ಮಂಗಳೂರು: ಉಗ್ರರಿಗೆ ಹಣಕಾಸು ನೆರವು ನೀಡಿದ್ದ ಪಂಜಿಮೊಗರು ದಂಪತಿಗೆ 10 ವರ್ಷ ಜೈಲು!
ಮಂಗಳೂರು: ಉಗ್ರರಿಗೆ ಹಣ ಪೂರೈಸಿದ್ದ ಪಂಜಿಮೊಗರು ಮೂಲದ ದಂಪತಿ ಸೇರಿ ನಾಲ್ವರಿಗೆ ಛತ್ತೀಸ್ ಘಡ ನ್ಯಾಯಾಯಲಯ 10 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಮಂಗಳೂರಿನ ಪಂಜಿಮೊಗರು ಮೂಲದ ದಂಪತಿ ಹುಸೈನ್ 42 ಪತ್ನಿ ಆಯೀಷಾ ಬಾನು 38, ಧಿರಜ್ ಸಾವೋ 21 ಮತ್ತು ಪಪ್ಪು ಮಂಡಲ್ ಎಂಬುವವರು ಶಿಕ್ಷೆಗೊಳಗಾದವರು.
2013 ನವೆಂಬರ್ ನಲ್ಲಿ ಬಿಹಾರ ಛತ್ತೀಸ್ಗಡ್‌ದಲ್ಲಿ 10 ಕ್ಕೂ ಹೆಚ್ಚು ನಿಷೇಧಿತ ಸಂಘಟನೆಗಳಿಗೆ ಸೇರಿದ ಕಾರ್ಯಕರ್ತರನ್ನು ಪೋಲಿಸರು ವಿಚಾರಣೆ ಮಾಡಿ ಉಗ್ರರಿಗೆ ಹಣ ಪೂರೈಕೆಯ ಬಗ್ಗೆ ಅಧಿಕಾರಿಗಳು ಮಾಹಿತಿ ಲಭಿಸಿತ್ತು. ಈ ಮಾಹಿತಿಯ ಮೇರೆಗೆ ಹುಡುಕಿಕೊಂಡು ಬಂದ ಪೋಲಿಸರು ಮಂಗಳೂರಿನ ಪಂಜಿಮೊಗರು ದಂಪತಿಯನ್ನು ವಶಕ್ಕೆ ಪಡೆದಿದ್ದರು.
ದಂಪತಿ ಮತ್ತು ಮುಝಾಹಿಧಿನ್ ಉಗ್ರರ ಮಧ್ಯೆ ಕೋಟ್ಯಾಂತರ ಹಣ ವ್ಯವಹಾರ ಮಾಡಿರುವುದು ಬ್ಯಾಂಕ್ ಖಾತೆಯ ಮೂಲಕ ನ್ಯಾಯಾಲಯಕ್ಕೆ ವಿಚಾರಣೆ ವೇಳೆ ಸಾಕ್ಷಿ ಸಿಕ್ಕತ್ತು ಇದರ ಆಧಾರದಲ್ಲಿ ಇವರ ವಿರುಧ್ದ ದೇಶ ದ್ರೋಹ ಕಾಯ್ದೆಯಡಿ ರಾಯ್ ಪುರ ಕೋರ್ಟ್ ದಂಪತಿ ಸೇರಿ ನಾಲ್ವರಿಗೆ 10 ವರ್ಷಗಳ ಕಠಿಣ ಶಿಕ್ಷೆ ವಿಧಿಸಿದೆ.
ದಂಪತಿ ನೆರೆಹೊರೆಯಲ್ಲಿ ಸಭ್ಯರಂತೆ ವರ್ತಿಸಿ, ತಮ್ಮ ಕುಕೃತ್ಯವನ್ನು ರಾಯ್ ಪುರಕ್ಕೆ ಆಗಾಗ ಹೋಗಿ ಬಂದು ಮಾಡುತ್ತಿದ್ದರು. ಇವರ ಬಳಿ 50 ಕ್ಕೂ ಹೆಚ್ಚು ಬ್ಯಾಂಕ್ ನಲ್ಲಿ ವ್ಯವಹಾರ ಇರವುದು ಮತ್ತು ನೆಟ್ ಬ್ಯಾಂಕಿಂಗ್ ಮೂಲಕ ಹಣ ವರ್ಗಾಹಿಸುತ್ತಿರುವುದು ಬೆಳಕಿಗೆ ಬಂದಿದೆ.
Leave A Reply