• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ರಮ್ಜಾನ್ ನಲ್ಲಿ ಮುಸ್ಲಿಮರಿಗೆ ಕರೆಂಟ್ ತೆಗೆಯಬೇಡಿ ಎಂದ್ರು ಗೆಹ್ಲೋತ್!!

Hanumantha Kamath Posted On April 8, 2022
0


0
Shares
  • Share On Facebook
  • Tweet It

ಓಲೈಕೆ ರಾಜಕಾರಣ ಈಗ ರಾಜಸ್ಥಾನ ಮತ್ತು ದೆಹಲಿ ಸರಕಾರದ ಅಂಗಳದಲ್ಲಿಯೂ ಗರಿಕೆದರುತ್ತಿದೆ. ರಾಜಸ್ಥಾನದಲ್ಲಿ ರಮ್ಜಾನ್ ವಾಸದಲ್ಲಿ ಮುಸ್ಲಿಮರು ಹೆಚ್ಚಾಗಿ ವಾಸಿಸುವ ಪ್ರದೇಶಗಳಲ್ಲಿ ಯಾವುದೇ ಕಾರಣಕ್ಕೂ ವಿದ್ಯುತ್ ಸಂಪರ್ಕ ಕಡಿತ ಮಾಡಬಾರದು ಎನ್ನುವ ಸೂಚನೆಯನ್ನು ಅಲ್ಲಿನ ಮುಖ್ಯಮಂತ್ರಿ ಗೆಹ್ಲೋತ್ ನೀಡಿದ್ದಾರೆ. ಇನ್ನು ದೆಹಲಿಯಲ್ಲಿ ಮುಸ್ಲಿಮ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ರಮ್ಜಾನ್ ತಿಂಗಳಲ್ಲಿ ಎರಡು ಗಂಟೆ ಬೇಗ ಕೆಲಸದಿಂದ ಮನೆಗೆ ಹೋಗಬಹುದು ಎನ್ನುವ ವಿನಾಯಿತಿಯನ್ನು ಅಲ್ಲಿನ ಸರಕಾರ ನೀಡಿದೆ. ಇದು ಏನನ್ನು ಸೂಚಿಸುತ್ತದೆ. ನೀವು ಹೀಗೆ ಮಾಡುವುದರಿಂದ ಒಂದು ಮತದ ತುಷ್ಟೀಕರಣ ಮಾಡಬಹುದು, ಅವರ ಮತಗಳನ್ನು ಪಡೆಯಬಹುದು, ನಿಜ. ಆದರೆ ಒಂದು ಜಾತ್ಯಾತೀತ ಎಂದು ಕರೆಯಲ್ಪಡುವ ರಾಷ್ಟ್ರದಲ್ಲಿ ಕಾಂಗ್ರೆಸ್ ಹಾಗೂ ಆಪ್ ಪದೇ ಪದೇ ಹೀಗೆ ಮಾಡುತ್ತಾ ಇದ್ದರೆ ಮುಂದೊಂದು ದಿನ ಹಿಂದೂ ಸಮಾಜ ಎದ್ದರೆ ಆಗ ಅವರು ಕೋಮುವಾದಿಗಳೆನಿಸಿಕೊಳ್ಳುತ್ತಾರೆ. ನೀವು ಹಿಂದೂ ಧರ್ಮ ಮತ್ತು ಇಸ್ಲಾಂ ಮತಗಳ ನಡುವೆ ಕಂದಕ ತರುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದ್ದೀರಿ. ರಾಜಸ್ಥಾನದಲ್ಲಿ ಇತ್ತೀಚೆಗೆ ಅಲ್ಲಿನ ಸ್ಥಳೀಯ ಹಬ್ಬದ ಸಂದರ್ಭದಲ್ಲಿ ಗುಂಪು ಘರ್ಷಣೆಯಾಗಿ ಅದು ಕೋಮುಬಣ್ಣಕ್ಕೆ ತಿರುಗಿ ದೊಡ್ಡ ದೊಂಬಿಯೇ ನಡೆದು ಹೋಯಿತು. ಈಗ ಅಲ್ಲಿರುವುದು ಕಾಂಗ್ರೆಸ್ ಸರಕಾರ. ಅವರು ಮುಸ್ಲಿಮರಿಗೆ ವಿದ್ಯುತ್ ಕಟ್ ಇಲ್ಲ ಎನ್ನುವುದನ್ನು ಹೇಳುತ್ತಿರುವಾಗ ಹಿಂದೂ-ಮುಸ್ಲಿಂ ಗಲಭೆಯಾದರೆ ಯಾರ ಕಡೆಗೆ ತಿರುಗುತ್ತಾರೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಇನ್ನು ದೆಹಲಿಯಲ್ಲಿ ಆಪ್ ಸರಕಾರ ಮುಸ್ಲಿಮರನ್ನು ಎರಡು ಗಂಟೆ ಬೇಗ ಮನೆಗೆ ಕಳುಹಿಸಿ ರೆಸ್ಟ್ ಮಾಡಲು ಹೇಳುತ್ತದೆ ಎಂದರೆ ನವರಾತ್ರಿಯೂ ಹಿಂದೂಗಳಲ್ಲಿ ಅನೇಕರು ಉಪವಾಸ ಮಾಡುತ್ತಾರೆ. ಅವರಿಗೆ ವಿನಾಯಿತಿ ಕೊಡಲು ಒಪ್ಪುತ್ತಾ?

