• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಸುದ್ದಿ 

ಪಾಲಿಕೆ ಮೆದು ಇದ್ದ ಕಡೆಯಲ್ಲಿ ಮಾತ್ರ ಅಗೆಯುವುದು ಯಾಕೆ?

Tulunadu News Posted On January 3, 2022
0


0
Shares
  • Share On Facebook
  • Tweet It

ಮಂಗಳೂರು ಮಹಾನಗರ ಪಾಲಿಕೆಗೆ ತನಗೆ ಎಲ್ಲಿಂದೆಲ್ಲ ಆದಾಯ ಬರುತ್ತದೆ ಎನ್ನುವುದೇ ಗೊತ್ತಿಲ್ಲ. ಆದ್ದರಿಂದ ಅವರು ಮೆದು ಇದ್ದ ಕಡೆ ಮಾತ್ರ ಅಗೆಯುತ್ತಾ ಹೋಗುತ್ತಾರೆ. ಆದ್ದರಿಂದ ಯಾರು ಪ್ರತಿ ಬಾರಿ ಇವರಿಂದ ಹೆಚ್ಚುವರಿ ಶುಲ್ಕ ವಿಧಿಸಲ್ಪಡುತ್ತಿದ್ದಾರೋ ಅವರೇ ಮತ್ತೆ ಮತ್ತೆ ಹೊರೆ ಅನುಭವಿಸುತ್ತಿದ್ದಾರೆ. ನಾನು ಕಳೆದ ಐದು ವರ್ಷಗಳಿಂದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದಿಂದ ಮಂಗಳೂರು ಮಹಾನಗರ ಪಾಲಿಕೆಗೆ ಬರಬೇಕಾದ ಹಕ್ಕಿನ ಹಣವನ್ನು ಪಡೆದುಕೊಳ್ಳಿ ಎಂದು ಹೇಳುತ್ತಾ ಬರುತ್ತಿದ್ದಾನೆ. ಅದನ್ನು ಹಿಂದಿನ ಕಾಂಗ್ರೆಸ್ ಆಡಳಿತ ಕೂಡ ಕಿವಿಗೆ ಹಾಕಿಕೊಳ್ಳಲಿಲ್ಲ. ಈಗ ಭಾರತೀಯ ಜನತಾ ಪಾರ್ಟಿಯ ಆಡಳಿತ ಪಾಲಿಕೆಗೆ ಬಂದು ಎರಡು ವರ್ಷಗಳಾಗುತ್ತಿವೆ. ಅವರು ಕೂಡ ಈ ಬಗ್ಗೆ ಅಸಡ್ಡೆ ಮಾಡುತ್ತಿದ್ದಾರೆ. ಆದ್ದರಿಂದ ಬರಬೇಕಾದ ಹಣ ಬರುತ್ತಿಲ್ಲ. ಆರ್ ಟಿಒ ಕಡೆಯಿಂದ ಕೂಡ ಕೊಡಬೇಕಾದ ಹಣವನ್ನು ಅವರು ಕೊಡುತ್ತಿಲ್ಲ. ಮಗು ಅಳದೇ ತಾಯಿ ಹಾಲು ಕೊಡುವುದಿಲ್ಲ ಎನ್ನುವ ಗಾದೆಯಂತೆ ಇಲ್ಲಿ ಪಾಲಿಕೆ ಕೇಳದೆ ಆರ್ ಟಿಒ ಯಾಕೆ ಕೊಡುತ್ತದೆ. ಅದು ಯಾವ ಹಣ ಎನ್ನುವುದನ್ನು ಅಂಕಿಸಂಖ್ಯೆಗಳ ಮೂಲಕ ಹೇಳುತ್ತೇನೆ. ಮಂಗಳೂರು ಆರ್ ಟಿಒದಲ್ಲಿ ನಿತ್ಯ ಎಷ್ಟೋ ವಾಹನಗಳು ನೊಂದಣಿಯಾಗುತ್ತವೆ. ಒಂದು ಬಸ್ಸು ನೊಂದಣಿ ಆದರೆ ಅದರಲ್ಲಿ ಪಾಲಿಕೆಯ ಶುಲ್ಕ ಎಂದು 500 ರೂಪಾಯಿ ಆರ್ ಟಿಒ ಕಡೆಯಿಂದ ಪ್ರತ್ಯೇಕವಾಗಿ ತೆಗೆದುಕೊಳ್ಳಲಾಗುತ್ತದೆ. ಅದೇ ಸಾರ್ವಜನಿಕ ಸೇವೆಯಲ್ಲಿರುವ ಬಾಡಿಗೆ ಕಾರು, ಜೀಪು ನೋಂದಾವಣೆ ಆದರೆ 400 ರೂಪಾಯಿ ಪಾಲಿಕೆಯ ಶುಲ್ಕ, ಅದೇ ಲೈಟ್ ವೆಹಿಕಲ್ ಆದರೆ 300 ರೂಪಾಯಿ, ಮೂರುಚಕ್ರದ ವಾಹನಗಳಾದರೆ ನೂರು ರೂಪಾಯಿ, ದ್ವಿಚಕ್ರವಾಹನಗಳಾದರೆ 50 ರೂಪಾಯಿ ಶುಲ್ಕ ಪಾಲಿಕೆಗೆ ಹೋಗುತ್ತದೆ. ಇದು ಇವತ್ತು ನಿನ್ನೆಯಿಂದ ಆರಂಭವಾಗಿರುವುದಿಲ್ಲ. 2003 ರಿಂದಲೇ ಇದು ಜಾರಿಯಲ್ಲಿದೆ. ಈ ಮೊತ್ತವನ್ನು 2018-19 ರಲ್ಲಿ ರಾಜ್ಯ ಸರಕಾರ ನವೀಕರಣ ಕೂಡ ಮಾಡಿದೆ. ಇದು ಕಡ್ಡಾಯವಾಗಿ ಪಾಲಿಕೆ ಹೋಗಬೇಕು ಎನ್ನುವುದು ನಿಯಮ. ಆದರೆ ಈ ಮೊತ್ತ ಕೋಟ್ಯಾಂತರ ರೂಪಾಯಿ ಆದರೂ ಪಾಲಿಕೆ ಕಡೆಯಿಂದ “ನಮ್ಮ ಹಣ ನಮಗೆ ಕೊಡಿ” ಎಂದು ಒಂದೇ ಒಂದು ಪತ್ರ ಹೋಗಿಲ್ಲ. ಅವರು ಕೂಡ “ನಿಮ್ಮ ಹಣ ತೆಗೆದುಕೊಳ್ಳಿ” ಎಂದು ಒಂದು ಪ್ರಕ್ರಿಯೆ ನಡೆಸಲಿಲ್ಲ. ಇನ್ನು ಎರಡನೇಯದಾಗಿ ಪಾಲಿಕೆ ವ್ಯಾಪ್ತಿಯಲ್ಲಿ ಬಿಲ್ಡರ್ ಗಳು ಕಟ್ಟಡ ನಿರ್ಮಾಣಕ್ಕೆ ಪರವಾನಿಗೆ ಕೇಳುವಾಗ ಪಾಲಿಕೆ ಕಡೆಯಿಂದ ವಿವಿಧ ಶುಲ್ಕಗಳನ್ನು ವಸೂಲಿ ಮಾಡಲಾಗುತ್ತದೆ. ಅದರಲ್ಲಿ ಪುರಅಭಿವೃದ್ಧಿ ಶುಲ್ಕ, ಗ್ರೀನರಿ ಶುಲ್ಕ ಹೀಗೆ ಬೇರೆ ಬೇರೆ ಶುಲ್ಕಗಳಿರುತ್ತವೆ. ಆದರೆ ನಿಮಗೆ ಒಂದು ವಿಷಯ ಗೊತ್ತಾದರೆ ಆಶ್ಚರ್ಯವಾಗಬಹುದು. ಅದೇನೆಂದರೆ ಈ ಶುಲ್ಕಗಳು ಚದರ ಅಡಿಗೆ 20 ಪೈಸೆ, 40 ಪೈಸೆ ಹೀಗೆ ಪೈಸೆಗಳ ಆಧಾರದಲ್ಲಿ ಇವೆ. ಇವತ್ತಿನ ದಿನಗಳಲ್ಲಿ ಈ ಪೈಸೆಗಳಿಗೆ ಬೆಲೆ ಇದೆಯಾ? ಪೈಸೆಗಳು ನಿಂತು ಹೋಗಿಯೇ ದಶಕದ ಮೇಲಾಯಿತು. ಆದರೆ ಇವತ್ತಿಗೂ ಅದೇ ಪೈಸೆಯ ಲೆಕ್ಕಾಚಾರದಲ್ಲಿ ಪಾಲಿಕೆ ಇದೆ. 