ಉಡುಪಿ: 1.80 ಲಕ್ಷ ಬೆಲೆಗೆ ಮಾರಾಟವಾದ ಅಪರೂಪದ ಘೋಲ್ ಮೀನು!
Posted On November 24, 2021
ಮಲ್ಪೆ ಕಡಲಲ್ಲಿ ಕೋಲಿ ಗಂಗಾಮತ ಮೊಗವೀರ ಸಮುದಾಯದ ಮೀನುಗಾರರ ಬಲೆಗೆ ಬಿದ್ದ 20 ಕೆಜಿ ತೂಕದ ಒಂದೂ ಲಕ್ಷದ ಎಂಬತ್ತು ಸಾವಿರ ರೂಪಾಯಿಗಳ ಬೆಲೆ ಬಾಳುವ ಅಪರೂಪದ ಗೋಲಿ ( ಘೋಲ್) ಮೀನು.
ಈ ಗೋಲ್ ಎಂಬ ಅಪರೂಪದ ಮೀನಾಗಿದ್ದು, ಅತೀ ಹೆಚ್ಚಾಗಿ ಔಷಧಿ ತಯಾರಿಕೆಗೆ ಬಳಸಲಾಗುತ್ತದೆ. ಮಧುಮೇಹ, ಅಸ್ತಮಾದಂತಹ ಖಾಯಿಲೆಗಳ ಔಷಧಿಗೆ ಈ ಮೀನನ್ನು ಬಳಸಲಾಗುತ್ತದೆ. ಆಳ ಸಮುದ್ರದಲ್ಲಿರುವ ಈ ಮೀನು ಕಲ್ಲು ಬಂಡೆಗಳ ಅಡಿಯಲ್ಲಿ ವಾಸವಾಗಿರುತ್ತದೆ. ಆದರೆ ಮೀನುಗಾರರ ಬಲೆಗೆ ಬೀಳೋದು ಬಲು ಅಪರೂಪವಾಗಿದೆ.
ಗೋಲ್ ಮೀನು ಕಲ್ಮುರಿಯಂತೆ ಸಂದಿಗೊಂದುಗಳಲ್ಲಿ ಬದುಕುವ ಮೀನು. ಬಲೆಗೆ ಬೀಳುವುದು ಕಡಿಮೆ. ಇದರ ಜೀವಶಾಸ್ತ್ರೀಯ ದ್ವಿನಾಮಕರಣ Protonibea diacanthus. ಐಯೋಡಿನ್, ಒಮೆಗಾ-3 ಕೊಬ್ಬಿನ ಆಮ್ಲ, ಡಿ.ಎಚ್.ಎ, ಎ.ಪಿ.ಇ, ಕಬ್ಬಿಣ, ಮೆಗ್ನೀಶಿಯಮ್, ಸೆಲೆನಿಯಮ್ ಮುಂತಾದ ಪೋಷಕಾಂಶಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುವ ಈ ಮೀನಿಗೆ ಔಷದೀಯ ಗುಣವಿರುತ್ತದೆ ಎನ್ನಲಾಗುತ್ತದೆ. ಅದರಲ್ಲೂ ಈ ಮೀನಿನ ಜಠರ ಭಾಗದಲ್ಲಿ ಇರುವ ಚೀಲದಂತಹ ರಚನೆಗೆ ಸಿಂಗಪೂರ್, ಹಾಂಗ್ ಕಾಂಗ್ ಇಂಡೋನೇಶಿಯಾ, ಜಪಾನ್ ಗಳಲ್ಲಿ ಬಹು ಬೇಡಿಕೆಯಿದೆ. ಈ ಚೀಲವೇ ಗೋಳಿಮೀನನ್ನು ಗೋಲ್ಡ್ ಫಿಶ್ ಎಂದು ಕರೆಯುವಂತೆ ಮಾಡಿದೆ.
