ಸಿಂಹ ಒಂದು ಹೆಜ್ಜೆ ಹಿಂದೆ ಇಟ್ಟಿದೆ ಎಂದರೆ ಎದುರಿನ ಪ್ರಾಣಿಗೆ ಆಯಸ್ಸು ಮುಗಿದಿದೆ ಎಂದರ್ಥ!!
ಮೋದಿ ಮೊದಲ ಬಾರಿ ಒಂದಿಷ್ಟು ಅಸಮಾಧಾನಕ್ಕೆ ಒಳಗಾದರು. ಅದಕ್ಕೆ ಕಾರಣ ಪಂಜಾಬಿನಲ್ಲಿ ಆದ ಘಟನೆ. ಹಾಗಂತ ಸಿಂಹವನ್ನು ಓಡಿಸಿದ್ದೇವೆ ಎಂದು ಕಾಂಗ್ರೆಸ್ ಬೀಗುವುದು ಬೇಡಾ. ಸಿಂಹ ಒಂದು ಹೆಜ್ಜೆ ಹಿಂದೆ ಇಟ್ಟಿದೆ ಎಂದರೆ ಎದುರಿನ ಪ್ರಾಣಿಯ ಎದೆ ಬಗೆಯಲು ಕಾಲಿನ ಉಗುರುಗಳನ್ನು ಶಾರ್ಪ್ ಮಾಡುತ್ತಿದೆ ಎಂದೇ ಅರ್ಥ.
ಆ ವಿಷಯಕ್ಕೆ ಬರುವ ಮೊದಲು ರಾಷ್ಟ್ರೀಯ ತನಿಖಾ ದಳ ಮಂಗಳೂರಿಗೆ ಬಂದು ಮರಿಯಂಳನ್ನು ಎತ್ತಿ ಹಾಕಿಕೊಂಡು ಹೋದ ಘಟನೆಯ ಹಿನ್ನಲೆ ತಿಳಿದುಕೊಂಡರೆ ಉತ್ತಮ. ಲವ್ ಜಿಹಾದ್, ಮತಾಂತರ ಮತ್ತು ಭಯೋತ್ಪಾದನೆ ಈ ಮೂರು ಶಬ್ದಗಳಿಗೆ ಒಂದಕ್ಕೊಂದು ಲಿಂಕ್ ಹೊಂದಿವೆ ಎನ್ನುವುದು ಸಾಕ್ಷಿ ಸಮೇತ ಮತ್ತೆ ಸಾಬೀತಾಗಿದೆ. ಅದು ಉಳ್ಳಾಲದಿಂದ ಎನ್ನುವುದನ್ನು ಮತ್ತೆ ಹೇಳಬೇಕಾಗಿಲ್ಲ. ಅದು ಕೂಡ ಉಳ್ಳಾಲದ ಮಾಜಿ ಶಾಸಕರಾಗಿದ್ದ ಇದಿನಬ್ಬನವರ ಕುಟುಂಬದಲ್ಲಿ ನಡೆದುಹೋಗಿದೆ. ಅದು ಕೂಡ ದಂತ ವೈದ್ಯಕೀಯ ವಿದ್ಯಾರ್ಥಿನಿಯ ಜೀವನದಲ್ಲಿ ಆಗಿ ಹೋಗಿದೆ. ಇದೆಲ್ಲವು ಆದದ್ದು ದೀಪ್ತಿ ಮಾರ್ಲ ಬದುಕಿನಲ್ಲಿ. ಆಕೆಯನ್ನು ಮದುವೆಯಾದದ್ದು ಶ್ರೀಮಂತ ಉದ್ಯಮಿಯೊಬ್ಬರ ಮಗ. ಆತ ಅವಳನ್ನು ಮದುವೆಯಾಗುವ ಸಮಯದಲ್ಲಿ ಆಕೆಯನ್ನು ಮತಾಂತರ ಮಾಡಲಾಗಿದೆ. ಲವ್ ಜಿಹಾದ್ ಗಾಗಿ ಬಂಟ ಮನೆತನದ ಒಬ್ಬ ಯುವತಿಯನ್ನು ಮುಸ್ಲಿಂ ಆಗಿ ಪರಿವರ್ತಿಸಲು ಲವ್ ನಾಟಕವನ್ನು ಮಾಡಲಾಗಿರಬಹುದು. ನಂತರ ಆಕೆ ಮದುವೆಯಾಗಿ ಸುಂದರ, ಸಂತೋಷದ ವೈವಾಹಿಕ ಜೀವನವನ್ನು ಆಕೆ ನೋಡುವಂತಾಯಿತಾ ಎಂದು ನೋಡಿದರೆ ಆಕೆಗೆ ಮದುವೆಯಾದ ಮೇಲೆ ಬೇರೆ ಟಾರ್ಗೆಟ್ ಕೊಟ್ಟಂತೆ ಕಾಣುತ್ತದೆ. ಅಂದರೆ ನೀನು ಲವ್ ಜಿಹಾದ್ ಆಗಿ ಮತಾಂತರ ಹೊಂದಿ ಈಗ ಸುಮ್ಮನೆ ಕುಳಿತುಕೊಂಡರೆ ಸಾಕಾಗುವುದಿಲ್ಲ. ನಿನ್ನ ಹಾಗೆ ಬೇರೆಯವರನ್ನು ಕೂಡ ಈ ಗುಂಡಿಗೆ ಬೀಳಿಸಬೇಕು ಎಂದು ಸೂಚನೆ ಕೊಟ್ಟಿರುವುದು ಪಕ್ಕಾ. ಅದಕ್ಕಾಗಿಯೇ ಆಕೆ ಹನಿಟ್ರಾಪ್ ಮಾಡಲು ಮುಂದಾಗಿದ್ದಳು. ಹನಿಟ್ರಾಪಿಗೆ ಒಳಗಾದ ಯುವಕರಿಗೆ ಕೊಡುತ್ತಿದಂತಹ ಗುರಿಯೇ ಭಯೋತ್ಪಾದಕರಾಗುವುದು ಎನ್ನುವುದು. ಈ ಮೂಲಕ ಅವರು ಐಸಿಸ್ ನಲ್ಲಿರುವ ಭಯೋತ್ಪಾದಕ ಚಟುವಟಿಕೆಗಳಿಗೆ ನೆರವಾಗಬೇಕಿತ್ತು. ಹೀಗೆ ಹತ್ತಾರು ಯುವಕರನ್ನು ಆಕೆ ತಯಾರಿಗೊಳಿಸಿದ್ದಾಳೆ. ಅದಕ್ಕೆ ಅವಳ ಗಂಡನ ನೇರ ಬೆಂಬಲ ಮತ್ತು ಸೂಚನೆ ಇರುವುದು ಗ್ಯಾರಂಟಿ. ಆತನನ್ನು ಐದು ತಿಂಗಳ ಹಿಂದೆಯೇ ರಾಷ್ಟ್ರೀಯ ತನಿಖಾ ದಳ ಆತನನ್ನು ಬಂಧಿಸಲಾಗಿತ್ತು. ಆದರೆ ಆ ಸಮಯದಲ್ಲಿ ಮರಿಯಂಗೆ ಐದು ತಿಂಗಳ ಮಗು ಇದ್ದ ಕಾರಣ ಮತ್ತು ಇನ್ನೊಂದಿಷ್ಟು ಸಾಕ್ಷಿ ಬೇಕಾಗಿದ್ದ ಕಾರಣ ಬಂಧಿಸಿರಲಿಲ್ಲ. ಆದರೆ ಈಗ ಪೂರಕವಾದ ಸಾಕ್ಷ್ಯ ಸಿಕ್ಕಿದೆ. ಇನ್ನು ತಡ ಮಾಡುವ ಅಗತ್ಯ ಎನ್ ಐಎಗೆ ಸಿಗಲಿಲ್ಲ. ಅವರು ಬಂದು ನೇರ ದೆಹಲಿಗೆ ಕರೆದುಕೊಂಡು ಹೋಗಿದ್ದಾರೆ. ನೀವು ದೇಶದ ಯಾವ ಮೂಲೆಯಲ್ಲಿ ಕುಳಿತು ದೇಶದ ಒಳಗಿನ ಅಥವಾ ಹೊರಗಿನ ಯಾವುದೇ ಭಯೋತ್ಪಾದನಾ ಚಟುವಟಿಕೆಗಳಿಗೆ ಯಾವ ರೀತಿ ನೆರವಾದರೂ ಎನ್ ಐಎಗೆ ಗೊತ್ತಾಗುತ್ತೆ ಎಂದು ತಿಳಿಯಲಾರಷ್ಟು ಪೆದ್ದುಗಳಾ ಇದ್ದಿನಬ್ಬನವರ ಮೊಮ್ಮೊಗ ಅಥವಾ ಆತನ ಪತ್ನಿ. ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದರೆ ಎನ್ ಐಎಗೆ ಗೊತ್ತಾಗಲ್ಲ ಎಂದು ಈ ವ್ಯಕ್ತಿಗಳು ಹೇಗೆ ಅಂದುಕೊಂಡರು ಎನ್ನುವುದು ಆಶ್ಚರ್ಯ. ಐದು ತಿಂಗಳ ಮಗು ಇತ್ತು ಎಂದು ಒಂದು ವೇಳೆ ಅಧಿಕಾರಿಗಳು ಹಾಗೆ ಬಿಟ್ಟುಹೋಗಿದಿದ್ದರೆ ಅದು ಮಾನವೀಯತೆಯ ಒಂದು ಪ್ರತಿಬಿಂಬ ಎಂದು ಹೇಳಬಹುದು. ಹಾಗಂತ ಒಂದು ಮಗುವಿನ ಮುಖ ನೋಡಿ ಬಿಟ್ಟರೆ ಈ ಮರಿಯಂನಂತವರಿಂದ ಅದೆಷ್ಟು ಭಾರತೀಯರು ರಿಸ್ಕಿನಲ್ಲಿ ಬೀಳಲ್ಲ. ಹಾಗಂತ ಮಗುವಿನ ಮುಖ ನೋಡಿ ಬಿಟ್ಟು ಹೋಗಲು ಅದೇನೂ ಟಿವಿ ಸಿರಿಯಲ್ ಅಲ್ಲ ಎನ್ನುವವರು ಕೂಡ ಇದ್ದಾರೆ. ಯಾಕೆಂದರೆ ಇಲ್ಲಿ ಸೆಂಟಿಮೆಂಟ್ ಕೆಲಸ ಮಾಡಲ್ಲ. ಇದು ದೇಶದ ಸುರಕ್ಷತೆಯ ಪ್ರಶ್ನೆ ಕೂಡ ಹೌದು.
ಹಾಗೆ ಸುಮ್ಮನೆ ನಿರ್ಲಕ್ಷ್ಯ ಮಾಡಲು ಎನ್ ಐಎ ಅಧಿಕಾರಿಗಳು ಅಂದರೆ ಪಂಜಾಬ್ ಸರಕಾರದ ಮುಖ್ಯಮಂತ್ರಿಗಳು ಅಲ್ಲವಲ್ಲ. ಅಲ್ಲಿ ಆದರೆ ಪ್ರಧಾನಿ ನರೇಂದ್ರ ಮೋದಿಯವರ ಸುರಕ್ಷತೆಯ ಬಗ್ಗೆ ಅಲ್ಲಿನ ಸರಕಾರ ಎಷ್ಟು ನಿರ್ಲಕ್ಷ್ಯ ವಹಿಸಿತು ಎಂದರೆ ಮೋದಿ ಏನು ಬೇಕಾದರೂ ಮಾಡಿಕೊಂಡು ಹೋಗಲಿ. ನಾವು ಅವರನ್ನು ಕ್ಯಾರೇ ಮಾಡುವುದಿಲ್ಲ ಎನ್ನುವ ಮನಸ್ಥಿತಿಯನ್ನು ತೋರಿಸಿತ್ತು. ಇದರಿಂದ ಏನಾಗಿತ್ತು ಎಂದ್ರೆ ಮೋದಿಯಂತಹ ಮೋದಿಯವರೇ ಪಾಕಿಸ್ತಾನದ ಗಡಿಯಿಂದ ಕೇವಲ ಹತ್ತು ಕಿಲೋ ಮೀಟರ್ ದೂರದಲ್ಲಿರುವ ಒಂದು ಮೇಲು ಸೇತುವೆ ಮೇಲೆ ಅಚಾನಕ್ ಆಗಿ 20 ನಿಮಿಷ ಸಾಮಾನ್ಯ ಪ್ರಜೆಯಂತೆ ಕಾಯಬೇಕಾಯಿತು. ಒಂದು ವೇಳೆ ಪಾಕಿಸ್ತಾನದ ಗಡಿಯ ಆಚೆಯಿಂದ ಮಿಸೈಲ್ ಏನಾದರೂ ತೂರಿ ಬಂದಿದ್ದರೆ ಏನಾಗುತ್ತಿತ್ತು? ಕಾಂಗ್ರೆಸ್ ಮತ್ತೆ ಯಾವ ರಾಜ್ಯದಲ್ಲಿಯೂ ಕನಿಷ್ಟ 