• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಮಂಗಳೂರಿನಲ್ಲಿ ಸ್ಕಿಲ್ ಗೇಮ್ಸ್ ನಿಲ್ಲಿಸಲು 3 ಶಾಸಕರೂ ಒಟ್ಟಾಗಲಿ!!

Tulunadu News Posted On March 30, 2022
0


0
Shares
  • Share On Facebook
  • Tweet It

ಒಂದು ಊರಿನಲ್ಲಿ ಅಕ್ರಮವಾದ ಸ್ಕಿಲ್ ಗೇಮ್ ಸೆಂಟರ್, ಇಸ್ಪೀಟ್ ಕ್ಲಬ್ ಗಳು, ಮಸಾಜ್ ಸೆಂಟರ್ ಗಳು, ವೇಶ್ಯಾವಾಟಿಕೆ ಅಡ್ಡೆಗಳು ಇದ್ದರೆ ಏನಾಗುತ್ತದೆ? ಆ ಊರಿನ ಪಡ್ಡೆ ಹುಡುಗರು ಅಲ್ಲಿ ಹೋಗಿ ತಮ್ಮ ಅಮೂಲ್ಯ ಸಮಯವನ್ನು ವ್ಯರ್ಥ ಮಾಡುತ್ತಾರೆ. ಹಣವನ್ನು ಪೋಲು ಮಾಡುತ್ತಾರೆ. ಅದರಿಂದ ಮಾನಸಿಕ ಕ್ಷೊಭೆಗೆ ಒಳಗಾಗುತ್ತಾರೆ. ಅಡ್ಡದಾರಿ ಹಿಡಿಯುತ್ತಾರೆ. ಹಣಕ್ಕಾಗಿ ಅಕ್ರಮ ಕೃತ್ಯಗಳಿಗೆ, ಅಪರಾಧ ಚಟುವಟಿಕೆಗಳಿಗೆ ಕೈ ಹಾಕುತ್ತಾರೆ. ಇದರಿಂದ ಊರಿನ ಕಾನೂನು ಸುವ್ಯವಸ್ಥೆ ಹಾಳಾಗುತ್ತದೆ. ನಂತರ ಊರಿನ ಹೆಸರು ಹಾಳಾಗುತ್ತದೆ. ಇದಕ್ಕೆ ಆಸ್ಪದ ಕೊಡುವವರು ಯಾರು? ಸಂಶಯವೇ ಇಲ್ಲ. ಆ ಊರಿನ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಬೇಕಾದ ಪೊಲೀಸರು. ಹಾಗಾದರೆ ಮಂಗಳೂರಿನ ಪೊಲೀಸ್ ಕಮೀಷನರ್ ಏನು ಮಾಡುತ್ತಿದ್ದಾರೆ. ಬಿಡಿ, ಅವರ ಇಲಾಖೆಯ ಪೇದೆಯಿಂದ ಹಿಡಿದು ಕಮೀಷನರ್ ತನಕ ಎಲ್ಲರಿಗೂ ತಿಂಗಳಿಗೆ ಇಂತಿಷ್ಟು ಫಿಕ್ಸ್ ಆಗಿದೆ ಎಂದೇ ಇಟ್ಟುಕೊಳ್ಳೋಣ. ಅವರು ಮೌನವಾಗಿ ಸಮ್ಮತಿ ನೀಡುತ್ತಿದ್ದಾರೆ ಎಂದೇ ಭಾವಿಸೋಣ. ಹಾಗಾದರೆ ಜನಪ್ರತಿನಿಧಿಗಳು. ಅವರಿಗೆ ಇಲ್ಲಿ ಹಾಳಾಗುತ್ತಿರುವುದು ಅವರದೇ ಊರಿನ ಸಧೃಡ ಯುವಕರು ಎನ್ನುವುದು