• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಸಾಹಿತಿಗಳಿಗೆ ಭಗವದ್ಗೀತೆ ಪಠ್ಯವಾದರೆ ಯಾಕೆ ಮಂಡೆಬಿಸಿ!!

Hanumantha Kamath Posted On April 1, 2022
0


0
Shares
  • Share On Facebook
  • Tweet It

ಕೆಲವರು ಅದೇಗೆ ಸಾಹಿತಿ ಆಗುತ್ತಾರೋ ದೇವರಿಗೆ ಗೊತ್ತು. ಇನ್ನು ಕೆಲವರು ಅದೇಗೆ ಬುದ್ಧಿಜೀವಿ ಅನಿಸಿಕೊಳ್ಳುತ್ತಾರೋ ಭಗವಂತನಿಗೆ ಗೊತ್ತು. ಇನ್ನು ಇವರೆಲ್ಲರೂ ಹಿಂದೂತ್ವವನ್ನು ಮತ್ತು ಹಿಂದೂ ಧರ್ಮ ಬೋಧಿಸಿದ ಸತ್ಯವನ್ನು ಒಪ್ಪಿಕೊಳ್ಳಲು ಯಾಕೆ ತಯಾರಿಲ್ಲವೋ ಅದು ಪರಮಾತ್ಮನಿಗೆ ಮಾತ್ರ ಗೊತ್ತು. ಸದ್ಯಕ್ಕಂತೂ ಇಂತಹ 61 ಸಾಹಿತಿಗಳು ಉಟ್ಟಬಟ್ಟೆಯಲ್ಲಿಯೇ ಮನೆಯಿಂದ ವಿಧಾನಸೌಧಕ್ಕೆ ಓಡಿಬಂದು ಮುಖ್ಯಮಂತ್ರಿಗಳನ್ನು ಭೇಟಿಯಾಗಿದ್ದಾರೆ. ನಾಳೆಯೋ, ನಾಡಿದ್ದೋ ಸುನಾಮಿ ಬಂದು ತಾವೆಲ್ಲರೂ ಕೊಚ್ಚಿಕೊಂಡು ಹೋಗಲಿದ್ದೇವೆ ಎನ್ನುವ ಧಾವಂತದಿಂದ ಎಲ್ಲಿ ಆಶ್ರಯ ಸಿಗುತ್ತದೋ ಅಲ್ಲಿ ಓಡಿ ಬಂದವರ ಪರಿಸ್ಥಿತಿ ಅವರದ್ದು. ಅಷ್ಟಕ್ಕೂ ಅವರಿಗೆ ಆಗಿರುವುದೇನು? ಹಿಂದೂ ಕಾರ್ಯಕರ್ತರ ಹತ್ಯೆಯಾದಾಗ ಇವರಿಗೆ ಧ್ವನಿ ಎತ್ತಬೇಕು ಎಂದು ಅನಿಸಲಿಲ್ಲ. ಹಿಜಾಬ್ ತೆಗೆಯಲ್ಲ ಎಂದು ಆರು ಮಂದಿ ವಿದ್ಯಾರ್ಥಿನಿಯರು ಹಟ ಮಾಡುವಾಗ ಅವರಿಗೆ ಬುದ್ಧಿವಾದ ಹೇಳಬೇಕು ಎಂದು ಇವರಿಗೆ ಅನಿಸಲಿಲ್ಲ. ಮುಸ್ಲಿಮರು ಹೈಕೋರ್ಟ್ ತೀರ್ಪಿಗೆ ವಿರುದ್ಧವಾಗಿ ಕರ್ನಾಟಕ ಬಂದ್ ಗೆ ಕರೆ ಕೊಟ್ಟಾಗ ಅವರಿಗೆ ತಿಳಿ ಹೇಳಬೇಕು ಎಂದು ಅನಿಸಿಲ್ಲ. ಆದರೆ ಯಾವಾಗ ಭಗವದ್ಗೀತೆಯ ಒಳ್ಳೆಯ ಸಾರವನ್ನು ಮಕ್ಕಳಿಗೆ ಪಾಠ ಮಾಡಬೇಕು ಎಂದು ಸರಕಾರ ಯೋಚಿಸುವಾಗ ಇವರು ತಮ್ಮ ಮನೆಗೆ ಬೆಂಕಿ ಬಿದ್ದಿದೆಯೇನೋ ಎನ್ನುವ ಗಡಿಬಿಡಿಯಲ್ಲಿ ಹಾಸಿಗೆ ಬಿಟ್ಟು ಎದ್ದು ಓಡಿಬಂದಿದ್ದಾರೆ.

ಅಷ್ಟಕ್ಕೂ ಇವರು ಬಂದು ಹೇಳಿದ ಕೂಡಲೇ ಸರಕಾರ ಇವರ ಕಾಲ ಕೆಳಗೆ ಬಿದ್ದು ತಪ್ಪಾಯಿತು ಸಾಹಿತಿಗಳೇ, ನಿಮ್ಮನ್ನು ಒಂದು ಮಾತು ಕೇಳಿ ನಾವು ಮುಂದುವರೆಯುತ್ತೇವೆ. ನಿಮ್ಮಂತವರು ಇದ್ದ ಕಾರಣ ಈ ರಾಜ್ಯದಲ್ಲಿ ಕಾಲಕಾಲಕ್ಕೆ ಮಳೆ, ಬೇಳೆ ಆಗುತ್ತಿರುವುದು ಎಂದು ಹೇಳುವುದಿಲ್ಲ ಎನ್ನುವುದು ಇವರಿಗೆ ಗೊತ್ತು. ಆದರೆ ಕಾಂಗ್ರೆಸ್ ಸರಕಾರ ಇದ್ದಾಗ ತಿಂದುಡು ಹಾಯಾಗಿದ್ದವರಿಗೆ ಕೆಪಿಸಿಸಿಯಿಂದ ಕರೆ ಹೋಗಿರುತ್ತದೆ. ನಮ್ಮ ಸಮಯದಲ್ಲಿ ಆ ಪ್ರಶಸ್ತಿ, ಈ ಪ್ರಶಸ್ತಿ ಎಂದು ತೆಗೆದುಕೊಂಡಿರಲಿಲ್ಲವೇ? ಈಗ ಅದನ್ನು ಋಣ ಎಂದು ಅಂದುಕೊಂಡು ತೀರಿಸದಿದ್ದರೆ ಹೇಗೆ? ಒಂದು ವೇಳೆ ಯಾವ ಸಾಹಿತಿ ನಮಗೆ ಈಗ ಬೆಂಬಲ ಕೊಡಲಿಲ್ಲವೋ ಮುಂದಿನ ಬಾರಿ ಅವನು ರಾಮಾಯಣ ಬರೆದರೂ ನಾವು ಕ್ಯಾರೇ ಎನ್ನುವುದಿಲ್ಲ ಎಂದು ಹೆದರಿಸಿರುತ್ತಾರೆ. ಅದರಿಂದ ಬೆದರಿದವರು ಓಡಿ ಬಂದು ಅಟೆಂಡೆನ್ಸ್ ಹಾಕಿ ವಿಧಾನಸೌಧದ ಹೊರಗೆ ನಿಂತು ಫೋಟೋ ತೆಗೆಸಿ, ಸಿಎಂಗೆ ಒಂದು ಮನವಿ ಕೊಟ್ಟು ಅದರ ಫೋಟೋ ತೆಗೆಸಿ ಅದನ್ನು ಸಂಬಂಧಪಟ್ಟವರಿಗೆ ಫಾರ್ ವರ್ಡ್ ಮಾಡಿ ಮತ್ತೆ ಮನೆಗೆ ಹೋಗಿ ಎಸಿ ಆನ್ ಮಾಡಿ ಫ್ರಿಜ್ಡ್ ನಿಂದ ಐಸ್ ತೆಗೆದು ಕೂಲ್ ಕೂಲ್ ಆಗಿದ್ದಾರೆ.

