• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಅತ್ಯಾಚಾರಕ್ಕೆ ಒಳಗಾಗುವ ಹೆಣ್ಣುಜೀವದ ಮನಸ್ಥಿತಿ ದಪ್ಪ ಚರ್ಮದ ರಮೇಶುಗೆ ತಿಳಿಯುತ್ತಾ!

Hanumantha Kamath Posted On December 18, 2021
0


0
Shares
  • Share On Facebook
  • Tweet It

ರಮೇಶ್ ಕುಮಾರ್ ಅವರಿಗೆ ಕ್ಲಬ್ಬಿನಲ್ಲಿ ಕುಳಿತು ಮಾತನಾಡುವ ಅಭ್ಯಾಸ ಇರಬಹುದು. ಊರಿನ ಕಟ್ಟೆಯಲ್ಲಿ ಕುಳಿತು ಹರಟುವ ಚಾಳಿ ಇರಬಹುದು. ವಿಧಾನಸಭೆಯ ಕ್ಯಾಂಟಿನ್ನಿನಲ್ಲಿಯೋ, ಕಾಂಗ್ರೆಸ್ ಕಚೇರಿಯ ಚೇಂಬರಿನಲ್ಲಿಯೋ ಟೈಮ್ ವೇಸ್ಟ್ ಮಾಡುವ ರೂಢಿ ಇರಬಹುದು. ಅದನ್ನೇ ಅವರು ವಿಧಾನಸಭೆಯಲ್ಲಿ ಮುಂದುವರೆಸಿಕೊಂಡು ಹೋಗುವುದನ್ನು ಮಾತ್ರ ನಿಲ್ಲಿಸಬೇಕು. ಯಾಕೆಂದರೆ ವಿಧಾನಸಭೆಯ ಒಳಗೆ ಅಧಿವೇಶನ ನಡೆಯುವಾಗ ಅದಕ್ಕೊಂದು ಘನತೆ ಇರುತ್ತದೆ. ಅಸಂಖ್ಯಾತ ಜನ ಅದನ್ನು ಮಾಧ್ಯಮಗಳಲ್ಲಿ ನೋಡುತ್ತಾರೆ. ಪತ್ರಿಕೆಯಲ್ಲಿ ಓದುತ್ತಾರೆ. ಆದ್ದರಿಂದ ಅಲ್ಲಿ ಮಾತನಾಡುವಾಗ ಮೈಮೇಲೆ ಪ್ರಜ್ಞೆ ಇರಬೇಕು. ಅದು ಇಲ್ಲದೇ ಪಕ್ಕಾ ಸ್ಲಂ ತರಹ ಅಲ್ಲಿ ಮಾತನಾಡಿದರೆ ಹಾಗೆ ಮಾತನಾಡಿದ ವ್ಯಕ್ತಿಯ ಇಮೇಜಿನ ಮೇಲೆ ಅದು ಪರಿಣಾಮ ಬೀರುತ್ತದೆ. ಇಲ್ಲಿ ಸರಿಯಾಗಿ ಮಾತನಾಡುವುದು ಮಾತ್ರವಲ್ಲ, ಯಾವ ವಿಷಯದ ಮೇಲೆ ಮಾತನಾಡುತ್ತೇವೆ ಎನ್ನುವುದನ್ನು ಕೂಡ ನಾವು ಸರಿಯಾಗಿ ಅಭ್ಯಸಿಸಬೇಕು. ಅದರಲ್ಲಿಯೂ ಹೆಣ್ಣುಮಕ್ಕಳ ಘನತೆ, ಗೌರವದ ವಿಷಯ ಬಂದಾಗ ತಮ್ಮ ಮನೆಯಲ್ಲಿಯೂ ಸ್ತ್ರೀಯರು ಇದ್ದಾರೆ, ತಮಗೂ ತಾಯಿ, ಸಹೋದರಿ, ಪತ್ನಿ, ಮಗಳು ಇದ್ದಾಳೆ ಎನ್ನುವುದನ್ನು ಮನಸ್ಸಿನಲ್ಲಿ ಇಟ್ಟೇ ಮಾತನಾಡಬೇಕು. ಅತ್ಯಾಚಾರ ಎನ್ನುವುದು ಜೋಕ್ ಅಲ್ಲ.
