• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
Home » Featured ಅಭಿಪ್ರಾಯ ಸುದ್ದಿ 

ಹಿಂದೂಗಳ ಜಾಗೃತಿ ಪ್ರದರ್ಶನ ಅತಿರೇಕಕ್ಕೆ ಹೋದರೆ ಅನುಕಂಪಕ್ಕೆ ತಿರುಗಲಿದೆ!!

Hanumantha Kamath Posted On April 12, 2022
0


0
Shares
  • Share On Facebook
  • Tweet It

ಧಾರವಾಡದ ದೇವಸ್ಥಾನದ ಹೊರಗೆ ಕಲ್ಲಂಗಡಿ ಹಣ್ಣುಗಳನ್ನು ಮಾರುತ್ತಿದ್ದವನ ಹಣ್ಣುಗಳನ್ನು ನಾಶ ಮಾಡಿರುವ ಫೋಟೋಗಳು ಎಲ್ಲಾ ಕಡೆ ವೈರಲ್ ಆಗುತ್ತಿವೆ. ಶ್ರೀರಾಮಸೇನೆ ಇದನ್ನು ಮಾಡಿದ ನಂತರ ಮುಖ್ಯಮಂತ್ರಿಗಳು ಕಿಡಿಗೇಡಿಗಳನ್ನು ಬಿಡುವ ವಿಷಯವೇ ಇಲ್ಲ ಎನ್ನುತ್ತಿದ್ದಾರೆ. ಇದನ್ನು ಹತ್ತಿಕ್ಕಲು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ. ಅವರು ಉನ್ನತ ಪೊಲೀಸ್ ಅಧಿಕಾರಿಗಳ ಸಭೆ ಕರೆದಿದ್ದಾರೆ. ಎಲ್ಲ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಿಗೆ ತಮ್ಮ ಜಿಲ್ಲೆಯಲ್ಲಿ ಇಂತಹ ಘಟನೆಗಳನ್ನು ಹತ್ತಿಕ್ಕಲು ಆದೇಶ ನೀಡಿದ್ದಾರೆ. ಅಲ್ಲಿಗೆ ಪೊಲೀಸರು ಆಕ್ಟಿವ್ ಆಗಿದ್ದಾರೆ. ಧಾರವಾಡದಲ್ಲಿ ಪೊಲೀಸರು ಶ್ರೀರಾಮಸೇನೆಯ ಮುಖಂಡರನ್ನು ಬಂಧಿಸಿದ್ದಾರೆ. ಈಗ ಶ್ರೀರಾಮಸೇನೆಯ ಕಾರ್ಯಕರ್ತರು ರಾಜ್ಯ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅವರನ್ನು ಹೇಗೆ ಸಮಾಧಾನಪಡಿಸುವುದು ಎಂದು ಸರಕಾರಕ್ಕೆ ಗೊತ್ತಾಗುತ್ತಿಲ್ಲ. ಮೇಲ್ನೋಟಕ್ಕೆ ಶ್ರೀರಾಮಸೇನೆ ಸಂಘಪರಿವಾರದ ನೇರ ಅಡಿಯಲ್ಲಿ ಬರುವುದಿಲ್ಲ. ಬಜರಂಗದಳದವರಿಗೆ ಈ ಧರ್ಮ ಸಮರದಲ್ಲಿ ಕ್ರೆಡಿಟ್ ಜಾಸ್ತಿ ಹೋಗುತ್ತದೋ ಎಂದು ಜಿದ್ದಿಗೆ ಬಿದ್ದಿರುವ ಶ್ರೀರಾಮಸೇನೆ ತಾನು ಒಂದು ಹೆಜ್ಜೆ ಮುಂದೆ ಹೋಗಿ ತಲವಾರುಗಳನ್ನು ಬಹಿರಂಗ ವೇದಿಕೆಯಲ್ಲಿ ಪ್ರದರ್ಶಿಸಿದೆ. ಬಜರಂಗದಳಕ್ಕೆ ಆದರೂ ಸಂಘದಿಂದ ಕೇಳುವವರು ಎಂದು ಇದ್ದಾರೆ. ಶ್ರೀರಾಮಸೇನೆಗೆ ಪ್ರಮೋದ್ ಮುತಾಲಿಕ್ ಅವರೇ ಸುಪ್ರೀಂ. ಅವರು ಈ ಯುವಕರಿಗಿಂತ ಹೆಚ್ಚು ರೆಬೆಲ್. ಆದ್ದರಿಂದ ಕೇಸರಿ ಸಮರಕ್ಕೆ ಕಹಳೆ ಊದಿದಂತೆ ಅವರು ಹೊರಗೆ ಬಂದಿದ್ದಾರೆ. ಆಗಲೇ ನಿಜವಾದ ಅರ್ಥದಲ್ಲಿ ಟ್ರಾಕ್ ತಪ್ಪಿದೆ ಎಂದು ಮೇಲಿನವರಿಗೆ ಅರ್ಥವಾಗಿರುವುದು. ಬಜರಂಗದಳ ಆದರೆ ನಿಲ್ಲಿಸಿ ಎಂದು ಜೋರು ಮಾಡಿದರೆ ನಿಲ್ಲಿಸಬಹುದು. ಆದರೆ ತಮ್ಮವರೊಂದಿಗೆ ಸ್ಪರ್ಧೆಗೆ ಬಿದ್ದಿರುವ ಶ್ರೀರಾಮಸೇನೆಯನ್ನು ನಿಲ್ಲಿಸಲು ಕಷ್ಟಸಾಧ್ಯ. ಅದಕ್ಕೆ ಈಗ ಭಾರತೀಯ ಜನತಾ ಪಾರ್ಟಿಯ ಸರಕಾರ ಪೊಲೀಸರ ಮೊರೆ ಹೋಗಿರುವುದು. ಅಲ್ಲಿಗೆ ಧರ್ಮ ಸಂಘರ್ಷ ಒಂದು ಹಂತಕ್ಕೆ ಮುಗಿಯುವ ಲಕ್ಷಣ ಕಾಣಿಸುತ್ತಿದೆ. ಈಗ ಶ್ರೀರಾಮಸೇನೆಯ ಮುಖಂಡರನ್ನು ಬಂಧಿಸಿ ಬಜರಂಗದಳ, ಹಿಂದೂ ಜಾಗರಣ ವೇದಿಕೆಗಳನ್ನು ಮಾತ್ರ ಹೊರಗೆ ಬಿಟ್ಟರೆ ಅದು ಮತ್ತೊಂದು ಸೈದ್ಧಾಂತಿಕ ಯುದ್ಧಕ್ಕೆ ಕಾರಣವಾಗುತ್ತದೆ. ಒಂದು ವೇಳೆ ಅದು ನಡೆದರೆ ಬಿಜೆಪಿ ಹಿಂದೂ ಸಂಘಟನೆಗಳಲ್ಲಿಯೇ ತಾರತಮ್ಯ ಮಾಡುತ್ತಿದೆ ಎನ್ನುವ ಅಭಿಪ್ರಾಯ ಜನಸಾಮಾನ್ಯರಲ್ಲಿ ಮೂಡುತ್ತದೆ. ಯಾಕೆಂದರೆ ಸಾಮಾನ್ಯ ನಾಗರಿಕನಿಗೆ ಹೊರಗಿನಿಂದ ನೋಡುವಾಗ ಎಲ್ಲವೂ ಕೇಸರಿಮಯವೇ. ಒಳಗಿನ ಹೋರಾಟ ಯಾರಿಗೂ ಕಾಣಿಸಲ್ಲ.

