ಮಂಗಳೂರಿನ ಹಲವು ದೇವಸ್ಥಾನ/ದೈವಸ್ಥಾನಗಳಲ್ಲಿ ಕಳ್ಳತನ ಪ್ರಕರಣ
ನಗರದ ವಿವಿಧ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿನ 13 ದೇವಸ್ಥಾನ/ದೈವಸ್ಥಾನಗಳು ಮತ್ತು ಮೂರು ಮನೆಗಳಲ್ಲಿ ಕಳ್ಳತನ ನಡೆಸಿದ ಇಬ್ಬರು ಆರೋಪಿಗಳನ್ನು ನಗರ ಪೊಲೀಸರು ಬಂಧಿಸಿ, ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದ್ದಾರೆ.
ಬಂಧಿತರನ್ನು ಚಿಕ್ಕಮಗಳೂರು ಜಿಲ್ಲೆ ಬೈರಪುರದ ನಾಗ ನಾಯ್ಕ (55) ಮತ್ತು ದಾವಣಗೆರೆ ಜಿಲ್ಲೆಯ ಮಾರುತಿ.ಸಿ.ವಿ (33) ಎಂದು ಗುರುತಿಸಲಾಗಿದೆ.ಇವರನ್ನು ಡಿ.3ರಂದು ಸೆರೆ ಹಿಡಿಲಾಗಿದೆ.
ಈ ಬಗ್ಗೆ ಮಂಗಳೂರು ಪೊಲೀಸ್ ವರಿಷ್ಠಾಧಿಕಾರಿ ಎನ್.ಶಶಿ ಕುಮಾರ್ ಅವರು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.ಪ್ರಮುಖ ಆರೋಪಿ ನಾಗ ನಾಯ್ಕ, ಈ ಹಿಂದೆ ಚಿಕ್ಕಮಗಳೂರು ಜಿಲ್ಲೆಯ ವಿವಿಧ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ವಿಚಾರಣೆ ವೇಳೆಯಲ್ಲಿ 2018ರಿಂದ ಮಂಗಳೂರಿನ ಹಲವು ದೇವಸ್ಥಾನ/ ದೈವಸ್ಥಾನಗಳಲ್ಲಿ ತಾನು ನಡೆಸಿದ ಕಳ್ಳತನ ಪ್ರಕರಣಗಳ ಬಗ್ಗೆ ಮಾಹಿತಿ ನೀಡಿದ್ದಾನೆ.ಈತನ ನಗರದ ಮೈದಾನಗಳಲ್ಲಿ ವಾಸವಿದ್ದು. ಹಗಲು ಹೊತ್ತಿನಲ್ಲಿ ಒಂಟಿ ಮನೆಗಳನ್ನು, ದೇವಸ್ಥಾನಗಳನ್ನು ಗುರುತು ಮಾಡಿ ರಾತ್ರಿ ಕಳ್ಳತನ ಮಾಡಿ ನಂತರ ತನ್ನ ಊರಿಗೆ ಹೋಗಿ ಮತ್ತೋರ್ವ ಆರೋಪಿ ಮಾರುತಿಯ ಜುವಲ್ಲರಿ ಶಾಪ್ ನಲ್ಲಿ ಮಾರಾಟ ಮಾಡುತ್ತಿದ್ದ. ಆರೋಪಿ ಮಾರುತಿಯು ಈ ಹಿಂದೆ ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದು, ನಾಗನಾಯ್ಕನ ಜೊತೆ ಸೇರಿ ಸ್ವಂತ ಜುವೆಲ್ಲರಿ ನಡೆಸುತ್ತಿದ್ದ. ಸದ್ಯ ಮಾರುತಿಯನ್ನು ಪೊಲೀಸರು ಬಂಧಿಸಿದ್ದು, 18 ಲಕ್ಷ ರೂ ಮೌಲ್ಯದ ಚಿನ್ನಾಭರಣ ಮತ್ತು 10.40 ಲಕ್ಷ ರೂ ಮೌಲ್ಯದ ಬೆಳ್ಳಿ ಆಭರಣಗಳನ್ನು ವಶಕ್ಕೆ ಪಡೆಯಾಲಿದೆ.
Leave A Reply