• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ನಾನು ಕುಡಿಯುವುದಿಲ್ಲವಾದರಿಂದ ಪಾನನಿಷೇಧ ಬಂದ್ರೆ ನನಗೆ ಯಾಕೆ ಹೆದರಿಕೆ!!

Hanumantha Kamath Posted On December 22, 2021
0


0
Shares
  • Share On Facebook
  • Tweet It

ನಾನು ಕೆಲವು ದಿನಗಳ ಹಿಂದೆಯಷ್ಟೇ ಇದೇ ಜಾಗೃತ ಅಂಕಣ ಸರಣಿಯಲ್ಲಿ ಬರೆದಿದ್ದೆ. ಕುಂಬಳಕಾಯಿ ಕಳ್ಳ ಎಂದರೆ ಎಲ್ಲಾ ಕ್ರೈಸ್ತರು ಹೆಗಲು ಮುಟ್ಟಿ ನೋಡಬೇಕಿಲ್ಲವಲ್ಲ ಎಂದು ಹೆಡ್ಡಿಂಗ್ ಕೊಟ್ಟಿದ್ದೆ. ಕೊನೆಗೂ ಕ್ರೈಸ್ತ ಮುಖಂಡರ, ರಾಜಕಾರಣಿಗಳ ವಿರೋಧದ ನಡುವೆಯೂ ಬೆಳಗಾವಿ ಅಧಿವೇಶನದಲ್ಲಿ ಮತಾಂತರ ನಿಷೇಧ ಮಸೂದೆ ಅಥವಾ ವಿಧೇಯಕ ಮಂಡನೆಯಾಗಿದೆ. ವಿಧಾನಸಭೆಯಲ್ಲಿ ಪಾಸಾಗಲು ಕಷ್ಟವಿಲ್ಲ. ವಿಧಾನಪರಿಷತ್ ನಲ್ಲಿ ಇತ್ತೀಚೆಗೆ ಗೆದ್ದಿರುವ ಹೊಸ ಸದಸ್ಯರ ಅವಧಿ ಜನವರಿ ಮೊದಲ ವಾರದ ನಂತರ ಶುರುವಾಗುವುದರಿಂದ ಅಲ್ಲಿ ತನಕ ವಿಧಾನಪರಿಷತ್ ನಲ್ಲಿ ಭಾರತೀಯ ಜನತಾ ಪಾರ್ಟಿಗೆ ಬಹುಮತವಿಲ್ಲ. ಇಲ್ಲಿ ಎರಡು ಪ್ರಶ್ನೆಗಳನ್ನು ಕ್ರೈಸ್ತ ಮುಖಂಡರ ಮತ್ತು ವಿಪಕ್ಷ ಕಾಂಗ್ರೆಸ್ ಮತ್ತು ಜಾತ್ಯಾತೀತ ಜನತಾದಳದ ಮುಂದೆ ಇಡಲೇಬೇಕು. ನೀವು ಈ ರಾಜ್ಯದಲ್ಲಿ ಆಮಿಷದ ಮತಾಂತರ ಒಂದೇ ಒಂದು ಆಗಿಲ್ಲ ಎಂದು ಎದೆಯ ಮೇಲೆ ಕೈಇಟ್ಟು ಹೇಳಬಲ್ಲಿರಾ? ಎರಡನೇಯದ್ದು ಇದು ಕಾಯ್ದೆಯಾಗಿ ಬಂದಲ್ಲಿ ದುರುಪಯೋಗ ಆಗುತ್ತದೆ ಎಂದು