• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ಯುದ್ಧ ವ್ಯಾಪಾರಿ ದೇಶದ ತೆಕ್ಕೆಯಿಂದ ನಮ್ಮವರನ್ನು ಎತ್ತಿಕೊಳ್ಳುವುದು ಹುಡುಗಾಟಿಕೆ ಅಲ್ಲ!!

Hanumantha Kamath Posted On March 3, 2022


  • Share On Facebook
  • Tweet It

ಈಗ ಎಲ್ಲಾ ಕಡೆ ಎರಡು ರೀತಿಯ ವಿಡಿಯೋ ಹರಿದಾಡುತ್ತಿದೆ. ಒಂದು ಕೇಂದ್ರ ಸರಕಾರ ಉಕ್ರೇನಿನ ಯುದ್ಧಭೂಮಿಯಿಂದ ಭಾರತೀಯ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆದುಕೊಂಡು ಬರುತ್ತಿರುವುದು, ಅದಕ್ಕಾಗಿ ಪಡುತ್ತಿರುವ ಶ್ರಮದ ವಿಡಿಯೋಗಳು, ಇನ್ನೊಂದೆಡೆ ಒಬ್ಬ ಕರ್ನಾಟಕದ ಯುವಕ ಶೆಲ್ ದಾಳಿಯಲ್ಲಿ ಮೃತಪಟ್ಟಿರುವುದಕ್ಕೆ ಮೋದಿ ವೈಫಲ್ಯ ಎಂದೋ, ಅನೇಕರಿಗೆ ಅಲ್ಲಿ ಊಟ, ನೀರಿನ ಕೊರತೆ ಇದೆ, ಅದನ್ನು ಕೇಂದ್ರ ಪರಿಹರಿಸುವಲ್ಲಿ ವಿಫಲವಾಗಿದೆ ಎನ್ನುವ ವಿಡಿಯೋ, ಬರಹಗಳು ಬರುತ್ತಿದೆ. ಮೊದಲನೇಯದಾಗಿ ಈ ದುರ್ಘಟನೆಯಲ್ಲಿ ನವೀನ್ ಎನ್ನುವ ಯುವಕ ವಿಧಿವಶರಾಗಿರುವುದು ನೋವಿನ ಸಂಗತಿ. ಹಾಗೆ ಹಾಗಬಾರದಿತ್ತು. ಆದರೆ ಪರಿಸ್ಥಿತಿ ಅಲ್ಲಿ ಕೈ ಮೀರಿ ಹೋಗಿದೆ ಎನ್ನುವುದು ವಾಸ್ತವ. ಇನ್ನು ಎರಡನೇಯದಾಗಿ ಅಲ್ಲಿ ಯುದ್ಧ ಯಾವ ಕ್ಷಣದಲ್ಲಾದರೂ ಆಗುತ್ತದೆ ಎನ್ನುವ ವಾತಾವರಣ ಯುದ್ಧ ಆರಂಭವಾಗುವ ಕೆಲವು ದಿನಗಳ ಮೊದಲೇ ಇತ್ತು. ಅಲ್ಲಿನ ಮಾಧ್ಯಮಗಳಲ್ಲಿ ಈ ಬಗ್ಗೆ ಮಾಹಿತಿ ಇತ್ತು. ಹಾಗಿರುವಾಗ ಅಲ್ಲಿನ ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಅವಕಾಶ ನಮ್ಮವರಿಗೆ ಇತ್ತು. ಪುಟಿನ್ ಮಾಡಿದ್ದು ಅಕ್ಷರಶ: ಪ್ರಮಾದ. ಆದರೆ ಆ ಪ್ರಮಾದ ಎಸಗುವ ಮುನ್ನ ಆತ ಹಂತಹಂತವಾಗಿ ಈ ಬಗ್ಗೆ ಸುಳಿವನ್ನು ನೀಡುತ್ತಾ ಬಂದಿದ್ದ. ತನ್ನ ವೈರಿಯ ವಿರುದ್ಧ ಶಸ್ತ್ರಾಸ್ತ ಬಳಸಲು ಆತ ರಷ್ಯಾದ ಸಂಸತ್ತಿನ ಅನುಮತಿ ಕೇಳಿದ್ದು ಕೊನೆಯ ಹೆಜ್ಜೆ. ಅಲ್ಲಿ ಅವನಿಗೆ ಬೆಂಬಲ ಸಿಕ್ಕಿದ ನಂತರ ಯುದ್ಧ ಯಾವ ಸಂದರ್ಭದಲ್ಲಿಯೂ ಆರಂಭವಾಗುವುದರಲ್ಲಿತ್ತು. ಹಾಗಿರುವಾಗ ಈ ಬಗ್ಗೆ ಅಲರ್ಟ್ ಆಗಬೇಕಾಗಿರುವುದು ಇಲ್ಲಿಂದ ಅಲ್ಲಿ ಹೋದವರ ಮೊದಲ ಜವಾಬ್ದಾರಿ. ಇಷ್ಟು ದೊಡ್ಡ ಯುದ್ಧ ಆಗುತ್ತೆ ಎಂದು ಗೊತ್ತಿರಲಿಲ್ಲ, ಇಷ್ಟು ದಿನ ಯುದ್ಧ ನಡೆಯುತ್ತೆ ಎಂದು ಯಾರಿಗೆ ಗೊತ್ತು ಎನ್ನುವುದು ತರ್ಕಕ್ಕೆ ನಿಲುಕದ ವಿಷಯಗಳು. ಎಷ್ಟು ದಿನ ಯುದ್ಧ ಮಾಡುತ್ತೇವೆ ಮತ್ತು ಎಷ್ಟು ಪ್ರಮಾಣದ ಮದ್ದುಗುಂಡುಗಳನ್ನು, ಶೆಲ್ ಗಳನ್ನು, ಬಾಂಬ್ ಗಳನ್ನು ಬಳಸುತ್ತೇವೆ ಎನ್ನುವುದನ್ನು ಪುಟಿನ್ ಏನು ಮೋದಿಯವರಿಗೆ ಫೋನ್ ಮಾಡಿ ಹೇಳುವುದಿಲ್ಲ. ಇನ್ನು ಉಕ್ರೇನ್ ಬಯಸಿದ ಹಾಗೆ ಮೋದಿ ಹೇಳಿದರೆ ರಷ್ಯಾ ಕೇಳುತ್ತೆ ಎನ್ನುವುದಕ್ಕೆ ಪುಟಿನ್ ಮೋದಿಯವರ ಚಿಕ್ಕಪ್ಪನ ಮಗ ಕೂಡ ಅಲ್ಲ. ಯುದ್ಧ ಆರಂಭವಾದ ನಂತರ ಪುಟಿನ್ ತನ್ನ ಸ್ವತ: ತಂದೆಯ ಮಾತು ಕೂಡ ಕೇಳದಷ್ಟು ಗರ್ವಿ. ಅವನಿಗೆ ಎಲ್ಲಿಂದ, ಹೇಗೆ ಒತ್ತಡ ಬರುತ್ತದೆ ಎನ್ನುವ ಸೂಚನೆ ಗೊತ್ತಿರುತ್ತದೆ. ಆದರೆ ಅದನ್ನು ಕೇಳಬೇಕೋ, ನಯವಾಗಿ ತಿರಸ್ಕರಿಸಬೇಕೋ ಎನ್ನುವುದನ್ನು ಅವರು ಪೂರ್ವ ನಿರ್ಧರಿಸಿಬಿಟ್ಟಿರುತ್ತಾರೆ.

