ಪಿಲಿಕುಳ ಜೈವಿಕ ಉದ್ಯಾನವನದ 9 ವರ್ಷ ಪ್ರಾಯದ ‘ಓಲಿವರ್’ ಹೆಸರಿನ ಹುಲಿ ನಿಧನ!

ಪಿಲಿಕುಳ ಜೈವಿಕ ಉದ್ಯಾನವನದ 9 ವರ್ಷ ಪ್ರಾಯದ ‘ಓಲಿವರ್’ ಹೆಸರಿನ ಹುಲಿ ಇಂದು ಮುಂಜಾನೆ ಮೃತಪಟ್ಟಿದೆ.
ಆರೋಗ್ಯವಾಗಿ ಸದೃಢವಾಗಿದ್ದ ಹುಲಿಯು ಮುಂಜಾನವರೆಗೂ ಚುರುಕಾಗಿದ್ದು, ಒಮ್ಮಿಂದೊಮ್ಮೆಲೇ ಕುಸಿದು ಬಿದ್ದು ಮೃತಪಟ್ಟಿದೆ.
ಜೀವ ಉಳಿಸಲು ಮೃಗಾಲದ ವೈದ್ಯಾಧಿಕಾರಿಗಳು ಚಿಕಿತ್ಸೆ ನೀಡಿದರೂ ಫಲಪ್ರದವಾಗಿಲ್ಲ.ಓಲಿವರ್, ಪಿಲಿಕುಳ ಮೃಗಾಲಯದ ವಿಕ್ರಮ ಹಾಗೂ ಶಾಂಭವಿ ಹೆಸರಿನ ಜೋಡಿ ಹುಲಿಗಳಿಗೆ ಜನಿಸಿದ ಎರಡು ಮರಿಗಳಲ್ಲಿ ಒಂದಾಗಿದೆ. ಪಿಲಿಕುಳ ಉದ್ಯಾನವನದಲ್ಲಿ ಪ್ರಸ್ತುತ 12 ಹುಲಿಗಳು ಇವೆ. ಮೃತಪಟ್ಟ ಹುಲಿಯ ಅಂಗಾಂಗಳ ಮಾದರಿಯನ್ನು ಪುರೀಕ್ಷೆಗೆ ಬೆಂಗಳೂರು ಹಾಗೂ ಉತ್ತರ ಪ್ರದೇಶದ ಐವಿಆರ್‌ಐಗೆ ಕಳುಹಿಸಲಾಗಿದೆ. ಕೋವಿಡ್ ಪರೀಕ್ಷೆಗಾಗಿ ಮಾದರಿಯನ್ನು ಭೋಪಾಲದ ಎನ್‌ಐಎಚ್‌ಎಸ್‌ಎಡಿ ಗೆ ಕಳುಹಿಸಲಾಗಿದೆ.
ಮೃಗಾಲಯದಲ್ಲಿ ಅನುಮಾನಸ್ಪದ ಯಾವುದೇ ರೋಗ ಹರಡದಂತೆ ರೋಗ ನಿರೋಧಕ ದ್ರಾವಣಗಳನ್ನು ಪ್ರಾಣಿಗಳ ಆವರಣದ ಒಳಗೆ ಮತ್ತು ಸುತ್ತಮುತ್ತ ಸಿಂಪಡಿಸಲಾಗುತ್ತದೆ ಎಂದು ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕ ಎಚ್.ಜೆ. ಭಂಡಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Leave A Reply