• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಯೋಧರು ಹುತಾತ್ಮರಾದಾಗ ಸಂಭ್ರಮಿಸುವವರಿಗೆ ಯಾವ ಶಿಕ್ಷೆ ಸೂಕ್ತ!!

Hanumantha Kamath Posted On December 10, 2021


  • Share On Facebook
  • Tweet It

ದೇವರ ಹೆಸರನ್ನು ಇಟ್ಟುಕೊಂಡಿರುವ ಕಾರ್ಕಳವನ್ನು ತನ್ನ ಹೆಸರಿನೊಂದಿಗೆ ಜೋಡಿಸಿಕೊಂಡಿರುವ ಒಬ್ಬರು ಅಜಿತ್ ದೋವಲ್ ಯಾವಾಗ ಎಂದು ತನ್ನ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಅದಕ್ಕೆ ಇನ್ನೊಬ್ಬರು ಪಾಪಿ ಚಿರಾಯು ಎಂದು ಉತ್ತರ ಕೊಟ್ಟಿದ್ದಾರೆ. ಇವರು ಹೀಗೆ ಬರೆದುಕೊಳ್ಳುವಾಗ ದೇಶದ ರಕ್ಷಣಾ ವ್ಯವಸ್ಥೆಯ ಅತೀ ಉನ್ನತ ಪದವಿಯಲ್ಲಿ ಕುಳಿತಿದ್ದ ಜನರಲ್ ಬಿಪಿನ್ ರಾವತ್ ವೀರಮರಣ ಹೊಂದಿ ಒಂದು ದಿನವೂ ಕಳೆದಿರಲಿಲ್ಲ. ಇದರ ಅರ್ಥ ಇವರು ಮತ್ತು ಇಂತಹ ಅನೇಕ ಪಾಕಿಸ್ತಾನಗಳಿಗೆ ಹುಟ್ಟಿದ ಸಂತಾನಗಳು ರಾವತ್ ದಂಪತಿಗಳೊಂದಿಗೆ ಹುತಾತ್ಮರಾದ ಇತರ 11 ಮಂದಿಯ ಮರಣವನ್ನು ಸಂಭ್ರಮಿಸಿವೆ. ಇವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ನಂತರ ನಮ್ಮ ಸೈಬರ್ ಸೆಕ್ಷನ್ ಗಳು ಕಠಿಣವಾಗಿಲ್ಲದ ದುರಾದೃಷ್ಟಕ್ಕೆ ಇವರನ್ನು ಹೋಗಲು ಬಿಟ್ಟರೆ ಇವರು ತಮ್ಮಂತಹ ಇನ್ನಷ್ಟು ಕ್ರಿಮಿಗಳಿಗೆ ಪ್ರೇರಣೆಯಾಗುತ್ತಾರೆ. ಅವರದ್ದೇ ಮನಸ್ಥಿತಿಯ ನೂರಾರು ಮಂದಿಗೆ ಹೀರೋಗಳಾಗುತ್ತಾರೆ. ಅದಕ್ಕಾಗಿ ಅವರನ್ನು ನ್ಯಾಯಾಲಯದಲ್ಲಿ ಹಾಜರುಪಡಿಸಿದಾಗ ಮಾನ್ಯ ನ್ಯಾಯಾಧೀಶರು ಏನು ತೀರ್ಪು ಕೊಡಬೇಕು ಎಂದರೆ ಇಂತಹ ವ್ಯಕ್ತಿಗಳನ್ನು ಜೈಲಿನಲ್ಲಿಟ್ಟರೆ ಇವರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ದಕ್ಕೆ ಬರುತ್ತದೆ. ಅದಕ್ಕಾಗಿ ಇವರನ್ನು ಎಲ್ಲಾ ಗೌರವದೊಂದಿಗೆ ಪಾಕಿಸ್ತಾನದ ಗಡಿಯಲ್ಲಿ ಬಿಟ್ಟು ಬರಬೇಕು. ಅಲ್ಲಿ ಇವರು ಆರಾಮವಾಗಿ ಆಚೀಚೆ ಸುತ್ತಿ ಬರಲಿ ಎಂದು ಹೇಳಿಬಿಡಬೇಕು. ನಾನು ಹೇಳಬೇಕಾದರೆ ಅದಕ್ಕಿಂತ ಬೇರೆ ಶಿಕ್ಷೆ ಇಂತವರಿಗೆ ಕೊಡಲೇಬಾರದು. ಬೇಕಾದರೆ ಇಂತವರು ಪಾಕಿಸ್ತಾನಕ್ಕೆ ಹೋಗಿ ತಮ್ಮ ತಂದೆಯಂದಿರನ್ನು ನೋಡಿ ಬರಲಿ. ಅಲ್ಲಿ ಇವರ ದೊಡ್ಡಪ್ಪ ಇಮ್ರಾನ್ ಖಾನ್ ಕೂಡ ಇದ್ದಾನೆ. ಅವನನ್ನು ಕೂಡ ಭೇಟಿಯಾಗಿ ಒಂದಿಷ್ಟು ಧನ ಸಹಾಯ ಬೇಕಾದರೆ ಕೊಟ್ಟು ಬರಲಿ. ಯಾಕೆಂದರೆ ಇಮ್ರಾನ್ ಖಾನ್ ತಟ್ಟೆ ಹಿಡಿದು ಕುಳಿತುಕೊಂಡಿದ್ದಾನೆ. ಇಲ್ಲದೇ ಹೋದರೆ ಬಿಪಿನ್ ರಾವತ್ ಅವರ ನಿಧನವನ್ನು ಸಂಭ್ರಮಿಸುವವರು ಈ ದೇಶದ ಪ್ರಜೆಯಾಗಿರಲು ಸಾಧ್ಯವಿಲ್ಲ. ಬಿಪಿನ್ ರಾವತ್ ವೀರ ಮರಣವನ್ನು ಪಾಕಿಸ್ತಾನ ಹಾಗೂ ಚೀನಾದಂತಹ ಎರಡೇ ದೇಶಗಳು ಸಂಭ್ರಮಿಸಿವೆ, ಪ್ರತ್ಯಕ್ಷವಾಗಿ ಅಲ್ಲದಿದ್ದರೂ, ಪರೋಕ್ಷವಾಗಿ ಅಲ್ಲಿನ ಸೇನಾ ಮುಖ್ಯಸ್ಥರು ಹಾಲು ಕುಡಿದಿರಬಹುದು. ಯಾಕೆಂದರೆ ಮೋದಿಯವರಂತಹ ಆಡಳಿತಾಧಿಕಾರಿ ಮತ್ತು ರಾವತ್ ಅವರಂತಹ ಸೇನೆಯ ಮೂರು ಪಡೆಗಳ ಏಕೈಕ ಮುಖ್ಯಸ್ಥರು ಒಟ್ಟಾದರೆ ಏನಾಗಬಹುದು ಎನ್ನುವುದು ಪಾಕಿಗೆ ಮತ್ತು ಚೀನಾಕ್ಕೆ ಗೊತ್ತಿಲ್ಲದ ಸಂಗತಿ ಏನಲ್ಲ. ರಾವತ್ ಮನಸ್ಸಿನಲ್ಲಿ ಸೇನೆಯ ಆಧುನಿಕರಣಕ್ಕೆ ಅನೇಕ ಯೋಜನೆಗಳು ಇದ್ದವು ಎಂದು ಹೇಳಲಾಗುತ್ತದೆ. ಅದನ್ನು ಅವರು ಹಂತಹಂತವಾಗಿ ಜಾರಿಗೆ ತರುವ ಸಾಧ್ಯತೆಗಳು ಇದ್ದವು. ಒಂದು ಕಡೆ ಪಾಕಿಸ್ತಾನ, ಮತ್ತೊಂದೆಡೆ ಚೀನಾವನ್ನು ಇಟ್ಟುಕೊಂಡಿರುವ ಭಾರತಕ್ಕೆ ಈ ಸಮಯದಲ್ಲಿ ಒಬ್ಬ ಯೋಗ್ಯ ದಂಡಾಧಿಕಾರಿ ಬೇಕೆ ಬೇಕಿತ್ತು. ಅವರ ಯೋಜನೆಗಳು, ಯೋಚನೆಗಳು ನಿಜವಾದ ಅರ್ಥದಲ್ಲಿ ಒಬ್ಬ ಸಮರ್ಥ ದಂಡಾಧಿಕಾರಿಗೆ ಏನು ಇರಬೇಕೋ ಅಷ್ಟು ಇತ್ತು. ಅದಕ್ಕೆ ಸರ್ಜಿಕಲ್ ಸ್ಟ್ರೈಕ್ ಜ್ವಲಂತ ಉದಾಹರಣೆ. ರಾವತ್ ಏನೂ ಪಾಕಿಸ್ತಾನದೊಳಗೆ ನುಗ್ಗಿ ಬಂಕರ್ ಗಳನ್ನು ಉಡಾಯಿಸಿಲ್ಲ. ಆದರೆ ಅವರು ಯೋಧರನ್ನು ಹುರಿದುಂಬಿಸಿದ ರೀತಿ, ಮಾಡಿದ ಸಿದ್ಧತೆಗಳು, ಯೋಜಿಸಿದ ರಕ್ಷಣಾ ವ್ಯೂಹ ಎಷ್ಟು ಬಲಿಷ್ಟವಾಗಿತ್ತು ಎಂದರೆ ಶತ್ರುಗಳು ಮುಟ್ಟಿನೋಡುವಂತೆ ಯೋಜನೆ ಹಾಕಿಕೊಂಡಿದ್ದರು.

