• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ರಾಹುಲ್ ಹೆಸರ ಮುಂದೆ ಗಾಂಧಿ, ಉದ್ಭವ್ ಮುಂದೆ ಠಾಕ್ರೆ ಶೋಭಿಸುವುದಿಲ್ಲ!!

Hanumantha Kamath Posted On April 28, 2022


  • Share On Facebook
  • Tweet It

ಯಾವಾಗ ಒಂದು ಪಕ್ಷ ತನ್ನ ಮೂಲ ಸಿದ್ಧಾಂತವನ್ನು ಮರೆಯುತ್ತದೆಯೋ ಆವತ್ತು ಆ ಪಕ್ಷ, ಸಂಘಟನೆಯ ಅವಸಾನ ಶುರುವಾಗುತ್ತದೆ. ಅದು ಶಿವಸೇನೆ ಇರಬಹುದು ಅಥವಾ ಕಾಂಗ್ರೆಸ್ ಇರಬಹುದು ಅಥವಾ ಸ್ವತ: ಭಾರತೀಯ ಜನತಾ ಪಾರ್ಟಿಯೇ ಇರಬಹುದು. ಈಗ ಮಹಾರಾಷ್ಟ್ರದಲ್ಲಿ ಶಿವಸೇನೆ ಅಷ್ಟೊಂದು ಬೃಹದಾಕಾರವಾಗಿ ಬೆಳೆಯಲು ಇದ್ದ ಕಾರಣವಾದರೂ ಏನು? ಹಿಂದೂತ್ವ ಮತ್ತು ಮರಾಠಿ ಅಸ್ಮಿತೆ. ಆದರೆ ಈಗ ಆಗುತ್ತಿರುವುದೇನು? ರಾಜ್ ಠಾಕ್ರೆ ಎಲ್ಲಿಯಾದರೂ ಮಿಂಚುತ್ತಾರೋ ಎನ್ನುವ ಭಯದಿಂದ ಮಹಾ ಸಿಎಂ  ಏಕಾಏಕಿ ಮುಸ್ಲಿಮರನ್ನು ಸೊಂಟದ ಮೇಲೆ ಕುಳ್ಳಿರಿಸಿ ಲಾಲಿ ಆಡಿಸುತ್ತಿದ್ದಾರೆ. ಆಜಾನ್ ಶಬ್ದ ಲೌಡ್ ಸ್ಪೀಕರ್ ನಿಂದ ಇಡೀ ರಸ್ತೆಗೆ ಕೇಳಿಸುವ ದೊಡ್ಡ ಧ್ವನಿಯಲ್ಲಿ ಇಡಲಾಗುತ್ತಿತ್ತೋ ಅದಕ್ಕೆ ಏನೂ ತೊಂದರೆ ಆಗದ ರೀತಿಯಲ್ಲಿ ನಿಯಮಗಳನ್ನು ಜಾರಿಗೆ ತರಲಾಗಿದೆ. ಆ ನಿಯಮಗಳನ್ನು ಇಲ್ಲಿ ಹೇಳುವುದೇ ವೇಸ್ಟ್. ಯಾಕೆಂದರೆ ಮಹಾರಾಷ್ಟ್ರದ ಮುಖ್ಯಮಂತ್ರಿ ಶಿವಸೇನೆಯದ್ದೋ ಅಥವಾ ಮುಸ್ಲಿಂ ಲೀಗಿನದ್ದೋ ಎಂದು ನಿಮಗೆ ಸಂಶಯ ಬರಬಹುದು. ಅಯೋಧ್ಯೆಯ ವಿವಾದಿತ ಕಟ್ಟಡವನ್ನು ಕರಸೇವಕರು ಧ್ವಂಸಗೊಳಿಸಿದಾಗ ಬಿಜೆಪಿಯವರು ಅದನ್ನು ಮಾಡಿದ್ದು ತಮ್ಮವರಲ್ಲ ಎಂದು ಹೇಳಲು ಒದ್ದಾಡುತ್ತಿದ್ದರು. ಉನ್ನತ ಬಿಜೆಪಿ ನಾಯಕರು ನಾವು ಧ್ವಂಸ ನಿಲ್ಲಿಸಲು ಪ್ರಯತ್ನ ಮಾಡುತ್ತಿದ್ವಿ ಎಂದು ಹೇಳಲು ಉಗುಳು ನುಂಗುತ್ತಿದ್ದಾಗ “ನಮ್ಮ ಶಿವಸೈನಿಕರೇ ಒಡೆದದ್ದು, ಏನಿವಾಗ?” ಎಂದು ಮುಂಬೈಯಲ್ಲಿ ಹುಲಿಯೊಂದು ಘರ್ಜಿಸಿತ್ತಲ್ಲ, ಅದರ ರಣಕೇಕೆಯನ್ನು ನೋಡಿ ಸ್ವತ: ಬಿಜೆಪಿಗರೇ ದಂಗಾಗಿದ್ದರು. ಬಾಬ್ರಿ ಮಸೀದಿಯನ್ನು ಹುಡಿಗೈಯುವುದರಲ್ಲಿ ಹಿಂದೆ ಮುಂದೆ ನೋಡುವುದು ಏನಿದೆ, ಅದು ನಮ್ಮ ಶ್ರೀರಾಮಚಂದ್ರನ ಜನ್ಮಸ್ಥಳ, ಅಲ್ಲಿ ಮಸೀದಿ ಇರುವುದನ್ನುಕಲ್ಪಿಸಲು ಆಗುತ್ತಾ, ಕೆಡವಿಬಿಟ್ವಿ ಅಷ್ಟೇ ಎಂದು ಬಾಳಾ ಸಾಹೇಬ್ ಠಾಕ್ರೆ ಹೇಳುತ್ತಿದ್ದರೆ ಅಲ್ಲಿಯೇ ಅಂಗಳದಲ್ಲಿ ಆಟವಾಡುತ್ತಿದ್ದ ಉದ್ಭವ ಠಾಕ್ರೆಗೆ ಆ ಸಿಡಿಲಬ್ಬರದ ಗರ್ಜನೆಯ ಗಾಳಿಯಾದರೂ ತಾಕಬೇಕಿತ್ತಲ್ಲ. ಕಾಶ್ಮೀರದಿಂದ ವಲಸೆ ಬಂದ ಹಿಂದೂ ಪಂಡಿತರು ಮಹಾರಾಷ್ಟ್ರದಲ್ಲಿ ಆಶ್ರಯ ಕೇಳಿ ಬಂದಾಗ ಅವರನ್ನು ತಮ್ಮ ಮನೆಯ ಸದಸ್ಯರಂತೆ ನೋಡಿದರಲ್ಲ ದೊಡ್ಡ ಠಾಕ್ರೆ ಆಗಲಾದರೂ ಈ ಉದ್ಭವ ಠಾಕ್ರೆಗೆ ತನ್ನ ತಂದೆ ನಿಜವಾದ ಅರ್ಥದಲ್ಲಿ ಸಿಂಹ ಎಂದು ಅನಿಸಬೇಕಿತ್ತಲ್ಲವೇ? ನಾವು ಹುಟ್ಟಿರುವುದೇ ಮಹಾರಾಷ್ಟ್ರದಲ್ಲಿ ನೈಜ ಹಿಂದೂ ಸರಕಾರವನ್ನು ರಚಿಸಲು ವಿನ: ಅಧಿಕಾರದಲ್ಲಿ ನಮ್ಮ ಮನೆಯ ಸದಸ್ಯರು ಯಾರು ಕೂಡ ವಿರಾಜಮಾನರಾಗುವುದಿಲ್ಲ ಎಂದು ಠಾಕ್ರೆ ಹೆಮ್ಮೆಯಿಂದ ಹೇಳುತ್ತಿದ್ದರಲ್ಲ, ಅದಾದರೂ ಉದ್ಭವ್ ಕಿವಿ ಸೋಂಕಿ ಹೋಗಿರಬೇಕಲ್ಲ. ಅದ್ಯಾವುದೂ ತಲೆಗೆ ಹೋಗಲಿಲ್ಲವೋ ಅಥವಾ ಅಧಿಕಾರದ ಬಗ್ಗೆ ಇದ್ದ ನಿಕೃಷ್ಟ ಮನೋಭಾವ ತಂದೆಯೊದಿಗೆ ಮುಗಿದು ಹೋಯಿತೋ ಎನ್ ಸಿಪಿ ಮತ್ತು ಕಾಂಗ್ರೆಸ್ ನೊಂದಿಗೆ ಉದ್ಭವ್ ಚೌಕಾಬಾರಾ ಆಡಲು ಕುಳಿತುಬಿಟ್ಟರು. ಹೇಗೆ ರಾಹುಲ್ ಹೆಸರಿನ ಮುಂದೆ ಗಾಂಧಿ ಹೆಸರು ಹಾಕಲು ರಾಷ್ಟ್ರೀಯವಾದಿಗಳಿಗೆ ಮನಸ್ಸಾಗಲ್ವೋ ಹಾಗೆ ಉದ್ಭವ್ ಮುಂದೆ ಠಾಕ್ರೆ ಸರ್ ನೇಮ್ ಕೂಡ ಶೋಭಿಸುವುದಿಲ್ಲ.
ಅಂತದ್ದೇ ಒಂದು ಸರಕಾರವನ್ನು ಈಗ ಕರ್ನಾಟಕದಲ್ಲಿ ನಾವು ನೋಡುತ್ತಿದ್ದೇವೆ. ಮುಸ್ಲಿಮ್ ಮತಾಂಧರು ಹುಬ್ಬಳ್ಳಿಯಲ್ಲಿ ಪೊಲೀಸರ ತಲೆ ಓಡೆದರಾ? ಹೌದು, ಪರಿಶೀಲಿಸುತ್ತೇವೆ. ಪೊಲೀಸ್ ವಾಹನಗಳನ್ನು ನಾಶಗೈದರಾ? ಹೌದು, ನೋಡುತ್ತೇವೆ. ದೇವಸ್ಥಾನಗಳಿಗೆ, ಆಸ್ಪತ್ರೆಗಳಿಗೆ, ಪೊಲೀಸ್ ಠಾಣೆಗಳಿಗೆ ಕಲ್ಲು ಬಿಸಾಡಿ, ಸಾರ್ವಜನಿಕ ಸ್ವತ್ತುಗಳನ್ನು ನಾಶ ಮಾಡಿದ್ದಾರಾ? ಹೌದು, ತಪ್ಪು ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ. ಹೀಗೆ ಇವರು ಹೇಳುತ್ತಾ ಇದ್ರೆ ಅಲ್ಲಿ ಮಧ್ಯಪ್ರದೇಶದ ಗೃಹ ಸಚಿವರು ಮಾತ್ರ ” ಅವರು ಹಾಗೆ ಮಾಡಿದ್ರೆ ನಾವು ಹೀಗೆ” ಎನ್ನುತ್ತಿದ್ದಾರೆ. ಇವರಿಗೆ ಯಾರ ಭಯ? ಉದ್ಭವಿಗೆ ಆದರೂ ಕಾಂಗ್ರೆಸ್ ಮತ್ತು ಎನ್ ಸಿಪಿ ಜೊತೆ ಸಂಸಾರ ಮಾಡಬೇಕು. ಅವರು ಮುಸ್ಲಿಮರು