ದೇವಾಲಯ ಕೆಡವಲು ಅಡ್ಡಬಂದವರ ಮನೆಗೆ ಬುಲ್ಡೋಜರ್!!
ಕಲ್ಲು ಬಿಸಾಡಿದವರ ಅಕ್ರಮ ಕಟ್ಟಡಗಳನ್ನು ಕೆಡವುದಕ್ಕೆ ಭಾರತೀಯ ಜನತಾ ಪಾರ್ಟಿ ಹಾಗೂ ಆಮ್ ಆದ್ಮಿ ಪಕ್ಷಗಳು ಬುಲ್ಡೋಜರ್ ಹಾಯಿಸಲು ತೊಡಗಿದಾಗ ತಮ್ಮ ಬಾಯಿ ಬಡಿದು ಬೊಬ್ಬೆ ಹಾಕುತ್ತಿದ್ದ ಎಡಪಂಥಿಯರು, ಮಮತಾ ಮತ್ತು ಕಾಂಗ್ರೆಸ್ ನಾಯಕರು ಈಗ ಏನು ಹೇಳುತ್ತಾರೆ ಎನ್ನುವುದೇ ವಿಷಯ. ನಾನು ನೇರವಾಗಿ ವಿಷಯಕ್ಕೆ ಬರುತ್ತೇನೆ. ರಾಜಸ್ಥಾನದಲ್ಲಿ ಅಲಾವರ ಎನ್ನುವ ಸ್ಥಳವಿದೆ. ಅಲ್ಲಿ ಮುನ್ನೂರು ವರ್ಷಗಳ ಹಳೆಯ ದೇವಸ್ಥಾನವಿತ್ತು. ಶಿವನ ದೇವಾಲಯ. ಸ್ಥಳೀಯರು ಅದನ್ನು ಬಹಳ ಭಯಭಕ್ತಿಗಳಿಂದ ಆರಾಧಿಸಿಕೊಂಡು ಬರುತ್ತಿದ್ದರು. ಮೊನ್ನೆ ಅಲ್ಲಿನ ಸರಕಾರ ಆ ದೇವಸ್ಥಾನ ಸಹಿತ ಒಟ್ಟು ಮೂರು ದೇವಾಲಯಗಳನ್ನು ಓಡೆಯಲು ಮುಂದಾಗಿದೆ. ಬುಲ್ಡೋಜರ್ ಬರುತ್ತಿದ್ದಂತೆ ಸ್ಥಳೀಯರು ಅಡ್ಡ ಬಂದಿದ್ದಾರೆ. ಯಾವುದೇ ಕಾರಣಕ್ಕೂ ದೇವಾಲಯ ಕೆಡವಲು ಬಿಡುವುದಿಲ್ಲ ಎಂದು ಪ್ರತಿಭಟನೆ ಮಾಡಿದ್ದಾರೆ. ನೀವು ದೇವಾಲಯ ಕೆಡವಲು ಅಡ್ಡ ಬಂದರೆ ಮೂರ್ತಿಯನ್ನು ಮುರಿದು ಚರಂಡಿಗೆ ಬಿಸಾಡುತ್ತೇವೆ ಎಂದು ಕೆಡವಲು ಬಂದವರು ಹೇಳಿದ್ದಾರೆ.
ಕೊನೆಗೆ ಆ ಶಿವ ದೇವಾಲಯವನ್ನು ಬುಲ್ಡೋಜರ್ ಬಳಸಿ ಕೆಡವಲಾಗಿದೆ. ಕೆಡವಲು ಬಂದವರು ಮೂರ್ತಿಯನ್ನು ತೆಗೆದುಕೊಂಡು ಹೋಗಿದ್ದಾರೆ. ಆ ಬಳಿಕ ಇನ್ನೆರಡು ದೇವಸ್ಥಾನಗಳನ್ನು ಕೂಡ ಕೆಡವಿ ಹೋಗಿದ್ದಾರೆ. ಇದು ಒಂದು ಹಂತ. ಇಷ್ಟೇ ಆಗಿದ್ರೆ ಅಲ್ಲಿರುವುದು ಕಾಂಗ್ರೆಸ್ ಸರಕಾರ, ಅವರಿಂದ ಅಲ್ಲಿನ ಜನ ಬೇರೆ ಏನೂ ನಿರೀಕ್ಷೆ ಮಾಡಲು ಸಾಧ್ಯವಿಲ್ಲ ಎಂದು ಅಂದುಕೊಳ್ಳಬಹುದು. ಆದರೆ ಅಲ್ಲಿನ ರಾಜ್ಯ ಸರಕಾರ ಒಂದು ಹೆಜ್ಜೆ ಮುಂದೆ ಹೋಗಿ ದೇವಸ್ಥಾನದ ಪರ ಪ್ರತಿಭಟನೆ ಮಾಡಿದವರ ಮನೆಗಳನ್ನು ಬುಲ್ಡೋಜರ್ ಬಳಸಿ ಕೆಡವಿಬಿಟ್ಟಿದೆ. ಹಾಗಾದರೆ ರಾಷ್ಟ್ರಾದ್ಯಂತ ಕಾಂಗ್ರೆಸ್ ನಿಲುವು ಏನು? ಹಿಂದೂ ದೇವಾಲಯಗಳನ್ನು ಕೆಡವುದು ಎನ್ನುವುದಾ? 300 ವರ್ಷಗಳ ಹಿಂದಿನ ದೇವಾಲಯ ಅನಧಿಕೃತ ಹೇಗಾಗುತ್ತದೆ? ಇನ್ನು ದೇವಾಲಯ ಉಳಿಸಲು ಪ್ರತಿಭಟಿಸಿದವರ ಮನೆಯನ್ನು ಇವರು ಕೆಡವಿದರಲ್ಲಾ? ಈಗ ಆ ಎಡಪಂಥಿಯರು, ಮಮತಾ ಹದಿನೈದು ದಿನಗಳ ನೋಟಿಸು ಕೊಟ್ಟಿದ್ದೀರಾ ಎಂದು ಯಾಕೆ ಕೇಳುವುದಿಲ್ಲ. ಹಾಗಾದರೆ ಮುಸ್ಲಿಂ ಗಲಭೆಕೋರರ ಮನೆಗಳನ್ನು ಕೆಡವಿದರೆ ಭಾತೃತ್ವ ಪ್ರೇಮ ಹುಟ್ಟುವ ಇವರಿಗೆ ದೇವಸ್ಥಾನಕ್ಕೆ ಹೋರಾಡಿದವರ ಮನೆಯನ್ನು ಕೆಡವಿದರೆ ಮಾತನಾಡಲು ಬಾಯಿ ಬರಲ್ವಾ? ಉತ್ತರ ಪ್ರದೇಶ, ಮಧ್ಯಪ್ರದೇಶ, ದೆಹಲಿಯಲ್ಲಿ ಏನು ಮಾಡಿದರೋ ಅದರ ವಿರುದ್ಧವಾಗಿ ಮುಸ್ಲಿಮರನ್ನು ಸಂತುಷ್ಟಗೊಳಿಸಲು ಕಾಂಗ್ರೆಸ್ ಕೈಗೊಂಡಿರುವ ನಿರ್ಧಾರ ಅವರಿಗೆ ರಾಷ್ಟ್ರಮಟ್ಟದಲ್ಲಿ ಹಿನ್ನಡೆ ಆಗುವುದು ನಿಜ!!
Leave A Reply