ಇವರೆಲ್ಲ ನಮ್ಮ ದೇಶದ ರಾಜಧಾನಿಯಲ್ಲಿ ಕುಳಿತು ಸೇವೆ ಸಲ್ಲಿಸುತ್ತಿರುವುದರಿಂದಲೇ ನಾವು ಇಲ್ಲಿ ಕಾರ್ಕಳ, ಉಡುಪಿ, ಮಂಗಳೂರಿನಲ್ಲಿ ಎಸಿ ಆನ್ ಮಾಡಿ ನಿದ್ದೆ ಮಾಡುತ್ತಿರುವುದು. ಅಲ್ಲಿ ಅವರು ಸ್ವಲ್ಪ ಮೈಮರೆತರೆ ಇಲ್ಲಿ ನಮ್ಮ ಮನೆಗೆ ಭಯೋತ್ಪಾದಕರು ನುಗ್ಗಿ ನಮ್ಮನ್ನು ಮಸಣಕ್ಕೆ ಕಳುಹಿಸಲು ತುಂಬಾ ಹೊತ್ತು ಬೇಕಾಗಿಲ್ಲ. ಇನ್ನು ಅಜಿತ್ ದೋವಲ್ ಯಾವಾಗ ಎಂದು ಕೆಲವರು ಕೇಳುತ್ತಿದ್ದಾರೆ. ನನಗೆ ಅನಿಸುತ್ತದೆ, ಸರ್ಜಿಕಲ್ ಸ್ಟ್ರೈಕ್ ನಲ್ಲಿ ಮೃತಪಟ್ಟ ಉಗ್ರರಿಗೆ ಹುಟ್ಟಿದ ಸಂತಾನಗಳು ತಮ್ಮ ಜನ್ಮದಾತನ ಸಾವಿಗೆ ಶೋಕರೂಪವಾಗಿ ಹೀಗೆ ಬರೆಯುತ್ತಿರಬಹುದು. ಇನ್ನು ವಾಂತಿವಾರ್ತೆ ಪತ್ರಿಕೆಯ ಸಂಪಾದಕರೊಬ್ಬರು ರಾವತ್ ಅಗಲುವಿಕೆಯನ್ನು ಮೋದಿಯವರಿಗೆ ಪರೋಕ್ಷವಾಗಿ ಜೋಡಿಸಿ ಟೀಕಿಸಿದ್ದಾರೆ. ನಿಮಗೆ ಒಬ್ಬ ವ್ಯಕ್ತಿ ಸೈದ್ಧಾಂತಿಕವಾಗಿ ವಿರೋಧಿಯಾಗಿರಬಹುದು. ಹಾಗಂತ ಆತ ನಿಮ್ಮದೇ ದೇಶದ ಪ್ರಧಾನಿಯಾಗಿದ್ದರೆ ನೀವು ಒಂದು ಪತ್ರಿಕೆಯ ಸಂಪಾದಕರಾಗಿ ಶಬ್ದಗಳನ್ನು ಬಳಸುವಾಗ ಎಚ್ಚರಿಕೆ ವಹಿಸಬೇಕು. ಇನ್ನು ಖ್ಯಾತ ದಿನಪತ್ರಿಕೆ ಹಿಂದೂ ಕೊಟ್ಟ ಹೆಡ್ಡಿಂಗ್ ” ರಾವತ್ ಮತ್ತು ಇತರರು ಕಿಲ್ಡ್” ಎಂದು ಬರೆದಿದೆ. ಒಂದು ದೇಶದ ಅತ್ಯುನ್ನತ ಪದವಿಯ ಯೋಧರೊಬ್ಬರು ಅಗಲಿದಾಗ ಅದನ್ನು ವರದಿ ಮಾಡುವ ರೀತಿ ಕೂಡ ಒಂದಿಷ್ಟು ಜಾಗರೂಕತೆಯಿಂದ ಮಾಡಬೇಕು. ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಹೆಲಿಕಾಪ್ಟರ್ ದುರ್ಘಟನೆಯನ್ನು ಉಢಾಪೆಯಿಂದ ಮಾತನಾಡಿ ರಾವತ್ ನಿಧನವನ್ನು ಸಂಭ್ರಮಿಸಿದ್ದಾರೆ. ಉತ್ತರ ಪ್ರದೇಶ ಹಾಗೂ ಗುಜರಾತ್ ರಾಜ್ಯಗಳು ತಮ್ಮ ರಾಜ್ಯಗಳಲ್ಲಿ ಈ ರೀತಿ ಮಾಡುವವರ ವಿರುದ್ಧ ಕಠಿಣ ಕ್ರಮ ಜರುಗಿಸಲು ಪೊಲೀಸರಿಗೆ ಸೂಚನೆ ನೀಡಿದೆ. ನಮ್ಮ ರಾಜ್ಯದಲ್ಲಿಯೂ ಹಾಗೆ ಮಾಡಬೇಕು. ಕ್ರಿಮಿಗಳು ಭವಿಷ್ಯದಲ್ಲಿ ಯಾವತ್ತೂ ಹೀಗೆ ಕೀಳಾಗಿ ವರ್ತಿಸಬಾರದು. ಅದರಲ್ಲಿಯೂ ದೇಶದ ಮತ್ತು ಯೋಧರ ವಿಷಯ ಸೂಕ್ಷ ಸಂಗತಿ!!