ಏನು ಮಾಡಿದರೂ ಸೈ ಎನ್ನುವಂತಹ ಪಕ್ಷಗಳು. ಒಂದು ವೇಳೆ ಮುಸ್ಲಿಮರು ಇನ್ನೂ ಗಟ್ಟಿಯಾಗಿ ಲೌಡ್ ಸ್ಪೀಕರ್ ಇಟ್ಟು ಆಜಾನ್ ಕೂಗಿದರೂ ಇರ್ಲಿ ಪಾಪ, ಅಷ್ಟೇನೂ ಯಾರಿಗೂ ತೊಂದರೆ ಆಗಿಲ್ಲ, ಮಹಾರಾಷ್ಟ್ರದ ಹೊರಗಿನ ರಾಜ್ಯಗಳಿಗೆ ಕೇಳಿಸಿಲ್ಲ ಎಂದು ಅಂತವರ ಪರವೇ ವಾದಿಸಬಹುದು. ಇಲ್ಲಿ ಹೇಗೆ, ಸಿದ್ದು ಮೊನ್ನೆ ಅವರ ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿ ನಾವು ಅಲ್ಪಸಂಖ್ಯಾತರ ಪರ ನಿಲ್ಲಲ್ಲು ಹಿಂದೆ ಮುಂದೆ ನೋಡಬಾರದು ಎಂದು ಬಹಿರಂಗವಾಗಿ ಹೇಳಿ ಮತಾಂಧರು ಏನು ಮಾಡಿದರೂ ನಾವು ಅವರನ್ನು ಬೇಶರತ್ತಾಗಿ ಬೆಂಬಲಿಸಬೇಕು ಎಂದು ಕರೆ ಕೊಟ್ಟಿದ್ದರು. ಇನ್ನು ಕೆಲವು ಕಾಲದ ಬಳಿಕ ಶಿವಸೇನೆ ಹೆಸರಿಗೆ ಮಾತ್ರ ಶಿವನನ್ನು ಇಟ್ಟುಕೊಂಡು ಸೇನೆಯನ್ನು ಕಾಂಗ್ರೆಸ್ ಮತ್ತು ಎನ್ ಸಿಪಿಯ ಚರಣಗಳಲ್ಲಿ ಒಪ್ಪಿಸಲಿದೆ. ಅದರ ಅರಿವಿರುವುದರಿಂದ ರಾಜಠಾಕ್ರೆ ತನ್ನ ಸೋದರ ಸಂಬಂಧಿಯನ್ನು ಎಚ್ಚರಿಸುವ ಕಾರ್ಯ ಮಾಡುತ್ತಿದ್ದಾರೆ. ಒಂದು ಧರ್ಮದ ಪರ ಮತ್ತು ಇನ್ನೊಂದು ಕೋಮಿನ ಪರ ಇರುವ ಪಕ್ಷಗಳು ಹೇಗೆ ಹೊಂದಾಣಿಕೆ ರಾಜಕಾರಣ ಮಾಡಿಕೊಂಡು ರಾಜ್ಯವನ್ನು ಮುಂದುವರೆಸಿಕೊಂಡು ಹೋಗುತ್ತವೆ ಎನ್ನುವುದನ್ನು ಅಲ್ಲಿನ ಜನ ಗಮನಿಸುತ್ತಿದ್ದಾರೆ. ಇಂತಹ ಸಮಯದಲ್ಲಿಯೇ ರಾಜ್ ಠಾಕ್ರೆ ಮಹಾರಾಷ್ಟ್ರ ಸರಕಾರ ಮುಖವಾಡ ಬಯಲು ಮಾಡಿದ್ದಾರೆ. ಶಿವಸೇನೆ ಚೆಕ್ ಅಂಡ್ ಮೇಟ್ ಆಗಿದೆ!

