ಬಿರಿಯಾನಿ ಮೇ ಕುಚ್ ಎಂಜಿಲ್ ಹೇ!
Posted On March 31, 2022
ಹಲಾಲ್ ವಿರುದ್ಧ ಅಭಿಯಾನವನ್ನು ಹಿಂದೂ ಪರ ಸಂಘಟನೆಗಳು ಆರಂಭಿಸಿವೆ. ಕೇವಲ ಹಲಾಲ್ ಎನ್ನುವ ಶಬ್ದದ ಅರ್ಥ ಏನೆಂದು ನೀವು ತಿಳಿಯಬಯಸಿದರೆ ಅದು ಸಿಂಪಲ್. ಮುಸ್ಲಿಂ ಮತದಲ್ಲಿ ಯಾವ ವಸ್ತುವನ್ನು ಬಳಸಲು ಸಮ್ಮತಿಸಲಾಗಿದೆಯೋ ಅದೇ ಹಲಾಲ್. ಇನ್ನು ಹಲಾಲ್ ಗೂ ಪ್ರಾಣಿವಧೆಗೂ ಏನು ಸಂಬಂಧ ಎಂದು ತಿಳಿಯಬೇಕಾದರೆ ಅದು ಒಂದು ಹೆಜ್ಜೆ ನಂತರದ ಪ್ರಕ್ರಿಯೆ. ಯಾವ ಪ್ರಾಣಿಯನ್ನು ಮೆಕ್ಕಾಗೆ ಮುಖ ಮಾಡಿ ನಿಲ್ಲಿಸಿ, ಧರ್ಮ ಗುರು ಆದವರು ಬಂದು ಅಲ್ಲಿ ತಮ್ಮ ಕುರಾನಿನ ಕೆಲವು ಮಂತ್ರಗಳನ್ನು ಹೇಳಿ, ಪ್ರಾಣಿಯ ಕುತ್ತಿಗೆಯನ್ನು ಸೀಳುವುದು. ಆಗ ಆ ಪ್ರಾಣಿಯ ದೇಹದಿಂದ ರಕ್ತ ಹೊರಗೆ ಬರುತ್ತದೆ. ಕೆಲವು ಸೆಕೆಂಡಿನ ಬಳಿಕ ಪ್ರಾಣಿ ಸಾಯುತ್ತದೆ. ನಂತರ ಅದನ್ನು ಕತ್ತರಿಸಿ ಮಾರುವುದು. ಅಂತಹ ಮಾಂಸದಿಂದ ಮಾಡಿದ ಅಡುಗೆಯ ಸೇವನೆಯನ್ನು ಮಾತ್ರ ಮುಸ್ಲಿಮರು ಮಾಡಬಹುದು. ಈಗ ಇಲ್ಲಿರುವ ಪ್ರಶ್ನೆ ಏನೆಂದರೆ ಈ ರೀತಿಯಲ್ಲಿ ಕೊಂದ ಪ್ರಾಣಿಯ ಮಾಂಸವನ್ನು ನಾವು ಅಡುಗೆ ಮಾಡಿ ಸೇವಿಸಬಾರದೇ? ನಿನ್ನೆ, ಮೊನ್ನೆಯ ತನಕ ಸೇವಿಸುತ್ತಿದ್ದೆವಲ್ಲ ಎನ್ನುವ ಉತ್ತರ ಬರುತ್ತದೆ. ನಮ್ಮಲ್ಲಿ ಹೆಚ್ಚಿನವರು ಕೋಳಿ ಮಾಂಸ ಸೇವಿಸುವವರಾದರೆ ಒಂದೋ ಜೀವಂತ ಕೋಳಿಗಳನ್ನು ಸಾಕಿ, ತಮಗೆ ಬೇಕಾದಾಗ ಹಿತ್ತಲಲ್ಲಿ ಆಡುತ್ತಿರುವ ಕೋಳಿಯನ್ನು ಪಕ್ಕನೆ ಹಿಡಿದು ಅಲ್ಲಿಯೇ ಕೊಂದು ಅದನ್ನು ಮುಂದೆ ಕತ್ತರಿಸಿ ಪದಾರ್ಥ ಮಾಡುತ್ತಾರೆ. ಕೆಲವರು ಮಾರುಕಟ್ಟೆಗೆ ಹೋಗಿ ಅಲ್ಲಿಯೇ ಕೋಳಿಯ ತೂಕ ನೋಡಿ, ಅಲ್ಲಿಯೇ ಕತ್ತರಿಸಿ ತೊಟ್ಟೆಯಲ್ಲಿ ಹಾಕಿ ಬರುತ್ತಾರೆ. ನಮ್ಮ ಜಿಲ್ಲೆಯಲ್ಲಿ ಹೀಗೆ ನಡೆಯುತ್ತಿರುತ್ತದೆ. ಆದರೆ ಕೇವಲ ಕೋಳಿ ಮಾತ್ರ ತಿನ್ನದ, ಮನುಷ್ಯರನ್ನು ಬಿಟ್ಟು ಬೇರೆ ಎಲ್ಲವನ್ನು ತಿನ್ನುವ ಜನರು ಮಾಂಸವನ್ನು ಖರೀದಿಸುವಾಗ ಇಲ್ಲಿಯ ತನಕ ಅದು ಹಲಾಲ್ ಹೌದೋ, ಅಲ್ಲವೋ ಎಂದು ಅಷ್ಟು ಸೂಕ್ಷ್ಮವಾಗಿ ಗಮನಿಸುತ್ತಿರಲಿಲ್ಲ. ಯಾಕೆಂದರೆ ನಮ್ಮಲ್ಲಿ ಅಂತಹ ಸಮಸ್ಯೆ ಇರಲಿಲ್ಲ. ಈಗ ಹಿಜಾಬ್ ನಂತರ ಒಂದೊಂದೇ ಶುರುವಾದ ನಂತರ ಈ ಹಲಾಲ್ ಕೂಡ ಶುರುವಾಗಿದೆ. ಮುಸ್ಲಿಂ ಹೋಟೇಲುಗಳಿಗೆ ಮುಸ್ಲಿಮರಿಗಿಂತ ಹೆಚ್ಚು ಇಷ್ಟಪಟ್ಟು ಹೋಗುವ ಹಿಂದೂಗಳ ಸಂಖ್ಯೆ ಇದೆ. ಯಾಕೆಂದರೆ ಮುಸ್ಲಿಮರು ಚಿಕನ್, ಮಟನ್ ಬಿರಿಯಾನಿಗಳನ್ನು ಅದ್ಭುತವಾಗಿ ಮಾಡುತ್ತಾರೆ ಎನ್ನುವ ನಂಬಿಕೆ. ಮುಸ್ಲಿಂ ಹೋಟೇಲುಗಳಲ್ಲಿ ಯಾವಾಗಲೂ ಬಾಯಿ ಚಪ್ಪರಿಸಿ ತಿನ್ನುತ್ತಿದ್ದವರಿಗೆ ಇಲ್ಲಿಯ ತನಕ ಹಲಾಲ್ ಶಬ್ದ ತಲೆಗೆ ಹೋಗಿರಲಿಲ್ಲ. ಆದರೆ ಇತ್ತೀಚೆಗೆ ಕೆಲವು ವಿಡಿಯೋಗಳಲ್ಲಿ ಮುಸ್ಲಿಂ ಧರ್ಮಗುರುಗಳು ಬಿರಿಯಾನಿಯ ಹಂಡೆಗೆ ಉಗಿಯುತ್ತಿದ್ದಂತೆ ಕಂಡುಬರುವ ದೃಶ್ಯಗಳು ಯಾವಾಗ ವೈರಲ್ ಆದವೋ ದಾಲ್ ಮೇ ಕುಚ್ ಎಂಜಿಲ್ ಹೇ ಎಂದು ಜನರಿಗೆ ಅನಿಸಲು ಶುರುವಾಯಿತು. ಅದು ಉಗಿಯುವುದು ಅಲ್ಲ ಎಂದು ಯಾವ ಸಾಬಿಯೂ ಘಂಟಾಘೋಷವಾಗಿ ಹೇಳಿಲ್ಲ. ಕೆಲವರು ಅದನ್ನು ಉಗುಳುವುದು ಅಲ್ಲ ಊದುವುದು ಎಂದರೂ ಜನ ನಂಬಲಿಲ್ಲ. ಈಗ ಅದೇ ಹಲಾಲ್ ನ ಒಂದು ಭಾಗ ಎಂದು ಚರ್ಚೆಯಾಗುತ್ತಿದ್ದಂತೆ ಹಿಂದೂಗಳು ಮುಸ್ಲಿಮರ ಹೋಟೇಲುಗಳಲ್ಲಿ ಬಿರಿಯಾನಿ ತಿನ್ನುವುದನ್ನು ಕಡಿಮೆ ಮಾಡುತ್ತಿದ್ದಾರೆ. ಇದು ಅವರಿಗೆ ಕೊಟ್ಟ ಆರ್ಥಿಕ ಹೊಡೆತದ ಒಂದು ಭಾಗ.
ಆದರೆ ಹಲಾಲ್ ಇಲ್ಲಿಗೆ ಮುಗಿಯಲಿಲ್ಲ. ಮುಸ್ಲಿಮರು ಯಾವ ಉತ್ಪನ್ನದ ಮೇಲೆ ಹಲಾಲ್ ಪ್ರಮಾಣೀಕೃತ ಉತ್ಪನ್ನ ಎಂದು ಬರೆದಿರುತ್ತದೆಯೋ ಅದನ್ನು ಕಣ್ಣುಮುಚ್ಚಿ ತೆಗೆದುಕೊಳ್ಳುತ್ತಾರೆ. ಯಾವಾಗ ಮುಸ್ಲಿಮರ ಈ ವೀಕನೆಸ್ ಕೆಲವು ಸಂಘಟನೆಗಳಿಗೆ ಗೊತ್ತಾಯಿತೋ, ಅವರು ಒಂದು ಒಕ್ಕೂಟ ನಿರ್ಮಿಸಿದರು. ಈ ಒಕ್ಕೂಟ ಎಷ್ಟು ಕರಾರುವಕ್ಕಾಗಿ ಕೆಲಸ ಮಾಡುತ್ತದೆ ಎಂದರೆ ದೊಡ್ಡ ದೊಡ್ಡ ಬ್ರಾಂಡ್ ಗಳನ್ನು ಸಂಪರ್ಕಿಸಿ ನೀವು ನಮಗೆ ಇಂತಿಷ್ಟು ಮೊತ್ತವನ್ನು ದೇಣಿಗೆ ಎಂದು ಕೊಟ್ಟರೆ ನಾವು ನಿಮಗೆ ಹಲಾಲ್ ಪ್ರಮಾಣಪತ್ರ ನೀಡುತ್ತವೆ. ನೀವು ಅದನ್ನು ನಿಮ್ಮ ಉತ್ಪನ್ನಗಳ ಮೇಲೆ ಮುದ್ರಿಸಿದರೆ ಇಷ್ಟು ಸಂಖ್ಯೆಯಲ್ಲಿರುವ ಮುಸ್ಲಿಮರು ನಿಮ್ಮ ವಸ್ತುಗಳನ್ನು ಖರೀದಿಸುತ್ತಾರೆ. ನಿಮಗೆ ಇಷ್ಟು ಕೋಟಿ ಲಾಭ ಬರುತ್ತದೆ ಎಂದು ಒತ್ತಾಸೆ ತೋರಿಸಲಾಯಿತು. ನೆನಪಿಡಿ, ಆಗ ಈ ವಿವಾದ ಇರಲಿಲ್ಲ. ಯಾರ ಕಂಪೆನಿಗಳು ಈ ಒಕ್ಕೂಟ ಕೇಳಿದಷ್ಟು ಲಕ್ಷವನ್ನು ಪ್ರತಿ ವರ್ಷ ನೀಡುತ್ತಾ ಬಂತೋ ಅವು ತಮ್ಮ ಉತ್ಪನ್ನಗಳ ಮೇಲೆ ಹಲಾಲ್ ಲೋಗೋ ಹಾಕಲಾರಂಭಿಸಿದವು. ವ್ಯಾಪಾರ ವೃದ್ಧಿಯಾಯಿತು. ಈ ಒಕ್ಕೂಟ ಹೀಗೆ ದೇಶದ ಎಷ್ಟು ಬ್ರಾಂಡ್ ಕಂಪೆನಿಗಳನ್ನು ಸಂಪರ್ಕಿಸಿತೋ ಅವರಲ್ಲಿ ಬಹುತೇಕರು ಇವರ ಗುರಿಗೆ ಬಿದ್ದರು. ಈಗ ಹಲಾಲ್ ಪ್ರಮಾಣಪತ್ರ ಕೊಡುವ ಸಂಸ್ಥೆ ಸಾವಿರಾರು ಕೋಟಿಗೆ ಬಾಳುತ್ತದೆ. ಅಷ್ಟಕ್ಕೂ ಇದು ಸರಕಾರದ ಗುತ್ತಿಗೆ ಅಲ್ಲ. ಅಲ್ಲಿ ಹಣ ಕೊಡುವುದು ಕಾನೂನುಬದ್ಧವೂ ಅಲ್ಲ. ಅವರು ಜಿಎಸ್ ಟಿ ಅಡಿಯಲ್ಲಿ ಬರುವುದೂ ಇಲ್ಲ. ಈ ಹಣ ನಮ್ಮ ದೇಶದಿಂದ ಹೋಗಿ ನಮ್ಮ ಶತ್ರು ರಾಷ್ಟ್ರಗಳ ಕೈ ಸೇರುತ್ತದೆ ಎನ್ನನುವ ಗುಮಾನಿ ಇದೆ. ಆ ಬಗ್ಗೆ ತನಿಖೆ ಆಗಬೇಕು. ಈಗ ದೊಡ್ಡ ದೊಡ್ಡ ಕಂಪೆನಿಗಳು ಹಲಾಲ್ ಲೋಗೋಗಾಗಿ ಹಣ ನೀಡುವುದು ನಿಲ್ಲಬೇಕಾದರೆ ಏನು ಮಾಡಬೇಕು. ಹಿಂದೂಗಳು ಅಂತಹ ಕಂಪೆನಿಯ ಉತ್ಪನ್ನ ಖರೀದಿಸುವುದು ನಿಲ್ಲಿಸಬೇಕು. ಇದರಿಂದ ಆರ್ಥಿಕ ಹೊಡೆತ ಅವರಿಗೆ ಬೀಳುತ್ತದೆ. ಈ ಅಭಿಯಾನ ಉತ್ತಮವಾಗಿ ಆರಂಭವಾಗಿದೆ. ಯಶಸ್ವಿಯಾಗುತ್ತಾ??
- Advertisement -
Trending Now
ಬಳ್ಳಾರಿಯಲ್ಲಿ ಬಾಣಂತಿಯರ ಸಾವಿನ ಸಂಖ್ಯೆಗಿಂತ ಬೆಳಗಾವಿ ಕಥೆ ಇನ್ನೂ ಭಯಾನಕ!
December 9, 2024
ವಿಮಾನ ನಿಲ್ದಾಣದಲ್ಲಿ ಸಮೋಸಕ್ಕೆ 350 ರೂಪಾಯಿ ಆದ್ರೆ ಹೇಗೆ ಎಂದ ಸಂಸದ!
December 6, 2024
Leave A Reply