ಮಾದಕ ವ್ಯಸನಿಯಿಂದ ಮಗಳನ್ನು ರಕ್ಷಿಸುವಂತೆ ವಿಎಚ್‌ಪಿಗೆ ಮನವಿ

ಕ್ರಿಶ್ಚಿಯನ್ ಯುವತಿಯೊಬ್ಬಳಿಗೆ ಮಾದಕ ದೃವ್ಯ ನೀಡಿ ಆಕೆಯ ಮೇಲೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಮಹಿಳೆಯೊಬ್ಬರು ವಿಶ್ವಹಿಂದೂಪರಿಷತ್ ಗೆ ದೂರು ನೀಡಿದ್ದು, ತನ್ನ ಮಗಳನ್ನು ರಕ್ಷಣೆ ಮಾಡಿ ಎಂದು ತಾಯಿ ಮನವಿ ಮಾಡಿದ್ದಾರೆ.
ಯುವತಿ ಬಿಜೈ ನ ನಿವಾಸಿಯಾಗಿದ್ದು, ಕಾಲೇಜು ಓದುತ್ತಿರುವ ಸಂದರ್ಭ ಮಾದಕ ವಸ್ತುಗಳ ಚಟ ಅಂಟಿಸಿಕೊಂಡಿದ್ದಳು ಎಂದು ಹೇಳಲಾಗಿದ್ದು, ಕಳೆದ ಮೂರು ವರ್ಷಗಳಿಂದ ಆರೋಪಿ ಕೃಷ್ಣಾಪುರದ ಮೊಹಮ್ಮದ್ ಷರೀಫ್ ಸಿದ್ದಿಕ್ ಎಂಬಾತ ಯುವತಿಗೆ ಮಾದಕ ದ್ರವ್ಯ ನೀಡಿ ಪದೇ ಪದೇ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂದು ಯುವತಿ ತಾಯಿ ಆರೋಪಿಸಿದ್ದಾರೆ.ಅಲ್ಲದೆ ಇದೀಗ ತನ್ನ ಮಗಳ ಆರೋಗ್ಯ ಸ್ಥಿತಿ ಹದಗೆಟ್ಟಿದೆ ಎಂದು ವಿಎಚ್ ಪಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಮಹಿಳೆ ನೀಡಿರುವ ಮನವಿ ಪತ್ರದಲ್ಲಿ ಸಿದ್ದಿಕ್ ನನ್ನ ಮಗಳನ್ನು ತನ್ನ ಮನೆಯಿಂದ ಕರೆದುಕೊಂಡು ಹೋಗುತ್ತಿದ್ದ. ತನ್ನ ಸ್ನೇಹಿತರೊಂದಿಗೆ ಸೇರಿ ದಿನಗಟ್ಟಲೆ ಆಕೆಯನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದ. ನಾನು ಪೊಲೀಸರಿಗೆ ಹಾಗೂ ನಮ್ಮ ಧಾರ್ಮಿಕ ಮುಖಂಡರಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ನನ್ನ ಮಾಹಿತಿಯ ಪ್ರಕಾರ, ಸಿದ್ದಿಕ್ ಈಗಾಗಲೇ ಮೂರು ಮದುವೆಯಾಗಿದ್ದಾನೆ ಮತ್ತು ಅವನು ನನ್ನ ಮಗಳ ಜೀವನವನ್ನು ಹಾಳುಮಾಡಿದ್ದಾನೆ ಎಂದು ತಿಳಿಸಿದ್ದಾರೆ. ತನ್ನ ಮತ್ತು ಮಗಳನ್ನು ಸಿದ್ದಿಕ್‌ನಿಂದ ರಕ್ಷಿಸಲು ಮಹಿಳೆ ವಿಶ್ವ ಹಿಂದೂ ಪರಿಷತ್‌ನ ಸಹಾಯವನ್ನು ಕೋರಿದ್ದಾಳೆ.
ವಿಎಚ್ ಪಿಗೆ ಮನವಿ ಮಾಡಿದ ಹಿನ್ನಲೆ ವಿಎಚ್ ಪಿ ಮುಖಂಡರಾದ ಶರಣ್ ಪಂಪ್ ವೆಲ್ ಯುವತಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಆಗ್ರಹಿಸಿದ್ದಾರೆ. ಈ ಹಿನ್ನಲೆ ಪ್ರಕರಣದ ಅರಿವು ಪಡೆದ ಉರ್ವಾ ಪೊಲೀಸರು ಸಿದ್ದಿಕ್ ನನ್ನು ಬಂಧಿಸಿದ್ದಾರೆ.
Leave A Reply