ಅಷ್ಟಕ್ಕೂ ಇವರು ವಿರೋಧ ಮಾಡುತ್ತಿರುವುದು ಭಗವದ್ಗೀತೆಯನ್ನು ಪಠ್ಯಕ್ರಮದಿಂದ ತೆಗೆಯಬೇಕು ಎಂದು ತಾನೆ. ಅದು ಯಾಕೆ ಎಂದು ಇವರ ಬಳಿ ಕೇಳಿ ನೋಡಿ. ಅದು ಹಿಂದೂತ್ವದೆಡೆಗೆ ಮಕ್ಕಳ ಮನಸ್ಸನ್ನು ಆಕರ್ಷಿಸುವುದು ಎನ್ನುತ್ತಾರೆ. ಒಂದು ಶಾಲೆಯಲ್ಲಿ ಎಲ್ಲ ಮತ, ಧರ್ಮದ ಮಕ್ಕಳು ಇರುತ್ತಾರೆ ನಿಜ. ಅವರಿಗೆ ಭಗವದ್ಗೀತೆ ಬೋಧಿಸಿದರೆ ಅದರಲ್ಲಿ ತಪ್ಪೇನು? ಭಗವದ್ಗೀತೆ ಹಿಂದೂಗಳ ಪವಿತ್ರ ಗ್ರಂಥ ಇರಬಹುದು. ಆದರೆ ಕುರಾನ್ ನಂತೆ ಧರ್ಮ ಗ್ರಂಥ ಅಲ್ಲ. ಇದರಲ್ಲಿ ಕುರುಕ್ಷೇತ್ರದ ರಣರಂಗದಲ್ಲಿ ಶ್ರೀಕೃಷ್ಣ ಪರಮಾತ್ಮ ಯುದ್ಧ ಆರಂಭವಾಗುವ ಮುನ್ನ ಅರ್ಜುನನಿಗೆ ಬೋಧಿಸಿದ ಸಾರ ಇದೆ ಅಷ್ಟೇ. ಇದು ಇಡೀ ಮನುಜ ಕುಲ ಓದಬೇಕಾದ ನೀತಿಪಾಠಗಳ ಒಟ್ಟು ಸಂಗ್ರಹ. ಭಗವದ್ಗೀತೆಯಲ್ಲಿ ಎಲ್ಲಿ ಕೂಡ ಬೇರೆ ಮತ, ಧರ್ಮಗಳ ಬಗ್ಗೆ ಹೀಯಾಳಿಸಿ ಕೃಷ್ಣ ಮಾತನಾಡಿಲ್ಲ. ಯಾಕೆಂದರೆ ಆ ಸಮಯದಲ್ಲಿ ಇದ್ದದ್ದು ಸನಾತನ ಧರ್ಮ ಮಾತ್ರ.