10 ವರ್ಷ ಅಧಿಕಾರಕ್ಕೆ ಬರುತ್ತಿರಲಿಲ್ಲ. ಅದು ಬೇರೆ ವಿಷಯ. ಆದರೆ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಘನತೆಗೆ ದಕ್ಕೆ ಉಂಟಾಗುತ್ತಿತ್ತು. ಕಾಂಗ್ರೆಸ್ ಇದನ್ನೇ ಬಯಸುತ್ತಿತ್ತಾ? ಮೋದಿಯವರು ಭಾರತೀಯ ಜನತಾ ಪಾರ್ಟಿಯ ಪ್ರಧಾನ ಮಂತ್ರಿಗಳಲ್ಲ. ಅವರು ಈ ದೇಶದ ಪ್ರಧಾನಿ. ಒಂದು ವೇಳೆ ಅವರು ಪಂಜಾಬಿನಲ್ಲಿ ಚುನಾವಣಾ ಪ್ರಚಾರಕ್ಕೆ ಬರುವುದರಿಂದಲೇ ಅಲ್ಲಿನ ಕಾಂಗ್ರೆಸ್ ಸರಕಾರಕ್ಕೆ ಅಷ್ಟು ನಡುಕ ಹುಟ್ಟಿದರೆ ಮುಂದಿನ ತಿಂಗಳ ಅಂತ್ಯಕ್ಕೆ ಅಲ್ಲಿ ಚುನಾವಣೆ ನಡೆದು ಬಿಜೆಪಿ ಸರಕಾರ ಬಂದರೆ ಸಿದ್ದು-ಚೆನ್ನಿ ಪಾಕಿಸ್ತಾನಕ್ಕೆ ಬೇಡಲು ಹೋಗಬೇಕಾದಿತು. ಹೇಗೆ ಮರಿಯಂನಂತವರು ಮಂಗಳೂರಿನ ಹೊರವಲಯದಲ್ಲಿ ದೊಡ್ಡ ದೊಡ್ಡ ಬಂಗಲೆಗಳಲ್ಲಿ ಸ್ಲೀಪರ್ ಸೆಲ್ ಗಳನ್ನು ಮಾಡಿಕೊಂಡು ಏನಾದರೂ ವಿಧ್ವಂಸಕ ಕೃತ್ಯಗಳನ್ನು ಮಾಡಲು ಸಂಚು ಹೂಡುತ್ತಿದ್ದರೋ ಹಾಗೆ ಪಾಕಿಸ್ತಾನದ ಗಡಿಯಾಗಿರುವ ಪಂಜಾಬ್ ನಲ್ಲಿ ಕೂಡ ಮೋದಿಯವರನ್ನು ಹಿಮ್ಮೆಟ್ಟಿಸಲು ಏನಾದರೂ ಸಂಚು ರೂಪಿಸಿರಬಹುದು. ಆದರೆ ಮೋದಿ ಇಂತಹ ನೂರು ಸಂಚುಗಳನ್ನು ವಿಫಲಗೊಳಿಸಿ ಈ ಗದ್ದುಗೆ ಏರಿದವರು. ಅವರು ಸಿಎಂ ಆಗಿದ್ದಾಗಲೇ ಅವರ ಮೇಲೆ ಎಂತೆಂತಹ ಪ್ರಯತ್ನ ಆಗಿದೆ. ಅದನ್ನು ಜೀರ್ಣಿಸಿಕೊಂಡವರಿಗೆ ನಿನ್ನೆ ಮೊನ್ನೆ ಹುಟ್ಟಿದ ಚಿನ್ನಿಯಂತಹ ಬಚ್ಚಾಗಳು ಸುರುಸುರು ಕಡ್ಡಿ ಹಿಡಿದು ಹೆದರಿಸುವುದಾ? ಈಗ ದೆಹಲಿಯ ಹಿಂತಿರುಗಿದ ಸಿಂಹ ಎಷ್ಟು ವ್ಯಗ್ರಗೊಂಡಿದೆ ಎಂದರೆ ಸಿದ್ದು ನಿದ್ರೆಯಲ್ಲಿಯೇ ಮೂತ್ರ ಮಾಡುವ ದಿನ ಬಂದರೂ ಆಶ್ಚರ್ಯವಿಲ್ಲ!
Leave A Reply