• ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ
  • ಸುದ್ದಿ 
  • ಸಿನಿಮಾ
  • ಆರೋಗ್ಯ
  • ಅಭಿಪ್ರಾಯ
  • ಮನೋರಂಜನೆ

ನಾಲ್ಕು ವೋಟ್ ಹಾಕಿಸಲು ಆಗದ ಬಿಕೆಗೆ ಭಯೋತ್ಪಾದಕರು ಕಾಣಿಸ್ತಾರೆ!

Hanumantha Kamath Posted On May 12, 2022


  • Share On Facebook
  • Tweet It

ಗಾಂಧಿ ಕುಟುಂಬದ ಕಿಚನ್ ಕ್ಯಾಬಿನೆಟ್ ಸದಸ್ಯರಾಗಿರುವ ಬಿಕೆ ಹರಿಪ್ರಸಾದ್ ರಾಜ್ಯಸಭೆಯಲ್ಲಿ ಹಲವು ವರ್ಷಗಳ ತನಕ ಇದ್ದು, ಈಗ ಕರ್ನಾಟಕ ರಾಜ್ಯದಲ್ಲಿ ವಿಧಾನಪರಿಷತ್ ನಲ್ಲಿ ವಿಪಕ್ಷ ನಾಯಕರಾಗಿದ್ದಾರೆ. ನೇರವಾಗಿ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲದೇ, ಗಾಂಧಿಗಳಿಗೆ ಆಗಾಗ ವಿಟಾಮಿನ್ ಗಳನ್ನು ಪೂರೈಸುವ ನಿಷ್ಟ ಕಾಂಗ್ರೆಸ್ಸಿಗ ಬಿಕೆ. ಆಗಾಗ ರಾಷ್ಟ್ರೀಯ ಸ್ವಯಂ ಸೇವಕ ಸಂಘಕ್ಕೆ, ಹಿಂದೂ ಸಂಘಟನೆಗಳಿಗೆ ಬೈಯದೇ ಇದ್ದರೆ ಜನಪಥ್ 10 ರಲ್ಲಿ ಕುಳಿತಿರುವ ಗಾಂಧಿಗಳಿಗೆ ತಮ್ಮ ಅಸ್ತಿತ್ವ ಗೊತ್ತಾಗಲ್ಲ ಎನ್ನುವ ಅರಿವು ಬಿಕೆಗೆ ಇದೆ. ಆದ್ದರಿಂದ ಅವರು ಅವಕಾಶ ಸಿಕ್ಕಿದ ಕಡೆ ಗುಟುರು ಹಾಕುತ್ತಾ ಇರುತ್ತಾರೆ. ಅವರಿಗೆ ರಾಜ್ಯ ಕಾಂಗ್ರೆಸ್ಸಿನಲ್ಲಿ ಗಾಂಧಿ ಕುಟುಂಬದ ನಿಕಟವರ್ತಿ ಎನ್ನುವ ಒಂದೇ ಕಾರಣಕ್ಕೆ ಗೌರವ ಇದೆ ಹೊರತು ಜನನಾಯಕ ಎಂದು ಅಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಅವರಿಗಿಂತ ಬೂತ್ ಮಟ್ಟದ ನಾಯಕರು ಕೂಡ ಹೆಚ್ಚು ಮತ ಹಾಕಿಸಬಲ್ಲರು ಎನ್ನುವುದು ವಾಸ್ತವ ಸತ್ಯ. ಅಂತಹ ಬಿಕೆ ಈಗ ಮತ್ತೆ ಒಂದು ಕಳಪೆ ಹೇಳಿಕೆ ಕೊಟ್ಟು ಮತ್ತೆ ಸುದ್ದಿಯಲ್ಲಿದ್ದಾರೆ. ಅದೇನೆಂದರೆ ಆಜಾನ್ ಲೌಡ್ ಸ್ಪೀಕರ್ ಶಬ್ದ ಕಡಿಮೆ ಮಾಡಬೇಕು ಎಂದು ಹಿಂದೂ ಪರ ಸಂಘಟನೆಗಳು ವಿಶೇಷವಾಗಿ ಪ್ರಮೋದ್ ಮುತಾಲಿಕ್ ನೇತೃತ್ವದ ಶ್ರೀರಾಮ ಸೇನೆ ಹೋರಾಡಿತ್ತಲ್ಲ, ಅವರನ್ನು ಈ ಬಿಕೆ ಉಗ್ರರು ಎಂದು ಘೋಷಿಸಿದ್ದಾರೆ. ಅದನ್ನು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿಕೆಶಿವಕುಮಾರ್ ಸಮರ್ಥಿಸಿದ್ದಾರೆ. ಈಗ ವಿಷಯ ಇರುವುದು ಏನೆಂದರೆ ಹಿಂದೂ ಸಂಘಟನೆಗಳನ್ನು