ಹಾಗಂತ ಕಲ್ಲಂಗಡಿ ಹಣ್ಣಿನ ವಿಷಯವನ್ನೇ ಇಟ್ಟುಕೊಂಡು ಇವರದ್ದು ಅತೀ ಆಯಿತು ಎಂದು ಹೇಳುವವರೂ ಇದ್ದಾರೆ. ಯಾಕೆಂದರೆ ನಾಶವಾಗುತ್ತಿರುವ ಕಲ್ಲಂಗಡಿ ಹಣ್ಣಿನ ಹೋಳುಗಳು ಮಹಿಳೆಯರಲ್ಲಿ, ಮಕ್ಕಳಲ್ಲಿ ಆ ಬಡಪಾಯಿ ವ್ಯಾಪಾರಿಯ ಬಗ್ಗೆ ಸಹಾನೂಭೂತಿಯನ್ನು ಉಂಟುಮಾಡುತ್ತದೆ. ಅವನದ್ದೇನು ತಪ್ಪಿದೆ, ಪಾಪ ಎನ್ನುವವರಿದ್ದಾರೆ. ಅದನ್ನು ಹಾಳು ಮಾಡುವುದರಿಂದ ಅವರಿಗೇನು ಸಿಕ್ಕಿತು ಎಂದು ಕೇಳುವವರು ಇದ್ದಾರೆ. ಆ ಕಲ್ಲಂಗಡಿ ವಿಷಯ ಖಂಡಿತವಾಗಿಯೂ ಭಾವನಾತ್ಮಕ ವಿಷಯ. ಆದರೆ ನಮ್ಮ ರಾಜ್ಯದಲ್ಲಿಯೂ ಅದಕ್ಕಿಂತಲೂ ಭಾವನಾತ್ಮಕ ವಿಷಯಗಳು ನಡೆದಿವೆ. ಶರತ್ ಮಡಿವಾಲರ ಹತ್ಯೆಯಾಗಿ ಅವರ ಹೆಣ ಆಸ್ಪತ್ರೆಯಲ್ಲಿ ಇದ್ದಾಗ ತಮ್ಮ ಕಾಂಗ್ರೆಸ್ ಸಮಾವೇಶಕ್ಕೆ ತೊಂದರೆಯಾಗುತ್ತದೆ ಎಂದು ಅದನ್ನು ಮುಚ್ಚಿಟ್ಟಿದ್ದು ಇದೇ ಕಾಂಗ್ರೆಸ್. ಗಂಗೊಳ್ಳಿಯಲ್ಲಿ ಮೀನುಗಾರ ಮಹಿಳೆಯರು ಗೋಹತ್ಯಾ ನಿಷೇಧದ ಪರ ಹೋರಾಟ ಮಾಡಿದಾಗ ಅವರ ಬಳಿ ಮೀನು ತೆಗೆದುಕೊಳ್ಳಬೇಡಿ ಎಂದು ಮತಾಂಧರು ಹೇಳಿದಾಗ ಮೌನವಾಗಿತ್ತು ಇದೇ ಕಾಂಗ್ರೆಸ್. ಮೂಡಬಿದಿರೆಯ ಪ್ರಶಾಂತ ಪೂಜಾರಿ ಮೂಲಭೂತವಾದಿಗಳಿಂದ ಹತ್ಯೆಯಾದಾಗ ಅವರ ಮನೆಗೆ ತೆರಳಲು ಹೆದರಿಕೆಯಾಗುತ್ತದೆ ಎಂದದ್ದು ಇದೇ ಕಾಂಗ್ರೆಸ್ಸಿನ ಆಗಿನ ಸಚಿವರು. ಅಂದರೆ ಹಿಂದೂಗಳ ಹತ್ಯೆಯಾದಾಗ ನಿಮಗೆ ಕನಿಕರ ಮೂಡುವುದಿಲ್ಲ. ಭಾವನೆಗಳು ಹೊರಗೆ ಬರುವುದಿಲ್ಲ. ಕಲ್ಲಂಗಡಿ ಮಾರುವವನದ್ದು ಮಾತ್ರ ಜೀವನ. ಅವನಿಗೆ ಆದದ್ದು ಮಾತ್ರ ನಷ್ಟ ಎಂದು ಅವನಿಗೆ ಹಣ ಕೊಡಲು ಹೋದ ಇದೇ ಕಾಂಗ್ರೆಸ್, ಜಾತ್ಯಾತೀತ ಜನತಾದಳದವರು ಹಿಂದೂಗಳ ಹತ್ಯೆಯಾದಾಗ ಯಾಕೆ ಬರುವುದಿಲ್ಲ. ಸಿಎಎ ಗಲಭೆಯಲ್ಲಿ ಪೊಲೀಸರ ಮೇಲೆ ಪೆಟ್ರೋಲ್ ಬಾಂಬ್ ಬಿಸಾಡಿ ದೊಂಬಿಗೆ ಕಾರಣರಾದವರನ್ನು ಪೊಲೀಸರು ಮಲಗಿಸಿದಾಗ ಅವರಿಗೆ ಹಣ ಕೊಡಲು ಗಡಿಬಿಡಿಯಲ್ಲಿ ಬಂದ ಜೆಡಿಎಸ್ ಹಿಂದೂಗಳು ಸತ್ತರೆ ಅಡ್ರೆಸ್ ಕೂಡ ಎಲ್ಲಿ ಎಂದು ಕೇಳುವುದಿಲ್ಲ. ಒಟ್ಟಿನಲ್ಲಿ ಈ ಗಲಭೆ ನಿಲ್ಲಲಿ ಎಂದು ಎಲ್ಲರೂ ಬಯಸುತ್ತಿರಬಹುದು. ಆದರೆ ಇಲ್ಲಿಯ ತನಕ ಹಿಂದೂ ಸಮಾಜದ ಮೇಲೆ ಆದ ಅನ್ಯಾಯವನ್ನು ಈ ಸಮಾಜ ಮರೆಯುವುದಿಲ್ಲ. ಗೋವುಗಳನ್ನು ಹಟ್ಟಿಯಿಂದ ತಲವಾರು ತೋರಿಸಿ ತೆಗೆದುಕೊಂಡದ್ದನ್ನು ಗೋಪ್ರೇಮಿಗಳು ಮರೆಯುವುದಿಲ್ಲ. ಎಲ್ಲವೂ ಜ್ಞಾಪಕದಲ್ಲಿರಲಿ. ಆದರೆ ಅತೀ ಪ್ರದರ್ಶನ ಅಗತ್ಯ ಇಲ್ಲ. ಹಿಂದೂಗಳು ಮುಸ್ಲಿಮರ ಬಳಿ ವ್ಯಾಪಾರ ಮಾಡಬೇಕಾ, ಬೇಡವಾ ಎಂದು ಸ್ವನಿರ್ಧಾರಿಸಲಿ. ಅದನ್ನು ಟಾಂಟಾಂ ಮಾಡಿಕೊಂಡು ಬರುವುದು ಬೇಡಾ.!!