” ಓ, ಮೋದಿ ಅವರಿಗೆ ಒಂದು ಮಾತು ಕೇಳಿ ಯುದ್ಧ ಆರಂಭಿಸಬೇಕಿತ್ತು” ಎಂದು ಪುಟಿನ್ ತನ್ನ ಜನ್ಮದಲ್ಲಿ ಅಂದುಕೊಳ್ಳುವುದಿಲ್ಲ. ಅವರಿಗೆ ಯುದ್ಧ ಒಂದು ಶುದ್ಧ ವ್ಯಾಪಾರ. ಅಮೇರಿಕಾ ಮತ್ತು ರಷ್ಯಾ ಬದುಕುತ್ತಿರುವುದೇ ಶಸ್ತ್ರಾಸ್ತ ಮಾರಿ ಬಂದ ಹಣದಿಂದ. ಅವರಿಗೆ ಯುದ್ಧವಿಲ್ಲದೆ ಬದುಕಲು ಆಗಲ್ಲ. ತಮ್ಮ ಗ್ಯಾರೇಜಿನಲ್ಲಿದ್ದ ಶಸ್ತ್ರಾಸ್ತಗಳ ಸ್ಯಾಂಪಲ್ಲನ್ನು ರಷ್ಯಾ ಜಗತ್ತಿನ ರಾಷ್ಟ್ರಗಳಿಗೆ ಒಂದು ಡೆಮೊ ತೋರಿಸಿದೆ. ಬರುವ ದಿನಗಳಲ್ಲಿ ರಷ್ಯಾದ ಬಿಜಿನೆಸ್ ಈ ಕ್ಷೇತ್ರದಲ್ಲಿ ಎಷ್ಟು ಪಟ್ಟು ಹೆಚ್ಚಾಗುತ್ತದೆ ಎಂದು ಕಾದು ನೋಡಿ. ಅಂತಹ ವ್ಯಾಪಾರಿ ದೇಶಗಳು ಅಕ್ಷರಶ: ಶಸ್ತ್ರಗಳ ಮಾರ್ಕೆಟಿಂಗ್ ಮಾಡಲು ಉಕ್ರೇನನ್ನು ಚಿಂದಿ ಉಡಾಯಿಸುತ್ತಿರುವಾಗ ಅದರ ನಡುವೆ ನಮ್ಮ ವಿಮಾನಗಳನ್ನು ಇಳಿಸಿ ಏರ್ ಲಿಫ್ಟ್ ಮಾಡುವುದಿದೆಯಲ್ಲ, ಅದಕ್ಕೆ ಮೋದಿಯ 56 ಗುಂಡಿಗೆಯ ಎದೆಗಾರಿಕೆಯಿಂದ ಮಾತ್ರ ಸಾಧ್ಯ. ಅಫ್ ಕೋರ್ಸ್ ಭಾರತದ ವಿಮಾನವನ್ನು ಉಕ್ರೇನಿನ ರಣರಂಗದಲ್ಲಿ ಇಳಿಸುವುದು ಯಾವುದೋ ಪೈಲೆಟ್ ಇರಬಹುದು. ಆದರೆ ಡವಡವ ಹೊಡೆಯುವುದು ಮೋದಿ ಹೃದಯ. ಒಂದಿಷ್ಟು ಹೆಚ್ಚು ಕಡಿಮೆಯಾಗಿ ವಿಮಾನ ದುರಂತಕ್ಕೆ ಈಡಾದರೆ ಈಗ ಬಾಯಿ ತೆರೆದು ಕಾಯುತ್ತಿರುವ ಅಷ್ಟು ವಿಪಕ್ಷಗಳು ಮೋದಿಯನ್ನು ಹುರಿದು ಮುಕ್ಕಿಬಿಡುತ್ತವೆ. ಇಂತಹ ಸವಾಲಿನ ಪರಿಸ್ಥಿತಿಯಲ್ಲಿಯೂ ಮೋದಿ 2000 ಭಾರತೀಯರನ್ನು ಸುರಕ್ಷಿತವಾಗಿ ಕರೆದುಕೊಂಡು ಬಂದಿದ್ದಾರೆ. ತಮಿಳುನಾಡಿನ ವಿದ್ಯಾರ್ಥಿಗಳು ಚೆನೈನಲ್ಲಿ ಬಂದಿಳಿದ ಕೂಡಲೇ ಅಲ್ಲಿನ ಡಿಎಂಕೆ ಸಚಿವರ ಎದುರೇ ತಮಿಳರು ಮೋದಿಗೆ ಜೈ ಎಂದದ್ದೇ ಒಂದು ಜೀವದ ಬೆಲೆ ಎಷ್ಟಿರುತ್ತದೆ ಎನ್ನುವುದಕ್ಕೆ ಕರ್ಮಠ ದ್ರಾವಿಡರ ನಾಡು ಹಾಕಿದ ಜೈಕಾರವೇ ಸಾಕ್ಷಿ.