  • Share On Facebook
  • Tweet It


- Advertisement -


Trending Now
ತಾಂಟೆರೆ ಬಾಯಿಂದ ವೈಲೆಂಟ್ ಡೈಲಾಗ್; ಇದು ಸಿನೆಮಾ ಅಲ್ಲ ವಾಸ್ತವ!
Hanumantha Kamath May 28, 2022
ಶಾಸಕರು ಮಿತ್ರರಾದರೆ ಸಮಸ್ಯೆಗಳ ಬಗ್ಗೆ ಬರೆಯಬಾರದಾ? ಮಾತನಾಡಬಾರದಾ?
Hanumantha Kamath May 27, 2022
Leave A Reply

  • Recent Posts

    • ತಾಂಟೆರೆ ಬಾಯಿಂದ ವೈಲೆಂಟ್ ಡೈಲಾಗ್; ಇದು ಸಿನೆಮಾ ಅಲ್ಲ ವಾಸ್ತವ!
    • ಶಾಸಕರು ಮಿತ್ರರಾದರೆ ಸಮಸ್ಯೆಗಳ ಬಗ್ಗೆ ಬರೆಯಬಾರದಾ? ಮಾತನಾಡಬಾರದಾ?
    • ಕೇರಳದಲ್ಲಿ ನಿಕ್ಸೇನಾ ಮತಾಂಧರ ವಿರುದ್ಧ ತೆಗೆದುಕೊಂಡ ನಿರ್ಧಾರ ಚಿಕ್ಕದ್ದಲ್ಲ!!
    • ಬಾಲಕೃಷ್ಣ ಗೌಡರು ಇಲ್ಲಿಯೇ ಮುಂದುವರೆಯುತ್ತಾರೆ ಎನ್ನುವುದೇ ಅಧ್ಯಯನ ವಿಷಯ!!
    • ಗುಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡುತ್ತಿದ್ದಾರೆ ಎಂದರೆ ಅದು ಮಂಗಳೂರು ಪಾಲಿಕೆ ಎಂದೇ ಅರ್ಥ!!
    • ಈ-ಖಾತಾ ನಂಬರ್ ತೆಗೆದುಕೊಂಡಿರಿ, ಅಗತ್ಯ ಬೀಳಬಹುದು!
    • ಬ್ಯಾರಿಗಳ ವೋಟ್ ಬೇಡಾ ಎಂದು ಹೇಳಬಲ್ಲ ಮುಂದಿನ ಶಾಸಕ ಯಾರು?
    • 15 ವರ್ಷಗಳ ಹಿಂದೆನೆ ಜ್ಞಾನವಾಪಿ ಕೊಳದಲ್ಲಿ ಶಿವಲಿಂಗದ ಬಗ್ಗೆ ಭೈರಪ್ಪ ಬರೆದಿದ್ದರು!!
    • ಮುಸ್ಲಿಮರ ಓಲೈಕೆಗೆ 1991 ರಲ್ಲಿ "ಮಸೀದಿ ಉಳಿಸುವ" ಕಾಯ್ದೆ ಕಾಂಗ್ರೆಸ್ ತಂದಿತ್ತು!!
    • ಎಸ್ ಡಿಪಿಐ, ಪಿಎಫ್ ಐ ಬ್ಯಾನ್ ಮಾಡುವುದು ತುಂಬಾ ಕಷ್ಟವೇ ಶಾ?
  • Popular Posts

    • 1
      ತಾಂಟೆರೆ ಬಾಯಿಂದ ವೈಲೆಂಟ್ ಡೈಲಾಗ್; ಇದು ಸಿನೆಮಾ ಅಲ್ಲ ವಾಸ್ತವ!
    • 2
      ಶಾಸಕರು ಮಿತ್ರರಾದರೆ ಸಮಸ್ಯೆಗಳ ಬಗ್ಗೆ ಬರೆಯಬಾರದಾ? ಮಾತನಾಡಬಾರದಾ?
    • 3
      ಕೇರಳದಲ್ಲಿ ನಿಕ್ಸೇನಾ ಮತಾಂಧರ ವಿರುದ್ಧ ತೆಗೆದುಕೊಂಡ ನಿರ್ಧಾರ ಚಿಕ್ಕದ್ದಲ್ಲ!!
    • 4
      ಬಾಲಕೃಷ್ಣ ಗೌಡರು ಇಲ್ಲಿಯೇ ಮುಂದುವರೆಯುತ್ತಾರೆ ಎನ್ನುವುದೇ ಅಧ್ಯಯನ ವಿಷಯ!!
    • 5
      ಗುಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡುತ್ತಿದ್ದಾರೆ ಎಂದರೆ ಅದು ಮಂಗಳೂರು ಪಾಲಿಕೆ ಎಂದೇ ಅರ್ಥ!!


  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
© Tulunadu Infomedia · Tech-enabled by Ananthapuri Technologies

Press enter/return to begin your search