ಒಬ್ಬ ಹೆಣ್ಣುಮಗಳು ತಾನೇ ತಾನಾಗಿ ತನ್ನನ್ನು ಯಾರಾದರೂ ಅತ್ಯಾಚಾರ ಮಾಡಲಿ ಎಂದು ಬಯಸುವುದಿಲ್ಲ. ಅತ್ಯಾಚಾರ ಎನ್ನುವುದು ಒಂದು ಹೆಣ್ಣಿನ ಬಾಳಿನಲ್ಲಿ ನಡೆಯುವ ಅತ್ಯಂತ ಕರಾಳ ಅಧ್ಯಾಯ. ಗಂಡಸಿನ ತಾಕತ್ತಿನ ಎದುರು ಹೆಣ್ಣು ಪ್ರತಿಭಟಿಸಲಾಗದೇ ಒದ್ದಾಡುವ ಘಳಿಗೆ. ಕೆಲವೊಮ್ಮೆ ಯುವತಿಗೆ ಮಾದಕ ವಸ್ತು ನೀಡಿ ಅಮಲಿನಲ್ಲಿ ಅವಳು ವಿರೋಧಿಸಲಾಗದ ಸ್ಥಿತಿಯಲ್ಲಿ ಇದ್ದಾಗ ಅತ್ಯಾಚಾರ ನಡೆಯುತ್ತದೆ. ಕೆಲವು ಕಡೆ ಸಾಮೂಹಿಕ ಅತ್ಯಾಚಾರ ನಡೆಯುತ್ತದೆ. ದೆಹಲಿಯಲ್ಲಿ ನಿರ್ಭಯಾ ಅತ್ಯಾಚಾರ ಮತ್ತು ಆಕೆಯ ಗುಪ್ತಾಂಗಕ್ಕೆ ಕಬ್ಬಿಣದ ರಾಡ್ ಹಾಕಿದಾಗ ಆ ಹೆಣ್ಣು ಜೀವ ಅದೆಷ್ಟು ನರಳಿರಬೇಡಾ. ಅದರ ಬಳಿಕವೂ ಅನೇಕ ಕಡೆ ಅಂತಹ ಪೈಶಾಚಿಕ ಕೃತ್ಯ ನಡೆದಿದೆ. ಪುಟ್ಟ ಹಸುಳೆಗಳನ್ನು ಕಾಮುಕರು ಬಿಟ್ಟಿಲ್ಲ. ನಮ್ಮ ದೇಶದ ಕೆಲವು ರಾಜ್ಯಗಳಲ್ಲಿ ಒಂಟಿ ಹೆಣ್ಣುಮಕ್ಕಳು ನಿತ್ಯಭಾದೆಗೆಂದು ಶೌಚಾಲಯ ಇಲ್ಲದ ಮನೆಗಳಿಂದ ತೋಟ, ಹೊಲದ ಕಡೆ ಕತ್ತಲಲ್ಲಿ ಹೋದಾಗ ಅಲ್ಲಿಯೂ ಅಡ್ಡ ಹಾಕಿ ಬಲಾತ್ಕಾರ ನಡೆದಿರುವುದು ಇದೆ. ರಾತ್ರಿ ಪಾಳಯದಲ್ಲಿ ಅನಿವಾರ್ಯವಾಗಿ ಕೆಲಸ ಮುಗಿಸಿ ಬರುವ ಹೆಣ್ಣುಜೀವಗಳನ್ನು ಕತ್ತಲಲ್ಲಿ ಹೊಂಚು ಹಾಕಿ ಕಿರಾತಕರು ಅತ್ಯಾಚಾರ ಮಾಡಿದ್ದು ಇದೆ. ಮನೆಯಲ್ಲಿ ಒಂಟಿ ಮಹಿಳೆಯರು ಇದ್ದಾಗ ನೀರು ಕೇಳುವ ನೆಪದಲ್ಲಿ ಬಾಗಿಲು ತೆರೆಸಿ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದು ಇದೆ. ಹೀಗೆ ಅತ್ಯಾಚಾರಕ್ಕೆ ತುತ್ತಾಗಿರುವ ಹೆಣ್ಣುಮಕ್ಕಳನ್ನು ಈ ಸಮಾಜ ಹೇಗೆ ನೋಡುತ್ತೆ ಎನ್ನುವುದು ಎಲ್ಲರಿಗೂ ಗೊತ್ತು. ಅವಳ ತಪ್ಪೇ ಇಲ್ಲದೆ ನಡೆದ ಪೈಶಾಚಿಕ ಕೃತ್ಯಕ್ಕೆ ಅವಳನ್ನೇ ಹೊಣೆಗಾರಳನ್ನಾಗಿ ಮೂಲೆಗೆ ತಳ್ಳಿಬಿಡುವ ಜಗತ್ತಿನಲ್ಲಿ ಅವಳ ಧೈರ್ಯವಾಗಿ ಬದುಕುವ ಛಲ ಕಾಯ್ದುಕೊಳ್ಳುವುದೇ ದೊಡ್ಡ ಸವಾಲು. ಇಲ್ಲಿ ಸನ್ನಿ ಲಿಯೋನಿಗೆ ಸಿಗುವ ಗೌರವ ಅತ್ಯಾಚಾರಕ್ಕೆ ಒಳಗಾದ ನತದೃಷ್ಟ ಯುವತಿಗೆ ಸಿಗಲ್ಲ. ಇಷ್ಟೆಲ್ಲ ಇದ್ದ ಮೇಲೆಯೂ ಅತ್ಯಾಚಾರ ಎಂದರೆ ಹಾಸ್ಯದ ವಿಷಯ ಎಂದುಕೊಂಡಿರುವ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿರುವ “ತಡೆಯಲಾಗದೇ ಇದ್ದರೆ ಅನುಭವಿಸಿಬಿಡಿ” ಎಂದು ಹೇಳುವ ಗಾದೆಯನ್ನು ಹುಟ್ಟು ಹಾಕಿದವನನ್ನು ಮೊದಲು ಚಪ್ಪಲಿಯಲ್ಲಿ ಹೊಡೆಯಬೇಕು. ಇದೇ ವಾಕ್ಯವನ್ನು ರಮೇಶ್ ಕುಮಾರ್ ಅವರು ತಮ್ಮ ಮಗಳಿಗೋ, ಹೆಂಡತಿಗೋ ಹೇಳಬಹುದಲ್ಲ. ಯಾಕೆ ಹೇಳಲ್ಲ. ಇದು ಒಂದು ಇಂಗ್ಲೀಷ್ ನಾಣ್ಣುಡಿಯೇ ಆಗಿರಬಹುದು. ಆದರೆ ಇದನ್ನು ಮಾಡಿದವನು ಮಾತ್ರ ಗಂಡಸೇ. ಯಾಕೆಂದರೆ ಪ್ರಪಂಚದ ಯಾವುದೇ ರಾಷ್ಟ್ರವಿರಲಿ, ಅತ್ಯಾಚಾರದ ವಿಷಯ ಬಂದಾಗ ಯಾವ ಹೆಣ್ಣುಮಗಳು ತಾನೆ ಪ್ರತಿಭಟಿಸಲಾಗಲಿಲ್ಲ ಎಂದು ಎಂಜಾಯ್ ಮಾಡುತ್ತಾಳೆ. ಇನ್ನು ರಮೇಶ್ ಕುಮಾರ್ ಅವರಂತಹ ಅವಿವೇಕಿಗಳು ಇದನ್ನು ಹೇಳಿದ ಕೂಡಲೇ ವಿಶ್ವೇಶ್ವರ ಹೆಗ್ಗಡೆ ಕಾಗೇರಿಯವರು ಅದನ್ನು ನಗುತ್ತಾ ಎಂಜಾಯ್ ಮಾಡಿದ್ದು ಕೂಡ ಅಕ್ಷಮ್ಯ ಅಪರಾಧ. ಯಾಕೆಂದರೆ ಒಂದು ವೇಳೆ ಕಾಗೇರಿಯವರ ಮನೆಯ ಡೈನಿಂಗ್ ಟೇಬಲ್ ನಲ್ಲಿ ಚಾ ಕುಡಿಯುತ್ತಾ ರಮೇಶ್ ಕುಮಾರ್ ಈ ಮಾತನ್ನು ಹೇಳಿದಿದ್ರೆ ಆಗ ಅದನ್ನು ನಗುತ್ತಾ ಕಾಗೇರಿ ಎಂಜಾಯ್ ಮಾಡಿದ್ರೆ ಅದು ಇಬ್ಬರ ನಿಕೃಷ್ಟ ಮನಸ್ಸಿನ ದ್ಯೋತಕ ಎಂದು ಹೇಳಬಹುದು. ಆದರೆ ಕಾಗೇರಿ ಅವರಿಗೆ ತಾವು ಕುಳಿತಿರುವ ಜಾಗ ಯಾವುದು ಎಂದು ಗೊತ್ತಿಲ್ಲವೇ?