ಗೊತ್ತಿರಬೇಕಲ್ಲವೇ? ಇನ್ನು ಎಷ್ಟೋ ಮಧ್ಯಮ ಕುಟುಂಬದ ಗಂಡಸರು ಬೆಳಗ್ಗೆಯಿಂದ ಮೈ ಮುರಿದು ದುಡಿದು ಸಂಜೆ ಅಂತಹ ಸ್ಕಿಲ್ ಗೇಮ್ ನಲ್ಲಿ ಹಣ ಪೋಲು ಮಾಡಿದರೆ ಅಂತವರ ಕುಟುಂಬದವರ ಕಥೆ ಏನಾಗಬೇಡಾ? ಈ ಎರಡು ವರ್ಗದವರು ನಿಮ್ಮ ಮತದಾರರಲ್ಲವೇ? ಮತದಾರರ ಆರೋಗ್ಯ ಮತ್ತು ಕುಟುಂಬ ಹಾಳಾಗುತ್ತಿದ್ದರೆ ಸುಮ್ಮನೆ ಕುಳಿತು ಅದು ಪೊಲೀಸರು ನಿಲ್ಲಿಸಬೇಕಾದ ಕೆಲಸ ಎಂದು ಕೈಕಟ್ಟಿ ಕುಳಿತರೆ ಆಗುತ್ತದಾ? ಒಂದು ವೇಳೆ ಮತದಾರರು ಅಲ್ಲ ಎಂದೇ ಇಟ್ಟುಕೊಳ್ಳೋಣ. ಈ ದೇಶದ ಪ್ರಜೆಗಳು ತಾನೆ. ಅವರು ನಿಮ್ಮ ಕುಟುಂಬದ ಸದಸ್ಯರು ಎಂದೇ ಅಂದುಕೊಂಡು ಅವರು ಹಾಳಾಗುತ್ತಿರುವುದನ್ನು ನೋಡಿ ಕಣ್ಣುಮುಚ್ಚಿ ಕುಳಿತುಕೊಳ್ಳಲು ಮನಸ್ಸು ಬರುತ್ತದೆಯಾ?
ಇನ್ನು ಹೀಗೆ ಒಂದು ನಗರದಲ್ಲಿ ಇದೆಲ್ಲ ಆಗುವಾಗ ಅದು ಪೊಲೀಸ್ ಇಲಾಖೆಗೆ ಗೊತ್ತಿಲ್ಲದ ಸಂಗತಿಯಾಗಿ ಇರುವುದಿಲ್ಲ. ಅವರು ಮನಸ್ಸು ಮಾಡಿದರೆ ಇದನ್ನು ನಿಲ್ಲಿಸುವುದು ಒಂದು ದಿನದ ಕೆಲಸ. ಕೆಲವು ಕಡೆ ರಿಕ್ರಿಯೇಷನ್ ಕ್ಲಬ್ ಗಳ ಪರ ನ್ಯಾಯಾಲಯದಲ್ಲಿ ಕೇಸು ದಾಖಲಿಸಿ ಅಲ್ಲಿಂದ ಅನುಮತಿ ಪಡೆದುಕೊಂಡು ಬಂದು ಕೆಲವರು ಮಂಗಳೂರಿನಲ್ಲಿ ಶುರು ಮಾಡಿದ್ದಾರೆ. ಆದರೆ ಅಂತಹ ಕ್ಲಬ್ ಗಳಲ್ಲಿ ಕೇವಲ ರಮ್ಮಿ, ಅಂದರ್ ಬಾಹರ್ ಹೀಗೆ ಇಂತಹ ಇಸ್ಪೀಟ್ ಆಟ ಮಾತ್ರ ನಡೆಯಲಾಗುತ್ತದೆ. ಕ್ಯಾರಂ, ಫೂಲ್ ಸಹಿತ ಬೇರೆ ಬೇರೆ ಆಟಗಳ ವಿಷಯವೇ ಇರುವುದಿಲ್ಲ. ಇನ್ನು ಇಸ್ಪೀಟ್ ಕೂಡ ಹಣ ಹಾಕಿ ಆಡಲು ಅನುಮತಿ ಇಲ್ಲ. ಆದರೂ ಆಡಿಸಲಾಗುತ್ತದೆ. ಇದರಿಂದ ಲಾಭ ಆಗುತ್ತಿರುವುದು ಒಂದು ಅಲ್ಲಿನ ಕ್ಲಬ್ ಮಾಲೀಕರಿಗೆ. ಇನ್ನೊಂದು ನೇರವಾಗಿ ಪೊಲೀಸ್ ಇಲಾಖೆಗೆ. ಹಾಳಾಗುತ್ತಿರುವುದು ಮಾತ್ರ ಜನಸಾಮಾನ್ಯರು. ಒಂದು ವೇಳೆ ಇವುಗಳನ್ನು ನಿಲ್ಲಿಸಲು ಜನಪ್ರತಿನಿಧಿಗಳು ಹೇಳಿದ್ದನ್ನು ಅಲ್ಲಿನ ಪೊಲೀಸ್ ಅಧಿಕಾರಿಗಳು ಕೇಳುವುದಿಲ್ಲವಾದರೆ ನೇರವಾಗಿ ಗೃಹ ಸಚಿವರಿಗೆ ದೂರು ಕೊಡಬಹುದು. ಹೇಗೂ ಭಾರತೀಯ ಜನತಾ ಪಾರ್ಟಿಯ ಸರಕಾರ ಇದೆ. ಗೃಹ ಸಚಿವರು ಕೂಡ ಬಿಜೆಪಿಯವರೇ. ಅದಲ್ಲದೇ ಅವರು ಕೂಡ ಸದನದಲ್ಲಿ ಈ ಬಗ್ಗೆ ಮಾತನಾಡಿ ತಾವು ಆದಷ್ಟು ಇಂತವುಗಳನ್ನು ನಿಲ್ಲಿಸಲು ಪ್ರಯತ್ನ ಮಾಡಿದ್ದೇವೆ. ಇನ್ನು ಮುಂದೆ ಇಂತವುಗಳು ಮತ್ತೆ ಶುರುವಾದರೆ ಅದಕ್ಕೆ ಆಯಾ ನಗರಗಳ ಪೊಲೀಸ್ ಅಧಿಕಾರಿಗಳೇ ಕಾರಣ ಎಂದು ಕೂಡ ಹೇಳಿದ್ದಾರೆ. ಇನ್ನು ಜನರೇ ಮುಂದೆ ಬಂದು ಇದನ್ನು ನಿಲ್ಲಿಸಬೇಕು ಎಂದು ಹೇಳಿದ್ದಾರೆ. ಆದರೆ ಜನರು ಮುಂದೆ ಬಂದು ನಿಲ್ಲಿಸಿದ ಉದಾಹರಣೆ ನಮ್ಮ ಮಂಗಳೂರಿನಲ್ಲಿ ಯಾವುದು ಇದೆ ಹೇಳಿ.
ಹಾಗಂತ ಇದು ನಿಂತಿರಲಿಲ್ಲವೇ? ನಿಂತಿತು. ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರದಲ್ಲಿ ಇದ್ದಾಗ ಒಂದಿಷ್ಟು ಸಮಯ ಇದು ನಿಂತಿತು. ಆದರೆ ನಂತರ ಇದು ಮತ್ತೆ ಶುರುವಾಗಿದೆ. ಈಗ ಮಂಗಳೂರಿನ ಮೂರು ಶಾಸಕರಾದ ಯುಟಿ ಖಾದರ್, ವೇದವ್ಯಾಸ ಕಾಮತ್, ಭರತ್ ಶೆಟ್ಟಿಯವರು ಒಟ್ಟಿಗೆ ಕುಳಿತು ಈ ಬಗ್ಗೆ ಸಮಾಲೋಚನೆ ಮಾಡಬೇಕು. ಯಾಕೆಂದರೆ ಇದು ಈ ಮೂರು ಶಾಸಕರ ಕ್ಷೇತ್ರಗಳ ಸಮಸ್ಯೆ. ಬಹುತೇಕ ಇಂತಹ ಅಕ್ರಮಗಳು ನಗರ ಕೇಂದ್ರಿತ ಇದ್ದರೂ ಬಲಿಯಾಗುತ್ತಿರುವವರು ಮೂರು ಕ್ಷೇತ್ರಗಳ ಬಡಪಾಯಿಗಳು. ಆದ್ದರಿಂದ ಮೂರು ಶಾಸಕರು, ಅದು ಯಾವುದೇ ಪಕ್ಷದವರು ಇರಲಿ, ನಮ್ಮ ಜನರಿಗೆ ತೊಂದರೆಯಾಗುವಂತಹ ಇಂತಹ ಅಕ್ರಮಗಳನ್ನು ತಡೆಯಲು ನಾವು ಒಟ್ಟಾಗುತ್ತೇವೆ ಎಂದು ತೋರಿಸಿ ಕೊಡಬೇಕು. ಮೂವರು ಜಾತಿ, ಧರ್ಮ, ರಾಜಕೀಯ ಭೇದಬಾವ ಮರೆತು ಪೊಲೀಸ್ ಕಮೀಷನರ್ ಅವರನ್ನು ಭೇಟಿಯಾಗಿ ಇದನ್ನು ತುರ್ತಾಗಿ ನಿಲ್ಲಿಸಲು ಹೇಳಬೇಕು. ಈ ಕುರಿತು ಜಿಲ್ಲಾಧಿಕಾರಿಯವರಿಗೂ ತಿಳಿಸಬೇಕು. ಒಂದು ಸ್ವಸ್ಥ ಸಮಾಜದ ನಿರ್ಮಾಣ ನಮ್ಮೆಲ್ಲರ ಜವಾಬ್ದಾರಿ. ಒಂದು ವೇಳೆ ಈ ಮೂರು ಜನ ಶಾಸಕರು ಕಮೀಷನರ್ ಅವರನ್ನು ಭೇಟಿಯಾಗಿ ಒತ್ತಡ ಹಾಕದಿದ್ದಲ್ಲಿ ಜನರಿಗೆ ಅವರ ಮೇಲೆ ಸಂಶಯ ಬಂದರೂ ಬರಬಹುದು. ಜನಸಾಮಾನ್ಯರಿಗೆ ಕಂಟಕವಾಗಿರುವ ಸ್ಕಿಲ್ ಗೇಮ್ಸ್, ಇಸ್ಪೀಟ್ ಅಡ್ಡೆಗಳಾಗಿರುವ ರಿಕ್ರಿಯೇಶನ್ ಕೇಂದ್ರಗಳನ್ನು ನಿಲ್ಲಿಸಿದರೆ ಅದರಿಂದ ಪುಣ್ಯವಾದರೂ ಬಂದಿತು. ಮುಂದುವರೆಯಲು ಬಿಟ್ಟರೆ ಆ ಎಂಜಿಲು ತಿಂದವರಿಗೆ ಶಾಪ ಗ್ಯಾರಂಟಿ. ನಿಮಗೆ ಕಳಂಕವೂ ತಪ್ಪಿದ್ದಲ್ಲ. ಇನ್ನು ಆಯ್ಕೆ ನಿಮ್ಮದು!
0
Shares
  • Share On Facebook
  • Tweet It




Trending Now
ಸಣ್ಣಪುಟ್ಟ ಅಂಗಡಿಗಳಿಗೂ ಈಗ ತೆರಿಗೆ ಅಧಿಕಾರಿಗಳ ನೋಟಿಸ್ ಯಾಕೆ? ಇಲ್ಲಿದೆ ಸುಲಭ ಲೆಕ್ಕಾಚಾರ!
Tulunadu News July 19, 2025
ಭಾರತದ ಡ್ರೆಸ್ಸಿಂಗ್ ರೂಂನಲ್ಲಿ ಹನುಮಾನ್ ಚಾಲೀಸಾ ಪಠಣ!
Tulunadu News July 18, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಸಣ್ಣಪುಟ್ಟ ಅಂಗಡಿಗಳಿಗೂ ಈಗ ತೆರಿಗೆ ಅಧಿಕಾರಿಗಳ ನೋಟಿಸ್ ಯಾಕೆ? ಇಲ್ಲಿದೆ ಸುಲಭ ಲೆಕ್ಕಾಚಾರ!
    • ಭಾರತದ ಡ್ರೆಸ್ಸಿಂಗ್ ರೂಂನಲ್ಲಿ ಹನುಮಾನ್ ಚಾಲೀಸಾ ಪಠಣ!
