• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಗಣ್ಯರೊಂದಿಗೆ ಫೋಟೊ, ರಾಜ್ಯೋತ್ಸವ ಪ್ರಶಸ್ತಿ, ವೇಶ್ಯಾವಾಟಿಕೆ ಮತ್ತು ಅಂದರ್!!

Hanumantha Kamath Posted On March 24, 2022
0


0
Shares
  • Share On Facebook
  • Tweet It

ಯಾರು ಆಗಾಗ ಶಾಸಕರನ್ನು, ಪೊಲೀಸ್ ಅಧಿಕಾರಿಗಳನ್ನು ಭೇಟಿಯಾಗಿ ಪದೇ ಪದೇ ಫೋಟೋ ತೆಗೆಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಹಾಕುತ್ತಾರೋ ಅಂತವರ ಬಗ್ಗೆ ಶಾಸಕರ ಆಪ್ತರು, ಪೊಲೀಸ್ ಅಧಿಕಾರಿಗಳ ಕಚೇರಿ ಸಿಬ್ಬಂದಿ ಒಂದು ಕಣ್ಣು ಇಡುವುದು ಒಳ್ಳೆಯದು. ಯಾಕೆಂದರೆ ನಿಜವಾಗಿಯೂ ಜನರ ಪರವಾಗಿ ಕೆಲಸ ಮಾಡಲು ಜನಪ್ರತಿನಿಧಿಗಳನ್ನು, ಪೊಲೀಸರನ್ನು ಭೇಟಿಯಾಗುವವರು ಸೈಲೆಂಟಾಗಿ ತಮ್ಮ ಕೆಲಸ ಮಾಡಿಸಿಕೊಂಡು ಹೋಗುತ್ತಾರೆ. ಆದರೆ ನಿಮ್ಮ ಜೊತೆ ಒಂದು ಫೋಟೋ ಬೇಕು ಸರ್ ಎಂದು ಒಬ್ಬ ಕೇಳಿದ ತಕ್ಷಣ ಬೋಳೆಬಸವರಂತೆ ಕೆಲವರು ಫೋಟೋಗೆ ನಿಲ್ಲುವುದುಂಟು. ಆತ ಫೇಸ್ ಬುಕ್ಕಿಗೆ ಅಪಲೋಡ್ ಮಾಡಿದರೆ ತಮಗೆ ಪುಕ್ಸಟೆ ಪ್ರಚಾರ ಸಿಗುತ್ತದೆ ಎಂದು ಇವರು ಅಂದುಕೊಳ್ಳಬಹುದು. ಆದರೆ ಆತ ಅದೇ ಫೋಟೋ ಹಿಡಿದು ಯಾವ ಡಿಲೀಂಗಿಗೆ ಕುಳಿತುಕೊಂಡಿದ್ದಾನೆ ಎಂದು ಯಾರಿಗೆ ಗೊತ್ತು. ಯಾರೂ ಯಾರೊಂದಿಗೂ ಧರ್ಮಕ್ಕೆ ಫೋಟೋ ತೆಗೆಸಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರಲಿ. ಇನ್ನು ಕೆಲವರಿಗೆ ಪ್ರಭಾವಿಗಳನ್ನು ಭೇಟಿಯಾಗಲು ಒಂದು ಕಾರಣ ಬೇಕಲ್ಲ, ಅದಕ್ಕಾಗಿ ತಮ್ಮದೇ ಆದ ಒಂದು ಸಂಘಟನೆಯನ್ನು ಆರಂಭಿಸುತ್ತಾರೆ. ನಾವು ಸಮಾಜಸೇವೆ ಮಾಡುತ್ತಿದ್ದೇವೆ ಎಂದು ಫೋಸ್ ಕೊಡುತ್ತಾರೆ. ಇವರು ಒಂದು ಹೆಜ್ಜೆ ಹೆಚ್ಚೆ ರಿಸ್ಕ್.

ಈಗ ಮಂಗಳೂರು ಪೊಲೀಸರಿಂದ ಬಂಧಿತನಾಗಿರುವ ಅಬ್ದುಲ್ ರಝೀಕ್ ಕೂಡ ಇದೇ ಕ್ಯಾಟಗರಿಗೆ ಸೇರುತ್ತಾನೆ. ಈತ ಬಂಧಿತನಾಗಿರುವುದು ವೇಶ್ಯಾವಾಟಿಕೆ ಮಾಡುತ್ತಿದ್ದ ಎನ್ನುವ ಕಾರಣಕ್ಕೆ. ನಗರ ಪೊಲೀಸ್ ಕಮೀಷನರ್ ಶಶಿಕುಮಾರ್ ಅವರೇ “ರಝೀಕ್” ನನ್ನು ಬಂಧಿಸಿದ್ದಾರೆ ಎಂದರೆ ಅದರ ಹಿಂದೆ ಬಲಯುತವಾದ ಸಾಕ್ಷ್ಯ ಇದೆ ಎಂದೇ ಅರ್ಥ. ಅವರು ಇಂತವರನ್ನು ಸುಮ್ಮಸುಮ್ಮನೆ ಬಂಧಿಸುವ ಗೋಜಿಗೆ ಹೋಗುವುದಿಲ್ಲ. ರಝೀಕ್ ಬಂಧನವಾಗುತ್ತಿದ್ದಂತೆ ಮೊದಲ ಶಾಕ್ ಗೆ ಒಳಗಾದವರು ಶಾಸಕ ಯು.ಟಿ.ಖಾದರ್. ಯಾಕೆಂದರೆ ಇತನ ಸಂಘಟನೆಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಕೊಡಿಸಿದ್ದು ಇದೇ ಖಾದರ್. ಖಾದರ್ ಎಷ್ಟೇ ಜಾತ್ಯಾತೀತ ಎಂದು ಹೊರಗಿನ ಪ್ರಪಂಚಕ್ಕೆ ಅನಿಸಿದರೂ ಇಂತವರನ್ನು ಹೇಗೆ ಬೆಳೆಸಬೇಕು ಎನ್ನುವ ಗೊತ್ತಿಲ್ಲದಷ್ಟು ಅಮಾಯಕರಲ್ಲ. ಆದ್ದರಿಂದ ರಝೀಕ್ ಗೆ ಖಾದರ್ ಆಸ್ಥಾನದಲ್ಲಿ ಸುಲಭಕ್ಕೆ ಪ್ರವೇಶ ಸಿಕ್ಕಿತು. ಹೇಗೂ ಜಾತಿಬಾಂಧವ ಬಿಟ್ಟಾಕಲು ಆಗುತ್ತಾ, ಖಾದರ್ ಶಿಫಾರಸ್ಸು ಮಾಡಿ ಒಂದು ಪ್ರಶಸ್ತಿ ಕೂಡ ಕೊಡಿಸಿದರು. ನೀವು ಸರಿಯಾಗಿ ನೋಡಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಒಂದು ರೀತಿಯಲ್ಲಿ ಮುಂದಿನ ಚುನಾವಣೆಗೆ ಮತಬ್ಯಾಂಕಿನ ಕೀಲಿಕೈ ಇದ್ದ ಹಾಗೆ. ಈ ಪ್ರಶಸ್ತಿಗಳನ್ನು ಯಾವಾಗ ಶಾಸಕ, ಸಚಿವರು, ಸಂಸದರು ತಮ್ಮ ಆಪ್ತರಿಗೆ, ಮುಂದಿನ ಚುನಾವಣೆಗೆ ಸಹಾಯಕ್ಕೆ ಬರುವವರಿಗೆ, ಜಾತಿ ಲೆಕ್ಕದಲ್ಲಿ ಕೊಡಲು ಶುರು ಮಾಡಿದರೋ ಅಂದಿನಿಂದ ಅದರ ಮೂಲ”ಬೆಲೆ”ಯೇ ನಾಶವಾಗಿ ಹೋಯಿತು. ಪದ್ಮಶ್ರೀ ಪ್ರಶಸ್ತಿಗಳನ್ನು ಮೋದಿ ಅರ್ಹರಿಗೆ, ಎಲೆಮರೆಯ ಕಾಯಿಯಾಗಿ ಸೇವೆ ಸಲ್ಲಿಸುವವರಿಗೆ ಕೊಡುವಾಗ ಭಾರತೀಯ ಜನತಾ ಪಾರ್ಟಿಯವರು ಅದನ್ನು ತಮ್ಮ ಫೇಸ್ ಬುಕ್, ಟ್ವೀಟರ್ ನಲ್ಲಿ ಹಾಕಿ ಕ್ರೆಡಿಟ್ ತೆಗೆದುಕೊಳ್ಳುತ್ತಾರೆ, ಅದೇ ತಮ್ಮ ಜಿಲ್ಲೆಯಲ್ಲಿ ಅರ್ಹರಿಗೆ ಕೊಡಿಸಲು ಒಂದು ಸಾಸಿವೆ ಕಾಳಿನಷ್ಟು ಪ್ರಯತ್ನ ಕೂಡ ಮಾಡುವುದಿಲ್ಲ. ಹಾಗಿರುವಾಗ ರಝೀಕ್ ಗೆ ಈ ಪ್ರಶಸ್ತಿ ಸಿಕ್ಕಿದ್ದು ವಿಶೇಷವಾಗಿರಲಿಲ್ಲ. ಕೆಲವರು ತಮಗೆ ಪ್ರಶಸ್ತಿ ಸಿಕ್ಕಿದ ಋಣಕ್ಕೆ ಒಂದಿಷ್ಟು ಸಮಾಜಕ್ಕೆ ಒಳ್ಳೇದು ಆಗುವಂತದ್ದು ಮಾಡಲೂಬಹುದು. ಆದರೆ ಪ್ರಶಸ್ತಿಗೆ ಕಳಂಕ ಬರುವ ಹಾಗೆ ಮಾಡಿದರೆ ದೇವರು ಅಂತವರನ್ನು ಮೆಚ್ಚುವುದಿಲ್ಲ. ಆದರೆ ಒಂದು ಪಾವಿನಷ್ಟಾದರೂ ಮರ್ಯಾದೆ ಇದ್ದ ಆ ಪ್ರಶಸ್ತಿಯನ್ನು ಮುಂದಿನ ಸಲ ಯಾರಾದರೂ ಪಡೆದುಕೊಳ್ಳಲು ಕೂಡ ನಾಚಿಕೆ ಪಡಬೇಕು ಹಾಗೆ ರಝೀಕ್ ಮಾಡಿಬಿಟ್ಟಿದ್ದಾನೆ.

