• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಅನಂತ ಉತ್ಸಾಹ, ಶಕ್ತಿ, ಧೈರ್ಯದಿಂದ ಮುನ್ನುಗ್ಗಿ, ಯಶಸ್ಸು ನಿಶ್ಚಿತ ಎಂದು ಹೇಳಿಕೊಟ್ಟವರ ಜನ್ಮದಿನ ಇಂದು!!

Hanumantha Kamath Posted On January 12, 2022


  • Share On Facebook
  • Tweet It

ಸ್ವಾಮಿ ವಿವೇಕಾನಂದರ ಬೋಧನೆಗಳು, ಸಂದೇಶಗಳು ಸ್ವತಂತ್ರ ಭಾರತದಲ್ಲಿ ಮೋದಿಜಿಯವರ ಯಶಸ್ಸಿಗೆ ಹೇಗೆ ಮೆಟ್ಟಿಲುಗಳಾಗಿವೆ ಎನ್ನುವುದನ್ನು ನಾವು ಅರ್ಥ ಮಾಡಿ ವಿವೇಕವಾಣಿಯ ಒಂದು ಶೇಕಡಾವನ್ನಾದರೂ ಬದುಕಿನಲ್ಲಿ ಅಳವಡಿಸಿದರೆ ಬದುಕು ಶ್ರೇಷ್ಟವಾಗುತ್ತದೆ. ಸ್ವಾಮಿ ವಿವೇಕಾನಂದರು ಜನ್ಮ ತಾಳಿದ ಈ ಪುಣ್ಯಭೂಮಿಯಲ್ಲಿ ಮತ್ತು ನರೇಂದ್ರ ಮೋದಿಯವರು ನಡೆದಾಡುತ್ತಿರುವ ಈ ಕರ್ಮಭೂಮಿಯಲ್ಲಿ ತಾಯಿ ಭಾರತಾಂಬೆಯ ಶತಕೋಟಿ ಪುತ್ರರಲ್ಲಿ ಒಬ್ಬನಾಗಿ ಹುಟ್ಟಿರುವುದೇ ನಮ್ಮ ಅದೃಷ್ಟ ಎಂದು ಭಾವಿಸುತ್ತಾ ಎಲ್ಲರಿಗೂ ರಾಷ್ಟ್ರೀಯ ಯುವದಿನದ ಶುಭಾಶಯಗಳು.

ಸ್ವಾಮಿ ವಿವೇಕಾನಂದರು ಹೇಳಿರುವ ಒಂದು ಮಾತನ್ನು ಅನುಷ್ಟಾನಗೊಳಿಸಿರುವ ಮೋದಿಜಿಯವರ ನಡೆ ಜಾಗತಿಕವಾಗಿ ನಮ್ಮ ಕೀಳರಿಮೆಯನ್ನು ಮೆಟ್ಟಿ ನಮ್ಮ ಶಕ್ತಿಯನ್ನು ನಮಗೆ ಮನವರಿಕೆ ಮಾಡಿಕೊಟ್ಟಿದೆ. ಪರಮಾಣು ಅಸ್ತ್ರ ಸಾಮರ್ತ್ಯವನ್ನು ಹೊಂದಿರುವ ವಿಶ್ವದ ಕೆಲವೇ ಕೆಲವು ರಾಷ್ಟ್ರಗಳ ನಡುವೆ ಶಕ್ತಿ ತೋರಿಸುವುದರೊಂದಿಗೆ ಜಾಗತಿಕ ನಿಯಮಗಳು ತನ್ನ ವಿರುದ್ಧವಾಗಿದ್ದಾಗ ಅದಕ್ಕೆ ಎದೆ ಕೊಟ್ಟು ಒಪ್ಪಲು ಸಾಧ್ಯವೇ ಇಲ್ಲ ಎಂದು ಹೇಳುವಷ್ಟು ಕ್ಷಮತೆ ಮತ್ತು ಅರ್ಹತೆಯನ್ನು ಪಡೆಯುವುದು ಸಣ್ಣ ವಿಷಯವೇ ಅಲ್ಲ. ವಿಶ್ವಸಂಸ್ಥೆ ಕೆಲವು ನಿರ್ಭಂದವನ್ನು ಹೇರಲು ಪ್ರಯತ್ನಿಸಿದಾಗ ಮೋದಿಜಿ ತನ್ನ ದೇಶದ ಜನರ ಹಿತಾಸಕ್ತಿಯ ವಿರುದ್ಧವಾಗಿರುವುದನ್ನು ಒಪ್ಪಲು ಸಾಧ್ಯವೇ ಇಲ್ಲ ಎಂದಿದ್ದರು.