0
Shares
  • Share On Facebook
  • Tweet It




Trending Now
ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
Hanumantha Kamath December 23, 2025
ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ತಿರುವನಂತಪುರಂ ಪಾಲಿಕೆಯ ಬಿಜೆಪಿ ಸದಸ್ಯ!
Hanumantha Kamath December 23, 2025
Leave A Reply

Leave a Reply Cancel reply

Your email address will not be published. Required fields are marked *

  • Recent Posts

    • ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
    • ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ತಿರುವನಂತಪುರಂ ಪಾಲಿಕೆಯ ಬಿಜೆಪಿ ಸದಸ್ಯ!
    • ಭಾರತ ಒಂದು ‘ಹಿಂದೂ ರಾಷ್ಟ್ರ’ – ಸಂವಿಧಾನಿಕ ಮಾನ್ಯತೆ ಅಗತ್ಯವಿಲ್ಲ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
    • ಸೋನಿಯಾ ಗಾಂಧಿ ಕುರಿತು ರೇವಂತ್ ರೆಡ್ಡಿ ಹೇಳಿಕೆ: ಬಿಜೆಪಿ ತೀವ್ರ ಟೀಕೆ
    • ಬಾಂಡ್ ರದ್ದಾದ ಬಳಿಕ ರಾಜಕೀಯ ಪಕ್ಷಗಳಿಗೆ ಬಂದ 3811 ಕೋಟಿಯಲ್ಲಿ ಬಿಜೆಪಿಯ ಪಾಲು 82%!
    • ಭಕ್ತಿಗೀತೆ ಹಾಡುತ್ತಿದ್ದ ಗಾಯಕಿಯ ಮೇಲೆ ದರ್ಪ! ಜಾತ್ಯಾತೀತ ಗೀತೆ ಹಾಡಲು ಒತ್ತಾಯ!
    • ರೈತರ ಮಕ್ಕಳನ್ನು ಮದುವೆಯಾಗುವ ಹೆಣ್ಮಕ್ಕಳಿಗೆ 10 ಲಕ್ಷ ನೀಡಿ - ಸರಕಾರಕ್ಕೆ ಶಾಸಕ ಆಗ್ರಹ!
    • ವಿಡಿಯೋ ಕಾಲ್ ನಲ್ಲಿ ನಿಶ್ಚಿತಾರ್ಥ-ಎಲ್ ಇಡಿ ಸ್ಕ್ರೀನ್ ಗೆ ಆರತಿ!
    • ಅಜಾನ್ ಚರ್ಚೆಯ ಸಂದರ್ಭದಲ್ಲಿ ದೀಪಾವಳಿ ಪಟಾಕಿ ವಿಷಯ ಎತ್ತಿದ ಸಚಿವ!
    • ಇಷ್ಟು ಚಿಕ್ಕ ವಯಸ್ಸಿಗೆ ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಕಾರ್ಯಾಧ್ಯಕ್ಷ ಪಟ್ಟ!
  • Popular Posts

    • 1
      ಶಾಲೆಗಳಲ್ಲಿ ಭಗವದ್ಗೀತೆ ಶ್ಲೋಕ ಪಠಣ ಕಡ್ಡಾಯಗೊಳಿಸಿ ಉತ್ತರಾಖಂಡ ಸಿಎಂ ಸೂಚನೆ!
    • 2
      ಸಂಸ್ಕೃತದಲ್ಲಿ ಪ್ರಮಾಣವಚನ ಸ್ವೀಕರಿಸಿದ ತಿರುವನಂತಪುರಂ ಪಾಲಿಕೆಯ ಬಿಜೆಪಿ ಸದಸ್ಯ!
    • 3
      ಭಾರತ ಒಂದು ‘ಹಿಂದೂ ರಾಷ್ಟ್ರ’ – ಸಂವಿಧಾನಿಕ ಮಾನ್ಯತೆ ಅಗತ್ಯವಿಲ್ಲ: ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
    • 4
      ಸೋನಿಯಾ ಗಾಂಧಿ ಕುರಿತು ರೇವಂತ್ ರೆಡ್ಡಿ ಹೇಳಿಕೆ: ಬಿಜೆಪಿ ತೀವ್ರ ಟೀಕೆ
    • 5
      ಬಾಂಡ್ ರದ್ದಾದ ಬಳಿಕ ರಾಜಕೀಯ ಪಕ್ಷಗಳಿಗೆ ಬಂದ 3811 ಕೋಟಿಯಲ್ಲಿ ಬಿಜೆಪಿಯ ಪಾಲು 82%!

  • Privacy Policy
  • Contact
© Tulunadu Infomedia.

Press enter/return to begin your search