ಕರ್ನಾಟಕದಲ್ಲಿ ಈಗ ಅನೇಕರು ಹೇಳಬಹುದು. ಇದು ಅತಿಯಾಯಿತು ಎನ್ನಬಹುದು. ಆದರೆ ಶುರುವಾದದ್ದು ಎಲ್ಲಿಂದ? ಹಿಜಾಬ್ ನಿಂದ. ಆ ಮುಸ್ಲಿಂ ಹೆಣ್ಣುಮಕ್ಕಳು ನಿಯಮ ಒಪ್ಪಿದರೆ ಮುಗಿಯುತ್ತಿತ್ತು. ಆದರೆ ನಂತರ ಹೈಕೋರ್ಟ್, ಆದೇಶ, ಕರ್ನಾಟಕ ಬಂದ್ ಇಲ್ಲಿಯ ತನಕ ಇದು ಮುಸ್ಲಿಮರ ಕೈಯಲ್ಲಿಯೇ ಇತ್ತು. ನಂತರ ಹಿಂದೂಗಳು ಎಚ್ಚರಗೊಂಡರು. ದೇವಸ್ಥಾನಗಳ ಜಾತ್ರೆಯಲ್ಲಿ ಮುಸ್ಲಿಮರ ವ್ಯಾಪಾರಕ್ಕೆ ನಿಷೇಧದಿಂದ ಶುರುವಾದದ್ದು ಆಜಾನ್ ತನಕ ಬಂದಿದೆ. ಹಿಂದೂಗಳ ಎಲ್ಲ ಹೋರಾಟದ ಹಿಂದೆ ಒಂದೋ ಕಾನೂನಿನ ಬೆಂಬಲ ಇದೆ ಅಥವಾ ವೈಜ್ಞಾನಿಕ ತಳಹದಿ ಇದೆ. ಎಲ್ಲದಕ್ಕಿಂತ ಹೆಚ್ಚಾಗಿ ಪದೇ ಪದೇ ಕಾಂಗ್ರೆಸ್ ಮಾಡುತ್ತಿದ್ದ ಒಲೈಕೆ ರಾಜಕಾರಣದ ವಿರುದ್ಧದ ಆಕ್ರೋಶ ಇದೆ. ಯಾಕೆ ಎಲ್ಲಾ ರಾಜಕೀಯ ಪಕ್ಷಗಳು ಎಲ್ಲರನ್ನು ಒಂದೇ ದೃಷ್ಟಿಯಿಂದ ನೋಡುವುದಿಲ್ಲ. ಯಾಕೆಂದರೆ ಹಿಂದೂಗಳನ್ನು ಒಡೆಯುವುದು ಸುಲಭ. ನಾವು ನೂರು ಜಾತಿ, ಅದರೊಳಗೆ ಅಸಂಖ್ಯಾತ ಉಪಜಾತಿಗಳಾಗಿ ನಮ್ಮ ನಮ್ಮ ನಡುವೆ ಬೇಲಿ ಹಾಕಿ ಬದುಕುತ್ತಿದ್ದೇವೆ. ಆದ್ದರಿಂದ ಹಿಂದೂಗಳ ಮತಬ್ಯಾಂಕ್ ಎಂದು ಇಲ್ಲಿಯ ತನಕ ಏನೂ ಸೃಷ್ಟಿಯಾಗಿಲ್ಲ. ಈಗ ಏನಿದ್ದರೂ ಒಕ್ಕಲಿಗರ ವೋಟ್ ಬ್ಯಾಂಕ್, ಲಿಂಗಾಯತರ, ಕುರುಬರ, ಪರಿಶಿಷ್ಟ ಜಾತಿ, ಪಂಗಡ ಎಂದು ನೋಡಲಾಗುತ್ತದೆ. ಒಬ್ಬ ಹಿಂದೂ ಅಭ್ಯರ್ಥಿ ಚುನಾವಣೆಗೆ ನಿಂತರೆ ಅವನ ವೋಟ್ ಪರ್ಸೆಂಟೆಜ್ ಶುರುವಾಗುವುದು ಅವನ ಜಾತಿಯ ಅವನ ಹಿತೈಷಿಗಳು ಎಷ್ಟಿದ್ದಾರೆ ಎನ್ನುವುದರ ಮೇಲೆ ಅವಲಂಬಿತವಾಗಿದೆ. ಅದೇ ಮುಸ್ಲಿಮ್ ಅಭ್ಯರ್ಥಿಗೆ ಅವನ ಸಮುದಾಯದ ಮತಗಳು ಆ ಕ್ಷೇತ್ರದಲ್ಲಿ 