೆ ಏನಾಗಬೇಕು? ಆ ಹಣ ಬೇಡಾ ಎಂದು ತಾವು ಹೊರಗೆ ಬಂದೆ ಎಂದು ಅನ್ವರ್ ಮಂಗಳೂರಿನ ಟಿವಿಯೊಂದಕ್ಕೆ ಹೆಸರುಗಳ ಸಹಿತ ನೇರಪ್ರಸಾರದಲ್ಲಿ ಹೇಳಿದ್ದಾರೆ. ಹೋಗಲಿ, ಅದರ ನಂತರ ಅನ್ವರ್ ಅವರಿಗೆ ಬಂದ ಬೆದರಿಕೆ ಕರೆಗಳು ಒಂದೆರಡಲ್ಲ. ಬಿಜೆಪಿಯನ್ನು ನಂಬಿ ಅನ್ವರ್ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಬಯಲಿಗೆ ಎಳೆದಿದ್ದರು. ಆದರೆ ಅವರಿಗೆ ಭ್ರಮ ನಿರಸವಾಗಿದೆ. ಈಗ ಅವರು ಯಾರನ್ನೂ ನಂಬುವ ಸ್ಥಿತಿಯಲ್ಲಿಲ್ಲ. ತಮ್ಮಷ್ಟಕ್ಕೆ ತಾವು ಇದ್ದಾರೆ. ಅವರಿಗೆ ಬಿಜೆಪಿ ಮೇಲೆ ವಿಶ್ವಾಸ ಇದ್ದಂತೆ ಕಾಣುವುದಿಲ್ಲ. ಈಗ ಯಡ್ಡಿ ಸಿಎಂ ಅಲ್ಲ. ಕನಿಷ್ಟ ಅನ್ವರ್ ಅವರನ್ನು ಕರೆಸಿ ಈ ಬಗ್ಗೆ ಏನಾದರೂ ಮಾಡೋಣ ಎಂದು ಹೇಳುವಷ್ಟು ಧೈರ್ಯ ಬಸವರಾಜು ಅವರಿಗೆ ಇದ್ದಂತೆ ಕಾಣುವುದಿಲ್ಲ. ಅವರದ್ದೇನಿದ್ದರೂ ಯಡ್ಡಿ ಪಾದರಕ್ಷೆಯನ್ನು ಸಿಂಹಾಸನದಲ್ಲಿ ಇಟ್ಟು ರಾಜ್ಯಭಾರ ಮಾಡುವ ಪರಿಸ್ಥಿತಿ ಇರಬಹುದು. ಆದರೆ ಬಿಜೆಪಿಯವರು ತೀರಾ ತಮ್ಮನ್ನು ವಾಮಾಗೋಚರವಾಗಿ ಬೈಯುತ್ತಿದ್ದವರನ್ನು ಕರೆದು ಸ್ಥಾನಮಾನ ಕೊಡುವ ಮಟ್ಟಕ್ಕೆ ಹೋಗಬಾರದು. ರಾಜಕೀಯ ಇದ್ದದ್ದೇ. ಆದರೆ ಶತ್ರು ಸಂಘಟನೆಯಲ್ಲಿ ಇದ್ದವರನ್ನು ಕರೆದು ನೀವು ನಮ್ಮವರು ಎನ್ನುವುದು ಸಾಮಾನ್ಯ ಕಾರ್ಯಕರ್ತರಿಗೆ ನುಂಗದ ಪರಿಸ್ಥಿತಿ ತಂದುಬಿಡಬಹುದು. ಶಫಿ ಸಾದಿ ಅವರ ಆಯ್ಕೆಯಾದ ಕೂಡಲೇ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಕಾರ್ಯಕರ್ತರ ಅಸಮಾಧಾನ ಹೊರಗೆ ಬಿದ್ದಿದೆ. ಎಸ್ ಎಸ್ ಎಫ್ ನಲ್ಲಿ ಇದ್ದವರನ್ನು ಕರೆದು ರೆಡ್ ಕಾರ್ಪೆಟ್ ಹಾಸುವುದು ಬೇಡಾ ಎನ್ನುವುದು ಒಂದು ಅಭಿಪ್ರಾಯವಾದರೆ ನಮ್ಮಲ್ಲಿ ಯಾರೂ ಇಲ್ವಾ ಎನ್ನುವುದು ಇನ್ನೊಂದು. ಒಂದು ವೇಳೆ ಅನ್ವರ್ ಮಾಣಿಪ್ಪಾಡಿಯವರನ್ನು ಕರೆದು ಜವಾಬ್ದಾರಿ ಕೊಟ್ಟಿದ್ದರೆ ಅವರು ಇದನ್ನೊಂದು ಹೋರಾಟವನ್ನಾಗಿ ತೆಗೆದುಕೊಂಡು ಬೀದರ್ ನಿಂದ ಉಳ್ಳಾಲದ ತನಕ ವಕ್ಫ್ ಬೋರ್ಡಿನ ಆಸ್ತಿ ಹೊಡೆದವರನ್ನು ಹಣ್ಣುಗಾಯಿ ನೀರುಗಾಯಿ ಮಾಡುತ್ತಿದ್ದರು. ಅವರು ಆ ಮಟ್ಟಿಗೆ ಪ್ರಾಮಾಣಿಕ ಕೆಲಸ ಮಾಡುತ್ತಿದ್ದರೆಂಬುವುದರಲ್ಲಿ ಯಾವುದೇ ಸಂಶಯವೇ ಇಲ್ಲ. ಒಂದು ವೇಳೆ ಅವರು ಹಣಕ್ಕೆ ಬಾಯಿ ಬಿಡುತ್ತಿದ್ದರೆ ಈ ವರದಿ ತಯಾರಿಸುವ ಶ್ರಮವೇ ಬೇಕಾಗಿರಲಿಲ್ಲ. ಒಂದು ವೇಳೆ ವರದಿ ತಯಾರಿಸಿದರೂ ಅವರೇ ಹೇಳಿದ ಹಾಗೆ ಯಡ್ಡಿ ಆಫರ್ ಮಾಡಿದ ಕೋಟಿಗಳನ್ನು ತೆಗೆದುಕೊಂಡು ಸುಮ್ಮನೆ ಕೂರಬಹುದಿತ್ತು. ಆದರೆ ಮಾಣಿಪ್ಪಾಡಿ ಹಾಗೆ ಮಾಡಿರಲಿಲ್ಲ. ಆದ್ದರಿಂದ ಒಂದು ವೇಳೆ ಬಿಜೆಪಿ ಸರಕಾರಕ್ಕೆ ನಿಜವಾಗಲೂ ಕಾಂಗ್ರೆಸ್ಸಿಗರ ಮುಖವಾಡ ಕಳಚಬೇಕು ಎಂದು ಇದ್ದಲ್ಲಿ ಒಬ್ಬ ಪ್ರಾಮಾಣಿಕ ವ್ಯಕ್ತಿಯನ್ನು ವಕ್ಫ್ ಬೋರ್ಡ್ ಅಧ್ಯಕ್ಷರನ್ನಾಗಿ ಮಾಡಬಹುದಿತ್ತು. ಆದರೆ ಮಾಡಲಿಲ್ಲ. ಯಾಕೋ ಅಧಿಕಾರ ಯಾವೆಲ್ಲ ರುಚಿಯನ್ನು ನೀಡುತ್ತದೆ ಎಂದು ಗೊತ್ತಾಗುವುದಿಲ್ಲ. ಹೊಂದಾಣಿಕೆ ಎನ್ನುವುದು ಬೇಕು, ಆದರೆ ಇಷ್ಟೊಂದಾ!!