ಈ ಘಟನೆ ಆದ ಮೇಲೆ ಎಲ್ಲಾ ಮಹಿಳಾ ಮತ್ತು ಪುರುಷ ಶಾಸಕರು, ಸಚಿವರು ಪಕ್ಷಭೇದ ಮರೆತು ರಮೇಶ್ ಕುಮಾರ್ ಅವರ ಮಾತನ್ನು ವಿರೋಧಿಸಿದ್ದಾರೆ. ರಾಜಕೀಯ ಜೀವನದ ಸಂಧ್ಯಾಕಾಲದಲ್ಲಿ ಇರುವ ರಮೇಶ್ ಕುಮಾರ್ ಮತ್ತೊಮ್ಮೆ ಶಾಸಕರಾಗುವ ವಾತಾವರಣ ಅವರ ಕ್ಷೇತ್ರದಲ್ಲಿ ಇಲ್ಲ ಎಂದೇ ಹೇಳಲಾಗುತ್ತದೆ. ಆದ್ದರಿಂದ ಕೊನೆಯ ಅವಧಿಯಲ್ಲಿ ಆದರೂ ಅವರು ಗೌರವಯುತವಾಗಿ ನಿರ್ಗಮಿಸಬಹುದಿತ್ತು. ಇನ್ನು ಈ ವಿಷಯ ಇಟ್ಟುಕೊಂಡು ಸಂಸತ್ತಿನಲ್ಲಿಯೂ ಸ್ಮೃತಿ ಇರಾನಿಯವರು ಹೋರಾಟ ಮಾಡಿದ್ದಾರೆ. ರಮೇಶ್ ಕುಮಾರ್ ಅವರನ್ನು ಕಾಂಗ್ರೆಸ್ ಉಚ್ಚಾಟಿಸಬೇಕು ಎಂದು ಆಗ್ರಹಿಸಿದ್ದಾರೆ. ಆದರೆ ಹಾಗೆ ಮಾಡುವುದಿಲ್ಲ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ(!) ಟ್ವಿಟ್ ಮಾಡಿದ್ದಾರೆ. ಈ ನಡುವೆ ಪಕ್ಷಕ್ಕೆ ಮುಜುಗರ ತರುವುದು ಬೇಡಾ ಎಂದು ರಮೇಶ್ ಕುಮಾರ್ ಯಾರ ಮನಸ್ಸಿಗಾದರೂ ನೋವಾದರೆ ಕ್ಷಮಿಸಿಬಿಡಿ ಎಂದಿದ್ದಾರೆ. ರಮೇಶ್ ಕುಮಾರ್ ಕಾಲೇಜು ಸ್ಟೂಡೆಂಟ್ ಅಲ್ಲ. ಪೊಲೀ ಹುಡುಗನೂ ಅಲ್ಲ. ಅವರು ಸೂಕ್ಷ್ಮಮತಿಯ ವ್ಯಕ್ತಿ ಎನ್ನುವ ಇಮೇಜು ಅವರಿಗೆ ಇತ್ತು. ಅದನ್ನು ಅವರು ಕಳೆದುಕೊಂಡು ಬಿಟ್ಟಿದ್ದಾರೆ. ನಾಳೆ ಅವರು ತಮ್ಮ ಹೆಂಡತಿ, ಮಗಳ ಮುಖ ನೋಡುವಾಗ ಅವರು ಛೀ, ಥೂ ನೀವು ಕೂಡ ಹೀಗೆನಾ ಎಂದು ಹೇಳದಿದ್ದರೆ ಅದು ರಮೇಶ್ ಕುಮಾರ್ ಪುಣ್ಯ!!
0
Shares
  • Share On Facebook
  • Tweet It


- Advertisement -


Trending Now
ಪೊಲೀಸರ ಮಧ್ಯರಾತ್ರಿ ಕಾರ್ಯಾಚರಣೆ: 20 ಲಕ್ಷ ರೂ ಮಾನನಷ್ಟ ಕೋರಿ ಅರ್ಜಿ: ಅರುಣ್ ಶ್ಯಾಮ್ ವಾದ...