ಭಾರತಕ್ಕೆ ಸ್ವಾತಂತ್ರ್ಯ ಬಂದು 2022ರ ಅಗಸ್ಟ್ 15 ಕ್ಕೆ ಸರಿಯಾಗಿ ಭರ್ತಿ 75 ವರ್ಷ. ಅಮೃತ ಮಹೋತ್ಸವದ ಸಂಭ್ರಮದಲ್ಲಿರುವ ಭಾರತ ಈ ಏಳೂವರೆ ವರ್ಷದಲ್ಲಿ ಅತೀ ವಿಶಿಷ್ಟ ಮೈಲಿಗಲ್ಲುಗಳನ್ನು ಸಾಧಿಸಿದೆ. ಆಧುನಿಕ ಅರ್ಥಶಾಸ್ತ್ರವನ್ನು ತೆರಿದಿಟ್ಟು ನೋಡಿದರೆ ಭಾರತ ಪ್ರಪಂಚದಲ್ಲಿಯೇ ಎರಡನೇ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಅರ್ಥ ವ್ಯವಸ್ಥೆಯನ್ನು ಹೊಂದಿದೆ ಎಂದು ವಿಶ್ವ ಅರ್ಥಶಾಸ್ತ್ರಜ್ಞರು ಒಪ್ಪಿಕೊಂಡಿದ್ದಾರೆ. 75 ವರ್ಷಗಳ ಹಿಂದೆ ಬ್ರಿಟಿಷರನ್ನು ಈ ದೇಶ ಬಿಟ್ಟು ಕಳುಹಿಸುವಲ್ಲಿ ಯಶಸ್ವಿಯಾಗಿದ್ದ ಅಷ್ಟು ವೀರ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸುತ್ತಾ, ಅಂದು ಅಂಬೆಗಾಲಿಟ್ಟು ನಡೆದ ಇದೇ ನೆಲ ಇವತ್ತು ವಿಶ್ವಗುರುವಾಗಿ ಬೆಳೆದಿರುವುದರ ಹಿಂದೆ ಈ ರಾಷ್ಟ್ರದ ಪ್ರತಿ ದೇಶಭಕ್ತ ನಾಗರಿಕನ ಕೊಡುಗೆ ಇದ್ದೇ ಇದೆ ಎಂದು ಮೋದಿ ಹೇಳುತ್ತಾ ಬಂದಿದ್ದಾರೆ. ಅವರು ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ನೈಜ ಅರ್ಥದಲ್ಲಿ ಶ್ರಮಿಸಿದ ಸರ್ದಾರ್ ವಲ್ಲಭಬಾಯ್ ಪಟೇಲ್ ಅವರ 597 ಅಡಿ ಎತ್ತರದ ಪ್ರತಿಮೆಯನ್ನು ಮಾಡಿ ಭಾರತಾಂಬೆಯ ಹೆಮ್ಮೆಯ ಪುತ್ರನನ್ನು ಮುಂದಿನ ಪೀಳಿಗೆ ನೆನಪಿನಲ್ಲಿ ಇಟ್ಟುಕೊಳ್ಳುವಂತೆ ಮಾಡಿದ್ದಾರೆ. 