ಈ ಮನುಷ್ಯ ಸಮಾಜಸೇವೆ ಮಾಡುತ್ತಾನೆ ಎಂದು ನಂಬಿದ ಇಬ್ಬರು ಹೆಣ್ಣುಮಕ್ಕಳು ಇವನ ಬಳಿ ಸಹಾಯ ಕೇಳಿ ಹೋಗಿದ್ದಾರೆ. ಅವರನ್ನು ಇವನು ನಂದಿಗುಡ್ಡೆಯ ವಸತಿಗೃಹಕ್ಕೆ ಕರೆಸಿದ್ದಾನೆ. ನಂತರ ಏನಾಯಿತು ಎನ್ನುವುದು ನಾವು ಇಲ್ಲಿ ಬರೆಯುವ ಅಗತ್ಯ ಇಲ್ಲ. ಅದನ್ನು ಆ ಹೆಣ್ಣುಮಕ್ಕಳು ಪೊಲೀಸರ ಎದುರು ವಿವರವಾಗಿ ಹೇಳಿದ್ದಾರೆ. ಈತ ಎಷ್ಟು ಚಾಲಾಕು ಎಂದರೆ ತನ್ನ ಮೇಲೆ ದೂರು ಬರುತ್ತೆ ಎಂದು ಸಂಶಯ ಬಂದ ಕೂಡಲೇ ವಿದೇಶಕ್ಕೆ ಹಾರಿ ಹೋಗಿದ್ದ. ಅಲ್ಲಿಯೇ ಕುಳಿತು ತಾನು ತಪ್ಪಿಸಿಕೊಳ್ಳಲು ಎಲ್ಲಾ ಪ್ರಯತ್ನ ಮಾಡಿದ್ದ. ಆದರೆ ಎಲ್ಲಾ ಪ್ರಯತ್ನಗಳು ವಿಫಲವಾದ ನಂತರ ಭಾರತಕ್ಕೆ ಹಿಂತಿರುಗಿದ್ದಾನೆ. ಈಗಾಗಲೇ ಈ ಪ್ರಕರಣದಲ್ಲಿ 15 ಮಂದಿಯನ್ನು ಬಂಧಿಸಿ ಬಾಯಿಬಿಡಿಸಲಾಗಿತ್ತು. ಅದರಿಂದ ಸಾಕಷ್ಟು ಸಾಕ್ಷ್ಯ ಸಂಗ್ರಹವಾಗಿತ್ತು. ಆದ್ದರಿಂದ ಇವನನ್ನು ಬಂಧಿಸದೇ ಪೊಲೀಸರಿಗೂ ಬೇರೆ ವಿಧಿ ಇರಲಿಲ್ಲ. ಒಂದು ಕಡೆ ರಿವಾಲ್ವರ್ ಇಟ್ಟುಕೊಂಡು ಫೋಸ್ ಕೊಡುತ್ತಿದ್ದ ರಝೀಕ್ ತನ್ನ ಮೇಲೆ ಯಾರಾದರೂ ದೂರು ಕೊಡಲು ಹೋಗುವುದಾದರೆ ಅವರಿಗೆ ತಾನು ಎಷ್ಟು ಪ್ರಭಾವಿ ಎಂದು ತೋರಿಸಲು ಗಣ್ಯರೊಂದಿಗೆ ತಾನಿದ್ದ ಫೋಟೋ ಬಳಸುತ್ತಿದ್ದ. ರಾಜ್ಯೋತ್ಸವ ಪ್ರಶಸ್ತಿಯನ್ನು ಎದುರಿಗೆ ಇಡುತ್ತಿದ್ದ. ಅದರಿಂದ ಇವನ ವಿರುದ್ಧ ಯಾರೂ ದೂರು ಕೊಡಲು ಹೋಗುತ್ತಿರಲಿಲ್ಲ. ನೋಡಲು ಪಕ್ಕಾ ಅಮಾಯಕನಂತೆ ಕಾಣುವ, ಐಟಿ ಉದ್ಯೋಗಿಯಂತೆ ತೋರುವ ಈ ಮನುಷ್ಯನ ತಪ್ಪು ಮಾಡಿದ್ದು ಸಾಬೀತಾಗಿ ಶಿಕ್ಷೆ ಆದರೆ ಅಮಾಯಕ ಹೆಣ್ಣುಮಕ್ಕಳ ಕಣ್ಣೀರಿಗೆ ನ್ಯಾಯ ಸಿಕ್ಕಿತು….!