ಆದರೆ ಕುರಾನ್ ನಲ್ಲಿ ಬೇರೆ ಧರ್ಮಗಳ ಬಗ್ಗೆ ಉಲ್ಲೇಖವಿದೆ. ಅದನ್ನು ಮಕ್ಕಳಿಗೆ ಸಾರಾಸಗಟಾಗಿ ಬೋಧಿಸಲು ಆಗುವುದಿಲ್ಲ. ಆದರೆ ಭಗವದ್ಗೀತೆಯಲ್ಲಿ ಜೀವನದ ಸಾರವಿದೆ. ಇಂದು ನಡೆಯುವುದು ಒಳ್ಳೆಯದ್ದಕ್ಕೆ… ಎನ್ನುವ ಒಂದು ಶ್ಲೋಕವನ್ನು ಎಷ್ಟೋ ಅಂಗಡಿ, ಮನೆಗಳಲ್ಲಿ ಬರೆದು ತೂಗುಹಾಕಿದ್ದಾರೆ. ಇದು ಎಲ್ಲ ಧರ್ಮ, ಮತದವರಿಗೂ ಅನ್ವಯವಾಗುತ್ತದೆ. ಇಂತಹ ವಿಷಯಗಳನ್ನು ಅರ್ಥ ಮಾಡಿಕೊಂಡರೆ ಇವತ್ತಿನ ಕಾಲದ ಎಷ್ಟೋ ಒತ್ತಡಗಳನ್ನು ಮನುಷ್ಯ ಸಹಿಸಿಕೊಂಡಾನು. ಅತ್ಮಹತ್ಯೆಗಳು ಕಡಿಮೆಯಾಗಬಹುದು. ದ್ವೇಷ, ಮತ್ಸರ, ಅಸೂಯೆ ಕಡಿಮೆಯಾಗಬಹುದು. ಮನುಷ್ಯರು ದಾನ, ಧರ್ಮದಲ್ಲಿ ವಿಶ್ವಾಸ ಗಳಿಸಬಹುದು. ಇದೆಲ್ಲವೂ ಮಕ್ಕಳಿಗೆ ಗೊತ್ತಾದರೆ ಒಳ್ಳೆಯದು. ಇಂದಿನ ಆಧುನಿಕ ದಿನಗಳಲ್ಲಿ ಮನೆಗಳಲ್ಲಿ ಇದನ್ನು ಹೇಳುವಷ್ಟು ಸಮಯ ಪೋಷಕರಿಗೆ ಉಳಿದಿಲ್ಲ. ಅಜ್ಜ, ಅಜ್ಜಂದಿರು ಹಳ್ಳಿಗೆ ಸೀಮಿತರಾಗಿದ್ದಾರೆ. ಮಕ್ಕಳ ಕೈಯಲ್ಲಿ ಮೊಬೈಲ್ ಕೊಟ್ಟು ಊಟ ಮಾಡಿಸುವ ಕಾಲ ಇದು. ಕಾರ್ಟೂನ್ ನೋಡದೇ ತಿಂಡಿ ತಿನ್ನದ ಯುಗ ಇದು. ಹೀಗಿರುವಾಗ ಭಗವದ್ಗೀತೆ ಇವತ್ತಿನ ಅಗತ್ಯವೂ ಹೌದು. ಆದರೆ ಹೈಕ್ಲಾಸ್ ಪಾರ್ಟಿಗಳಲ್ಲಿ ಮುಳುಗಿದವರಿಗೆ, ರಾತ್ರಿ ಎರಡು ಪೆಗ್ ಹಾಕಿ ಮಲಗುವವರಿಗೆ ಭಗವದ್ಗೀತೆಯ ಮಹತ್ವ ಗೊತ್ತಾಗಲು ಸಾಧ್ಯವಾ? ಅವರಿಗೆ ಭಗವದ್ಗೀತೆ ಶಬ್ದವೇ ಅಪಥ್ಯವಾಗಿರುವಾಗ ಅವರ ಮನವಿ ಕಸದ ಡಬ್ಬಿಯಲ್ಲಿ ಕೂರಲು ಮಾತ್ರ ಯೋಗ್ಯ ಅಲ್ಲವೇ!!!