15% ಇದ್ದರೆ ಕನಿಷ್ಟ 13% ಎಂದು ಹಿಡಿದುಕೊಂಡರೂ ಅದು ಪ್ಲಸ್ ಪಾಯಿಂಟ್. ಮುಸ್ಲಿಮರ ಮತಗಳು ಕಾಂಗ್ರೆಸ್ಸಿಗೆ ಅಥವಾ ಬಿಜೆಪಿಯೇತರರಿಗೆ ಸಿಗುತ್ತದೆ. ಆದರೆ ಹಿಂದೂಗಳ ಮತ ಒಂದಿಷ್ಟು ಭಾರತೀಯ ಜನತಾ ಪಾರ್ಟಿ, ಒಂದಿಷ್ಟು ಕಾಂಗ್ರೆಸ್, ಒಂದಿಷ್ಟು ಜಾತ್ಯಾತೀತ ಜನತಾದಳ, ಒಂದಿಷ್ಟು ಆಪ್ ಹೀಗೆ ಹಂಚಿಹೋಗುತ್ತದೆ. ಒಬ್ಬಳು ಮುಸ್ಲಿಂ ಯುವತಿ ನೂರಾರು ಹಿಂದೂ ಯುವಕರ ಎದುರು ಅಲ್ಲಾ ಹೋ ಅಕ್ಬರ್ ಎಂದು ಬೊಬ್ಬೆ ಹೊಡೆದು ಹೋದರೆ ಅವಳಿಗೆ ಹಣ, ವಸ್ತುಗಳು, ಶಹಭಾಷ್ ಗಿರಿ ಎಲ್ಲವೂ ಸಿಗುತ್ತದೆ. ಕೊನೆಗೆ ಅಂತರಾಷ್ಟ್ರೀಯ ಭಯೋತ್ಪಾದನೆ ಸಂಘಟನೆಯ ಮುಖ್ಯಸ್ಥರೇ ವಿಡಿಯೋ ಮಾಡಿ ಹೊಗಳುತ್ತಾರೆ. ಅಂದರೆ ಪ್ರಪಂಚದ ಯಾವುದೋ ಮೂಲೆಯಲ್ಲಿ ಕುಳಿತ ಉಗ್ರರು ಭಾರತದ ವಿರುದ್ಧ ಅಷ್ಟು ಕೋಪ ಹೊರಗೆ ಹಾಕುತ್ತಾರೆ ಎಂದರೆ ಭಾರತದಲ್ಲಿ ಬಾಲ ಬಿಚ್ಚಿ ಎಂದು ಮುಸ್ಲಿಂ ಸಂಘಟನೆಗಳಿಗೆ ಹಣ ಬರುತ್ತಿಲ್ಲ ಎಂದು ಯಾವ ಆಧಾರದ ಮೇಲೆ ನಂಬುವುದು? ಅದೇ ಒಬ್ಬ ಹಿಂದೂ ಯುವತಿ ಜೈ ಶ್ರೀರಾಮ್ ಹೇಳಿ ಅವಳಿಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥರು ಹೊಗಳಿದರೆ ಆಗ ಅವಳು ಕೋಮುವಾದಿ ಎಂದು ಇದೇ ಕಾಂಗ್ರೆಸ್ ಎನ್ನುತ್ತಿತ್ತು. ದೇಶದಲ್ಲಿ ಅಭಿವೃದ್ಧಿಯ ವಿಚಾರವೇ ಚರ್ಚೆಯಾಗಬೇಕು ನಿಜ, ಹಾಗೆಂದು ಧರ್ಮ ಇಲ್ಲದೇ ಯಾವುದೂ ಇರಲ್ಲ. ಇನ್ನು ಧರ್ಮ ಬಿಟ್ಟು ಈ ದೇಶದ ನೆಲಕ್ಕೆ ಅಸ್ತಿತ್ವ ಇಲ್ಲ. ಆದರೆ ಹೊರಗಿನವರಿಗೆ ರತ್ನಕಂಬಳಿ ಹಾಸಿದ ನಮ್ಮವರಿಗೆ ನಮ್ಮದೇ ಸಂಸ್ಕೃತಿ ಮರೆತು ಹೋಗಿರುವುದು ಈಗ ನೆನಪಿಸುವ ಕಾರ್ಯ ಆಗುತ್ತಿದೆ, ಅಷ್ಟೇ!