ಹೇಳುತ್ತೀರಿ. ಹಾಗಿದ್ದರೆ ಈ ದೇಶದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ರಕ್ಷಣೆಗೆ ಇರುವ ಎಷ್ಟೋ ಕಾನೂನುಗಳು ನಿತ್ಯ ದೇಶದ ಮೂಲೆ ಮೂಲೆಗಳಲ್ಲಿ ದುರುಪಯೋಗ ಆಗುತ್ತಿದೆ. ಹಾಗಂತ ಅದನ್ನು ತೆಗೆದು ಹಾಕಲು ಆಗುತ್ತಾ? ಹೆಣ್ಣುಮಕ್ಕಳ ರಕ್ಷಣೆಗಾಗಿ ಇರುವ ವರದಕ್ಷಿಣೆ ತಡೆ ಕಾಯ್ದೆ ಎಷ್ಟೋ ಕಡೆ ದುರುಪಯೋಗ ಆಗುತ್ತೆ. ಹಾಗಂತ ಅದನ್ನು ಕಿತ್ತು ಎಸೆಯಲು ಆಗುತ್ತಾ? ಎಷ್ಟೋ ಕಡೆ ಇವು ಉಪಯೋಗಕ್ಕೂ ಬಂದಿವೆ. ಎಷ್ಟೋ ಕಡೆ ದುರುಪಯೋಗ ಆಗಿರುವುದನ್ನು ನಾವು ನೋಡಿದ್ದೇವೆ. ಕಚೇರಿ ಮತ್ತು ಉದ್ಯೋಗದ ಸ್ಥಳಗಳಲ್ಲಿ ಮಹಿಳಾ ಉದ್ಯೋಗಿಗಳ ರಕ್ಷಣೆಗಾಗಿ ಇರುವ ಕಾನೂನು ಇಲ್ಲಿಯ ತನಕ ದುರುಪಯೋಗವೇ ಆಗಿಲ್ಲವೇ? ಆಗಿದೆ. ಹಾಗಂತ ಅದನ್ನು ಬೇಡಾ ಎನ್ನಲು ಆಗುತ್ತಾ? ಇದು ಕೂಡ ಅಷ್ಟೇ. ಮತಾಂತರ ನಿಷೇಧ ಕಾಯ್ದೆ ಬಂದ ನಂತರ ಅದು ದುರುಪಯೋಗ ಆಗುತ್ತೆ ಎಂದು ಹೆದರಿ ಈಗಲೇ ವಿರೋಧ ಮಾಡುವುದು ಎಷ್ಟು ಸರಿ? ಹಾಗೆ ನೋಡಿದರೆ ನಮ್ಮ ದೇಶದಲ್ಲಿ ಇರುವ ಅದೆಷ್ಟೋ ಕಾನೂನುಗಳು ನಿಜವಾಗಿಯೂ ಸಂತ್ರಸ್ತರಿಗೆ ನ್ಯಾಯ ಕೊಟ್ಟಿದ್ದೇಯಾ? ಇಲ್ಲ. ಸೈಬರ್ ಲಾ ಇದೆ. ಅದು ಹಲ್ಲಿಲ್ಲದ ಹಾವಾಗಿದೆ. ಡ್ರಗ್ಸ್ ಪೆಡ್ಲಿಂಗ್ ಪ್ರಕರಣಗಳಲ್ಲಿ ಎಷ್ಟು ಆರೋಪಿಗಳಿಗೆ ಶಿಕ್ಷೆ ಆಗಿದೆ. ಆದ್ದರಿಂದ ದೂರದ ಆಲೋಚನೆ ಬಿಟ್ಟು ಸಕರಾತ್ಮಕವಾಗಿ ಯೋಚಿಸುವುದನ್ನು ವಿರೋಧ ಮಾಡುವವರು ಮೊದಲು ಮಾಡಬೇಕು.