ಅಷ್ಟು ಸುಲಭವಾಗಿ ಉಗ್ರರು, ಭಯೋತ್ಪಾದಕರು ಎಂದು ಇವರು ಹಣೆಪಟ್ಟಿ ಕಟ್ಟುತ್ತಾರಲ್ಲ, ಅದೇ ಮುಸ್ಲಿಂ ಸಂಘಟನೆಗಳು ಪೊಲೀಸ್ ಸ್ಟೇಶನ್ನಿಗೆ ಕಲ್ಲು ಬಿಸಾಡಿದರೂ, ಪೊಲೀಸ್ ವಾಹನ ಜಖಂಗೊಳಿಸಿದರೂ, ತಮ್ಮದೇ ಪಕ್ಷದ ಶಾಸಕರ ಮನೆಗೆ ಬೆಂಕಿ ಹಚ್ಚಿದರೂ ಇವರು ಅವರಿಗೆ ಭಯೋತ್ಪಾದಕರು ಎಂದು ಹೇಳುವುದಿಲ್ಲ. ಆಗ ಇವರ ನಾಲಗೆ ಹೊರಳುವುದಿಲ್ಲ. ಬುದ್ಧಿ ಕೆಲಸ ಮಾಡುವುದಿಲ್ಲ. ಹಿಂದೂ ಸಂಘಟನೆಗಳು ದೇವಸ್ಥಾನಗಳಲ್ಲಿ ಭಜನೆ ಮಾಡಿದರೆ ಇವರಿಗೆ ಅವರು ಉಗ್ರರ ತರಹ ಕಾಣಿಸುತ್ತಾರೆ. ದೇವಸ್ಥಾನಗಳಲ್ಲಿ ಸುಪ್ರಭಾತ ಕೇಳಿಸಿದರೆ ಇವರಿಗೆ ಮೈಮೇಲೆ ದೆವ್ವ ಬಂದಂತೆ ಆಗುತ್ತದೆ. ಅದೇ ಮಸೀದಿಗಳ ಆಝಾನ್ ಇವರಿಗೆ ತೊಟ್ಟಿಲಲ್ಲಿ ಜೋಗುಳ ಹಾಡಿದಂತೆ ಕೇಳುತ್ತದೆ.
ಇನ್ನು ಡಿಕೆಶಿ ಡಿಜೆಹಳ್ಳಿ, ಕೆಜಿಹಳ್ಳಿಯಲ್ಲಿ ಗಲಾಟೆ ಮಾಡಿದವರನ್ನು ಬ್ರದರ್ಸ್ ಎಂದು ಕರೆದರು. ಒಂದು ಪಕ್ಷದ ರಾಜ್ಯಾಧ್ಯಕ್ಷರು ಒಂದು ಊರಿಗೆ ಬೆಂಕಿ ಹಚ್ಚಲು ಹೊರಟವರನ್ನು, ತಮ್ಮ ಪಕ್ಷದ ದಲಿತ ಶಾಸಕನ ಮನೆಗೆ ಬೆಂಕಿ ಹಚ್ಚಿದವರನ್ನು ಬ್ರದರ್ಸ್ ಎಂದು ಕರೆದರೆ ಏನಾಗುತ್ತದೆ? ಅವರಿಗೆ ಅಂತಹ ವಿಧ್ವಂಸಕ ಕೃತ್ಯಗಳನ್ನು ಇನ್ನಷ್ಟು ಮಾಡಲು ಧೈರ್ಯ ಬರುತ್ತದೆ. ಅದೇ ರೀತಿಯ ಘಟನೆ ಮಂಗಳೂರಿನಲ್ಲಿ ನಡೆದಿತ್ತಲ್ಲ. ಸಿಎಎ ವಿರುದ್ಧ ಪ್ರತಿಭಟನೆಗೆ ಇಳಿದವರು ಪೊಲೀಸ್ ಠಾಣೆಗೆ ಪೆಟ್ರೋಲ್ ಬಾಂಬ್ ಎಸೆಯಲು, ಆಯುಧಗಳ ಸಂಗ್ರಹ ಮಳಿಗೆಯ ಬಾಗಿಲು ಓಡೆಯಲು ಹೊರಟಾಗ ಬೇರೆ ದಾರಿಯಿಲ್ಲದೆ ಶೂಔಟ್ ಆಗಿತ್ತಲ್ಲ, ಆಗ ಸತ್ತ ಇಬ್ಬರ ಮನೆಗಳಿಗೆ ಹೋಗಿ ಪರಿಹಾರ ನೀಡಲು ಕಾಂಗ್ರೆಸ್ ಹೋಗಿತ್ತಲ್ಲ, ಬಿಜೆಪಿ ಸರಕಾರ ವಿರುದ್ಧ ವ್ಯರ್ಥ ಆರೋಪ ಮಾಡಿತ್ತಲ್ಲ, ಇದೆಲ್ಲವೂ ದುರುಳರಿಗೆ ಇನ್ನಷ್ಟು ಪ್ರೋತ್ಸಾಹ ನೀಡಿದಂತೆ ಆಗುತ್ತದೆ. ಇಂತಹ ಘಟನೆ ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಕೂಡ ನಡೆಯಿತ್ತಲ್ಲ. ಆಗಲೂ ಬಿಕೆ ಹಾಗೂ ಡಿಕೆ ಇಬ್ಬರೂ ಆ ಘಟನೆಗೆ ಕಾರಣರಾದವರನ್ನು ಭಯೋತ್ಪಾದಕರು ಎಂದಿಲ್ಲ. ಅದೇ ದೇವಸ್ಥಾನದಲ್ಲಿ ಭಜನೆ ಮಾಡಿದವರು ಇವರಿಗೆ ಭಯೋತ್ಪಾದಕರ ತರಹ ಕಾಣಿಸ್ತಾರಾ?

ಕಾಂಗ್ರೆಸ್ಸಿನ ಇದೇ ರೀತಿಯ ಮನಸ್ಥಿತಿಯಿಂದಲೇ ಅದು ಜನರಿಂದ ದೂರ ಆಗುತ್ತಿದೆ. ಹರಿಪ್ರಸಾದಿಗೆ ಜನರಿಂದ ಆಯ್ಕೆಯಾಗಿ ಗೊತ್ತಿಲ್ಲ. ಡಿಕೆಗೆ ಬಿಕೆಯನ್ನು ಬೆಂಬಲಿಸದೇ ಬೇರೆ ವಿಧಿಯಿಲ್ಲ. ಯಾಕೆಂದರೆ ಮುಂದಿನ ದಿನಗಳಲ್ಲಿ ಯಾವಾಗಲಾದರೂ ಪಕ್ಷ ಅಪ್ಪಿತಪ್ಪಿ ಅಧಿಕಾರಕ್ಕೆ ಬಂದರೆ ಸೋನಿಯಾ ಮನೆಯ ಗೇಟನ್ನು ಡಿಕೆಗಾಗಿ ಯಾರಾದರೂ ತೆರೆಯಬೇಕಾದರೆ ಆ ಸಾಮರ್ತ್ಯ ಇರುವುದು ಬಿಕೆಗೆ ಮಾತ್ರ. ಇಲ್ಲದೇ ಹೋದರೆ ಇಂತಹ ವಿಷಯಗಳಲ್ಲಿ ಡಿಕೆಶಿ ಬಹಳ ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದ್ದಾರೆ. ಆದರೆ ಅವರು ಎಷ್ಟೇ ಸಾಫ್ಟ್ ಹಿಂದೂತ್ವದ ಕಡೆ ವಾಲಿದರೂ, ಕೇಸರಿ ಶಾಲನ್ನು ಧರಿಸಿದರೂ ಅತ್ತ ಸಿದ್ದು ಇತ್ತ ಬಿಕೆ ಇಂತಹ ಹೇಳಿಕೆಯನ್ನು ಕೊಡುವ ಮೂಲಕ ಕಾಂಗ್ರೆಸ್ಸನ್ನು ಹಿಂದೂಗಳ ಕಡೆ ಸೆಳೆಯಲು ಡಿಕೆ ಮಾಡುವ ಅಷ್ಟೂ ಪ್ರಯತ್ನಕ್ಕೆ ಮತ್ತೆ ಲಿಂಬೆ ಹಣ್ಣು ಹಿಂಡುತ್ತಿದ್ದಾರೆ.