1992ರಲ್ಲಿ ಪಾಲಿಕೆಯಲ್ಲಿ ಈ ಶುಲ್ಕ ಪರಿಷ್ಕರಣೆ ಆಗಿದೆ. ಆದರೂ ಒಂದೊಂದು ಕಟ್ಟಡದಿಂದ ಕೋಟಿಗಟ್ಟಲೆ ಲಾಭ ಇರುವ ಬಿಲ್ಡರ್ ಗಳಿಗೆ ಇವರು ವಿಧಿಸುವ ಶುಲ್ಕ ಇಪ್ಪತ್ತು ಪೈಸೆ, ನಲ್ವತ್ತು ಪೈಸೆ. ಅದೇ ನಾವು ನೀವು ವಾಸಿಸುವ ಮನೆಗಳಿಗೆ ಪ್ರತಿ ಮೂರು ವರ್ಷಗಳಿಗೊಮ್ಮೆ ಇವರು 15% ತೆರಿಗೆ ಶುಲ್ಕ ಜಾಸ್ತಿ ಮಾಡುತ್ತಲೇ ಇರುತ್ತಾರೆ. ನಾವು ನಮ್ಮ ಮನೆಯ ತೆರಿಗೆಯನ್ನು ಕಟ್ಟಲು ತಡ ಮಾಡಿದರೆ ಇವರು ತಡ ಮಾಡದೇ ಅದಕ್ಕೆ ದಂಡವನ್ನು ವಿಧಿಸುತ್ತಾರೆ. ಅಷ್ಟೇ ಅಲ್ಲ ತೆರಿಗೆ ಕಟ್ಟುವುದು ತಡವಾದಷ್ಟು ಇವರ ದಂಡ ಜಾಸ್ತಿಯಾಗುತ್ತಲೇ ಹೋಗುತ್ತದೆ. ಹಾಗಂತ ಈ ಸರಕಾರಿ ಜಾಗಗಳಲ್ಲಿ ದೊಡ್ಡ ದೊಡ್ಡ ಹೋರ್ಡಿಂಗ್ಸ್ ಹಾಕುತ್ತಾರಲ್ಲ, ಅದನ್ನು ಪ್ರತಿ ವರ್ಷ ಪಾಲಿಕೆ ಕಡೆಯಿಂದ ಏಲಂ ಮಾಡಬೇಕಾಗುತ್ತದೆ. ಆದರೆ ಪಾಲಿಕೆ ಅದನ್ನು ಮಾಡುತ್ತಿಲ್ಲ. ಒಮ್ಮೆ ಯಾರಿಗೆ ಸಿಕ್ಕಿತೋ ಅವರಿಗೆನೆ ಪ್ರತಿ ವರ್ಷ ಸಿಗುತ್ತಲೇ ಇರುತ್ತದೆ. ಅವರು ಸರಿಯಾಗಿ ಹಣ ಕಟ್ಟದಿದ್ದರೂ ಅವರನ್ನು ಕೇಳುವವರು ಇರುವುದಿಲ್ಲ. ಯಾಕೆಂದರೆ ಅವರು ಪ್ರಭಾವಿಗಳಾಗಿರುತ್ತಾರೆ. ಅವರಿಗೆ ಕೈ ಹಾಕಲು ಪಾಲಿಕೆ ಹೋಗುವುದಿಲ್ಲ. ಹಾಗಂತ ಜನಸಾಮಾನ್ಯರ ಮನೆಗಳಿಗೆ ಯಾವುದೇ ವಿನಾಯಿತಿ ಇಲ್ಲ.
ಮೂರನೇಯದಾಗಿ ಪಾಲಿಕೆಯ ಒಡೆತನದ ಅಂಗಡಿ, ಮಳಿಗೆಗಳಲ್ಲಿ ಬಾಡಿಗೆಗೆ ಇರುವ ಅನೇಕರು ಸಮಯಕ್ಕೆ ಸರಿಯಾಗಿ ಬಾಡಿಗೆಯನ್ನು ಕಟ್ಟುವುದೇ ಇಲ್ಲ. ಹಾಗಂತ ಅವರಿಗೆ ಯಾವುದೇ ರೀತಿಯ ದಂಡ ಅಥವಾ ಬಡ್ಡಿ ಇರುವುದಿಲ್ಲ. ಅವರು