ಇನ್ನು ಸ್ವಾತಂತ್ರ್ಯಪೂರ್ವದಲ್ಲಿಯೇ ಮತಾಂತರ ಆಗುತ್ತಿತ್ತು ಎಂದು ಆಗಿನ ರಾಜಮಹಾರಾಜರೇ ಕಾನೂನುಗಳನ್ನು ತಂದಿದ್ದರು ಎನ್ನುವುದಕ್ಕೆ ಇತಿಹಾಸ ಸಾಕ್ಷ್ಯ ಇದೆ. ಅದನ್ನು ಮುಂದಿಟ್ಟುಕೊಂಡು ಕ್ರೈಸ್ತರು ಹೇಳುವುದೇನೆಂದರೆ “ನಾವು ಮತಾಂತರ ಮಾಡುವುದೇ ಆದರೆ ನಮ್ಮ ಜನಸಂಖ್ಯೆ 50% ದಾಟಬೇಕಿತ್ತು” ಎನ್ನುತ್ತಾರೆ. ಈಗ ಸಮಸ್ಯೆ ಉದ್ಭವಿಸಿರುವುದು ಅಲ್ಲೇ. ಈ ರಾಜ್ಯ ಮತಾಂತರಕ್ಕೆ ವಿರೋಧ ಇಲ್ಲ. ಮತಾಂತರ ಹಿಂದೆನೂ ಆಗಿದೆ. ಮುಂದೆನೂ ಆಗಲಿದೆ. ಅದರ ಸಮಸ್ಯೆ ಅಲ್ಲ. ವಿಷಯ ಇರುವುದು ಆಮಿಷದ ಮತ್ತು ಬಲವಂತದ ಮತಾಂತರ ಬೇಡಾ ಎನ್ನುವುದು ಮಾತ್ರ. ಸ್ವ ಇಚ್ಚೆಯಿಂದ ಮತಾಂತರ ಆಗುವವರು 60 ದಿನಗಳ ಮೊದಲು ಆಯಾ ಜಿಲ್ಲಾಧಿಕಾರಿಗಳಿಗೆ ಸರಕಾರ ನಿಗದಿಗೊಳಿಸಿದ ಅರ್ಜಿ ನಮೂನೆಯನ್ನು ತುಂಬಿಸಿಕೊಡಬೇಕು. ಅದರಲ್ಲಿ ವಿವರವಾಗಿ ಬರೆಯಬೇಕು ಮತ್ತು ಮತಾಂತರ ಯಾವುದೇ ಧಾರ್ಮಿಕ ಕೇಂದ್ರಗಳಲ್ಲಿ ಆಗದೇ ತಟಸ್ಥ ಸ್ಥಳದಲ್ಲಿ ಆಗಬೇಕು ಎನ್ನುವುದೇ ನಿಯಮ. ಒಂದು ವೇಳೆ ಯಾರಾದರೂ ಕೃಷ್ಣನಿಗಿಂತ ಕ್ರೈಸ್ತ ಒಳ್ಳೆಯವನು ಎಂದು ಹೇಳಿ ಮತಾಂತರ ಆಗುವುದೇ ಆದರೆ ಆಗಲಿ, ಆದರೆ ನಿಯಮಬದ್ಧವಾಗಿ ಆಗಲಿ. ಸಾಗರದಂತಹ ವಿಶಾಲ ಹಿಂದೂ ಧರ್ಮದಲ್ಲಿ ಒಂದೆರಡು ಬಕೆಟ್ ನೀರು ಹೋದರೆ ಸಾಗರಕ್ಕೇನೂ ಕೊರತೆ ಆಗಲ್ಲ. ಆದರೆ ಕಳ್ಳ ಪೈಪುಗಳನ್ನು ಇಟ್ಟು ನೀರು ಕದಿಯುವವರಿಂದಲೇ ಈಗ ಏನಾದರೂ ಮಾಡಲೇಬೇಕಾದ ಪ್ರಸಂಗ ಬಂದಿರುವುದು. ಎಲ್ಲಿ ಮೆದು ಜಾಗ ಇದೆಯೋ ಅಲ್ಲಿಯೇ ಅಗೆಯುವ ಜಾಯಮಾನ ಇಟ್ಟುಕೊಂಡ ಮತಾಂತರಿಗಳು ಮೊದಲು ಈಶಾನ್ಯ ರಾಜ್ಯಗಳನ್ನು ಗುರಿ ಮಾಡಿದವು. ಅಲ್ಲಿ ಈಗ ಕ್ರೈಸ್ತ ಬಾಹುಳ್ಯವೇ ಹೆಚ್ಚು. ಹಾಗಾದರೆ ಅಲ್ಲಿ ಯಾಕೆ ಸುಲಭವಾಯಿತು. ಎಲ್ಲಿ ಸರಿಯಾದ ಶಿಕ್ಷಣ, ಆರೋಗ್ಯ ಮತ್ತು ಆರ್ಥಿಕ ಸಂಪನ್ಮೂಲ ಇಲ್ಲವೋ ಅಲ್ಲಿ ಇವರು ಅನಾಥಾಶ್ರಮದಿಂದ ಹಿಡಿದು ಎಲ್ಲವನ್ನು ಹರಡಿ ಕುಳಿತುಕೊಂಡರು. ಆದಿವಾಸಿಗಳು ಮೊದಲು ಆಸೆಯ ಕಣ್ಣುಗಳಿಂದ ನೋಡಿದರು. ಇವರಿಗೆ ಹೊರದೇಶದಿಂದ ಹಣ ದಂಡಿಯಾಗಿ ಬರುತ್ತಿತ್ತು. ಇಲ್ಲಿ ಅದನ್ನು ಉಪಯೋಗಿಸಿಕೊಂಡರು. ಈಗ ಅಲ್ಲಿಂದ ರಾಷ್ಟ್ರದ ಬೇರೆ ಬೇರೆ ಕಡೆ ನೋಡಿದರು. ಇವರ ನಿಧಾನ ವಿಷವನ್ನು ಗಮನಿಸಿ ಈಗಾಗಲೇ ದೇಶದ ಆರು ರಾಜ್ಯಗಳಲ್ಲಿ ಈ ಕಾಯ್ದೆ ಜಾರಿಯಲ್ಲಿದೆ. ಕರ್ನಾಟಕದಲ್ಲಿ ಬಿಜೆಪಿ ಸರಕಾರ ಬರದೇ ಇದು ಅಸಾಧ್ಯವಾದ ಕಾರಣ ಒಂದಿಷ್ಟು ತಡವಾಗಿದೆ. ಈಗ ವಿರೋಧ ಹೇಗೆ ಕಂಡುಬರುತ್ತಿದೆ ಎಂದರೆ ರಾಜ್ಯದಲ್ಲಿ ಪಾನನಿಷೇಧ ಜಾರಿಗೆ ತರುತ್ತೇವೆ ಎಂದ ಕೂಡಲೇ ಎಲ್ಲರೂ ವಿರೋಧ ಮಾಡಬೇಕಾ? ಇಲ್ಲವಲ್ಲ, ಯಾರು ಕುಡುಕರೋ ಅವರು ಮಾತ್ರ ವಿರೋಧ ಮಾಡಬೇಕು, ತಾನೆ? ಇಲ್ಲಿಯೂ ಹಾಗೆ. ಯಾರು ಮತಾಂತರದಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದಾರೋ ಅವರು ವಿರೋಧ ಮಾಡಲಿ. ಅದನ್ನು ಬಿಟ್ಟು ರಾಷ್ಟ್ರೀಯ ಪಕ್ಷವೊಂದರ ರಾಜ್ಯಾಧ್ಯಕ್ಷರಾಗಿರುವ ಡಿಕೆ ಶಿವಕುಮಾರ್ ಅವರು ಸೋನಿಯಾ ಗಾಂಧಿಯವರನ್ನು ಅರ್ಜೆಂಟಾಗಿ ಖುಷಿಪಡಿಸಲು ಮಸೂದೆಯ ಬಿಲ್ ಅನ್ನು ಸದನದಲ್ಲಿ ಹರಿದುಬಿಸಾಡಿದ್ದಾರೆ. ಅದನ್ನು ನ್ಯೂಸ್ ನಲ್ಲಿ ನೋಡಿದ ಸೋನಿಯಾ ” ಓ ಕೌನ್ ಹೇ, ತಿಹಾರ್ ಜೈಲ್ ವಾಲಾ” ಎಂದು ಪಕ್ಕದಲ್ಲಿದ್ದ ವೇಣುಗೋಪಾಲ್ ಅವರನ್ನು ಕೇಳಿದರೆಂದು ಬೆಳಗಾವಿಯ ಸುವರ್ಣಸೌಧದ ಪಡಸಾಲೆಯಲ್ಲಿ ಸಿದ್ದು ಬೆಂಬಲಿಗರ ಕುಹಕ!