    • ಉತ್ತರಾಖಂಡದ ಎಲ್ಲಾ 17000 ಸರಕಾರಿ ಶಾಲೆಗಳಲ್ಲಿ ಭಗವದ್ಗೀತೆ ಪಠಣ ಕಡ್ಡಾಯ ಅದೇಶ!
    • ಯುವಕನನ್ನು ಲವ್ ಜಿಹಾದ್ ಮಾಡಿದ್ಲಾ ಮುಸ್ಲಿಂ ಯುವತಿ! ಹಿಂದೂ ಯುವಕ ಕಂಗಾಲು...
    • ಮೋದಿ ಮಾತ್ರ ವಾರಕ್ಕೆ 100 ಗಂಟೆ ಕೆಲಸ ಮಾಡ್ತಾರೆ- ಸಂಸದ ತೇಜಸ್ವಿಗೆ ಹೇಳಿದ ನಾರಾಯಣ್ ಮೂರ್ತಿ
    • ಗಂಡ ತಲೆಹಿಡುಕ ಎಂದ ಸಂತ್ರಸ್ತೆಗೆ ಪೊಲೀಸ್ ಪೇದೆಯೇ ಮುಕ್ಕಿದ ಮಂಗಳೂರಿನ ನೋವಿನ ಕಥೆ!
    • ನಿಟ್ಟೆ ಕಾಲೇಜು ಹಾಸ್ಟೆಲ್ ಶೌಚಾಲಯದಲ್ಲಿ ಹಿಂದೂ-ಮುಸ್ಲಿಂ ದ್ವೇಷ ಬರಹ! ವಿದ್ಯಾರ್ಥಿನಿ ಬಂಧನ
    • ಕಾರ್ಕಳ ಪರಶುರಾಮನ ವಿಗ್ರಹ ಕಂಚಿನದ್ದು ಅಲ್ಲ, ನಕಲಿ: ಚಾರ್ಜ್ ಶೀಟ್ ಸಲ್ಲಿಕೆ
    • ಲಗಾನ್ ನಿರ್ದೇಶಕ ಅಶುತೋಷ್ ನಿರ್ದೇಶನದಲ್ಲಿ ರಿಷಬ್ ಆಗಲಿದ್ದಾರೆ ಕೃಷ್ಣದೇವರಾಯ!
    • ಅಂದು ಕ್ಲರ್ಕ್.. ಇಂದು ಕರ್ಣಾಟಕ ಬ್ಯಾಂಕಿನ ಎಂಡಿ, ಸಿಇಒ!
  • Popular Posts

    • 1
      ಸಣ್ಣಪುಟ್ಟ ಅಂಗಡಿಗಳಿಗೂ ಈಗ ತೆರಿಗೆ ಅಧಿಕಾರಿಗಳ ನೋಟಿಸ್ ಯಾಕೆ? ಇಲ್ಲಿದೆ ಸುಲಭ ಲೆಕ್ಕಾಚಾರ!
    • 2
      ಭಾರತದ ಡ್ರೆಸ್ಸಿಂಗ್ ರೂಂನಲ್ಲಿ ಹನುಮಾನ್ ಚಾಲೀಸಾ ಪಠಣ!
    • 3
      ಉತ್ತರಾಖಂಡದ ಎಲ್ಲಾ 17000 ಸರಕಾರಿ ಶಾಲೆಗಳಲ್ಲಿ ಭಗವದ್ಗೀತೆ ಪಠಣ ಕಡ್ಡಾಯ ಅದೇಶ!
    • 4
      ಯುವಕನನ್ನು ಲವ್ ಜಿಹಾದ್ ಮಾಡಿದ್ಲಾ ಮುಸ್ಲಿಂ ಯುವತಿ! ಹಿಂದೂ ಯುವಕ ಕಂಗಾಲು...
    • 5
      ಮೋದಿ ಮಾತ್ರ ವಾರಕ್ಕೆ 100 ಗಂಟೆ ಕೆಲಸ ಮಾಡ್ತಾರೆ- ಸಂಸದ ತೇಜಸ್ವಿಗೆ ಹೇಳಿದ ನಾರಾಯಣ್ ಮೂರ್ತಿ

  • Privacy Policy
  • Contact
© Tulunadu Infomedia.

Press enter/return to begin your search