ಉದ್ಯೋಗ ಕೊಡುವುದರಲ್ಲಿ ಇಲ್ಲಿದೆ ಕೋಟಿ ಬಾಚುವ ಅವಕಾಶ!
ಮಂಗಳೂರು ವಿಶ್ವವಿದ್ಯಾನಿಲಯದ ಕರ್ಮಕಾಂಡದ ಕಥೆ ಹೇಳಿದಷ್ಟು ಮುಗಿಯದ ಲೆವೆಲ್ಲಿನಲ್ಲಿದೆ. ಇಲ್ಲಿ 58 ಕೋಟಿ ರೂಪಾಯಿ ವೆಚ್ಚದಲ್ಲಿ ಒಂದು ಕಟ್ಟಡದ ನಿರ್ಮಾಣವಾಗುತ್ತಿದೆ. ಇದು ಸಂಪೂರ್ಣ ಹವಾ ನಿಯಂತ್ರಿತ ಎಸಿ ಹಾಸ್ಟೇಲ್ ಕೂಡ ಹೌದು. ಇಲ್ಲಿ ಎಸಿ ಕ್ಲಾಸ್ ರೂಂಗಳು ಕೂಡ ಇವೆ. ಹಾಗಂತ ಅಲ್ಲಿ ನಮ್ಮ ಊರಿನ ವಿದ್ಯಾಥರ್ಿಗಳಿಗೆ ಕಲಿಯುವ ಅವಕಾಶ ಇಲ್ಲ. ಅದು ಇರುವುದು ಅಪಘಾನಿಸ್ತಾನ, ಬಾಂಗ್ಲಾದೇಶ, ಈಜಿಪ್ಟ್, ದ.ಆಫ್ರಿಕಾ, ಕೀನ್ಯಾದಿಂದ ಬರುವ ವಿಧ್ಯಾರ್ಥಿಗಳಿಗೆ ಕಲಿಯುವುದಕ್ಕಾಗಿ. ಅವರು ನಮ್ಮ ಎಸಿ ಕ್ಲಾಸುಗಳಲ್ಲಿ ಕಲಿತು, ಹಾಸ್ಟೆಲ್ ಗಳಲ್ಲಿ ತಿಂದು ಉಂಡು ಕೊಣಾಜೆಯ ಮಸೀದಿಗಳಲ್ಲಿ ನಮಾಜ್ ಮಾಡುವುದರಲ್ಲಿಯೇ ದಿನ ದೂಡುತ್ತಾರೆ. ಅಂತವರು ಕಲಿಯುವ ಪಾಠವಾದರೂ ಏನು? ಪಕ್ಕಾ ನಮ್ಮ ರಾಷ್ಟ್ರ ವಿರೋಧಿ ಪಾಠಗಳು. ಅಂತವರಿಗೆ ಅಷ್ಟು ಸೌಕರ್ಯ ಕೊಡುವ ಅಗತ್ಯ ಇರಲಿಲ್ಲ. ಆ ದರಿದ್ರ ರಾಷ್ಟ್ರಗಳಿಂದ ಬರುವವರಿಗೆ ಇಲ್ಲಿ ಯಾಕೆ ಅಷ್ಟು ಸುಖ ಕೊಡುವುದು ಎನ್ನುವುದಕ್ಕೆ ವಿವಿ ಕುಲಪತಿ ಭೈರಪ್ಪನವರ ಬಳಿ ಉತ್ತರ ಇದೆಯಾ?