1947ರ ಅಂತ್ಯದಿಂದ 1948 ರ ಆದಿಯಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ಮೊದಲ ಕಾಶ್ಮೀರಿ ಸಂಗ್ರಾಮವನ್ನು ಈ ಹಂತದಲ್ಲಿ ಸ್ಮರಿಸಲೇಬೇಕು. ರಾಜಪ್ರಭುತ್ವ ಹೊಂದಿದ್ದ ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ ಎಂದು ಅಂದಿನ ಗೃಹಸಚಿವರಾದ ಸರ್ದಾರ್ ವಲ್ಲಭಬಾಯ್ ಪಟೇಲ್ ಅವರ ತೀಕ್ಣ ನಿಲುವಿನಿಂದ ಕೊನೆಗೂ ಭಾರತದ ಕೈ ಮೇಲಾಗಿ ಕಾಶ್ಮೀರದ ಮಹಾರಾಜ ಹರಿಸಿಂಗ್ ಅವರು ಭಾರತದೊಂದಿಗಿನ ಸೇರ್ಪಡೆಗೆ ಸಮ್ಮತಿಸುವುದರೊಂದಿಗೆ ಭಾರತಾಂಬೆಯ ಕಿರೀಟ ನಮ್ಮ ದೇಶದ ಮುಡಿಗೆ ಕಲಶಪ್ರಾಯವಾಯಿತು. ಅದಕ್ಕೆ ಕಾರಣ ವಿವೇಕವಾಣಿಯ ಇನ್ನೊಂದು ಮಾತು. ” ನೀವು ಯಶಸ್ಸನ್ನು ಪಡೆಯಲು ಧೃಡ ಪ್ರಯತ್ನ ಮಾಡಬೇಕು. ಅಪಾರ ಇಚ್ಚಾಶಕ್ತಿ ಬೇಕು. ನಾನು ಸಮುದ್ರವನ್ನೇ ಪಾನ ಮಾಡುತ್ತೇನೆ ಎಂದು ಪ್ರಯತ್ನಶೀಲನು ಹೇಳುತ್ತಾನೆ. ನನ್ನ ಸಂಕಲ್ಪದ ಮುಂದೆ ಪರ್ವತಗಳೇ ಪುಡಿಯಾಗುತ್ತವೆ ಎನ್ನುವವರಿದ್ದಾರೆ. ಇಂತಹ ಶಕ್ತಿಯನ್ನು, ಗಟ್ಟಿಗುಂಡಿಗೆಯನ್ನು ಪಡೆಯಿರಿ. ಕಷ್ಟಪಟ್ಟು ದುಡಿಯಿರಿ, ನೀವು ಗುರಿ ಸೇರುವುದು ನಿಶ್ಚಯ” ಎಂದು ವಿವೇಕಾನಂದರು ಹೇಳಿದ್ದಾರೆ. ಅದರಂತೆ ಬದುಕಿದವರು ಸರ್ದಾರ್ ವಲ್ಲಭಬಾಯ್ ಪಟೇಲ್. ಅವರನ್ನು ಸ್ವತಂತ್ರ ಭಾರತದ ಚರಿತ್ರೆಯಲ್ಲಿ ನೆನಪಿಡುವ ಕೆಲಸ ಆಗಿರಲೇ ಇಲ್ಲ. ಪಠ್ಯಪುಸ್ತಕಗಳಲ್ಲಿಯೂ ಅವರ ಶ್ರಮ, ತ್ಯಾಗವನ್ನು ಕಡೆಗಣಿಸಲಾಗಿತ್ತು. ಅದನ್ನು ಸರಿಪಡಿಸುವಲ್ಲಿ ಮೋದಿಜಿಯವರು ಕಂಕಣಬದ್ಧರಾದರು. ಅದಕ್ಕೆ ಸಾಕ್ಷಿಯಾಗಿ ವಿಶ್ವವೇ ತಲೆ ತಿರುಗಿಸಿ ನೋಡುವಂತೆ ಮಾಡಿರುವ ಪಟೇಲರ ದಾಖಲೆಯ ಎತ್ತರದ ಪ್ರತಿಮೆ ಗುಜರಾತಿನಲ್ಲಿ ಸ್ಥಾಪನೆಯಾಯಿತು.