  • Share On Facebook
  • Tweet It


- Advertisement -


Trending Now
ಮಂಗಳೂರಿನಲ್ಲಿ ಪೈಪುಗಳ ಮೇಲಿನ ಮಣ್ಣು ತೆಗೆಸಬಲ್ಲ ಗಂಡಸರು ಯಾರಿದ್ದಾರೆ!!
Hanumantha Kamath January 28, 2023
ಮೋದಿ ವಿರುದ್ಧ ಬಿಬಿಸಿ, ಪರ ಆಂಟೋನಿ!!
Hanumantha Kamath January 27, 2023
Leave A Reply

  • Recent Posts

    • ಮಂಗಳೂರಿನಲ್ಲಿ ಪೈಪುಗಳ ಮೇಲಿನ ಮಣ್ಣು ತೆಗೆಸಬಲ್ಲ ಗಂಡಸರು ಯಾರಿದ್ದಾರೆ!!
    • ಮೋದಿ ವಿರುದ್ಧ ಬಿಬಿಸಿ, ಪರ ಆಂಟೋನಿ!!
    • ಮುತಾಲಿಕ್ ಖಡ್ಗಕ್ಕೆ ಸಾಣೆ ಹಾಕಿಸಿಕೊಟ್ಟ ಚಾಣಾಕ್ಷ ಯಾರು?
    • ವೆನಲಾಕ್ ನಲ್ಲಿ ಕ್ಯಾನ್ಸರ್ ಚಿಕಿತ್ಸಾ ಘಟಕ ಯಾಕಿಲ್ಲ!!
    • ನಕಲಿ ಕಾಂತಾರಗಳು ನಮ್ಮ ನಂಬಿಕೆಗೆ ಪೆಟ್ಟು ಕೊಡಬಾರದು!!
    • ಶರದ್ ಪವಾರ್ ಕೂಡ ಗಡಿಯಲ್ಲಿ ಕಡ್ಡಿ ಅಲ್ಲಾಡಿಸಲು ಹೊರಟಿದ್ದಾರೆ!
    • ಮಂಗಳಾ ಕ್ರೀಡಾಂಗಣದ ಹೊರಗೆ ಸಿಂಗಾರ, ಒಳಗೆ ಗೋಳಿಸೊಪ್ಪು!!
    • ಹಿಂದೂಗಳ ಫಲವತ್ತತೆಯ ತಾಕತ್ತು ಪರೀಕ್ಷಿಸುತ್ತೀಯಾ ಬದ್ರುದ್ದೀನ್?
    • ಮಕ್ಕಳ ಬ್ಯಾಗಿನಲ್ಲಿ ಕಾಂಡೋಮ್ ಉತ್ತಮ ಲಕ್ಷಣವಲ್ಲ!!
    • ಬೊಮ್ಮಾಯಿ ಕಣ್ಣು ಮುಚ್ಚಿ ಕೊಟ್ಟ ಮುಸ್ಲಿಂ ಕಾಲೇಜು ಪ್ರಪಂಚ ನೋಡಿತು!!
  • Popular Posts

    • 1
      ಮಂಗಳೂರಿನಲ್ಲಿ ಪೈಪುಗಳ ಮೇಲಿನ ಮಣ್ಣು ತೆಗೆಸಬಲ್ಲ ಗಂಡಸರು ಯಾರಿದ್ದಾರೆ!!
    • 2
      ಮೋದಿ ವಿರುದ್ಧ ಬಿಬಿಸಿ, ಪರ ಆಂಟೋನಿ!!
    • 3
      ಮುತಾಲಿಕ್ ಖಡ್ಗಕ್ಕೆ ಸಾಣೆ ಹಾಕಿಸಿಕೊಟ್ಟ ಚಾಣಾಕ್ಷ ಯಾರು?


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search