ತಮಗೆ ಖುಷಿ ಬಂದಾಗ ಕಟ್ಟುತ್ತಾರೆ. ಇದನ್ನು ಒಂದು ಶಿಸ್ತುಬದ್ಧ ಮಾಡುವುದು ಹೇಗೆಂದರೆ ಈ ಅಂಗಡಿಗಳಲ್ಲಿ ಬಾಡಿಗೆಗೆ ಯಾರು ಇರುತ್ತಾರೋ ಅವರ ಅಕೌಂಟ್ ನಂಬರ್ ಅನ್ನು ಪಾಲಿಕೆಯ ಕಂದಾಯ ವಿಭಾಗಕ್ಕೆ ಲಿಂಕ್ ಮಾಡಿದರೆ ಆಗ ಪ್ರತಿ ತಿಂಗಳಿಗೆ ಅವರ ಬಾಡಿಗೆ ಮೊತ್ತ ನಿರ್ದಿಷ್ಟ ದಿನದಂದು ಕಟ್ ಆಗಿ ಪಾಲಿಕೆಯ ಅಕೌಂಟಿಗೆ ಜಮೆಯಾಗುತ್ತದೆ. ಇನ್ನು ಪಾಲಿಕೆಯ ವ್ಯಾಪ್ತಿಯಲ್ಲಿರುವ ಮಾರುಕಟ್ಟೆಗಳಲ್ಲಿ ಅನೇಕ ಅಂಗಡಿಯವರು ತಮ್ಮ ಅಂಗಡಿಗಳಲ್ಲಿ ಫ್ರಿಡ್ಜ್ ಸಹಿತ ಬೇರೆ ಬೇರೆ ರೀತಿಯಲ್ಲಿ ವಿದ್ಯುತ್ ಅನ್ನು ಯಥೇಚ್ಚ ಪ್ರಮಾಣದಲ್ಲಿ ಬಳಸುತ್ತಾರೆ. ಆದರೆ ಆ ಅಂಗಡಿಯವರಿಗೆ ಪಾಲಿಕೆ ಕಡೆಯಿಂದ ನಿಗದಿಗೊಳಿಸಿರುವುದು ಮಿನಿಮಮ್ ವಿದ್ಯುತ್ ಶುಲ್ಕ. ಇದರಿಂದ ಏನಾಗಿದೆ ಎಂದರೆ ಪಾಲಿಕೆಗೆ ಈ ಅಂಗಡಿಗಳಿಂದ ಬರುವ ವಿದ್ಯುತ್ ನಿಗದಿಗೊಳಿಸಿದ ಬಾಬ್ತುವಿಗಿಂತ ಹೆಚ್ಚು ಹಣ ಕಟ್ಟುವ ಪರಿಸ್ಥಿತಿ ಇದೆ. ಅಂದರೆ ಒಂದು ಅಂಗಡಿಗೆ ಇವರು 200 ರೂಪಾಯಿ ವಿದ್ಯುತ್ ಶುಲ್ಕ ಎಂದು ನಿಗದಿಗೊಳಿಸಿದ್ದರೆ ಆ ಅಂಗಡಿಯವರು ಬಳಸಿದ ವಿದ್ಯುತ್ ಒಂದು ಸಾವಿರ ಇರುತ್ತದೆ. ಉಳಿದ ಹಣವನ್ನು ಪಾಲಿಕೆಯೇ ಕಟ್ಟಬೇಕಾಗಿದೆ. ಆದ್ದರಿಂದ ಪಾಲಿಕೆಯ ಪ್ರತಿ ಅಂಗಡಿಗೂ ಅದರದ್ದೇ ವಿದ್ಯುತ್ ಬಿಲ್ ನಿಗದಿಗೊಳಿಸಬೇಕು. ಅವರೇ ಅದನ್ನು ಕಟ್ಟುವಂತಾಗಲಿ. ಆಗ ರಗಳೆ ಇರುವುದಿಲ್ಲ. ಹೀಗೆ ಒಂದು ಕಡೆಯಲ್ಲಿ ಪಾಲಿಕೆಯ ಬರಬೇಕಾದ ಹಣ ಬರದೇ ಹಾಗೆ ಉಳಿದುಕೊಂಡಿದ್ದರೆ ಮತ್ತೊಂದು ಕಡೆಯಲ್ಲಿ ಹಣ ಸೋರಿಕೆ ಆಗುತ್ತಿದೆ. ಇದನ್ನು ಕೇಳುವವರು ಇಲ್ಲದೆ ಪಾಲಿಕೆಯಲ್ಲಿ ಬಿಜೆಪಿ ಆಡಳಿತ ಮಾಡುತ್ತಿದೆ!