ವಿವೇಕವಾಣಿಯ ಪ್ರಬಲ ಸಂದೇಶವಾಗಿರುವ ” ಹಿಂದಿರುಗಿ ನೋಡುವ ಅವಶ್ಯಕತೆ ಇಲ್ಲ. ಮುಂದೆ ನೋಡಿ. ನಮಗೆ ಅನಂತ ಶಕ್ತಿ, ಅನಂತ ಉತ್ಸಾಹ, ಅನಂತ ಧೈರ್ಯ, ಅನಂತ ತಾಳ್ಮೆ ಬೇಕು. ಆಗ ಮಾತ್ರ ಮಹತ್ಕಾರ್ಯಗಳನ್ನು ನಾವು ಸಾಧಿಸಬಹುದು” ಎಂದಿದ್ದರು ಸ್ವಾಮಿ ವಿವೇಕಾನಂದರು. ಈ ಮಾತನ್ನು ಸತ್ಯ ಮಾಡಿದ ಮೋದಿಜಿ ಕಾಶ್ಮೀರಿ ಪಂಡಿತರಿಗಾಗಿ ಹೊಸ ಬದುಕನ್ನು ಸೃಷ್ಟಿಸಲು ಕೆಲಸ ಮಾಡುತ್ತಿದ್ದಾರೆ. ದೇಶದ 75 ವರ್ಷಗಳ ಸ್ವತಂತ್ರ ಭಾರತ ಇತಿಹಾಸದ ಮೈಲಿಗಲ್ಲುಗಳನ್ನು ಆಯ್ದುಕೊಳ್ಳಿ ಎಂದರೆ ನಮ್ಮ ಕಣ್ಣ ಮುಂದೆ ಮೊದಲು ಬರುವುದು 1947ರ ದೇಶ ವಿಭಜನೆ. ಎರಡು ಲಕ್ಷಕ್ಕೂ ಅಧಿಕ ನಮ್ಮ ಸಹೋದರ, ಸಹೋದರಿಯರು ಆವತ್ತು ಗಡಿ ಸಹಿತ ದೇಶದ ಅಲ್ಲಲ್ಲಿ ನಡೆದ ದೇಶದ್ರೋಹಿಗಳ ವಿಧ್ವಂಸಕ ಕೃತ್ಯಗಳಿಗೆ ಪ್ರಾಣ ತ್ಯಾಗ ಮಾಡಬೇಕಾಯಿತು. ಹದಿನಾಲ್ಕು ಮಿಲಿಯನ್ ಗಿಂತಲೂ ಹೆಚ್ಚು ಭಾರತೀಯರು ದೊಂಬಿಗಳಲ್ಲಿ ತಮ್ಮ ಆಸ್ತಿಪಾಸ್ತಿಗಳನ್ನು ಕಳೆದುಕೊಂಡುಬಿಟ್ಟರು. ಇದನ್ನು ಈ ದೇಶ ಯಾವತ್ತೂ ಮರೆಯಲ್ಲ. ಒಂದು ದು:ಖದ ಅಧ್ಯಾಯದೊಂದಿಗೆ ಸ್ವತಂತ್ರ ಭಾರತದ ಇತಿಹಾಸ ನಮ್ಮ ಮುಂದೆ ತೆರೆಯುತ್ತಾ ಹೋಗುತ್ತದೆ. ಆದರೆ ನಂತರ ಏನಾಯಿತು. ಕಾಶ್ಮೀರಿ ಪಂಡಿತರು ಅಕ್ಷರಶ: ಬೀದಿಪಾಲಾದರು. ಅವರ ಸಂಕಟವನ್ನು ಯಾವ ಸರಕಾರವು ಸರಿಯಾಗಿ ನೋಡದೇ ಇದ್ದಾಗ ಮೋದಿ ವಿವೇಕಾನಂದರ ಮೇಲಿನ ಮಾತುಗಳಂತೆ ನಡೆದುಕೊಂಡರು. ಹಿಂತಿರುಗಿ ನೋಡಲೇ ಇಲ್ಲ. ಮುಂದೆ ನಡೆದದ್ದು ಮಾತ್ರ ಅದ್ಭುತ ಇತಿಹಾಸ. ಇನ್ನು ಸ್ವಲ್ಪ ಸಮಯ ಹೋದರೆ ಇದೇ ಉತ್ಸಾಹದಲ್ಲಿ ಪಾಕ್ ಆಕ್ರಮಿತ ಕಾಶ್ಮೀರ ಕೂಡ ನಮ್ಮ ಭಾಗವಾಗುವುದರಲ್ಲಿ ಆಶ್ಚರ್ಯವಿಲ್ಲ.