ಒಂದು ವೇಳೆ ಹಿಂದೂ ಸಂಘಟನೆಗಳು ಆಜಾನ್ ಶಬ್ದ ತಗ್ಗಿಸುವ ಹಿನ್ನಲೆಯಲ್ಲಿ ಮಸೀದಿಗಳಿಗೆ ಕಲ್ಲು ಹೊಡೆದರೆ ಆಗ ಇಂತಹ ಹೇಳಿಕೆ ಬಂದರೆ ಅದು ಬೇರೆ ವಿಷಯ. ಬಹುಶ: ಒಂದು ವೇಳೆ ಹಾಗೆ ಆಗಿದ್ದರೆ ಬಿಕೆ ಮತ್ತು ಡಿಕೆ ಹಿಂದೂ ಸಂಘಟನೆಗಳನ್ನು ತಕ್ಷಣ ಬ್ಯಾನ್ ಮಾಡಲು ಪ್ರತಿಭಟನೆಗೆ ಕುಳಿತಿದ್ದರೋ ಏನೋ? ಕೆಲವೊಮ್ಮೆ ರಾಜಕೀಯದಲ್ಲಿ ಚಲಾವಣೆಗೆ ಇರಲು ಹೇಳಿಕೆಗಳನ್ನು ಕೊಡುವ ಅವಶ್ಯಕತೆ ರಾಜಕಾರಣಿಗಳಿಗೆ ಇರುತ್ತದೆ. ಪ್ರಚಾರದಲ್ಲಿ ಇರದ ಜನಪ್ರತಿನಿಧಿ ಚಲಾವಣೆಯಲ್ಲಿ ಇಲ್ಲದ ನಾಣ್ಯದ ತರಹ ಜನ ಮರೆತುಬಿಡುತ್ತಾರೆ. ಆದರೆ ಹಾಗಂತ ಇಂತಹ ಹೇಳಿಕೆ ಕೊಡುವ ಮೊದಲು ಇವರು ಯೋಚಿಸುವುದಿಲ್ಲವೇ?

  • Share On Facebook
  • Tweet It


- Advertisement -


Trending Now
ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
Hanumantha Kamath May 5, 2025
ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
Hanumantha Kamath May 5, 2025
Leave A Reply

  • Recent Posts

    • ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!
    • ಕ್ಯಾನ್ಸರ್ ನಿಂದ ಚೇತರಿಸಿಕೊಂಡಿದ್ದ ತಾಯಿಗೆ ಮಗನ ಅಗಲುವಿಕೆಯ ಶಾಕ್!
    • ಬಾಂಗ್ಲಾ ಜೈಲಿನಿಂದ ಇಸ್ಕಾನ್ ಸಂತ ಚಿನ್ಮಯಿ ದಾಸ್ ಬಿಡುಗಡೆ, ಎಲ್ಲೆಡೆ ಹರ್ಷ!
    • ಹತ್ತನೇ ತರಗತಿ ದಕ್ಷಿಣ ಕನ್ನಡ ಪ್ರಥಮ, ಉಡುಪಿ ದ್ವಿತೀಯ, ಉತ್ತರ ಕನ್ನಡ ತೃತೀಯ!
    • ಹಾವೇರಿಯಲ್ಲಿ ಮಾರ್ಗ ಮಧ್ಯ ಬಸ್ ನಿಲ್ಲಿಸಿ ನಮಾಜ್ ಮಾಡಿದ ಚಾಲಕ!
    • ಪಾಕಿಸ್ತಾನದಲ್ಲಿ ಒಂದು ಲಕ್ಷಕ್ಕೆ ಸಮನಾಗಿರುವ ಒಬ್ಬ ವ್ಯಕ್ತಿಯನ್ನು ಹೊಡೆಯುತ್ತೇನೆ - ಲಾರೆನ್ಸ್ ಬಿಷ್ಣೋಯಿ
  • Popular Posts

    • 1
      ಮೇ 7 ರಂದು ರಾಜ್ಯಗಳಲ್ಲಿ ಅಣಕು ದಾಳಿ ರಕ್ಷಣಾ ಸಿದ್ಧತೆಗೆ ಕೇಂದ್ರ ಸೂಚನೆ!
    • 2
      ಸುಹಾಸ್ ಮೇಲೆ 5 ಕೇಸ್ ಇದ್ದ ಕಾರಣ ಆತನ ಮನೆಗೆ ಹೋಗಿಲ್ಲ - ಗೃಹ ಸಚಿವ
    • 3
      ಮಂಗಳೂರಿನಲ್ಲಿ ನೀಟ್ ಪರೀಕ್ಷೆಗೂ ತಟ್ಟಿತು ಜೈಲ್ ಜಾಮರ್ ಕಾಟ!
    • 4
      ಪಾಕ್ ವಿರುದ್ಧ ಮೋದಿ, ಶಾ ಅವಕಾಶ ಕೊಟ್ರೆ ಸೂಸೈಡ್ ಬಾಂಬರ್ ಆಗಲು ಸಿದ್ಧ- ಜಮೀರ್
    • 5
      ಉಳ್ಳಾಲದ ಕೂಲಿ ಕುಟುಂಬದ ಹೆಣ್ಣುಮಗಳು 10ನೇ ಟಾಪರ್!


  • Privacy Policy
  • Contact
© Tulunadu Infomedia · Tech-enabled by Ananthapuri Technologies

Press enter/return to begin your search