ಇಲ್ಲ, ಇರಲು ಸಾಧ್ಯವಿಲ್ಲ. ಯಾಕೆಂದರೆ ಭೈರಪ್ಪನವರಿಗೆ ಆ ರಾಷ್ಟ್ರದ ವಿಧ್ಯಾರ್ಥಿಗಳು ಇಲ್ಲಿ ಓದಿ ಕಡಿದು ಕಟ್ಟೆ ಹಾಕುವುದು ಅಷ್ಟರಲ್ಲಿಯೇ ಇದೆ ಎಂದು ಗೊತ್ತಿದೆ. ಭೈರಪ್ಪನವರಿಗೆ ಈಗ ಕಣ್ಣಿರುವುದು ಆ ವಿಧ್ಯಾರ್ಥಿಗಳಿಗೆಂದು ಕಟ್ಟಲಾಗುತ್ತಿರುವ ಕಟ್ಟಡದ ಮೇಲೆ. 58 ಕೋಟಿಯ ಕಟ್ಟಡ ಕಟ್ಟಲು ನಮ್ಮ ಮಂಗಳೂರಿನ ಇಂಜಿನಿಯರ್ಸ್, ಕಾರ್ಮಿಕರನ್ನು, ಗುತ್ತಿಗೆದಾರರನ್ನು ಕರೆ ತಂದರೆ ಭವಿಷ್ಯದಲ್ಲಿ ಅವರು ಈ ಪ್ರಾಜೆಕ್ಟ್ ನಲ್ಲಿ ಭೈರಪ್ಪನವರಿಗೆ ನೀಡಿದ ಪಾಲನ್ನು ಎಲ್ಲಿಯಾದರೂ ಯಾರಿಗಾದರೂ ಅಪ್ಪಿತಪ್ಪಿ ಹೇಳಿದರೆ ತನ್ನ ನಿವೃತ್ತಿ ಜೀವನದಲ್ಲಿ ನೆಮ್ಮದಿಯಾಗಿ ಇರಲು ಸಾಧ್ಯವಿಲ್ಲ ಎಂದು ಭೈರಪ್ಪನವರಿಗೆ ಗೊತ್ತಿದೆ. ಅದಕ್ಕೆ ಅವರು ತನ್ನ ಮೂಲ ಊರಿನ ಹತ್ತಿರದ ಮಂಡ್ಯದಿಂದ ಇಂಜಿನಿಯರ್ ಅವರನ್ನು ಕರೆಸಿ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ಹಾಗೇ ಎಲ್ಲಾ ಕೆಲಸದವರು ಕೂಡ ಮಂಡ್ಯದಿಂದಲೇ ಬಂದಿದ್ದಾರೆ. ತಾವು ನಿವೃತ್ತಿಯಾಗುವ ಜೂನ್ 2018 ರ ಒಳಗೆ ಎಲ್ಲಾ ಕೆಲಸ ಮಾಡಿಸಿ ಅಷ್ಟರೊಳಗೆ ಬಿಲ್ ಪಾಸ್ ಮಾಡಿ ತಮಗೆ ಎಷ್ಟು ಆಗುತ್ತೊ ಅಷ್ಟು ಪಾಲನ್ನು ಸೂಟ್ ಕೇಸಿಗೆ ತುಂಬಿಕೊಂಡು ಹೋಗುವ ಯೋಜನೆ ಯಾರದ್ದು ಎಂದು ಮತ್ತೊಮ್ಮೆ ಹೇಳಬೇಕಿಲ್ಲ. ಅದಕ್ಕಾಗಿ ಕಟ್ಟಡದ ಟೆಕ್ನಿಷನ್ ನಿಂದ ಹಿಡಿದು ಕಾರ್ಮಿಕರ ತನಕ ಎಲ್ಲರೂ ಮೈಸೂರಿನಿಂದ ಬಂದಿದ್ದಾರೆ.