  • Share On Facebook
  • Tweet It


- Advertisement -


Trending Now
ಮಂಗಳೂರಿನಲ್ಲಿ ಪೈಪುಗಳ ಮೇಲಿನ ಮಣ್ಣು ತೆಗೆಸಬಲ್ಲ ಗಂಡಸರು ಯಾರಿದ್ದಾರೆ!!
Hanumantha Kamath January 28, 2023
ಮೋದಿ ವಿರುದ್ಧ ಬಿಬಿಸಿ, ಪರ ಆಂಟೋನಿ!!
Hanumantha Kamath January 27, 2023
Leave A Reply

  • Recent Posts

    • ಮಂಗಳೂರಿನಲ್ಲಿ ಪೈಪುಗಳ ಮೇಲಿನ ಮಣ್ಣು ತೆಗೆಸಬಲ್ಲ ಗಂಡಸರು ಯಾರಿದ್ದಾರೆ!!
    • ಮೋದಿ ವಿರುದ್ಧ ಬಿಬಿಸಿ, ಪರ ಆಂಟೋನಿ!!
    • ಮುತಾಲಿಕ್ ಖಡ್ಗಕ್ಕೆ ಸಾಣೆ ಹಾಕಿಸಿಕೊಟ್ಟ ಚಾಣಾಕ್ಷ ಯಾರು?
    • ವೆನಲಾಕ್ ನಲ್ಲಿ ಕ್ಯಾನ್ಸರ್ ಚಿಕಿತ್ಸಾ ಘಟಕ ಯಾಕಿಲ್ಲ!!
    • ನಕಲಿ ಕಾಂತಾರಗಳು ನಮ್ಮ ನಂಬಿಕೆಗೆ ಪೆಟ್ಟು ಕೊಡಬಾರದು!!
    • ಶರದ್ ಪವಾರ್ ಕೂಡ ಗಡಿಯಲ್ಲಿ ಕಡ್ಡಿ ಅಲ್ಲಾಡಿಸಲು ಹೊರಟಿದ್ದಾರೆ!
    • ಮಂಗಳಾ ಕ್ರೀಡಾಂಗಣದ ಹೊರಗೆ ಸಿಂಗಾರ, ಒಳಗೆ ಗೋಳಿಸೊಪ್ಪು!!
    • ಹಿಂದೂಗಳ ಫಲವತ್ತತೆಯ ತಾಕತ್ತು ಪರೀಕ್ಷಿಸುತ್ತೀಯಾ ಬದ್ರುದ್ದೀನ್?
    • ಮಕ್ಕಳ ಬ್ಯಾಗಿನಲ್ಲಿ ಕಾಂಡೋಮ್ ಉತ್ತಮ ಲಕ್ಷಣವಲ್ಲ!!
    • ಬೊಮ್ಮಾಯಿ ಕಣ್ಣು ಮುಚ್ಚಿ ಕೊಟ್ಟ ಮುಸ್ಲಿಂ ಕಾಲೇಜು ಪ್ರಪಂಚ ನೋಡಿತು!!
  • Popular Posts

    • 1
      ಮಂಗಳೂರಿನಲ್ಲಿ ಪೈಪುಗಳ ಮೇಲಿನ ಮಣ್ಣು ತೆಗೆಸಬಲ್ಲ ಗಂಡಸರು ಯಾರಿದ್ದಾರೆ!!
    • 2
      ಮೋದಿ ವಿರುದ್ಧ ಬಿಬಿಸಿ, ಪರ ಆಂಟೋನಿ!!
    • 3
      ಮುತಾಲಿಕ್ ಖಡ್ಗಕ್ಕೆ ಸಾಣೆ ಹಾಕಿಸಿಕೊಟ್ಟ ಚಾಣಾಕ್ಷ ಯಾರು?


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search