  • Share On Facebook
  • Tweet It


- Advertisement -


Trending Now
ಮಂಗಳೂರಿನ ಕಥೆ ಏನಾಗಿತ್ತು?
Hanumantha Kamath November 29, 2023
42 ಕೋಟಿ ಮನೆಯಲ್ಲಿ ಸಿಕ್ಕಿದ್ದ ಅಂಬಿಕಾಪತಿ ಸಾವಿನ ಬಗ್ಗೆ ಕೆಂಪಣ್ಣ ಹೇಳಿದ್ದೇನು?
Hanumantha Kamath November 28, 2023
Leave A Reply

  • Recent Posts

    • ಮಂಗಳೂರಿನ ಕಥೆ ಏನಾಗಿತ್ತು?
    • 42 ಕೋಟಿ ಮನೆಯಲ್ಲಿ ಸಿಕ್ಕಿದ್ದ ಅಂಬಿಕಾಪತಿ ಸಾವಿನ ಬಗ್ಗೆ ಕೆಂಪಣ್ಣ ಹೇಳಿದ್ದೇನು?
    • ಕಾಂತಾರಾ - 1 ತುಳು ಭಾಷೆಗೆ ಡಬ್ ಆಗಲ್ವಾ?
    • ಮೀನಿನ ರೇಟ್ ಜಾಸ್ತಿ ಆಗಲು ಏನು ಕಾರಣ ಗೊತ್ತಾ?
    • ಮಂಗಳೂರಿನಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ!
    • ದುಬಾರಿ ಗಿಫ್ಟ್ ಸಿಗದ ಕೋಪ, ಹೆಂಡತಿ ಹೊಡೆದು ಗಂಡ ಮೃತ್ಯು!
    • ಜನಪ್ರತಿನಿಧಿಗಳು ಅಧಿಕಾರಿಗಳಿಗೆ ಜೋರು ಮಾಡಬಾರದಾ?
    • ಸರಕಾರಕ್ಕೆ ಶಾಲೆಯಲ್ಲಿ ಶಿಕ್ಷಣಕ್ಕಿಂತ ಆಹಾರವೇ ಮುಖ್ಯವಾಯಿತೇ!
    • ಬಸ್ ಕಂಡಕ್ಟರ್ ಗೆ ಚಾಕು ಹಾಕಿದವನ ಕಾಲಿಗೆ ಶೂಟ್ ಮಾಡಿ ಬಂಧಿಸಿದ ಯುಪಿ ಪೊಲೀಸರು
    • ಚೀನಾದಲ್ಲಿ ಮತ್ತೊಂದು ಸೋಂಕು, ಎಚ್ಚರವಹಿಸಲು ಭಾರತ ನಿರ್ಧಾರ
  • Popular Posts

    • 1
      ಮಂಗಳೂರಿನ ಕಥೆ ಏನಾಗಿತ್ತು?
    • 2
      42 ಕೋಟಿ ಮನೆಯಲ್ಲಿ ಸಿಕ್ಕಿದ್ದ ಅಂಬಿಕಾಪತಿ ಸಾವಿನ ಬಗ್ಗೆ ಕೆಂಪಣ್ಣ ಹೇಳಿದ್ದೇನು?
    • 3
      ಕಾಂತಾರಾ - 1 ತುಳು ಭಾಷೆಗೆ ಡಬ್ ಆಗಲ್ವಾ?
    • 4
      ಮೀನಿನ ರೇಟ್ ಜಾಸ್ತಿ ಆಗಲು ಏನು ಕಾರಣ ಗೊತ್ತಾ?
    • 5
      ಮಂಗಳೂರಿನಲ್ಲಿ ಮತ್ತೆ ನೈತಿಕ ಪೊಲೀಸ್ ಗಿರಿ!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search