0
Shares
  • Share On Facebook
  • Tweet It




Trending Now
ಜಾಂಡಿಸ್ ಬಂದ ಮಗುವಿಗೆ ಆಧುನಿಕ ಚಿಕಿತ್ಸೆ ನೀಡಲು ಹೆತ್ತವರ ನಕಾರ: ಪ್ರಾಣ ಬಿಟ್ಟ ಒಂದು ವರ್ಷದ ಹಸುಳೆ!
Hanumantha Kamath July 1, 2025
ಜನರು ರಸ್ತೆಬದಿ ಕಸ ಹಾಕುವುದನ್ನು ತಡೆಯಲು ಭಾರತ ಮಾತೆ, ದೇವರ ಫೋಟೋ! ಪುನೀತ್ ಕೆರೆಹಳ್ಳಿ ಆಕ್ರೋಶ!
Hanumantha Kamath July 1, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಜಾಂಡಿಸ್ ಬಂದ ಮಗುವಿಗೆ ಆಧುನಿಕ ಚಿಕಿತ್ಸೆ ನೀಡಲು ಹೆತ್ತವರ ನಕಾರ: ಪ್ರಾಣ ಬಿಟ್ಟ ಒಂದು ವರ್ಷದ ಹಸುಳೆ!
    • ಜನರು ರಸ್ತೆಬದಿ ಕಸ ಹಾಕುವುದನ್ನು ತಡೆಯಲು ಭಾರತ ಮಾತೆ, ದೇವರ ಫೋಟೋ! ಪುನೀತ್ ಕೆರೆಹಳ್ಳಿ ಆಕ್ರೋಶ!
    • ಉಡುಪಿ: ದನದ ಕಳೇಬರ ಪತ್ತೆ ಪ್ರಕರಣ: ಆರು ಮಂದಿಯನ್ನು ಬಂಧಿಸಿದ ಉಡುಪಿ ಪೊಲೀಸರು
    • ಫೈರ್ ಬ್ರಾಂಡ್ ನಾಯಕ, ಶಾಸಕ ಬಿಜೆಪಿಗೆ ರಾಜೀನಾಮೆ!
    • ಹೃದಯಾಘಾತ ಫೈನ್ ಅಂಡ್ ಫಿಟ್ ಇದ್ದ ತರುಣ, ತರುಣಿಯರಿಗೂ ಬರುತ್ತಿದೆ, ಹೇಗೆ?
    • ಸಂವಿಧಾನದಿಂದ "ಜಾತ್ಯಾತೀತತೆ" ಮತ್ತು "ಸಮಾಜವಾದ" ಶಬ್ದಗಳನ್ನು ತೆಗೆಯುವ ಬಗ್ಗೆ ಚರ್ಚೆ ನಡೆಯಲಿ - ಆರ್ ಎಸ್ ಎಸ್
    • PFI ಟಾರ್ಗೆಟ್- 950 ಜನರ ಹಿಟ್ ಲಿಸ್ಟ್ ರೆಡಿ! NIA ಕೋರ್ಟ್ ನಲ್ಲಿ ವಕೀಲರಿಂದ ಮಾಹಿತಿ...
    • ಎಮರ್ಜೆನ್ಸಿ ದಿನಗಳಲ್ಲಿ ಮೋದಿಯವರ ಅನುಭವ ಕಥನ "ದಿ ಎಮರ್ಜೆನ್ಸಿ ಡೈರಿಸ್"!
    • ಬಾಹ್ಯಕಾಶಕ್ಕೆ ಜಿಗಿಯುವ ಮೊದಲು ಪತ್ನಿಗೆ ಭಾವನಾತ್ಮಕ ಸಂದೇಶ: "ನೀನಿಲ್ಲದೆ..... " ಶುಭಾಂಶು ಹೇಳಿದ್ದೇನು?
    • ಪಹಲ್ಗಾಮ್ ಉಗ್ರರಿಗೆ ಆಹಾರ, ಆಶ್ರಯ: ಸ್ಥಳೀಯರಿಬ್ಬರ ಬಂಧನ!
  • Popular Posts

    • 1
      ಜಾಂಡಿಸ್ ಬಂದ ಮಗುವಿಗೆ ಆಧುನಿಕ ಚಿಕಿತ್ಸೆ ನೀಡಲು ಹೆತ್ತವರ ನಕಾರ: ಪ್ರಾಣ ಬಿಟ್ಟ ಒಂದು ವರ್ಷದ ಹಸುಳೆ!
    • 2
      ಜನರು ರಸ್ತೆಬದಿ ಕಸ ಹಾಕುವುದನ್ನು ತಡೆಯಲು ಭಾರತ ಮಾತೆ, ದೇವರ ಫೋಟೋ! ಪುನೀತ್ ಕೆರೆಹಳ್ಳಿ ಆಕ್ರೋಶ!
    • 3
      ಉಡುಪಿ: ದನದ ಕಳೇಬರ ಪತ್ತೆ ಪ್ರಕರಣ: ಆರು ಮಂದಿಯನ್ನು ಬಂಧಿಸಿದ ಉಡುಪಿ ಪೊಲೀಸರು
    • 4
      ಫೈರ್ ಬ್ರಾಂಡ್ ನಾಯಕ, ಶಾಸಕ ಬಿಜೆಪಿಗೆ ರಾಜೀನಾಮೆ!
    • 5
      ಹೃದಯಾಘಾತ ಫೈನ್ ಅಂಡ್ ಫಿಟ್ ಇದ್ದ ತರುಣ, ತರುಣಿಯರಿಗೂ ಬರುತ್ತಿದೆ, ಹೇಗೆ?

  • Privacy Policy
  • Contact
© Tulunadu Infomedia.

Press enter/return to begin your search