0
Shares
  • Share On Facebook
  • Tweet It


- Advertisement -


Trending Now
ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
Hanumantha Kamath June 18, 2025
ಫಾಸ್ಟ್ ಟ್ಯಾಗ್ ಇನ್ನು ವರ್ಷದ ಪಾಸ್ ನಲ್ಲಿ ಲಭ್ಯ: ಎಷ್ಟು ಕೊಟ್ಟರೆ ಸಾಕು ಗೊತ್ತಾ?
Hanumantha Kamath June 18, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
    • ಫಾಸ್ಟ್ ಟ್ಯಾಗ್ ಇನ್ನು ವರ್ಷದ ಪಾಸ್ ನಲ್ಲಿ ಲಭ್ಯ: ಎಷ್ಟು ಕೊಟ್ಟರೆ ಸಾಕು ಗೊತ್ತಾ?
    • ಭೀಕರ ರಸ್ತೆ ಅಪಘಾತ- ದಕ ಜಿಲ್ಲಾ NSUI ಉಪಾಧ್ಯಕ್ಷ ಸೇರಿ ಇಬ್ಬರು ಯುವಕರು ಸಾವು!
    • ವಿಮಾನ ದುರಂತ ಸ್ಥಳದಲ್ಲಿ ಸಿಕ್ಕಿವೆ ಸಾಕಷ್ಟು ಚಿನ್ನ, ಹಣ, ಭಗವದ್ಗೀತೆ!
    • ಲಂಡನ್ನಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಕೊನೆಯ ಕ್ಷಣದಲ್ಲಿ ಪ್ರಯಾಣ ರದ್ದು!
    • ಗಿರೀಶ್ ಭಾರದ್ವಾಜ್ ಮನವಿಗೆ ಸ್ಪಂದನೆ: ಹಿಂದೂ ಮುಖಂಡರ ರಾತ್ರಿ ಮನೆ ಭೇಟಿಯ ಬಗ್ಗೆ ವರದಿ ಕೇಳಿದ ಪೊಲೀಸ್ ದೂರು ಪ್ರಾಧಿಕಾರ!
    • ಹಿಂದೂಗಳು 3 ಮಕ್ಕಳನ್ನು ಹೆರಲು ಕೊಪ್ಪಳದಲ್ಲಿ ತೊಗಾಡಿಯಾ ಕರೆ!
    • ಬೈಕ್ ಟ್ಯಾಕ್ಸಿ ಬ್ಯಾನ್ ನಿಂದ ಬೆಂಗಳೂರಿನ 1 ಲಕ್ಷ ಯುವಕರ ಉದ್ಯೋಗಕ್ಕೆ ಕುತ್ತು!
    • ಯುಪಿಐನಲ್ಲಿ ಇನ್ನು ಹಣ ವರ್ಗಾವಣೆಗೆ 15 ಸೆಕೆಂಡ್ ಸಾಕು!
    • 114 ಮುಸ್ಲಿಮರು ಸೇರಿ ದೇಗುಲದ 167 ಸಿಬ್ಬಂದಿ ವಜಾ ಮಾಡಿ ಆದೇಶ!
  • Popular Posts

    • 1
      ಮಂಗಳೂರಿನಲ್ಲಿ ಮಗುವಿನ ಅಪಹರಣ, ಮಾರಾಟಕ್ಕೆ ಯತ್ನ - ಒಬ್ಬನ ಬಂಧನ!
    • 2
      ಫಾಸ್ಟ್ ಟ್ಯಾಗ್ ಇನ್ನು ವರ್ಷದ ಪಾಸ್ ನಲ್ಲಿ ಲಭ್ಯ: ಎಷ್ಟು ಕೊಟ್ಟರೆ ಸಾಕು ಗೊತ್ತಾ?
    • 3
      ಭೀಕರ ರಸ್ತೆ ಅಪಘಾತ- ದಕ ಜಿಲ್ಲಾ NSUI ಉಪಾಧ್ಯಕ್ಷ ಸೇರಿ ಇಬ್ಬರು ಯುವಕರು ಸಾವು!
    • 4
      ವಿಮಾನ ದುರಂತ ಸ್ಥಳದಲ್ಲಿ ಸಿಕ್ಕಿವೆ ಸಾಕಷ್ಟು ಚಿನ್ನ, ಹಣ, ಭಗವದ್ಗೀತೆ!
    • 5
      ಲಂಡನ್ನಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಕೊನೆಯ ಕ್ಷಣದಲ್ಲಿ ಪ್ರಯಾಣ ರದ್ದು!

  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search