ಇನ್ನು ಕೂಡ ವಿದ್ಯಾರ್ಥಿಗಳನ್ನು ಕರೆದುಕೊಂಡು ಬರುವ ಪ್ರಕ್ರಿಯೆ ಜಾರಿಯಲ್ಲಿದೆ. ಅದು ಯಾವುದೇ ಒಂದು ಕೇಂದ್ರ ಸರಕಾರದ ಜವಾಬ್ದಾರಿಯೂ ಹೌದು. ನಾಳೆ ಮನಮೋಹನ್ ಸಿಂಗ್ ಇದ್ದರೂ ಇದನ್ನೇ ಮಾಡಬೇಕಿತ್ತು. ಆದರೆ ದುರಂತ ಎಂದರೆ ಇದರಲ್ಲಿಯೂ ಕಾಂಗ್ರೆಸ್ಸಿಗರಿಗೆ ರಾಜಕೀಯ ಮಾಡಬೇಕು ಎಂದು ಅನಿಸಿದ್ದು. ಸಿದ್ಧರಾಮಯ್ಯ ಟ್ವಿಟ್ ಮಾಡಿ ನವೀನ್ ಸಾಯಲು ಕೇಂದ್ರದ ಮೋದಿ ಸರಕಾರದ ನಿಧಾನಗತಿಯ ಧೋರಣೆಯೇ ಕಾರಣ ಎನ್ನುವ ಅರ್ಥ ಬರುವಂತಹ ಮಾತುಗಳನ್ನು ಬರೆದಿದ್ದಾರೆ. ಉಕ್ರೇನ್ ಎನ್ನುವುದು ಇಲ್ಲೇ ಬಾಗಲಕೋಟೆ ಪಕ್ಕದ ಬಾದಾಮಿಯಲ್ಲಿಲ್ಲ. ಇನ್ನು ಉಕ್ರೇನ್ ಒಳಗೆ ನುಗ್ಗಿದ ರಷ್ಯಾ ಸೇನೆಯ ಸೈಂಧವ ಸೈನಿಕರಿಗೆ ಎದುರಿಗೆ ನಿಂತಿರುವವ ಭಾರತೀಯನೋ ಅಥವಾ ಉಕ್ರೇನಿನವನೋ ಎಂದು ಜಾತಕ ನೋಡುವಷ್ಟು ವ್ಯವಧಾನ ಕೂಡ ಇಲ್ಲ. ಅವರು ಬಾಂಬ್ ಹಿಡಿದು ಬಂದಿರುವುದು ಉಕ್ರೇನಿನಲ್ಲಿ ದೀಪಾವಳಿ ಆಚರಿಸುವಾ ಎನ್ನುವುದಕ್ಕೂ ಅಲ್ಲ. ಹೆಚ್ಚೆಂದರೆ ಭಾರತದೊಂದಿಗೆ ರಾಜತಾಂತ್ರಿಕ ಸಂಬಂಧ ಚೆನ್ನಾಗಿರುವುದರಿಂದ ಭಾರತದ ಧ್ವಜ ಹಾಕಿದ ವಾಹನಗಳು ಉಕ್ರೇನ್ ಗಡಿ ದಾಟಿ ಹೋಗುತ್ತಿದ್ದರೆ ಅನಾವಶ್ಯಕ ತೊಂದರೆ ಕೊಡಬೇಡಿ ಎನ್ನುವ ಸಣ್ಣ ಸೂಚನೆ ಅವರಿಗೆ ಮೇಲಿನಿಂದ ಬಂದಿರಬಹುದು ಬಿಟ್ಟರೆ ಅಂತಹ ವಿಷಮ ಪರಿಸ್ಥಿತಿಯಲ್ಲಿಯೂ ಮೋದಿ ನಮ್ಮವರನ್ನು ತರಲು ನಿದ್ರೆ ಬಿಟ್ಟಿದ್ದಾರಲ್ಲ, ಅವರಿಗೆ ಒಂದು ಥ್ಯಾಂಕ್ಸ್ ಕೂಡ ಇಲ್ವಾ