0
Shares
  • Share On Facebook
  • Tweet It




Trending Now
ಸರಕಾರದಿಂದಲೇ ಟಿಪ್ಪು ಜಯಂತಿ ಆಚರಿಸಬೇಕೆಂಬ ಚರ್ಚೆಗೆ ವಿಜಯಾನಂದ ಕಾಶಪ್ಪನವರ್ ನಾಂದಿ!
Hanumantha Kamath December 10, 2025
ಏಂಬುಲೆನ್ಸ್ ಇಲ್ಲದೇ ಗೂಡ್ಸ್ ಟೆಂಪು! ಉಡುಪಿಯಲ್ಲೊಂದು ಮನಕಲಕುವ ಘಟನೆ!
Hanumantha Kamath December 9, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಸರಕಾರದಿಂದಲೇ ಟಿಪ್ಪು ಜಯಂತಿ ಆಚರಿಸಬೇಕೆಂಬ ಚರ್ಚೆಗೆ ವಿಜಯಾನಂದ ಕಾಶಪ್ಪನವರ್ ನಾಂದಿ!
    • ಏಂಬುಲೆನ್ಸ್ ಇಲ್ಲದೇ ಗೂಡ್ಸ್ ಟೆಂಪು! ಉಡುಪಿಯಲ್ಲೊಂದು ಮನಕಲಕುವ ಘಟನೆ!
    • ಕುಡುಕರ ಲಿವರ್ ಚಿಕಿತ್ಸೆಗೆ ಸರಕಾರ ಹಣ ನೀಡಲಿ ಎಂದ ಶಾಸಕರು!
    • ಸ್ಮೃತಿ ಹೊಸ ಇನ್ಸಿಂಗ್ಸ್ ಆರಂಭ!
    • ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ ಅಣ್ಣಾಮಲೈ! ಪ್ಯಾಚ್ ಅಪ್!
    • ಮನಪಾ ವ್ಯಾಪ್ತಿಯ ಸಮಸ್ಯೆಗಳಿಗೆ ಕಾಂಗ್ರೆಸ್ ಸರಕಾರದ ನಿರ್ಲಕ್ಷ್ಯದ ವಿರುದ್ಧ ಶಾಸಕ ಕಾಮತ್ ಸುದ್ದಿಗೋಷ್ಟಿ
    • ರಾಜದೀಪ್ ಸರದೇಸಾಯಿ ಕ್ಯಾನ್ಸರಿಗೆ ಚಿಕಿತ್ಸೆ ಪಡೆಯುತ್ತಿದ್ದಾಗ ಆರೋಗ್ಯ ವಿಚಾರಿಸಿದ ಮೋದಿ!
    • ಹಳೆ ವಸ್ತು ಗುಜರಿಗೆ ನೀಡಿ ಕೇಂದ್ರಕ್ಕೆ ಸಿಕ್ಕಿದೆ 800 ಕೋಟಿ ರೂ!
    • ಏಳು ತಿಂಗಳ ಗರ್ಭಿಣಿಯಾಗಿದ್ದರೂ 145 ಕೆ.ಜಿ ತೂಕ ಎತ್ತಿ ಕಂಚು ಗೆದ್ದ ಪೊಲೀಸ್ ಕಾನ್ಸ್ಟೇಬಲ್!
    • ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
  • Popular Posts

    • 1
      ಸರಕಾರದಿಂದಲೇ ಟಿಪ್ಪು ಜಯಂತಿ ಆಚರಿಸಬೇಕೆಂಬ ಚರ್ಚೆಗೆ ವಿಜಯಾನಂದ ಕಾಶಪ್ಪನವರ್ ನಾಂದಿ!
    • 2
      ಏಂಬುಲೆನ್ಸ್ ಇಲ್ಲದೇ ಗೂಡ್ಸ್ ಟೆಂಪು! ಉಡುಪಿಯಲ್ಲೊಂದು ಮನಕಲಕುವ ಘಟನೆ!
    • 3
      ಕುಡುಕರ ಲಿವರ್ ಚಿಕಿತ್ಸೆಗೆ ಸರಕಾರ ಹಣ ನೀಡಲಿ ಎಂದ ಶಾಸಕರು!
    • 4
      ಸ್ಮೃತಿ ಹೊಸ ಇನ್ಸಿಂಗ್ಸ್ ಆರಂಭ!

  • Privacy Policy
  • Contact
© Tulunadu Infomedia.

Press enter/return to begin your search