ಗೋಲ್ ಮೀನಿನ ಚರ್ಮದಿಂದ ಸಂಸ್ಕರಿಸಲಾಗುವ ಕೊಲ್ಲಾಜೆನ್ ಚರ್ಮದ ಕಾಂತಿಯನ್ನು ಹೆಚ್ಚಿಸಿ ವಯಸ್ಸಾಗುವಿಕೆಯನ್ನು ತಡೆಯಬಲ್ಲದು ಎನ್ನುತ್ತಾರೆ. ನಮ್ಮ ದೇಹದ ವಿವಿಧ ಅಂಗಾಂಶಗಳನ್ನು ಅಂಟಿನಂತೆ ಜೋಡಿಸುವ ಒಂದು ಪ್ರೋಟಿನ್ ಯುಕ್ತ ವಸ್ತುವೇ ಕೊಲ್ಲಾಜೆನ್.. ಇದು ಎಲ್ಲ ಪ್ರಾಣಿಗಳ ದೇಹದಲ್ಲಿರುತ್ತದೆ. ಚರ್ಮದ ಭಾಗದಲ್ಲಿ ಹೆಚ್ಚಾಗಿರುತ್ತದೆ. ಸೌಂದರ್ಯ ವರ್ಧಕ ಕ್ರೀಮುಗಳಲ್ಲಿ ಕೊಲ್ಲಾಜೆನ್ ಸೇರಿಸುತ್ತಾರಾದರೂ ಚರ್ಮದ ಮೂಲಕ ಈ ವಸ್ತು ಹೀರಿಕೆಯಾಗುವುದು ಅನುಮಾನ. ಒಮೆಗಾ-3 ಕೊಬ್ಬಿನ ಆಮ್ಲದ ಆರೋಗ್ಯ ಮಹತ್ವದ ಬಗ್ಗೆ ಗೊತ್ತೇ ಇದೆ- ಇದು ಹೃದಯ ಮತ್ತು ಮೆದುಳಿನ ಆರೋಗ್ಯವನ್ನು ಕಾಪಾಡುತ್ತದೆ. ಫಾರ್ಮಾಸುಟಿಕಲ್ ಕಂಪನಿಯವರೇ ಈ ಮೀನುಗಳ ಹರಾಜಿನಲ್ಲಿ ಭಾಗವಹಿಸುತ್ತಾರೆಂದು ಕೇಳಿರುವೆ. ಆದುದರಿಂದ ಬೇರೆ ಬೇರೆ ಔಷದಿಗಳಲ್ಲಿ ಇದರ ಉಪಯೋಗವಿದೆ ಎಂದು ಊಹಿಸಬಹುದು. ಅರಬ್ಬಿ ಸಮದ್ರ ಮತ್ತು ಫೆಸಿಫಿಕ್ ಸಾಗರಗಳ ನಡುವೆ ಹೆಚ್ಚಾಗಿ ಕಂಡುಬರುವ ಈ ಮೀನು ಸಮುದ್ರದಲ್ಲಿರುವ ಬಂಗಾರದ ಕೊಪ್ಪರಿಗೆಯಾಗಿದೆ.
ಎರಡು ತಿಂಗಳ ಹಿಂದೆ ಮಹಾರಾಷ್ಟ್ರದ ತುಕಾರಾಮ್ ತಾರೆ ಎಂಬವರ ಒಂದೇ ಬಲೆಗೆ ನೂರೈವತ್ತೇಳು ಗೋಳಿಮೀನುಗಳು ಬಿದ್ದಿದ್ದವು. ಒಂದು ಕೋಟಿ ಮೂವತ್ಮೂರು ಲಕ್ಷ ರೂಪಾಯಿಗಳಷ್ಟು ಹಣಕ್ಕೆ ಆ ಮೀನುಗಳು ಮಾರಾಟವಾಗಿದ್ದವು.
- Advertisement -
Trending Now
ದೇಶದ್ರೋಹಿ ಹೇಳಿಕೆ ವಿರುದ್ಧ ಬಿಜೆಪಿ ಪ್ರತಿಭಟನೆ.
August 30, 2024
Leave A Reply