ಭೈರಪ್ಪನವರ ಅವಧಿ ಇನ್ನು ಒಂದು ವರ್ಷ ಇದ್ದು ಈ ಅವಧಿಯಲ್ಲಿ ಸಾಕಷ್ಟು ಗಳಿಸಲು ಸಿದ್ಧತೆ ನಡೆಸಲಾಗಿದೆ. ಭೈರಪ್ಪನವರು ಎಷ್ಟು ಜಾಗರೂಕರಾಗಿ ತಮ್ಮ ಅವ್ಯವಹಾರವನ್ನೆಲ್ಲ ಸಂಭಾಳಿಸುತ್ತಾರೆ ಎಂದರೆ ಹೇಗೆ ಮಂಗಳೂರಿನಲ್ಲಿ ತಮಗೆ ವಿರೋಧ ಹರಿಯದಂತೆ ನೋಡಿಕೊಂಡರೋ ಹಾಗೆ ಉದ್ಯೋಗ ನೀಡುವ ವಿಷಯದಲ್ಲಿ ಮತ್ತು ಆ ಸಂದರ್ಭದಲ್ಲಿ ಅಪಾಯ ಬಾರದಂತೆ ಈಗಾಗಲೇ ಶಿಕ್ಷಣ ಮಂತ್ರಿ ರಾಯರೆಡ್ಡಿಯವರ ಲಿಸ್ಟ್ ಪಡೆದಿದ್ದು ಅದರ ಪ್ರಕಾರವೇ ಹೈದರಾಬಾದ್ ಕರ್ನಾಟಕ ಮೀಸಲಾತಿಯಲ್ಲಿ ಹುದ್ದೆ ನಿಗದಿಪಡಿಸಿ ನೋಟಿಫೀಕೇಶನ್ ಮಾಡಲಾಗಿದೆ. ಇದರಂತೆ ಟೀಚಿಂಗ್ ಮತ್ತು ನಾನ್ ಟೀಚಿಂಗ್ ನಲ್ಲಿ ಸಿಕ್ಕಿದಷ್ಟು ಸೆಳೆಯುವ ಪ್ಲಾನ್ ನಡೆಸಲಾಗಿದ್ದು ಇದು ಕೋಟ್ಯಾಂತರ ರೂಪಾಯಿ ಮಾಡುವ ಅವಕಾಶ ಕೂಡ ಹೌದು. ಇದಕ್ಕೆ ರಾಜ್ಯಪಾಲರು ತಕ್ಷಣ ಬ್ರೇಕ್ ಹಾಕಲೇಬೇಕು. ಈಗಾಗಲೇ ಮೈಸೂರು ಭಾಗದಿಂದ ಸುಮಾರು ನೂರು ಮಂದಿಯನ್ನು ಕೆಲಸಕ್ಕೆ ತೆಗೆದುಕೊಂಡು ವಿವಿ ಅಡಿ ಬರುವ ವಿವಿಧ ಕಾಲೇಜುಗಳಿಗೆ ನುಗ್ಗಿಸಲಾಗಿದೆ. ಅವರಿಂದ ತಲಾ ಐದು ಲಕ್ಷ ರೂಪಾಯಿಗಳನ್ನು ಪಡೆಯಲಾಗಿದೆ. ತಾನು ನಿವೃತ್ತನಾಗುವ ಮೊದಲು ನಿಮ್ಮ ಉದ್ಯೋಗವನ್ನು ಶಾಶ್ವತ ಮಾಡುವ ಆಶ್ವಾಸನೆ ಕೊಡಲಾಗಿದೆ. ಆದ್ದರಿಂದ ಮತ್ತೊಮ್ಮೆ ಈ ಗೋಲ್ ಮಾಲ್ ಗೆ ಅವಕಾಶ ಕೊಡಬಾರದು. ಕಥೆ ಇನ್ನೂ ಇದೆ. ಭೈರಪ್ಪನವರಿಗೆ ರಕ್ಷಣೆ ನೀಡುವ ಸಿಂಡಿಕೇಟ್ ಸದಸ್ಯರೊಬ್ಬರ ಕಥೆ ಹೇಳಿದರೆ ಅದು ಇನ್ನೊಂದು ಟಿವಿ ಸಿರಿಯಲ್ ತರಹ ಇದೆ
Leave A Reply