0
Shares
  • Share On Facebook
  • Tweet It




Trending Now
ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!
Tulunadu News December 27, 2025
ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
Tulunadu News December 23, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!
    • ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
    • ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ತಿರುವನಂತಪುರಂ ಪಾಲಿಕೆಯ ಬಿಜೆಪಿ ಸದಸ್ಯ!
    • ಭಾರತ ಒಂದು ‘ಹಿಂದೂ ರಾಷ್ಟ್ರ’ – ಸಂವಿಧಾನಿಕ ಮಾನ್ಯತೆ ಅಗತ್ಯವಿಲ್ಲ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
    • ಸೋನಿಯಾ ಗಾಂಧಿ ಕುರಿತು ರೇವಂತ್ ರೆಡ್ಡಿ ಹೇಳಿಕೆ: ಬಿಜೆಪಿ ತೀವ್ರ ಟೀಕೆ
    • ಬಾಂಡ್ ರದ್ದಾದ ಬಳಿಕ ರಾಜಕೀಯ ಪಕ್ಷಗಳಿಗೆ ಬಂದ 3811 ಕೋಟಿಯಲ್ಲಿ ಬಿಜೆಪಿಯ ಪಾಲು 82%!
    • ಭಕ್ತಿಗೀತೆ ಹಾಡುತ್ತಿದ್ದ ಗಾಯಕಿಯ ಮೇಲೆ ದರ್ಪ! ಜಾತ್ಯಾತೀತ ಗೀತೆ ಹಾಡಲು ಒತ್ತಾಯ!
    • ರೈತರ ಮಕ್ಕಳನ್ನು ಮದುವೆಯಾಗುವ ಹೆಣ್ಮಕ್ಕಳಿಗೆ 10 ಲಕ್ಷ ನೀಡಿ - ಸರಕಾರಕ್ಕೆ ಶಾಸಕ ಆಗ್ರಹ!
    • ವಿಡಿಯೋ ಕಾಲ್ ನಲ್ಲಿ ನಿಶ್ಚಿತಾರ್ಥ-ಎಲ್ ಇಡಿ ಸ್ಕ್ರೀನ್ ಗೆ ಆರತಿ!
    • ಅಜಾನ್ ಚರ್ಚೆಯ ಸಂದರ್ಭದಲ್ಲಿ ದೀಪಾವಳಿ ಪಟಾಕಿ ವಿಷಯ ಎತ್ತಿದ ಸಚಿವ!
  • Popular Posts

    • 1
      ಬಿಜೆಪಿ ರಾಜ್ಯಾಧ್ಯಕ್ಷರ ಹೇಳಿಕೆ ಬೆನ್ನಲ್ಲೇ ದೇವೇಗೌಡರಿಂದ ಲೋಕಲ್ ಮೈತ್ರಿ ಕಟ್ ಘೋಷಣೆ!

  • Privacy Policy
  • Contact
© Tulunadu Infomedia.

Press enter/return to begin your search