0
Shares
  • Share On Facebook
  • Tweet It




Trending Now
ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
Hanumantha Kamath October 6, 2025
ನಿಮ್ಮ ಮಗು ಕೆಮ್ಮುತ್ತಿದ್ದರೆ ಕಾಫ್ ಸಿರಪ್ ನೀಡುವ ಮೊದಲು ಎಚ್ಚರ!
Hanumantha Kamath October 6, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರ ಮೇಲೆ ಪಾದರಕ್ಷೆ ಎಸೆದ ವಕೀಲ ಬಂಧನ
    • ನಿಮ್ಮ ಮಗು ಕೆಮ್ಮುತ್ತಿದ್ದರೆ ಕಾಫ್ ಸಿರಪ್ ನೀಡುವ ಮೊದಲು ಎಚ್ಚರ!
    • "ಒಂದು ಶೋಗಾಗಿ ಕೈಕಾಲು ಹಿಡಿಯುತ್ತಿದ್ದ ಕಾಲದಿಂದ..." ರಿಷಬ್ ಶೆಟ್ಟಿ 2016 ರ ಘಟನೆಯನ್ನು ನೆನಪಿಸಿಕೊಂಡದ್ದು ಯಾಕೆ?
    • ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಕಸಾಯಿಖಾನೆ ಮುಟ್ಟುಗೋಲು ಹಾಕಿದ ಪ್ರಥಮ ಪ್ರಕರಣ ದಾಖಲು - ಎಸ್ಪಿ
    • ಗೆದ್ದರೂ ಟ್ರೋಫಿ ಪಡೆಯದೇ ದಿಟ್ಟ ಉತ್ತರ ನೀಡಿದ ಭಾರತೀಯ ತಂಡಕ್ಕೆ ಭೇಷ್!
    • ಕೇವಲ ₹100 ಲಂಚದ ಪ್ರಕರಣದಲ್ಲಿ 39 ವರ್ಷಗಳ ಬಳಿಕ ನಿರ್ದೋಷಿ ಘೋಷಣೆ!
    • ನಮ್ಮ ಜಿಲ್ಲೆಗೆ ಕಳುಹಿಸಬೇಡಿ, ಬೇಕಾದರೆ ಕಾಡಿಗೆ ಕಳುಹಿಸಿ ಎಂದು ರಾಯಚೂರಿನಲ್ಲಿ ತಿಮರೋಡಿ ವಿರುದ್ಧ ಪ್ರತಿಭಟನೆ!
    • ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸರ್ಪ ಸಂಸ್ಕಾರ: 6 ತಿಂಗಳಲ್ಲಿ ಕತ್ರೀನಾ ಕೈಪ್ ಸಂತಾನ ಭಾಗ್ಯ!
    • ಪ್ರಧಾನ ಮಂತ್ರಿಯವರ ನಿವಾಸದ ಮುಂಭಾಗದಲ್ಲಿಯೂ ಸಹ ಗುಂಡಿಗಳು ಇವೆ- ಡಿಸಿಎಂ ಡಿಕೆಶಿ.
    • ಹಿಂದೂ ದೇವರ ಹಾಡನ್ನು ಹಾಡಿದ್ದ ಸುಹಾನಾ ತಮ್ಮ ಭಾವಿ ಪತಿಯ ಬಗ್ಗೆ ಹೇಳಿದ್ದಾರೆ! ಆ ಹಿಂದೂ ಯುವಕ ಯಾರು ಗೊತ್ತಾ!

  • Privacy Policy
  • Contact
© Tulunadu Infomedia.

Press enter/return to begin your search