  • Share On Facebook
  • Tweet It


- Advertisement -


Trending Now
ಹೆಣ್ಣು ಕಾಮದ ಸರಕಲ್ಲ!
Hanumantha Kamath June 7, 2023
ಎರಡೂವರೆ ವರ್ಷ ಬಳಿಕ ಸಚಿವರಾಗಿ ಇರುವುದೇ ಡೌಟು!
Hanumantha Kamath June 6, 2023
Leave A Reply

  • Recent Posts

    • ಹೆಣ್ಣು ಕಾಮದ ಸರಕಲ್ಲ!
    • ಎರಡೂವರೆ ವರ್ಷ ಬಳಿಕ ಸಚಿವರಾಗಿ ಇರುವುದೇ ಡೌಟು!
    • ದೇವರು ಕೊಟ್ಟರೂ ಅರ್ಚಕ ಕೊಟ್ಟಿಲ್ಲ ಎಂದು ಇನ್ನು ಆಗಲಿಕ್ಕಿಲ್ಲ!!
    • ವಾಹನ ಸವಾರರೇ, ನಿಮ್ಮ ಜೇಬಿಗೆ ಬೀಳಲಿದೆ ಕತ್ತರಿ!
    • ಬ್ರಿಜ್ ವಿರುದ್ಧ ಪ್ರತಿಭಟನೆಯ ಹಿಂದಿನ ಸತ್ಯ!!
    • ಕೇರಳ ಸ್ಟೋರಿ ಸಿನೆಮಾ ಕಾಲ್ಪನಿಕ ಕಥೆ ಅಲ್ಲ!!
    • ಕಾಂಗ್ರೆಸ್ ಸರಕಾರ ಹೊಸ ಸಂಸತ್ ಭವನ ನಿರ್ಮಿಸಿದ್ದರೆ ಏನಾಗುತ್ತಿತ್ತು?
    • ಗ್ಯಾರಂಟಿ ಇಲ್ಲದ ಸರಕಾರದಿಂದ ದ್ವೇಷದ ಆಡಳಿತ: ವೇದವ್ಯಾಸ್ ಕಾಮತ್
    • ನಾವು ಬೇರೆ ಧರ್ಮದ ಯುವಕರ ಜಾಲಕ್ಕೆ ಬಲಿಯಾಗಲ್ಲ!
    • ಗೆದ್ದ ಕೂಡಲೇ ಕಾಂಗ್ರೆಸ್ಸಿಗರ ದಬ್ಬಾಳಿಕೆ ಶುರು!!
  • Popular Posts

    • 1
      ಹೆಣ್ಣು ಕಾಮದ ಸರಕಲ್ಲ!
    • 2
      ಎರಡೂವರೆ ವರ್ಷ ಬಳಿಕ ಸಚಿವರಾಗಿ ಇರುವುದೇ ಡೌಟು!
    • 3
      ದೇವರು ಕೊಟ್ಟರೂ ಅರ್ಚಕ ಕೊಟ್ಟಿಲ್ಲ ಎಂದು ಇನ್ನು ಆಗಲಿಕ್ಕಿಲ್ಲ!!
    • 4
      ವಾಹನ ಸವಾರರೇ, ನಿಮ್ಮ ಜೇಬಿಗೆ ಬೀಳಲಿದೆ ಕತ್ತರಿ!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search