Hanumantha Kamath June 20, 2025
ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
Hanumantha Kamath June 18, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಪೊಲೀಸರ ಮಧ್ಯರಾತ್ರಿ ಕಾರ್ಯಾಚರಣೆ: 20 ಲಕ್ಷ ರೂ ಮಾನನಷ್ಟ ಕೋರಿ ಅರ್ಜಿ: ಅರುಣ್ ಶ್ಯಾಮ್ ವಾದ...
    • ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
    • ಫಾಸ್ಟ್ ಟ್ಯಾಗ್ ಇನ್ನು ವರ್ಷದ ಪಾಸ್ ನಲ್ಲಿ ಲಭ್ಯ: ಎಷ್ಟು ಕೊಟ್ಟರೆ ಸಾಕು ಗೊತ್ತಾ?
    • ಭೀಕರ ರಸ್ತೆ ಅಪಘಾತ- ದಕ ಜಿಲ್ಲಾ NSUI ಉಪಾಧ್ಯಕ್ಷ ಸೇರಿ ಇಬ್ಬರು ಯುವಕರು ಸಾವು!
    • ವಿಮಾನ ದುರಂತ ಸ್ಥಳದಲ್ಲಿ ಸಿಕ್ಕಿವೆ ಸಾಕಷ್ಟು ಚಿನ್ನ, ಹಣ, ಭಗವದ್ಗೀತೆ!
    • ಲಂಡನ್ನಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಕೊನೆಯ ಕ್ಷಣದಲ್ಲಿ ಪ್ರಯಾಣ ರದ್ದು!
    • ಗಿರೀಶ್ ಭಾರದ್ವಾಜ್ ಮನವಿಗೆ ಸ್ಪಂದನೆ: ಹಿಂದೂ ಮುಖಂಡರ ರಾತ್ರಿ ಮನೆ ಭೇಟಿಯ ಬಗ್ಗೆ ವರದಿ ಕೇಳಿದ ಪೊಲೀಸ್ ದೂರು ಪ್ರಾಧಿಕಾರ!
    • ಹಿಂದೂಗಳು 3 ಮಕ್ಕಳನ್ನು ಹೆರಲು ಕೊಪ್ಪಳದಲ್ಲಿ ತೊಗಾಡಿಯಾ ಕರೆ!
    • ಬೈಕ್ ಟ್ಯಾಕ್ಸಿ ಬ್ಯಾನ್ ನಿಂದ ಬೆಂಗಳೂರಿನ 1 ಲಕ್ಷ ಯುವಕರ ಉದ್ಯೋಗಕ್ಕೆ ಕುತ್ತು!
    • ಯುಪಿಐನಲ್ಲಿ ಇನ್ನು ಹಣ ವರ್ಗಾವಣೆಗೆ 15 ಸೆಕೆಂಡ್ ಸಾಕು!
  • Popular Posts

    • 1
      ಪೊಲೀಸರ ಮಧ್ಯರಾತ್ರಿ ಕಾರ್ಯಾಚರಣೆ: 20 ಲಕ್ಷ ರೂ ಮಾನನಷ್ಟ ಕೋರಿ ಅರ್ಜಿ: ಅರುಣ್ ಶ್ಯಾಮ್ ವಾದ...
    • 2
      ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
    • 3
      ಫಾಸ್ಟ್ ಟ್ಯಾಗ್ ಇನ್ನು ವರ್ಷದ ಪಾಸ್ ನಲ್ಲಿ ಲಭ್ಯ: ಎಷ್ಟು ಕೊಟ್ಟರೆ ಸಾಕು ಗೊತ್ತಾ?
    • 4
      ಭೀಕರ ರಸ್ತೆ ಅಪಘಾತ- ದಕ ಜಿಲ್ಲಾ NSUI ಉಪಾಧ್ಯಕ್ಷ ಸೇರಿ ಇಬ್ಬರು ಯುವಕರು ಸಾವು!
    • 5
      ವಿಮಾನ ದುರಂತ ಸ್ಥಳದಲ್ಲಿ ಸಿಕ್ಕಿವೆ ಸಾಕಷ್ಟು ಚಿನ್ನ, ಹಣ, ಭಗವದ್ಗೀತೆ!

  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search